ಪ್ರಚಲಿತ

ಬಿಜೆಪಿಗೆ ಶರಣಾದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್! ತಪ್ಪಾಯ್ತು ಕ್ಷಮಿಸಿ ಎಂದಿದ್ಯಾಕೆ ಗೊತ್ತಾ?

ಅರವಿಂದ ಕೇಜ್ರಿವಾಲ್ ಅಂದರೇ ಹಾಗೇನೇ. ಇತಿಹಾಸ ಅರಿಯದಿದ್ರೂ ಅದೇನೇನೋ ಹೇಳಲು ಹೋಗಿ ಮತ್ತಿನ್ನೇನೋ ಹೇಳಿ ಅವಾಂತರ ಸೃಷ್ಟಿಸಿ ಕೊಂಡು ಮತ್ತೆ ಸಾಕಪ್ಪ ಇವರ ಸಹವಾಸ ಎಂದು ಕೈ ಮುಗಿಯುವುದು ಇದೆಲ್ಲಾ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‍ಗೆ ಸಾಮಾನ್ಯವಾಗಿ ಹೋಗಿದೆ. ಕಾಂಗ್ರೆಸ್ ಪಕ್ಷದ ವಿರುದ್ಧ ಭ್ರಷ್ಟಾಚಾರ ಅಸ್ತ್ರವನ್ನು ಇಟ್ಟುಕೊಂಡು ಪ್ರತಿಭಟನೆ ಮಾಡಿಕೊಂಡು ದೆಹಲಿಯಲ್ಲಿ ತನ್ನ ಪಾರುಪತ್ಯ ಸ್ಥಾಪಿಸಿಕೊಂಡಿರುವ ದೆಹಲಿ ಮುಖ್ಯಮಂತ್ರಿ ಮತ್ತದೇ ಭ್ರಷ್ಟ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ನಡೆಸಿ ತನ್ನ ಮೂಲ ಸಿದ್ದಾಂತವನ್ನೇ ಮರೆ ದೂರವಿಟ್ಟಿದ್ದ ಅಸಹಾಯಕ ಮುಖ್ಯಮಂತ್ರಿ.

ತನ್ನ ಮೂಲ ಶತ್ರು ಪಕ್ಷ ಕಾಂಗ್ರೆಸ್ ಆದರೂ ಅದನ್ನು ಹತ್ತಿರ ಬರ ಸೆಳೆದು ಅಪ್ಪಿಕೊಂಡು ಭಾರತೀಯ ಜನತಾ ಪಕ್ಷವನ್ನು ತೆಗಳುತ್ತಲೇ ಕಾಲ ಕಳೆಯುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕರನ್ನು ತೆಗಳುವ ಮೂಲಕ ಫೇಮಸ್ ಆಗಲು ಹೊರಟಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈಗ ಪೇಚಿಗೆ ಸಿಲುಕಿ ಒದ್ದಾಡುತ್ತಿದ್ದಾರೆ.

ಸುಳ್ಳು ಆರೋಪ ಮಾಡಿದ್ದ ಕೇಜ್ರಿ..!

2014ರಲ್ಲಿ ಚುನಾವಣಾ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಷ್ಟ್ರದ ವಿವಿಧ ಪಕ್ಷಗಳ ಭ್ರಷ್ಟಾಚಾರದ ಪಟ್ಟಿಯನ್ನು ಬಿಡುಗಡೆ
ಮಾಡುತ್ತಾರೆ. ಈ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕರಾದ ಕಾಂಗ್ರೆಸ್‍ನ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ, ಮಾಜಿ ವಿತ್ತ ಸಚಿವ ಚಿದಂಬರಂ ಸಹಿತ ಅನೇಕ ನಾಯಕರ ಹೆಸರುಗಳು ಇದ್ದವು. ಈ ಮಧ್ಯೆ ಭಾರತೀಯ ಜನತಾ ಪಕ್ಷದ ನಾಯಕರಾಗಿದ್ದ, ಪ್ರಸ್ತುತ ಕೇಂದ್ರ ಭೂ ಹಾಗೂ ಸಾರಿಗೆ ಸಚಿವರಾಗಿರುವ ನಿತಿನ್ ಗಡ್ಕರಿಯವರ ಹೆಸರನ್ನು ಹಾಕಲಾಗಿತ್ತು. ಅತ್ಯಂತ ಭ್ರಷ್ಟ ರಾಜಕಾರಣಿ ಎಂಬ ಸುಳ್ಳು ಹಣೆಪಟ್ಟಿಯನ್ನು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಗಡ್ಕರಿ ಮೇಲೆ ಹೊರಿಸುತ್ತಾರೆ.

ಸಿಡಿದೆದ್ದ ಗಡ್ಕರಿ..!

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿತಿನ್ ಗಡ್ಕರಿ ಮೇಲೆ ಭಾರೀ ಆರೋಪವನ್ನು ಮಾಡಿದ್ದಾರೆ. ಆದರೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕ ನಿತಿನ್ ಗಡ್ಕರಿ ಇದರ ವಿರುದ್ಧ ಸಿಡಿದೇಳುತ್ತಾರೆ. ತಾನು ಹೇಗೆ ಭ್ರಷ್ಟನೆಂದು ನಿರೂಪಿಸಿ ಎಂದು ವಾಗ್ದಾಳಿ ನಡೆಸುತ್ತಾರೆ. ಮಾತ್ರವಲ್ಲದೆ ತಾನು ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತೇನೆ ಎಂದಿರುವ ನಿತಿನ್ ಗಡ್ಕರಿ ಕೋರ್ಟ್ ಮೆಟ್ಟಿಲೇರುತ್ತಾರೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕರೋರ್ವರು ಮೊಟ್ಟ ಮೊದಲ ಬಾರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಕೋರ್ಟ್‍ನಲ್ಲಿ ಮಾನನಷ್ಟ ಮೊಕದ್ದಮೆಯನ್ನು ಹೂಡುತ್ತಾರೆ.

ಬೆಚ್ಚಿ ಬಿದ್ದ ಕೇಜ್ರಿವಾಲ್..!

ಆರಂಭದಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕನೊಂದಿಗೆ ಜಿದ್ದಿಗೆ ಬಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಂತರ ನಿತಿನ್ ಗಡ್ಕರಿ ಜೊತೆಗೆ ಗುದ್ದಾಡೋದು ಸುಲಭದ ಮಾತಲ್ಲ ಎಂಬುವುದನ್ನು ಅರಿತುಕೊಳ್ಳುತ್ತಾರೆ. ಇದು ನನ್ನ ಹಾಗೂ ನಿತಿನ್ ಗಡ್ಕರಿ ವಿರುದ್ಧದ ಹೋರಾಟವಲ್ಲ ಬದಲಾಗಿ ನನ್ನ ಹಾಗೂ ಭಾರತೀಯ ಜನತಾ ಪಕ್ಷದ ವಿರುದ್ಧದ ಹೋರಾಟ ಎನ್ನುತ್ತಾರೆ. ಸತತ 4 ವರ್ಷಗಳ ಕಾಲ ನಿರಂತರ ನ್ಯಾಯಾಲಯದಲ್ಲಿ ಹೋರಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‍ಗೆ ನಂತರ ಅದುವೇ ಸೋಲಾಗಿ ಪರಿಣಮಿಸುವ ಲಕ್ಷಣಗಳು ಗೋಚರಿಸುತ್ತದೆ. ನ್ಯಾಯಾಲಯ ಕಳಿಸುವ ನೋಟೀಸ್‍ಗೆ ಉತ್ತರಿಸಲಾಗದೆ ಅಕ್ಷರಷಃ ಬೆಚ್ಚಿ ಬೀಳುತ್ತಾರೆ. ಕಡೆಗೆ ತನ್ನದೆ ತಪ್ಪು ಎಂದು ಕ್ಷಮೆ ಯಾಚಿಸಲು ಮುಂದಾಗುತ್ತಾರೆ.

ಶರಣಾದ ಮುಖ್ಯಮಂತ್ರಿ..!

ಸಾಧ್ಯವಾದಷ್ಟು ಜಿದ್ದಿಗೆ ಬಿದ್ದ ಅರವಿಂದ ಕೇಜ್ರಿವಾಲ್ ನಂತರ ಇನ್ನು ಗೆಲ್ಲಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಒಪ್ಪಿಕೊಂಡು ಸೋಲೊಪ್ಪಲುಮುಂದಾಗುತ್ತಾರೆ.
ತನ್ನದೇ ಜಯ ಎಂದು ಆರಂಭದಲ್ಲಿ ಬೀಗುತ್ತಿದ್ದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೊನೆ ಕೊನೆಗೆ ಸೋತೆ ಎಂದು ಶರಣಾಗುತ್ತಾರೆ. ಈ ಬಗ್ಗೆ ಸ್ವತಃ  ನಿತಿನ್ ಗಡ್ಕರಿಯವರಿಗೆ ಕ್ಷಮೆ ಯಾಚಿಸಿದ ಕೇಜ್ರಿವಾಲ್ “ಸತ್ಯಾಸತ್ಯತೆ ತಿಳಿಯದೆ ನಾನು ನೀಡಿರುವ ಹೇಳಿಕೆಗಳಿಂದ ನಿಮಗೆ ನೋವಾಗಿರುವಂತೆ ತೋರುತ್ತದೆ. ನನಗೆ ನಿಮ್ಮ ಬಗ್ಗೆ ಯಾವುದೇ ವ್ಯಯಕ್ತಿಕ ಧ್ವೇಷವೇನೂ ಇಲ್ಲ. ನನ್ನ ಹೇಳಿಕೆಗಳಿಗೆ ನಾನು ವಿಷಾಧಿಸುತ್ತೇನೆ. ನಮ್ಮ ನಡುವಿನ ಕಹಿ ಪ್ರಸಂಗವನ್ನು ಇಲ್ಲಿಗೆ ಕೈ ಬಿಟ್ಟು ಪ್ರಕರಣವನ್ನು ಕೈಬಿಡುವಂತೆ ಕೋರ್ಟ್‍ಗೆ ಮನವಿ ಸಲ್ಲಿಸೋಣ” ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕ ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆಯುವ ಮೂಲಕ ಬೇಷರತ್ ಕ್ಷಮೆಯನ್ನು ಕೋರಿದ್ದಾರೆ.

ಒಟ್ಟಾರೆ ಇದು ನನ್ನ ಹಾಗೂ ಭಾರತೀಯ ಜನತಾ ಪಕ್ಷದ ನಡುವಿನ ಕದನ ಎಂದು ತೊಡೆ ತಟ್ಟಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈಗ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಮಾತ್ರವಲ್ಲದೆ ತಾನು ನಿತಿನ್ ಗಡ್ಕರಿಗೆ ಮಾತ್ರವಲ್ಲದೆ ಭಾರತೀಯ ಜನತಾ ಪಕ್ಷಕ್ಕೇ ಶರಣಾಗಿದ್ದಾರೆ. ಇದು ಅರವಿಂದ ಕೇಜ್ರಿವಾಲ್ ಅವರ ಹೇಡಿತನವಲ್ಲದೆ ಮತ್ತೇನೂ ಅಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ.

-ಸುನಿಲ್ ಪಣಪಿಲ

Tags

Related Articles

Close