ಪ್ರಚಲಿತ

ತಿನ್ನುವುದು ಭಾರತದ ಅನ್ನ, ಪ್ರೀತಿ ಮಾತ್ರ ಪಾಕಿಸ್ತಾನದ ಮೇಲೆ

ಭಾರತದಲ್ಲೇ ಹುಟ್ಟಿದ್ದರೂ ಕೆಲವು ದುರುಳರಿಗೆ ಭಾರತದ ಮೇಲೆಯೇ ಅದೇನೋ ದ್ವೇಷ. ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನದ ಮೇಲೆ ಅದೇನೇ ಪ್ರೀತಿ. ಭಾರತದಲ್ಲಿದ್ದುಕೊಂಡು ಪಾಕಿಸ್ತಾನವನ್ನು ಪ್ರೀತಿಸುವವರು, ಭಾರತ ವಿರೋಧಿ ಕೃತ್ಯಗಳಿಗೆ ಪಾಕಿಸ್ತಾನಕ್ಕೆ ಬೆಂಬಲ ನೀಡುವವರು ಕೆಲವರಿದ್ದಾರೆ. ಪಾಕ್ ಪ್ರೇಮ ತೋರ್ಪಡಿಸಿ, ಸಾಮಾಜಿಕ ಸ್ವಾಸ್ಥ್ಯ ಕದಡುವುದು, ಭಾರತದ ವಿರುದ್ಧ ಪಿತೂರಿ ನಡೆಸುವುದೇ ಇವರ ಖಾಯಂ ಉದ್ಯೋಗ ಎಂಬಂತಿರುವ ದೇಶದ್ರೋಹಿಗಳಿಗೆ ನಮ್ಮಲ್ಲೇನೂ ಕಮ್ಮಿ ಇಲ್ಲ.

ಅಂದ ಹಾಗೆ ಈ ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ. ಯುಪಿಯ ಮೊರಾದಾಬಾದ್ ನಗರದಲ್ಲಿ ಶಾಂತಿ ದೂತ ಧರ್ಮಕ್ಕೆ ಸೇರಿದ ತಂದೆ ಮತ್ತು ಮಗ ಮನೆಯ ಮೇಲೆ ಪಾಕ್ ಧ್ವಜ ಹಾರಿಸಿ, ಆ ಮೂಲಕ ಪಾಕ್ ಪ್ರೇಮ ಮೆರೆದು ಸದ್ಯ ಪೊಲೀಸರ ಅತಿಥಿಗಳಾಗಿದ್ದಾರೆ. ತಮ್ಮ ಮನೆಯ ಮೇಲೆ ಭಾರತದ ಶತ್ರು ರಾಷ್ಟ್ರದ ಬಾವುಟ ಹಾರಿಸಿ, ದೇಶ ದ್ರೋಹ ಎಸಗಿದ ಆರೋಪದಡಿ ಈ ಇಬ್ಬರೂ ದುರುಳರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೋಮು ಸಾಮರಸ್ಯ ಕದಡಲು, ದೇಶದ ಬಹುಸಂಖ್ಯಾತ ದೇಶ ಪ್ರೇಮಿಗಳಿಗೆ ನೋವುಂಟು ಮಾಡುವ ದೃಷ್ಟಿಯಿಂದ ಆಗಾಗ್ಗೆ ಕೆಲ ದೇಶದ್ರೋಹಿಗಳು ಇಂತಹ ಹೀನ ಕೃತ್ಯಗಳನ್ನು ನಡೆಸುವುದು ನಮ್ಮ ದೇಶದಲ್ಲಿ ಸರ್ವೇ ಸಾಮಾನ್ಯ ಎಂಬಂತಾಗಿದೆ. ಅದೆಷ್ಟೇ ದೇಶ ದ್ರೋಹಿಗಳಿಗೆ ಇಂತಹ ಭಾರತ ವಿರೋಧಿ ಕೃತ್ಯಗಳಿಗಾಗಿ ಶಿಕ್ಷೆ ನೀಡಿದರೂ, ರಕ್ತ ಬೀಜಾಸುರನ ಹಾಗೆ ಅವುಗಳ‌ ಸಂತಾನ ಮತ್ತೆ ಮತ್ತೆ ತಲೆ ಎತ್ತುತ್ತಿರುತ್ತವೆ ಎನ್ನುವುದು ನೋವಿನ ಸಂಗತಿ. ದೇಶದ ಹಲವು ರಾಜ್ಯಗಳಲ್ಲಿ ಇಂತಹ ದುಷ್ಕೃತ್ಯ ನಡೆಯುತ್ತಿರುವುದು ಖೇದಕರ.

ಮೊರಾದಾಬಾದಿನಲ್ಲಿ ಅಪ್ಪ ಮತ್ತು ಮಗ ಮೆರೆದ ಪಾಕ್ ಪ್ರೇಮದ ಬಗ್ಗೆ ಸಾರ್ವಜನಿಕರೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಬಳಿಕ ಪಾಕಿಸ್ತಾನದ ಧ್ವಜವನ್ನು ತೆರವು ಮಾಡಲಾಗಿತ್ತು. ಬಂಧಿತ ರನ್ನು ರಯೀಸ್‌ ಮತ್ತು ಆತನ ಪುತ್ರ ಸಲ್ಮಾನ್‌ನನ್ನು ವಶಕ್ಕೆ ಪಡೆದಿರುವ ಪೊಲೀಸ್ ಘಟನೆಯ ಹಿಂದಿರುವ ಕಾಣದ ಕೈಗಳ ಕೈವಾಡ ಇದೆಯೋ‌ ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ಯಾವ ಕಾರಣವನ್ನಿರಿಸಿಕೊಂಡು ಈ ಧ್ವಜವನ್ನು ಹಾರಿಸಲಾಗಿದೆ ಎನ್ನುವ ಬಗೆಗೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಬಂಧಿತ ದೇಶದ್ರೋಹಿ ರಯೀಸ್ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದು, ಪಾಕ್ ಧ್ವಜವನ್ನು ತಾನೇ ಸಿದ್ಧಪಡಿಸಿದ್ದ. ಈ ವಿಡಿಯೋ‌ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿತ್ತು.

ಭಾರತದಲ್ಲಿ ಇದ್ದುಕೊಂಡು, ಇಲ್ಲಿನ ಸಂಪತ್ತನ್ನೇ ದೋಚುತ್ತಾ, ಈ ದೇಶಕ್ಕೆ ದ್ರೋಹ ಬಗೆದು ಶತ್ರು ರಾಷ್ಟ್ರವನ್ನು ಪ್ರೀತಿಸುವ ಭಂಡರು ನಮ್ಮ ದೇಶದಲ್ಲಿದ್ದಾರೆ. ಇಲ್ಲಿನ ಅನ್ನ ತಿಂದು, ಇಲ್ಲಿಗೆಯೇ ದ್ರೋಹ ಬಗೆ ಯುವ ಇಂತಹ ನಾಮರ್ಧರಿಗೆ ಎಂತಹ ಕಠಿಣ ಶಿಕ್ಷೆ ದೊರೆತರೂ ಅದು ಕಡಿಮೆಯೇ. ಪಾಕಿಸ್ತಾನದ ಮೇಲೆ ಪ್ರೀತಿ ಇದ್ದವರು ಭಾರತದಲ್ಲಿ ವಾಸಿಸುವುದಕ್ಕಿಂತ ಪಾಕಿಸ್ತಾನಕ್ಕೆ ತೆರಳುವುದೇ ಸೂಕ್ತ. ಇಂತಹ ನಾಲಾಯಕುಗಳಿಗೆ ಕಠಿಣ ಶಿಕ್ಷೆಯಾಗಬೇಕು. ಹಾಗೆಯೇ ಇದು ಮುಂದೆ ಇಂತಹ ತಪ್ಪುಗಳನ್ನು ಮಾಡುವವರಿಗೂ ಎಚ್ಚರಿಕೆಯ ಸಂದೇಶವಾಗಬೇಕು.

Tags

Related Articles

Close