ದೇಶಪ್ರಚಲಿತ

ಡಾ.ರಾಜ್ ಕುಟುಂಬದ ನಂತರ ಕಾಂಗ್ರೆಸ್ ವಿರುದ್ಧ ತೊಡೆತಟ್ಟಿದ ಕ್ರಿಕೆಟ್ ತಂಡ!! ಸಿದ್ದರಾಮಯ್ಯಗೆ ಕ್ರಿಕೆಟ್ ತಂಡ ಬೀಸಿದ ಛಾಟಿ ಹೇಗಿತ್ತು ಗೊತ್ತಾ..?

ವಿರೋಧ ಪಕ್ಷಗಳಾಯಿತು, ಸಾಮಾಜಿಕ ಹೋರಾಟಗಾರರು ಆಯ್ತು, ಸಾಹಿತಿಗಳೂ ಆಯಿತು, ಪತ್ರಕರ್ತರೂ ಆಯಿತು, ಸಿನಿ ಮುಖಂಡರೂ ಆಯಿತು, ಬುದ್ಧಿಜೀವಿಗಳೂ ಆಯಿತು, ಪ್ರಗತಿ ಪರ ಹೋರಾಟಗಾರರೂ ಆಯಿತು, ಎಲ್ಲಾ ಬಿಡಿ, ಸ್ವತಃ ತನ್ನದೇ ಪಕ್ಷದ ಮುಖಂಡರುಗಳೇ ಹಿಗ್ಗಾಮುಗ್ಗವಾಗಿ ವಾಗ್ದಾಳಿ ನಡೆಸಿದ್ದೂ ಆಯಿತು. ಈಗ ಕ್ರಿಕೆಟ್ ತಂಡದ ಕೆಂಗಣ್ಣಿಗೂ ಕಾರಣವಾಗಿದ್ದಾರೆ ಇವರು.

ನಿಸ್ಸಂಶಯವೇ ಇಲ್ಲ. ನಾವು ಹೇಳುತ್ತಿರುವುದು ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ದುರಾಡಳಿತವನ್ನು ನಡೆಸಿ, ಪ್ರತಿ ರಂಗದಲ್ಲೂ ರಾಜ್ಯವನ್ನು ಪಾತಾಳಕ್ಕೆ ದೂಡಿ, ರಾಷ್ಟ್ರ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಕರ್ನಾಟಕದ ಮಾನವನ್ನು ಹರಾಜು ಹಾಕಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯರ ಬಗ್ಗೆ… ಅದ್ಯಾರ ಬಾಯಿಂದ ಬೈಗುಳ ಕೇಳಲಿಲ್ಲವೋ ಗೊತ್ತಿಲ್ಲ. ಆದರೆ ಒಂದಲ್ಲಾ ಒಂದು ಕಾರಣದಿಂದ ತನ್ನ ಸರ್ಕಾರದ ದುರಾಡಳಿತದಿಂದ ರಾಜ್ಯದ ಮಾನವನ್ನು ರಾಷ್ಟ್ರದಲ್ಲಿ ಹರಾಜು ಹಾಕುವ ಈ ಸೋಗಲಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಮನಬಂದಂತೆ ನಿಂದಿಸುವ ವ್ಯಕ್ತಿಗಳೇ ಹೆಚ್ಚಾಗಿದ್ದಾರೆ. ವಿರೋಧ ಪಕ್ಷಗಳೋ, ತೆಗಳುವುದು ಕಾಮನ್ ಬಿಡಿ. ಆದರೆ ಈ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನವರಿಂದಲೂ ತೆಗಳಿಕೆಯನ್ನೇ ಸ್ವೀಕರಿಸಿಕೊಂಡೇ ಬಂದವರಾಗಿದ್ದಾರೆ.

ನಲಪಾಡ್ ಮಾಡಿಬಿಟ್ಟಿದ್ದ ನಾಯಿಪಾಡು..!

ನಲಪಾಡ್. ಈತನ ಹೆಸರು ಈಗ ಯಾರಿಗೆಲ್ಲಾ ಗೊತ್ತಿಲ್ಲ ಹೇಳಿ. ಕಾಂಗ್ರೆಸ್ ಶಾಸಕ ತಂದೆ ಹ್ಯಾರಿಸ್‍ನ ಕೃಪಾ ಕಟಾಕ್ಷದೊಂದಿಗೆ ಕಾಂಗ್ರೆಸ್ ಪಕ್ಷದ ಮುಖಂಡತ್ವವನ್ನು ವಹಿಸಿಕೊಂಡು, ಪಾರ್ಟ್ ಟೈಮ್ ರಾಜಕಾರಣಿಯಾಗಿ, ತನ್ನ ಗೂಂಡಾ ಪಡೆಗಳೊಂದಿಗೆ ಗೂಂಡಾಗಿರಿಯನ್ನೇ ಮಾಡಿಕೊಂಡು ಬರುತ್ತಿದ್ದ ಈ ಮೊಹಮ್ಮದ್ ನಲಪಾಡ್ ಈ ರಾಜ್ಯ ಮಾತ್ರವಲ್ಲದೆ ರಾಷ್ಟ್ರದಲ್ಲೂ ಲೀಡರ್!. ಇತ್ತೀಚೆಗೆ ರೆಸ್ಟೋರೆಂಟ್‍ವೊಂದರಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರ ಮಗ ಗುರು ರಾಜ್ ಕುಮಾರ್ ಹಾಗೂ ಅವರ ಸ್ನೇಹಿತ ವಿದ್ವತ್ ಎಂಬಾತನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣ ಭಾರೀ ಸುದ್ಧಿ ಮಾಡಿತ್ತು. ವಿದ್ವತ್ ಎಂಬಾತನಿಗೆ ಬಿಯರ್ ಬಾಟಲಿಯಲ್ಲಿ ಮುಖಕ್ಕೆ ಸಹಿತ ಆತನ ದೇಹದ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಈ ಹಲ್ಲೆಯ ತೀವ್ರತೆಯಿಂದ ಇಂದಿಗೂ ವಿದ್ವತ್ ತೀವ್ ನಿಘಾ ಘಟಕದಲ್ಲಿ ಜೀವನ ಕಳೆಯುತ್ತಿದ್ದಾನೆ. ಆತನ ದೇಹದ 9 ಮೂಲೆಗಳು ಮುರಿದು ಹೋಗಿದೆ. ಇದು ರಾಜ್ಯ ಮತ್ರವಲ್ಲದೆ ರಾಷ್ಟ್ರದಲ್ಲೂ ಕಾಂಗ್ರೆಸ್ ಪಕ್ಷದ ನೀಚತನಕ್ಕೆ ಸಾಕ್ಷಿಯಾಗಿತ್ತು.

ಸಿಡಿದೆದ್ದಿತ್ತು ಡಾ.ರಾಜ್ ಕುಟುಂಬ…

ಕಾಂಗ್ರೆಸ್ ಸರ್ಕಾರದ ಈ ನಡವಳಿಕೆಗೆ ಡಾ.ರಾಜ್ ಕುಮಾರ್ ಕುಟುಂಬ ಸಿಡಿದೆದ್ದಿತ್ತು. ರಾಜ್ ಪುತ್ರರಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಂಗ್ರೆಸ್ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದರು. ಸರ್ಕಾರಕ್ಕೆ ನಾಚಿಗೆಯಾಗಬೇಕು ಎಂದು ಝಾಡಿಸಿದ್ದರು. ಮಾತ್ರವಲ್ಲದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಕೂಡಾ ಇಂತಹ ಕೃತ್ಯದ ವಿರುದ್ಧ ಸಿಡಿದೆದ್ದಿದ್ದರು. ರಾಜ್ ಕುಮಾರ್ ಅವರ ಇಡಿಯ ಕುಟುಂಬವೇ ಆಸ್ಪತ್ರೆಗೆ ಆಗಮಿಸಿ ವಿದ್ವತ್ ಆರೋಗ್ಯವನ್ನು ವಿಚಾರಿಸಿ ಕಣ್ಣೀರು ಸುರಿಸಿತ್ತು.

ಬಯಲಾಯ್ತು ಮತ್ತೊಂದು ಗೂಂಡಾಗಿರಿ!

ಈ ಎಲ್ಲಾ ರಾದ್ದಾಂತಗಳು ಮುಗಿದ ಬೆನ್ನಲ್ಲೇ ಒಂದೊಂದೇ ಪ್ರಕರಣಗಳು ಬೆಳಕಿಗೆ ಬಂದಿತ್ತು. ಇದರಲ್ಲಿ ಒಂದು ರಣಜಿ ಆಟಗಾರನ ಮೇಲಿನ ಹಲ್ಲೆ. ರಣಜಿ ಕ್ರಿಕೆಟ್ ಆಟಗಾರ ಹಾಗೂ ಬಿಗ್ ಬಾಸ್ ಸ್ಪರ್ಧಿ ಅಯ್ಯಪ್ಪ ಅವರ ಮೇಲೂ ಕಾಂಗ್ರೆಸ್ ಶಾಸಕ ಹ್ಯಾರೀಸ್ ಪುತ್ರ ನಲಪಾಡ್ ಹಲ್ಲೆ ನಡೆಸಿದ್ದಾನೆ ಎನ್ನುವ ಮಾಹಿತಿ ತಡವಾಗಿ ಬೆಳಕಿಗೆ ಬಂದಿತ್ತು. ವಿದ್ವತ್ ಆರೋಗ್ಯವನ್ನು ವಿಚಾರಿಸಲು ಆಸ್ಪತ್ರೆಗೆ ಆಗಮಿಸಿದ್ದ ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ವಿಧಾನ ಸಭಾ ವಿಪಕ್ಷ ನಾಯಕ ಜಗಧೀಶ್ ಶೆಟ್ಟರ್ ಸ್ಪೋಟಕ ಆರೋಪವನ್ನು ಮಾಡಿದ್ದಾರೆ. ಅಯ್ಯಪ್ಪನ ಮೇಲೂ ನಲಪಾಡ್ ಹಲ್ಲೆ ಮಾಡಿದ್ದಾನೆ ಎಂದಿದ್ದ ಶೆಟ್ಟರ್ ಮಾತು ನಿಜವಾಗಿತ್ತು. ಈ ಬಗ್ಗೆ ಅಯ್ಯಪ್ಪರಲ್ಲಿ ವಿಚಾರಿಸಿದಾಗ ಹೌದು ಎಂಬ ಸತ್ಯ ಬಯಲಾಗಿತ್ತು.

ಸಿಡಿದೆದ್ದ ಕ್ರಿಕೆಟ್ ತಂಡ ಸಿದ್ದರಾಮಯ್ಯರನ್ನೇ ಟಾರ್ಗೆಟ್ ಮಾಡಿತ್ತು.!

ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ವಿಧಾನ ಸಭಾ ವಿಪಕ್ಷ ನಾಯಕ ಜಗಧೀಶ್ ಶೆಟ್ಟರ್ ಮಾಡಿದ ಈ ಆರೋಪ ಯಾವಾಗ ನಿಜ ಎಂದು ತಿಳಿಯಿತೋ ಆ ಕೂಡಲೇ ರಣಜಿ ಕ್ರಿಕೆಟ್ ತಂಡ ಸಿಡಿದೆದ್ದಿತ್ತು. ರಣಜಿ ಕ್ರಿಕೆಟ್ ಆಟಗಾರ ಹಾಗೂ ಬಿಗ್ ಬಾಸ್ ಸ್ಪರ್ಧಿ ಅಯ್ಯಪ್ಪರ ಮೇಲಿನ ಹಲ್ಲೆಯನ್ನು ಕಟುವಾಗಿ ಖಂಡಿಸಿತ್ತು. ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೇ ಟಾರ್ಗೆಟ್ ಮಾಡಿದ ರಣಜಿ ಕ್ರಿಕೆಟ್ ತಂಡ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದೆ.

“ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ಕೇಳಿಕೊಳ್ಳುತ್ತೇವೆ. ನಮ್ಮ ರಾಜ್ಯದ ಆಟಗಾರರು ನಮ್ಮ ಕರುನಾಡ ಹೆಮ್ಮೆಯ ಪ್ರತಿನಿಧಿಗಳು. ಭಾರತದ ಮಟ್ಟದಲ್ಲಿ ನಮ್ಮ ನಾಡ ಕೀರ್ತಿಯನ್ನು ಬೆಳಗಿರುವವರು. ದಯವಿಟ್ಟು ಈ ಹಿಂಸೆಗೆ ಅಂತ್ಯ ಹಾಡಿ” ಎಂದು ಟ್ವೀಟ್ ಮಾಡಿದ್ದಾರೆ.

ರಮ್ಯಾಗೂ ಟಾಂಗ್ ಕೊಟ್ಟ ತಂಡ..!

ಈ ವೇಳೆ ಮಾದಕ ನಟಿ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾಗೂ ರಣಜಿ ಕ್ರಿಕೆಟ್ ತಂಡ ಟಾಂಗ್ ನೀಡಿದೆ. ವಿರೋಧ ಪಕ್ಷಗಳ ಹುಳುಕುಗಳನ್ನು ತೆಗೆಯುವ ನಟಿ ರಮ್ಯಾಗೆ ತನ್ನದೇ ಪಕ್ಷದಲ್ಲಿ ಆಗುತ್ತಿರುವ ಅನ್ಯಾಯಗಳು ಕಾಣುತ್ತಿಲ್ಲ. ಈ ಕಾರಣಕ್ಕಾಗಿ ಕ್ರಿಕೆಟ್ ತಂಡದ ಆಟಗಾರರು ಮಾತ್ರವಲ್ಲದೆ ಅಯ್ಯಪ್ಪ ಹಾಗೂ ಕ್ರಿಕೆಟ್ ಅಭಿಮಾನಿಗಳೂ ಕಾಂಗ್ರೆಸ್ ವಿರುದ್ಧ ಸಿಡಿದೆದ್ದಾರೆ.

ರಣಜಿ ಆಟಗಾರರೂ ಕೆಲವರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹಾಗೂ ಇನ್ನೂ ಕೆಲವರು ನೇರವಾಗಿ ಕಾಂಗ್ರೆಸ್ ವಿರುದ್ಧವೇ ಹರಿಹಾಯ್ದ ಉದಾಹರಣೆಗಳೂ ಇವೆ. ಒಟ್ಟಾರೆಯಾಗಿ ರಾಜ್ಯದ ದೊರೆ ಎನಿಸಿಕೊಂಡವರು ರಾಜ್ಯವನ್ನು ಸುಭೀಕ್ಷೆಯಲ್ಲಿ ಆಳಬೇಕಿತ್ತೇ ಹೊರತು ತನ್ನದೇ ಪಕ್ಷದಲ್ಲಿ ಗೂಂಡಾಗಳನ್ನು ಸೃಷ್ಟಿಸಿ ಈ ರೀತಿ ಅವಾಂತರಕ್ಕೆ ಕಾರಣವಾಗಿರುವುದು ಎಷ್ಟು ಸರಿ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಕ್ರಿಕೆಟ್ ತಂಡವೊಂದು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಿಕೊಂಡಿರುವುದು ನಿಜಕ್ಕೂ ಆ ಸರ್ಕಾರದ ನಿಜವಾದ ಸಾಧನೆಯನ್ನು ಬಣ್ಣಿಸುತ್ತದೆ.

-ಸುನಿಲ್ ಪಣಪಿಲ

Tags

Related Articles

Close