ಪ್ರಚಲಿತರಾಜ್ಯ

ಬಿಗ್ ಬ್ರೇಕಿಂಗ್: ತಪ್ಪೊಪ್ಪಿಕೊಂಡ ಕಾಂಗ್ರೆಸ್ ಶಾಸಕನ ಗೂಂಡಾ ಮಗ!! ಜೈಲ್ ಕಟ್ಟಿಟ್ಟ ಬುತ್ತಿ!!

ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ನಲಪಾಡ್ ರವರ ಮಗ ಮಹಮ್ಮದ್ ನಲಪಾಡ್ ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ನಡೆಸಿದ ದಾಂಧಲೆಗೆ ಇದೀಗ ಹೊಸ ತಿರುವು ದೊರಕಿದೆ. ಯಾಕೆಂದರೆ ಕಾಂಗ್ರೆಸ್ ನ ನಾಯಕರು ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಇದೇ ಮೋದಲೇನಲ್ಲ. ಆದರೆ ಅಮಾಯಕರ ಮೇಲೆ ದಬ್ಬಾಳಿಕೆ, ಹಲ್ಲೆ ನಡೆಸಿ ಅಧಿಕಾರದ ಬಲದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇದೇ ರೀತಿ ನಲಪಾಡ್ ಕೂಡಾ ತನ್ನ ತಂದೆಯ ಅಧಿಕಾರದ ಮದದಿಂದ ದಾಂಧಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

ಶನಿವಾರ ರಾತ್ರಿ ಬೆಂಗಳೂರಿನ ಯುಬಿ ಸಿಟಿಯಲ್ಲಿ ಇರುವ ಒಂದು ರೆಸ್ಟೋರೆಂಟ್ ನಲ್ಲಿ ಅಮಾಯಕ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ನಡೆಸಿದ ನಲಪಾಡ್ , ನಂತರದಲ್ಲಿ ತಲೆ ಮರೆಸಿಕೊಂಡಿದ್ದ. ಈ ಬಗ್ಗೆ ಹಲ್ಲೆಗೊಳಗಾದ ಯುವಕ ದೂರು ನೀಡುತ್ತಲೇ ಮಾಧ್ಯಮಗಳಲ್ಲಿ ಸುದ್ದಿಯಾಗತೊಡಗಿತು. ಇದರಿಂದ ಎಚ್ಚೆತ್ತುಕೊಂಡ ಪೋಲೀಸರು ನಲಪಾಡ್ ನ ಪತ್ತೆ ಕಾರ್ಯ ಆರಂಭಿಸಿದ್ದಾರೆ. ಆದರೆ ನಲಪಾಡ್ ನ ತಂದೆ ಹ್ಯಾರಿಸ್ ಕಾಂಗ್ರೆಸ್ ನ ಶಾಸಕನಾಗಿರುವುದರಿಂದ ಪೋಲೀಸರ ಮೇಲೆ ಒತ್ತಡ ಹೇರಿ ಮಗನನ್ನು ಬಂಧಿಸಲು ಬಿಡದೆ ನಾಟಕವಾಡತೊಡಗಿದ್ದರು.

ಹೈಡ್ರಾಮ ಮಾಡಿ ಸಿಕ್ಕಿಬಿದ್ದ ಶಾಸಕ..!

ನಲಪಾಡ್ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಹ್ಯಾರಿಸ್ ಬಳಿ ಪೋಲೀಸರು ವಿಚಾರಿಸಿದಾಗ ‘ತನ್ನ ಮಗ ಮಾಡಿರುವುದು ತಪ್ಪು. ಅವನು ಹಲ್ಲೆ ನಡೆಸಿ ಎಲ್ಲಿಗೆ ಹೋಗಿದ್ದಾನೆ ಎಂಬ ಮಾಹಿತಿ ನನಗೂ ಇಲ್ಲ, ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ’ ಎಂದು ಹೇಳಿದ್ದರು. ಆದರೆ ನಲಪಾಡ್ ನನ್ನು ಮನೆಯಲ್ಲಿಯೇ ಇರಿಸಿಕೊಂಡಿದ್ದ ಶಾಸಕ ಹ್ಯಾರಿಸ್ ಕೂಡಾ ಪೋಲೀಸರ ಕಣ್ಣಿಗೆ ಮಣ್ಣೆಸಗಿದ್ದಾರೆ. ಘಟನೆ ಶನಿವಾರ ನಡದಿದ್ದರಿಂದ ೨ ದಿನಗಳ ಕಾಲ ಕೋರ್ಟ್ ನಲ್ಲಿ ಯಾವುದೇ ಕೆಲಸ ನಡೆಯುವುದಿಲ್ಲ. ಆದ್ದರಿಂದ ಭಯಗೊಂಡ ಹ್ಯಾರಿಸ್ ತಪ್ಪಿತಸ್ಥ ಮಗನಿಗೆ ಮನೆಯಲ್ಲಿಯೇ ಆಶ್ರಯ ನೀಡಿದ್ದಾರೆ. ಆದರೆ ಸೋಮವಾರ ಸ್ವತಃ ನಲಪಾಡ್ ಪೋಲೀಸರಿಗೆ ಶರಣಾಗುತ್ತಾನೆ ಎಂದು ಹ್ಯಾರಿಸ್ ಹೇಳಿದ್ದರು. ಶರಣಾಗುವ ವೇಳೆಯಲ್ಲಿ ತನ್ನ ಮನೆಯಿಂದಲೇ ಹೊರಬಂದ ನಲಪಾಡ್ ಮಾಧ್ಯಮದ ಕಣ್ಣಿಗೆ ಬೀಳುತ್ತಿದ್ದಂತೆ ಹ್ಯಾರಿಸ್ ರ ಮತ್ತೊಂದು ಮುಖ ಬಯಲಾಗಿತ್ತು.

ತಪ್ಪೊಪ್ಪಿಕೊಂಡ ನಲಪಾಡ್..!

ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ನಲಪಾಡ್ ಪೋಲೀಸರ ಮುಂದೆ ಶರಣಾಗುತ್ತಿದ್ದಂತೆ ಠಾಣೆಗೆ ಕರೆದೊಯ್ದ ಪೋಲೀಸರು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ.ಈ ವೇಳೆಯೂ ದರ್ಪದಿಂದಲೇ ವರ್ತಿಸಿದ್ದ ನಲಪಾಡ್ ಪೋಲೀಸರ ಮುಂದೆಯೂ ಸರಿಯಾದ ಉತ್ತರ ನೀಡದೆ ತಂದೆಯ ಅಧಿಕಾರದ ಬಲದಿಂದ ಹೊರಬರಲು ಪ್ರಯತ್ನಿಸಿದ್ದ. ಆದರೆ ವಿಚಾರಣೆಯ ನಂತರ ಕೋರ್ಟ್ ಗೆ ಹಾಜರುಪಡಿಸಿದ ಪೋಲೀಸರು , ನಲಪಾಡ್ ನನ್ನು ೮ ದಿನಗಳ ಕಾಲ ಸಿಸಿಬಿ ಪೋಲೀಸರ ಕಸ್ಟಡಿಗೆ ನೀಡಬೇಕೆಂದು ಕೋರಿದ್ದರು. ಆದರೆ ನ್ಯಾಯಾಧೀಶರು ನಲಪಾಡ್ ನನ್ನು ೨ ದಿನಗಳ ಕಾಲ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೋಲೀಸರ ಕಸ್ಟಡಿಗೆ ನೀಡಿದ್ದಾರೆ.

ಇಂದು ಬೆಳಿಗ್ಗೆಯಿಂದಲೇ ವಿಚಾರಣೆ ಆರಂಭಿಸಿದ ಪೋಲೀಸರು ನಲಪಾಡ್ ಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ತಾನು ಹಲ್ಲೆ ಮಾಡಿರುವುದು ನಿಜ, ಆತ ನನ್ನ ಹೊರ ಹೋಗುವಾಗ ನನ್ನ ಕಾಲಿಗೆ ತಾಗಿಕೊಂಡು ಹೋಗಿದ್ದಾನೆ, ಇದೇ ಕಾರಣಕ್ಕೆ ನಾನು ಅವನ ಮೇಲೆ ಹಲ್ಲೆ ನಡೆಸಿದ್ದೇನೇ’ ಎಂದು ತಪ್ಪು ಒಪ್ಪಿಕೊಂಡಿದ್ದಾನೆ.
ಆದರೆ ಪೋಲೀಸರು ನೀಡಿದ ಇತರ ಯಾವುದೇ ಪ್ರಶ್ನೆಗಳಿಗೂ ಉತ್ತರಿಸದ ನಲಪಾಡ್ ಮತ್ತೆ ಉಡಾಫೆಯಿಂದ ವರ್ತಿಸಿದ್ದಾನೆ. ಪೋಲೀಸರ ವಿಚಾರಣೆಗೆ ಸ್ಪಂದಿಸದ ನಲಪಾಡ್, ಮತ್ತೆ ಅಧಿಕಾರದ ಅಹಂನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ‌.

ಹಲ್ಲೆಗೊಳಗಾದ ಯುವಕನ ಮೇಲೇಯೇ ಕೇಸ್..!

ರೆಸ್ಟೋರೆಂಟ್ ನಲ್ಲಿ ನಡೆದ ಘಟನೆಯ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದ ಪೋಲೀಸರು ನಲಪಾಡ್ ನಡೆಸಿದ ಹಲ್ಲೆ ಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಫರ್ಜಿ ಕೆಫೆಯಲ್ಲಿ ಸಾಕಷ್ಟು ಜನ ಗ್ರಾಹಕರೂ ಇದ್ದಿದ್ದರಿಂದ ನಲಪಾಡ್ ಈ ಆರೋಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಲ್ಲೆಗೊಳಗಾದ ವಿದ್ವತ್ ಎಂಬ ಯುವಕ ಗಂಭಿರವಾಗಿ ಗಾಯಗೊಂಡಿದ್ದು ಈತನ ಮೇಲೇಯೇ ಹ್ಯಾರಿಸ್ ನ ಬೆಂಬಲಿಗರೊಬ್ಬರು ದೂರು ದಾಖಲಿಸಿದ್ದಾರೆ. ವಿದ್ವತ್ ಕುಡಿದ ಅಮಲಿನಲ್ಲಿ ನಲಪಾಡ್ ನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ಇಂದು ಪೋಲೀಸರ ವಿಚಾರಣೆಯ ವೇಳೆ ಸ್ವತಃ ನಲಪಾಡ್ ತಾನು ನಡೆಸಿರುವ ಹಲ್ಲೆ ಯ ಬಗ್ಗೆ ಒಪ್ಪಿಕೊಂಡಿದ್ದು , ವಿನಾ ಕಾರಣ ವಿದ್ವತ್ ನ ಮೇಲೆಯೇ ಆರೋಪಿಸಿದ್ದಾರೆ.

ನಲಪಾಡ್ ಗೆ ೭ ರಿಂದ ೯ ವರ್ಷ ಜೈಲು ವಾಸ..!

ಹೌದು , ಹಲ್ಲೆಗೊಳಗಾದ ವಿದ್ವತ್ ದೂರು ನೀಡಿದ್ದು ಪೋಲೀಸರು ಕೊಲೆಯತ್ನ ಕೇಸ್ ದಾಖಲಿಸಿಕೊಂಡಿದ್ದಾರೆ. ಇದೀಗ ನಲಪಾಡ್ ಕೂಡಾ ತಾನು ನಡೆಸಿರುವ ಹಲ್ಲೆ ಯ ಬಗ್ಗೆ ಒಪ್ಪಿಕೊಂಡಿದ್ದು ಕೊಲೆಯತ್ನ ಕೇಸ್ ನ ಅಡಿಯಲ್ಲಿ ನಲಪಾಡ್ ಗೆ ಏಳರಿಂದ ಒಂಬತ್ತು ಹತ್ತು ವರ್ಷ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ. ಆದ್ದರಿಂದಲೇ ಹ್ಯಾರಿಸ್ ತನ್ನ ಅಧಿಕಾರದ ಬಲದಿಂದ ತನ್ನ ಪುತ್ರ ನಲಪಾಡ್ ನನ್ನು ಈ ಘಟನೆಯಿಂದ ನುಣುಚಿಕೊಳ್ಳುಲು ಪ್ರಯತ್ನಿಸಿದ್ದರು ಎಂಬೂದು ತಿಳಿಯುತ್ತದೆ.
ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ಏನೇ ದಾಂಧಲೆ ನಡೆಸಿದರು ತಮ್ಮದೇ ಸರಕಾರ ಇರುವುದರಿಂದ ಅಂತಹ ಘಟನೆಗಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಾರೆ.

–ಅರ್ಜುನ್

 

Tags

Related Articles

Close