ಪ್ರಚಲಿತ

ಪ್ರಧಾನಿ ಮೋದಿ ಮತ್ತೆ ಸರ್ಕಾರ ರಚಿಸ್ತಾರಾ? : ಸಮೀಕ್ಷೆ ಹೇಳಿದ್ದಾದರೂ ಏನು?

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲೇ ಅನೇಕ ಮಂದಿ ಹಿಂಬಾಲಕರಿದ್ದಾರೆ. ಪ್ರಪಂಚದ ಮೂಲೆ ಮೂಲೆಗೂ ಪ್ರಧಾನಿ ಮೋದಿ ಅವರ ನೇತೃತ್ವದ ಭಾರತದಲ್ಲಾದ ಧನಾತ್ಮಕ ಬದಲಾವಣೆ ತಲುಪಿದ್ದು, ಇದು ಭಾರತ ಮಾದರಿ ದೇಶ ಎಂದು ಜಗತ್ತು ಒಪ್ಪಿಕೊಳ್ಳುವ ಹಾಗೆ ಮಾಡಿದೆ.

ಈ ಬಗ್ಗೆ ಲೋಕ ನೀತಿ – ಸಿ ಎಸ್‌ ಡಿ ಎಸ್ ನಡೆಸಿದ ಸಮೀಕ್ಷೆಯೊಂದು ಸಹ ಮಾಹಿತಿ ನೀಡಿದ್ದು, ನರೇಂದ್ರ ಮೋದಿ ಅವರ ಪ್ರಬಲ ನಾಯಕತ್ವ ಹಾಗೂ ಜಾಗತಿಕ ಮಟ್ಟದಲ್ಲಿ ಎತ್ತರಕ್ಕೆ ಏರುತ್ತಿರುವ ಭಾರತದ ಸ್ಥಾನಮಾನ ಪ್ರಧಾನಿ ಮೋದಿ ಅವರು ಮತ್ತೆ ಮೂರನೇ ಬಾರಿಗೂ ಸರ್ಕಾರ ರಚನೆ ಮಾಡುವುದಾಗಿ ಈ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಭಾರತದಲ್ಲಿ ಲೋಕಸಭಾ ಚುನಾವಣೆ ಏಪ್ರಿಲ್ 19 ರಿಂದ ತೊಡಗಿದ ಹಾಗೆ ಏಳು ಹಂತಗಳಲ್ಲಿ ನಡೆಯಲಿದೆ. ಈ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸುಲಭವಾಗಿ ಗೆಲುವನ್ನು ಪಡೆಯಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ. ಈ ಚುನಾವಣಾ ಮತ ಎಣಿಕೆ ಕಾರ್ಯ ಜೂನ್ 4 ರಂದು ನಡೆಯಲಿದೆ. ಮತದಾರ ಯಾರಿಗೆ ಒಲಿದಿದ್ದಾನೆ, ಗದ್ದುಗೆ ಯಾರಿಗೆ ದೊರೆಯುತ್ತದೆ ಎಂದು ತಿಳಿಯಲಿದೆ.

ದೇಶದ 28 ರಾಜ್ಯಗಳ ಪೈಕಿ ಹತ್ತೊಂಬತ್ತು ರಾಜ್ಯಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಇದು ಕಾಳಜಿಯ ಮತ್ತು ಆದ್ಯತೆ ವಿಷಯ ಎಂದು ಪ್ರಧಾನಿ ಮೋದಿ ಅವರ ದಿಟ್ಚತನಕ್ಕೆ ಬಹುಪರಾಕ್ ಎಂದಿರುವುದಾಗಿದೆ. 48% ಗಳಷ್ಟು ಜನರು ಈ ಭವ್ಯ ರಾಮ ಮಂದಿರವು ಹಿಂದೂ ಧರ್ಮದ ಗುರುತನ್ನು ಸಾರುತ್ತದೆ ಎಂದು ತಿಳಿಸಿದ್ದಾರೆ.

ಈ ಸಮೀಕ್ಷೆಯಲ್ಲಿ ಜನರು ದೇಶದ ಸ್ಥಾನಮಾನ ವಿಶ್ವ ಮಟ್ಟದಲ್ಲಿ ಹೆಚ್ಚಾಗಿರುವುದನ್ನು ಸಹ ಶ್ಲಾಘಿಸಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಪ್ರಯತ್ನವೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ದೇಶದಲ್ಲಿ ಮತ್ತೆ ಪ್ರಧಾನಿ ಮೋದಿ ಅವರ ನೇತೃತ್ವದ ಸರ್ಕಾರವೇ ರಚನೆಯಾಗುತ್ತದೆ ಎಂದು ಈ ಸಮೀಕ್ಷೆ ತಿಳಿಸಿದ್ದು, ಇದು ಪ್ರಧಾನಿ ಮೋದಿ ಅವರ ಜನಪ್ರಿಯತೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಜನತೆ ಒಪ್ಪಿಕೊಂಡಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

Tags

Related Articles

Close