ಪ್ರಚಲಿತರಾಜ್ಯ

ಬಿಗ್ ಶಾಕ್: ಗೂಂಡಾ ನಲಪಾಡ್ ವಿರುದ್ಧ ಕೋರ್ಟ್ ಮಹತ್ವದ ಆದೇಶ!! ಪಾಪ ಕೃತ್ಯ ಮೆರೆದ ಗೂಂಡಾ ಪೊಲೀಸರೆದುರು ಗಳಗಳನೆ ಅತ್ತಿದ್ಯಾಕೆ?

ಕಳೆದ 4 ದಿನಗಳಿಂದ ಭಾರೀ ಸುದ್ಧಿ ಮಾಡುತ್ತಿದ್ದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಮಗ ಗೂಂಡಾ ಕಾಂಗ್ರೆಸ್ ನಾಯಕ ನಲಪಾಡ್ ಗೂಂಡಾಗಿರಿ ಪ್ರಕರಣಕ್ಕೆ ಬಗ್ಗೆ ಈಗ ನ್ಯಾಯಾಲಯ ಮಹತ್ವದ ಆದೇಶವನ್ನು ನೀಡಿದೆ. ಕಳೆದ 4 ದಿನಗಳಿಂದ ಹೈಡ್ರಾಮವನ್ನೇ ಸೃಷ್ಟಿಸಿದ್ದ ಕಾಂಗ್ರೆಸ್‍ನ ಗೂಂಡಾ ನಾಯಕ ನಲಪಾಡ್‍ನ ಪ್ರಕರಣ ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್‍ನಲ್ಲಿ ವಿಚಾರಣೆ ನಡೆಸಿದ್ದು, ಗೂಂಡಾ ನಲಪಾಡ್ ಸೇರಿದಂತೆ 7 ಜನ ಸೇರಿ ನ್ಯಾಯಾಲಯಕ್ಕೆ ಹಾಜರಾಗಿದ್ದರೆ.

8ನೇ ಎಸಿಎಂಎಂ ಕೋರ್ಟ್ ಗೆ ಹಾಜರಾದ ಪಾಪಿಗಳು…

ಕಳೆದ ಶನಿವಾರ ಯುಬಿ ಸಿಟಿಯ ರೆಸ್ಟೋರೆಂಟ್ ಒಂದರಲ್ಲಿ ವಿದ್ವತ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಮಗ ಕಾಂಗ್ರೆಸ್ ಗೂಂಡಾ ನಲಪಾಡ್ ಸಹಿತ 8 ಗೂಂಡಾಗಳನ್ನು ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಹಾಜರಾಗಿದ್ದರು. ಈ ವೇಳೆ ನಲಪಾಡ್ ಪರ ವಾದ ಮಾಡುತ್ತಿದ್ದ ವಕೀಲ ಉಸ್ಮಾನ್‍ರ ಮಾತನ್ನು ಲೆಕ್ಕಿಸದೇ ನ್ಯಾಯಾಧೀಶರು ನಲಪಾಡ್ ಹಾಗೂ ಆತನ ಗೂಂಡಾ ತಂಡಕ್ಕೆ ಬಿಗ್ ಶಾಕ್ ನೀಡಿದ್ದಾರೆ.

ಜೈಲು ಪಾಲಾದ “ಎನ್” ಟೀಂ…

ಇಂದು 8 ಎಸಿಎಂಎಂ ನ್ಯಾಯಾಲಯ ನೀಡಿದ ಮಹತ್ವದ ಆದೇಶದ ಮೇರೆಗೆ ಆರೋಪಿಗಳ ಮೇಲಿರುವ ಪ್ರಕರಣಗಳನ್ನು ಪರಿಗಣಿಸಿ ಅವರ ಪರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕøತ ಮಾಡಲಾಗಿದೆ. ಮಾತ್ರವಲ್ಲದೆ ಅವರನ್ನು ಜೈಲಿಗೂ ಅಟ್ಟಲಾಗಿದೆ. ಇಷ್ಟು ದಿನ ಪೊಲೀಸ್ ಕಸ್ಟಡಿಯಲ್ಲಿ ಕಾಲ ಕಳೆಯುತ್ತಿದ್ದ ನಲಪಾಡ್ ಹಾಗೂ ಆತನ ಗೂಂಡಾ ತಂಡ ಇಂದು ಜೈಲಿಗೆ ಸ್ಥಳಾಂತರವಾಗಿದ್ದಾರೆ.

14 ದಿನ ಜೈಲು ವಾಸ…!

ಆರೋಪಿಗಳ ಪರ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕøತಗೊಂಡಿದ್ದು, ಆರೋಪಿಗಳಿಗೆ 14 ದಿನ ಜೈಲಿನ ದಾರಿಯನ್ನು ತೋರಲಾಗಿದೆ. 307 ಪ್ರಕರಣವನ್ನು ಎದುರಿಸುತ್ತಿರುವ ಮಹಮ್ಮದ್ ನಲಪಾಡ್ ಹಾಗೂ ಆತನ ಗೂಂಡಾ ತಂಡಕ್ಕೆ ಮಾರ್ಚ್ 7ರವರೆಗೆ ಜೈಲು ಶಿಕ್ಷಯನ್ನು ನೀಡಿ ಅಂದು ನಡೆಯುವ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಇದು ಮಾರಣಾಂತಿಕೆ ಹಲ್ಲೆ ಹಾಗೂ ಹತ್ಯೆಗೆ ಯತ್ನ ಕೇಸ್ ಆಗಿರುವುದರಿಂದ ಈ ಪ್ರಕರಣವನ್ನು ಸಹಜವಾಗಿ ಕಾಣಲು ಸಾಧ್ಯವಿಲ್ಲ. ಹೀಗಾಗಿ ಆರೋಪಿಗಳಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ವಿದ್ವತ್ ಪರ ವಾದ ಮಾಡಿದ ಶ್ಯಾಮ್ ಸುಂದರ್…

ಇನ್ನು ಹಲ್ಲೆಗೊಳಗಾದ ವಿದ್ವತ್ ಪರ ಆತನ ತಂದೆಯ ಸೂಚನೆಯಂತೆ ವಕೀಲ ಶ್ಯಾಮ್ ಸುಂದರ್ ವಾದ ಮಂಡಿಸಿದ್ದಾರೆ. ಯಾವುದೇ ಕಾರಣಕ್ಕೂ ಈ ಆರೋಪಿಗಳನ್ನು ಕ್ಷಮಿಸಬಾರದು. ಈ ಆರೋಪಿಗಳಿಗೆ ಜಾಮೀನು ನೀಡದೆ ಅವರಿಗೆ ಜೈಲುಪಾಲು ಮಾಡಬೇಕು. ಇದೊಂದು ಹತ್ಯೆಯ ಯತ್ನದ ಪ್ರಕರಣ ಎಂದು ವಾದ ಮಂಡಿಸಿದ್ದಾರೆ. ಶ್ಯಾಮ್ ಸುಂದರ್ ಮಂಡಿಸಿದ್ದ ವಾದಕ್ಕೆ ನ್ಯಾಯಾಲಯ ಮುಂದಿನ 14 ದಿನಗಳ ಕಾಲದವರೆಗೆ ಈ 8 ಆರೋಪಿಗಳನ್ನೂ ಜೈಲಿಗೆ ಕಳಿಸಲು ಆದೇಶ ನೀಡಿದೆ.

ನಲಪಾಡ್ ಪರ ಉಸ್ಮಾನ್ ವಾದ…

ನಲಪಾಡ್ ಹಾಗೂ ಆತನ ಸಹಚರರ ವಿರುದ್ಧ ಒಟ್ಟು 2 ಪ್ರಕರಣ ದಾಖಲಾಗಿದ್ದು, ಅದರಲ್ಲಿ ಮೊದಲನೇ ಪ್ರಕರಣದಲ್ಲಿ 307 ಕೇಸ್ ದಾಖಲಾಗಿರಲಿಲ್ಲ. ಹೀಗಾಗಿ ಆತನಿಗೆ ಜಾಮೀನು ಮಂಜೂರು ಮಾಡಬೇಕೆಂದು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಗೂಂಡಾ ನಲಪಾಡ್ ಪರ ಉಸ್ಮಾನ್ ವಾದ ಮಂಡಿಸಿದ್ದಾರೆ. ಆದರೆ ಈ ವಾದಕ್ಕೆ ಸೊಪ್ಪು ಹಾಕದ ನ್ಯಾಯಾಧೀಶರು ಆರೋಪಿಗಳಿಗೆ ಜೈಲು ಖಾಯಂಗೊಳಿಸಿದ್ದಾರೆ.

ಗಳಗಳನೆ ಅತ್ತ ನಲಪಾಡ್…

ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶ ನೀಡುತ್ತಿದ್ದಂತೆ ಪೊಲೀಸರು ಆರೋಪಿಗಳನ್ನು ಮತ್ತೆ ಪೊಲೀಸ್ ಬಸ್ಸಿನ ದಾರಿ ತೋರಿಸಿದ್ದಾರೆ. ಈ ವೇಳೆ ಪೊಲೀಸ್ ಬಸ್ ಹತ್ತುತ್ತಿದ್ದಂತೆಯೇ ಕಾಂಗ್ರೆಸ್ ಶಾಸಕ ಹ್ಯಾರಿಸ್ ಮಗ ಗೂಂಡಾ ನಲಪಾಡ್ ಗಳಗಳನೆ ಅತ್ತಿದ್ದಾನೆ. ಜೈಲು ವಾಸ ಖಾಯಂ ಆಗುತ್ತಿದ್ದಂತೆಯೇ ನಲಪಾಡ್‍ಗೆ ಪಾಪ ಪ್ರಜ್ಞೆ ಕಾಡಿತ್ತು. ಹೀಗಾಗಿ ಬಸ್ ಹತ್ತುತ್ತಲೇ ಗಳಗಳನೆ ಅತ್ತು ತಾನು ತಪ್ಪು ಮಾಡಿದ್ದೇನೆ ಎಂಬುವುದನ್ನು ತನ್ನ ಕಣ್ಣೀರಿನ ಮೂಲಕ ಸಾಭೀತುಪಡಿಸಿದ್ದಾನೆ.

ಫೆಬ್ರವರಿ 17ರಂದು ಕಾಂಗ್ರೆಸ್ ಶಾಸಕ ಹ್ಯಾರಿಸ್ ಎಂಬವರ ಗೂಂಡಾ ಪುತ್ರ ಮಹಮ್ಮದ್ ನಲಪಾಡ್ ಓರ್ವ ದಿವ್ಯಾಂಗನಿಗೆ ಮನಬಂದಂತೆ ಭಾರಿಸಿದ್ದಾನೆ. ಶನಿವಾರ ಬೆಂಗಳೂರಿನ ಪ್ರತಿಷ್ಟಿತ ಹೊಟೇಲ್ ಒಂದರಲ್ಲಿ ಕಾಂಗ್ರೆಸ್ ಶಾಸಕ ಹ್ಯಾರಿಸ್ ರ ಮಗ ಗೂಂಡ ಮಹಮ್ಮದ್ ನಲಪಾಡ್ ಎಂಬಾತ ತನ್ನ ದರ್ಪದ ಅಮಲಿನಲ್ಲಿ ದುಷ್ಕøತ್ಯವನ್ನು ಮೆರೆದಿದ್ದಾನೆ. ಅದೇ ಹೋಟೆಲ್‍ನಲ್ಲಿದ್ದ ದಿವ್ಯಾಂಗ ವಿದ್ವತ್ ಎಂಬವನೇ ಹಲ್ಲೆಗೊಳಗಾದ ವ್ಯಕ್ತಿ.

ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ನಲಪಾಡ್ ಎಂಬ ಗೂಂಡಾ ಊಟ ಮಾಡುತ್ತಿರುವ ಸಂದರ್ಭದಲ್ಲಿ ಅದನ್ನು ವಿದ್ವತ್ ಎಂಬ ಅಂಗವಿಕಲ ಬಾಧಿತನೊಬ್ಬ ನೋಡತ್ತಿದ್ದೆಂಬ ಕ್ಷುಲ್ಲಕ ಕಾರಣಕ್ಕಾಗಿ ಆತನ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಡಿ ಅಮಾನವೀಯತೆಯನ್ನು ಮೆರೆದಿದ್ದಾನೆ. ಮನಬಂದಂತೆ ಥಳಿಸಿದ ಕಾಂಗ್ರೆಸ್ ಮುಖಂಡ ಮಹಮ್ಮದ್ ನಲಪಾಡ್ ರಕ್ತದ ಜೊತೆಗೆ ಚೆಲ್ಲಾಟವನ್ನೇ ನಡೆಸಿದ್ದಾನೆ. ಆತ ಓರ್ವ ದಿವ್ಯಾಂಗ ಎಂಬ ಕನಿಷ್ಟ ಯೋಚನೆಯನ್ನೂ ಮಾಡದ ಕಾಂಗ್ರೆಸ್ ಗೂಂಡಾ ಆ ವ್ಯಕ್ತಿಯನ್ನು ಮನ ಬಂದಂತೆ ಭಾರಿಸಿ ತನ್ನ ಗೂಂಡಾಗಿರಿಯ ಮತ್ತೊಂದು ಮುಖವನ್ನು ಅನಾವರಣಗೊಳಿಸಿದ್ದಾನೆ.

 

ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡ…

ದಿವ್ಯಾಂಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕಾಂಗ್ರೆಸ್ ಶಾಸಕ ಹ್ಯಾರಿಸ್ ನ ಪುತ್ರ ಕಾಂಗ್ರೆಸ್ ಮುಖಂಡ ಮಹಮ್ಮದ್ ನಲಪಾಡ್ ಎಂಬ ಗೂಂಡಾ ಘಟನೆಯ ಬಳಿಕ ನಾಪತ್ತೆಯಾಗಿದ್ದ. ರಕ್ತ ಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಗೂಂಡ ಎಲ್ಲೋ ಹೋಗಿ ಅಡಗಿ ಕುಳಿತಿದ್ದ. ಪೊಲೀಸರ ಹಾಗೂ ತನ್ನ ತಂದೆ ಶಾಸಕ ಹ್ಯಾರಿಸ್ ಅವರ ಸುಪರ್ಧಿಯಲ್ಲಿ ಭದ್ರವಾಗಿದ್ದ.

ಮತ್ತೆ ಬಂದು ಆಸ್ಪತ್ರೆಯಲ್ಲೇ ಧಮ್ಕಿ ಹಾಕಿದ್ದ ಗೂಂಡಾ..!!!

ಕಾಂಗ್ರೆಸ್ ಮುಖಂಡ ಗೂಂಡಾ ನಲಪಾಡ್ ಎಂಬಾತ ಪರಾರಿಯಾಗಿದ್ದಾನೆ ಎಂದುಕೊಂಡೇ ಕಾಲಹರಣ ಮಾಡುತ್ತಿದ್ದರು ಕಬ್ಬನ್ ಪಾರ್ಕ್ ಪೊಲೀಸರು. ಆದರೆ ಈ ಗೂಂಡಾ ಅದರ ಮಧ್ಯೆ ಹಲ್ಲೆಗೊಳಗಾದ ವಿದ್ವತ್ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ದೌಡಾಯಿಸಿ ಮತ್ತೆ ವಿದ್ವತ್ ಎಂಬಾತನಿಗೆ ಧಮ್ಕಿ ಹಾಕಿದ್ದ. ಒಂದು ವೇಳೆ ಪೊಲೀಸರಿಗೆ ವಿಚಾರ ತಿಳಿಸಿದರೆ ನಿನ್ನನ್ನು ಉಳಿಸೋದಿಲ್ಲ ಎಂದು ಭಾರೀ ಬೆದರಿಕೆಯನ್ನು ಹಾಕಿದ್ದನು. ಆದರೆ ಈ ಎಲ್ಲಾ ಬೆದರಿಕೆಗೂ ಜಗ್ಗದ ವಿದ್ವತ್ ಪೋಷಕರು ಪೊಲೀಸ್ ಠಾಣೆಯಲ್ಲಿ ರೌಡಿ ನಲಪಾಡ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸೆಂಟಿಮೆಂಟ್ ಕ್ರಿಯೇಟ್ ಮಾಡಿ ಸುಳ್ಳು ಹೇಳಿದ್ದ ಕಾಂಗ್ರೆಸ್ ಶಾಸಕ…

ತನ್ನ ಮಗ ಗೂಂಡಾ ಮಹಮ್ಮದ್ ನಲಪಾಡ್‍ನ ಈ ರೀತಿಯ ವರ್ತನೆ ಬಗ್ಗೆ ಸೆಂಟಿಮೆಂಟ್ ಕ್ರಿಯೇಟ್ ಮಾಡಲು ಯತ್ನಿಸಿದ್ದರು. “ಹೌದು ನನ್ನ ಮಗ ತಪ್ಪು ಮಾಡಿದ್ದಾನೆ. ಅವನನ್ನು ನಾನೇ ಪೊಲೀಸರ ಮುಂದೆ ಸರೆಂಡರ್ ಮಡುತ್ತೇನೆ. ಕಾಲಾವಲಕಾಶ ಕೊಡಿ” ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.

ಮಾತ್ರವಲ್ಲದೆ “ನನ್ನ ಮಗ ಎಲ್ಲಿದ್ದಾನೆ ಎಂದು ನನಗೆ ಗೊತ್ತೇ ಇಲ್ಲ. ಆತ ನನ್ನ ಸಂಪರ್ಕಕ್ಕೇ ಸಿಗುತ್ತಿಲ್ಲ. ಆತ ಎಲ್ಲೇ ಇದ್ದರೂ ನಾನು ಅವನನ್ನು ಕರೆದುಕೊಂಡು ಬರುತ್ತೇನೆ” ಎಂದು ರಾಜ್ಯದ ಜನತೆಯ ಮುಂದೆ ಮೊಸಳೆ ಕಣ್ಣೀರನ್ನು ಸುರಿಸಿ ಸಿಂಪತಿ ಗಿಟ್ಟಿಸಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದರು.

ಒಟ್ಟಿನಲ್ಲಿ ಇಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಗೂಂಡಾ ನಲಪಾಡ್ ಹಾಗೂ ಆತನ ತಂಡಕ್ಕೆ ನ್ಯಾಯಾಂಗ ಬಂಧನವನ್ನು ಖಚಿತಗೊಳಿಸಿದ್ದು ಆತನಿಗೆ ಹಿಡಿದ ಅಮಲನ್ನು ಕೋರ್ಟ್ ಇಳಿಸಿದೆ. ಮಾತ್ರವಲ್ಲದೆ ಈ ಮೂಲಕ ನ್ಯಾಯವನ್ನು ಎತ್ತಿ ಹಿಡಿದಿದೆ. ಇದು ನಲಪಾಡ್ ಮಾತ್ರವಲ್ಲದೆ ಆತನ ತಂದೆ ಕಾಂಗ್ರೆಸ್ ಶಾಸಕ ಹ್ಯಾರಿಸ್‍ಗೂ ಭಾರೀ ಹಿನ್ನೆಡೆಯನ್ನು ತಂದಿಟ್ಟಿದೆ.

-ಸುನಿಲ್ ಪಣಪಿಲ

Tags

Related Articles

Close