ಪ್ರಚಲಿತ

ಬಿಗ್ ಬ್ರೇಕಿಂಗ್: ಅಂಬೇಡ್ಕರ್ ನ್ನು ಕಡೆಗಣಿಸಿ ದಲಿತರನ್ನು ಅವಮಾನಿಸಿದ ಕಾಂಗ್ರೆಸ್ಸನ್ನು ಮಣ್ಣುಮುಕ್ಕಿಸಿ ಎಂದ ‘ಆನೆ’ ನಾಯಕಿ!! ಕಾಂಗ್ರೆಸ್ಸಿನಿಂದ ದೂರಾಗುವರೇ ದಲಿತರು?!

ರಾಜ್ಯದಲ್ಲಿ ಚುನಾವಣೆಯ ಕಾವು ಹೆಚ್ಚುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರವೂ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ರಾಜ್ಯದಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿದರೆ , ರಾಷ್ಟ್ರೀಯ ಪಕ್ಷಗಳಿಗೆ ನಾವೇನೂ ಕಮ್ಮಿ ಇಲ್ಲ ಎಂಬಂತೆ ಇಂದು ಜೆಡಿಎಸ್ ಕೂಡಾ ತಮ್ಮ ಪಕ್ಷದ ಸಾಮಾರ್ಥ್ಯ ಪ್ರದರ್ಶಿಸಿದೆ..!

ಸದ್ಯ ‘ಜೆಡಿಎಸ್ ವಿಕಾಸ ಪರ್ವ’ ಸಮಾವೇಶಕ್ಕೆ ಚಾಲನೆ ನೀಡಿದ ಜೆಡಿಎಸ್ ನಾಯಕರು ಬೆಂಗಳೂರಿನಲ್ಲಿ ತಮ್ಮ ಪಕ್ಷದ ಪ್ರಚಾರ ಆರಂಭಿಸಿದ್ದಾರೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿ ಮತ್ತು ಕಾಂಗ್ರೆಸ್ ನ ಎದುರು ಆಡಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಇದ್ದ ಜೆಡಿಎಸ್ ಕೂಡಾ ಇದೀಗ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.

ರಾಜ್ಯದಲ್ಲಿ ತಮ್ಮ ಪಕ್ಷದ ಬಲ ಕುಂಟಿತಗೊಳ್ಳುತ್ತಿರುವ ವಿಚಾರ ಅರಿತ ಜೆಡಿಎಸ್ ವರಿಷ್ಠರು ಉತ್ತರ ಪ್ರದೇಶದ ಬಿ ಎಸ್ ಪಿ ಪಕ್ಷದ ನಾಯಕಿಯಾದ ಮಾಯಾವತಿಯ ಜೊತೆ ಕೈಜೋಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಮಾಯಾವತಿ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಸಿದ್ದರಾಮಯ್ಯನವರು ಕೇವಲ ಜಾತಿಯಾಧಾರಿತ ರಾಜಕೀಯ ನಡೆಸುತ್ತಿದ್ದಾರೆ. ಕಾಂಗ್ರೆಸ್ ದಲಿತ ವಿರೋಧಿ ಪಕ್ಷ. ಅಂಬೇಡ್ಕರ್ ನ್ನು ಸೋಲಿಸುವಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿತ್ತು. ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ ಅವರನ್ನು ಸೋಲಿಸಿದ ಕಾಂಗ್ರೆಸ್ ಇಡೀ ದಲಿತ ವರ್ಗಕ್ಕೆ ಅವಮಾನವೆಸಗಿದ ಪಕ್ಷ’ ಎಂದು ಕಿಡಿಕಾರಿದ್ದಾರೆ.


ರಾಜ್ಯ ಕಾಂಗ್ರೆಸ್ ಭ್ರಷ್ಟ ಅಧಿಕಾರಿಗಳನ್ನೇ ಸಾಕುತ್ತಿದೆ. ಹಗರಣಗಳನ್ನು ಮಾಡಿ ಕರ್ನಾಟಕವನ್ನು ಕೊಳ್ಳೆ ಹೊಡೆಯುತ್ತಿದೆ. ಬಿ ಎಸ್ ಪಿ ಮತ್ತು ಜೆಡಿಎಸ್ ಒಟ್ಟಾಗಿರುವುದರಿಂದ ಆಡಳಿತದಲ್ಲಿರುವ ಕಾಂಗ್ರೆಸ್ ಗೆ ನಡುಕ‌ ಉಂಟಾಗಿದೆ. ಈ ಜಾತಿವಾದಿ ಸರಕಾರವನ್ನು ಕರ್ನಾಟಕದಿಂದ ಕಿತ್ತೊಗೆಯಬೇಕು’ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಲಿತರ ಪರ ಎಂದು ಹೇಳಿಕೊಂಡು ಅಧಿಕಾರ ಸ್ವೀಕರಿಸಿದವರು. ಆದರೆ ಅಧಿಕಾರ ಕೈಗೆ ಸಿಗುತ್ತಿದ್ದಂತೆ ದಲಿತ ವಿರೋಧಿಯಾಗಿ ಆಳ್ವಿಕೆ ನಡೆಸುತ್ತಿದ್ದಾರೆ. ಸಿದ್ದರಾಮಯ್ಯನವರ ಆಡಳಿತದಲ್ಲಿ ದಲಿತರ ಸ್ಥಿತಿ ಬಹಳ ಹದಕೆಟ್ಟಿದೆ’ ಎಂದು ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿದ್ದಾರೆ.

ರಾಜ್ಯ ಕಾಂಗ್ರೆಸ್ ನ‌ ಆಡಳಿತಕ್ಕೆ ಬೇಸತ್ತು ಸಾವಿರಾರು ರೈತರು ಆತ್ಮಹತ್ಯೆ ಗೆ ಶರಣಾಗಿದ್ದಾರೆ. ಇಂತಹ ಸರಕಾರವನ್ನು ಕರ್ನಾಟಕದಿಂದ ಮುಕ್ತಗೊಳಿಸಬೇಕೆಂದು ಹೇಳಿದರು.

ಅಂಬೇಡ್ಕರ್ ಭಾರತ ಕಂಡ ಶ್ರೇಷ್ಠ ವ್ಯಕ್ತಿ. ಆದರೆ ಕಾಂಗ್ರೆಸ್ ಅಂತಹ ವ್ಯಕ್ತಿಗೆ ಲೋಕಸಭೆಗೆ ಪ್ರವೇಶಿಸಲೂ ಅವಕಾಶ ನೀಡಲಿಲ್ಲ. ಅಂಬೇಡ್ಕರ್ ಗೆ ಭಾರತ ರತ್ನ ನೀಡಲು ಈ ಕಾಂಗ್ರೆಸ್ ಮೀನಾಮೇಷ ಎಣಿಸಿತ್ತು. ಇಂತಹ ದಲಿತ ವಿರೋಧಿ ಸರಕಾರ ಕರ್ನಾಟಕಕ್ಕೆ ಅವಶ್ಯಕತೆ ಇಲ್ಲ. ‌ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ನಾವೆಲ್ಲರೂ ಒಟ್ಟಾಗಿ ಸೇರಿ ಸೋಲಿಸಬೇಕೆಂದು ಸಮಾವೇಶದಲ್ಲಿ ಸೇರಿದ್ದ ಜನರಿಗೆ ಕರೆ ಕೊಟ್ಟರು..!

ಕರ್ನಾಟಕ ರಾಜ್ಯ ಸರಕಾರ ಅಲ್ಪಸಂಖ್ಯಾತರಿಗೊಂದು ದಲಿತರಿಗೊಂದು ನೀತಿ ಜಾರಿಗೆ ತಂದು ಕೇವಲ ಓಲೈಕೆಗಾಗಿ ಆಡಳಿತ ನಡೆಸುತ್ತಿದೆ.‌ಇಂತಹ ಸರಕಾರ ಬಹಳ ಅಪಾಯಕಾರಿ ಎಂದು ದೂರಿದ ಬಿ ಎಸ್ ಪಿ ಮುಖ್ಯಸ್ಥೆ ಮಾಯಾವತಿ ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ.‌ ಇನ್ನು ಉಳಿದಿರುವುದು ಕರ್ನಾಟಕದಲ್ಲಿ ಮಾತ್ರ, ಇಲ್ಲಿಂದಲೂ ಕುತ್ತೊಗೆಯೋಣ ಎಂದು ಕರೆ ನೀಡಿದರು.

ಸಿದ್ದರಾಮಯ್ಯನವರ ಆಡಳಿತಕ್ಕೆ ಬೇಸತ್ತ ರಾಜ್ಯದ ಜನತೆ ಕಾಂಗ್ರೆಸ್ ನ್ನು ಬಿಟ್ಟು ಬೇರೆ ಬೇರೆ ಪಕ್ಷದ ಕಡೆ ಮುಖಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಯಾವ ಉಪಾಯವೂ ಇಲ್ಲದೆ ತಡಪಡಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರವನ್ನೇ ಮಾಡಿದರು.
-Arjun

Tags

Related Articles

Close