ಪ್ರಚಲಿತ

ಜಮ್ಮು ಕಾಶ್ಮೀರದ ಆರ್ಟಿಕಲ್ 370 ರದ್ದತಿ: ಕೇಂದ್ರ ಸರ್ಕಾರದ ನಿಲುವಿಗೆ ಸುಪ್ರೀಂ ಕೋರ್ಟ್‌ನಲ್ಲಿ ಜಯ

ಪ್ರಧಾನಿ ನರೇಂದ್ರ ಮೋದಿ ಅವರು 2014 ರಿಂದೀಚೆಗೆ ಭಾರತದ ಆಡಳಿತ ಚುಕ್ಕಾಣಿ ಹಿಡಿದಿದ್ದು, ಆ ನಂತರದಿಂದ ದೇಶದ ಅಭಿವೃದ್ಧಿಯ ಶಕೆ ಸಕಾರಾತ್ಮಕ ಹಾದಿ ಹಿಡಿದಿದೆ ಎನ್ನುವುದು ಸತ್ಯ.

ಭಾರತದಲ್ಲಿ ಯಾವ ಕೆಲಸಗಳು ನಡೆಯಲು ಸಾಧ್ಯವೇ ಇಲ್ಲ, ಯಾವ ಬದಲಾವಣೆಗಳು ಸಾಧ್ಯವೇ ಇಲ್ಲ ಎಂದು ಪರಿಗಣಿಸಲಾಗಿತ್ತೋ, ಅಂತಹ ಮಹತ್ವದ ಬದಲಾವಣೆಗಳಿಗೆ, ಕೆಲಸಗಳಿಗೆ ಕೈ ಹಾಕಿ, ಅದನ್ನು ಸರಳ ಮತ್ತು ಸುಲಲಿತವಾಗಿ, ಯಾವುದೇ ಗೊಂದಲಗಳಿಲ್ಲದೆ, ಗಲಭೆಗಳಿಗೆ ಆಸ್ಪದವೇ ಇಲ್ಲದ ಹಾಗೆ ಸಾಧಿಸಿ ತೋರಿಸಿದ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ.

ಮುಸಲ್ಮಾನ ಮಹಿಳೆಯರಿಗೆ ಅಂಟಿದ್ದ ತ್ರಿವಳಿ ತಲಾಖ್ ಎಂಬ ಶಾಪವನ್ನು ತೊಡೆದು ಹಾಕಿದವರು, ಅವರಿಗೂ ಬದುಕಿನಲ್ಲಿ ಭರವಸೆ ಮೂಡಿಸುವಲ್ಲಿ ಯಶಸ್ಸು ಸಾಧಿಸಿದವರು ಪ್ರಧಾನಿ ಮೋದೀಜಿ. ಇನ್ನು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಬಹು ಕೋಟಿ ಭಾರತೀಯರ, ರಾಮ ಭಕ್ತರ ಹಲವು ಶತಕಗಳ ಕನಸಾಗಿತ್ತು. ರಾಮ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗಲು ಸಾಧ್ಯವೇ ಇಲ್ಲ. ಒಂದು ವೇಳೆ ಇಂತಹ ಸಾಹಸಕ್ಕೆ ಕೈ ಹಾಕಿದಲ್ಲಿ ಭಾರತದಲ್ಲಿ ಹಿಂದೂ – ಮುಸ್ಲಿಮ್ ಜನರ ನಡುವೆ ಯುದ್ಧವೇ ನಡೆದು ಹೋಗುತ್ತದೆ ಎನ್ನುವ ಪರಿಸ್ಥಿತಿ ಇತ್ತು. ಆದರೆ ಪ್ರಧಾನಿ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಭರವಸೆಯನ್ನು ಚುನಾವಣಾ ಸಂದರ್ಭದಲ್ಲಿ ನೀಡಿದ್ದು ಮಾತ್ರವಲ್ಲ, ಅದನ್ನು ಸಾಧಿಸಿಯೇ ತೋರಿಸಿದ್ದಾರೆ. ಮುಂದಿನ ವರ್ಷ ಜನವರಿ ತಿಂಗಳಲ್ಲಿ ತನ್ನ ಜನ್ಮಸ್ಥಳದಲ್ಲಿಯೇ ಪ್ರಭು ಶ್ರೀ ರಾಮ ಭಕ್ತರಿಗೆ ಹಾರೈಸಲಿದ್ದಾನೆ. ಈ ಕಾರ್ಯದಲ್ಲಿ ಯಾವೊಬ್ಬನೂ ಪ್ರಧಾನಿ ಮೋದಿ ವಿರುದ್ಧ ಹೋಗುವ ಹುಚ್ಚು ಸಾಹಸ ಮಾಡಿಲ್ಲ. ಯಾವುದೇ ಗಲಭೆ ಗೊಂದಲಗಳೂ ಇಲ್ಲ. ನೀಡಿದ ಭರವಸೆಗೆ ಮೋಸವಾಗದಂತೆ ಅಸಾಧ್ಯ ಎಂದುಕೊಂಡಿದ್ದ ಕನಸನ್ನು ಸಾಧ್ಯವಾಗಿಸಿದ ಕೀರ್ತಿ ಪ್ರೀತಿಯ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ.

ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ನಡೆದ ಮತ್ತೊಂದು ಐತಿಹಾಸಿಕ ಘಟನೆ ಜಮ್ಮು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿದ್ದ, ಅಲ್ಲಿಗೆ ಬೇರೆಯೇ ಆದ ಸಂವಿಧಾನವನ್ನು ಒದಗಿಸಿದ್ದ ಆರ್ಟಿಕಲ್ 360 ರದ್ದತಿ. ಈ ನೀತಿ ಜಾರಿಯಾದ ಬಳಿಕ ಕಾಶ್ಮೀರದಲ್ಲಿ ಹೊಸ ಬೆಳಕು, ಆಶಾವಾದದ ನಾಳೆಗಳು ಸೃಷ್ಟಿಯಾಗಿತ್ತು. ಆ ವರೆಗೆ ಅಲ್ಲಿನ ಯುವಕರು ಉಗ್ರವಾದಕ್ಕೆ ಒಲವು ತೋರಿಸುತ್ತಿದ್ದರು. ಆ ಬಳಿಕ ಅಲ್ಲಿನ ಯುವ ಜನಾಂಗ ದೇಶಭಕ್ತಿ, ವಿದ್ಯಾಭ್ಯಾಸ, ಸೇನೆಗೆ ಸೇರುವುದರಲ್ಲಿ ಮುಂಚೂಣಿಗೆ ಬಂದರು. ಅಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡಲು ಆರಂಭವಾಯಿತು.

ಆದರೆ ಆರ್ಟಿಕಲ್ 370 ರದ್ದತಿಯ ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸಿ, ಈ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟಿ‌ಗೆ ಅರ್ಜಿಗಳು ಬಂದಿದ್ದವು. ಈ ಸಂಬಂಧ ಕೋರ್ಟ್ ಹಲವು ಸುತ್ತಿನ ವಾದ ವಿವಾದಗಳನ್ನು ಆಲಿಸಿ ಕೇಂದ್ರ ಸರ್ಕಾರದ ಈ ನಿಲುವನ್ನು, ಮಸೂದೆಯನ್ನು ಎತ್ತಿ ಹಿಡಿದಿದೆ. ಆ ಮೂಲಕ ಈ ನೀತಿಗಳಲ್ಲಿ ಕೇಂದ್ರ ಸರ್ಕಾರಕ್ಕೆ ಜಯ ಸಿಕ್ಕಂತಾಗಿದೆ. ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ದೊರಕಿದ್ದು ಮುಂದಿನ ವರ್ಷ ಸೆಪ್ಟೆಂಬರ್ ತಿಂಗಳಾಂತ್ಯದೊಳಗೆ ಚುನಾವಣೆ ನಡೆಸುವಂತೆ‌ ಚುನಾವಣಾ ಆಯೋಗಕ್ಕೂ ಸುಪ್ರೀಂ ಕೋರ್ಟ್ ಸೂಚಿಸಿದೆ.

ಭಾರತದ ಎಲ್ಲಾ ರಾಜ್ಯಗಳು ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರ ಹೊಂದಿವೆ. ಜಮ್ಮು ಕಾಶ್ಮೀರ ಯಾವುದೇ ರೀತಿಯ ಆಂತರಿಕ ಸಾರ್ವಭೌಮತ್ವ ಹೊಂದಿಲ್ಲ ಎಂದು ತಿಳಿಸಿರುವ ಕೋರ್ಟ್ ಕೇಂದ್ರ ಸರ್ಕಾರದ ನಿಲುವನ್ನು ಎತ್ತಿ ಹಿಡಿದಿದೆ.

Tags

Related Articles

Close