ಪ್ರಚಲಿತ

ಮೋದಿ ಕಛೇರಿಗೆ ಮುತ್ತಿಗೆ ಹಾಕಲೆತ್ನಿಸಿದ ಕಾಂಗ್ರೆಸ್ಸಿಗರ ಗರ್ವಭಂಗ ಮಾಡಿದ ಪೊಲೀಸರು..! ಕರ್ನಾಟಕದಲ್ಲಿ ನಡೆಯದ್ದು ದೆಹಲಿಯಲ್ಲಿ ನಡೆಯುತ್ತಾ..?

“ಮಾಡಿದ್ದುಣ್ಣೋ ಮಹರಾಯ” ಅಂತಾರಲ್ಲ, ಹಂಗೇ ಕುಂತಿದ್ರೆ ಇಂದು ಎಲ್ಲವೂ ಸರಿಯಾಗಿರುತ್ತಿತ್ತೋ ಏನೋ. ಆದರೆ ತಾನು ಮಾಡಿದ ಪಾಪಕ್ಕೆ ಅಧಿಕಾರವನ್ನೇ ಕಳೆದುಕೊಂಡು ಇದೀಗ ಪಶ್ಚಾತಾಪ ಪಡೆಯುತ್ತಿರುವ ಕಾಂಗ್ರೆಸ್ ಪಕ್ಷ ಇಷ್ಟು ಮಾಡಿಯೂ ಸಾಲದೆ ಇದೀಗ ಮೋದಿ ಭೇಟೆಗೆ ಇಳಿದಿದೆ. ಅಧಿಕಾರವದಿಯಲ್ಲಿ ನಯಾ ಪೈಸೆಯ ಅಭಿವೃದ್ಧಿಯನ್ನೂ ಮಾಡದೆ ಧ್ವೇಷದ ರಾಜಕಾರಣವನ್ನೇ ಮಾಡಿಕೊಂಡು ಬಂದ ಕಾಂಗ್ರೆಸ್ ಇದೀಗ ಎಲ್ಲವನ್ನೂ ಮೋದಿ ಮೇಲೆ ಗೂಬೆ ಕೂರಿಸಲು ಮುಂದಾಗಿದೆ.

ಇಂದು ದೆಹಲಿಯಲ್ಲಿ ಹೈಡ್ರಾಮವೇ ನಡೆದಿತ್ತು. ವಿವಿಧ ಬೇಡಿಕೆಗಳನ್ನು ನೆರವೇರಿಸಿ ಆಗ್ರಹಿಸಿ ಪ್ರಧಾನಿ ಕಛೇರಿ ಮುತ್ತಿಗೆ ಎಂಬ ಹೆಸರಿನಲ್ಲಿ ನಡೆದ ಮುತ್ತಿಗೆ ನಾಟಕೀಯ ಬೆಳವಣೆಯನ್ನೇ ಪಡೆದುಕೊಂಡಿದೆ. ಅತ್ತ ಕರ್ನಾಟಕದ ಮುಖ್ಯಮಂತ್ರಿ ಕುಮಾರ ಸ್ವಾಮಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲು ಹೊರಟಿದ್ದರೆ ಅತ್ತ ಮಿತ್ರ ಪಕ್ಷ ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕವೊಂದು ಪ್ರಧಾನಿ ಕಛೇರಿಗೆ ಮುತ್ತಿಗೆ ಹಾಕಲು ಹೊರಟಿತ್ತು. ಆದರೆ ಆರಂಭದಲ್ಲೇ ಅವರ ಮುಸುಕಿನ ಗುದ್ದಾಟಗಳು ಪಕ್ಷದ ಒಳಗೇ ಮುಜುಗರವನ್ನು ತಂದಿರಿಸಿತ್ತು.

ಸಾಲಮನ್ನಾ ಮಾಡಬೇಕು, ಮಹದಾಯಿ ನೀರಿಗೆ ನ್ಯಾಯ ಕೊಡಬೇಕು ಎಂದು ಪ್ರಧಾನಿ ಕಛೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಅದೇನೇ ಮಾಡಿದ್ರೂ ಪ್ರಧಾನಿಯನ್ನು ಮುಟ್ಟಲು ಸಾಧ್ಯವಿಲ್ಲ ಎಂಬ ಸತ್ಯ ಗೊತ್ತಿದ್ದರೂ ಈ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಆದರೆ ಈ ಸಾಹಸವನ್ನು ಆರಂಭದಲ್ಲೇ ಪೊಲೀಸರು ಟುಸ್ ಪಟಾಕಿ ಮಾಡಿ ಬಿಟ್ಟಿದ್ದಾರೆ. ಇನ್ನೇನು ಕೆಪಿಸಿಸಿ ಯ ಕಿಸಾನ್ ಘಟಕದಿಂದ ಪ್ರಧಾನಿ ಕಛೇರಿಗೆ ಪ್ರತಿಭಟನೆಗೆ ಹೊರಟಿದ್ದಾರೆ ಎನ್ನುವಾಗಲೇ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ಕುತಂತ್ರವನ್ನು ಮಟ್ಟಹಾಕಿದ್ದಾರೆ. ಯಾವುದೇ ಮುತ್ತಿಗೆ ಅಥವಾ ಪ್ರತಿಭಟನೆಗೆ ಅವಕಾಶ ನೀಡದೆ ದೆಹಲಿಯಿಂದ ಹೊರದಬ್ಬಿದ್ದಾರೆ. ಈ ಮೂಲಕ ಮತ್ತೆ ಪ್ರಚಾರ ಗಿಟ್ಟಿಸಲು ಹೋದ ಕಾಂಗ್ರೆಸ್ ನಾಯಕರಿಗೆ ತೀವ್ರ ನಿರಾಸೆಯಾಗಿದೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ಶಕ್ತಿಯನ್ನು ಕುಗ್ಗಿಸಲು ಪ್ಲಾನ್ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ ಪ್ರಧಾನಿ ಸಹಿತ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ ಈ ಎಲ್ಲಾ ಪ್ರಯತ್ನಗಳನ್ನೂ ಕೇಂದ್ರ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿಫಲ ಮಾಡುತ್ತಿರುವುದು ಕಾಂಗ್ರೆಸ್ ವಿಫಲತೆಗೆ ಹಿಡಿದ ಕೈಗನ್ನಡಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಹಿತ ಕೇಂದ್ರ ಸರ್ಕಾರವನ್ನು ಎದುರಿಸಲು ಈ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲೇ ಸಾಧ್ಯವಿಲ್ಲ. ಇನ್ನು ದೆಹಲಿಯಲ್ಲಿ ಈ ಸಾಹಸ ನಡೆಯುತ್ತಾ ಎಂಬ ಮಾತುಗಳು ಕಾಂಗ್ರೆಸ್ಸಿಗರನ್ನು ಮುಜುಗರಕ್ಕೀಡು ಮಾಡುತ್ತಿದೆ.

  • ಏಕಲವ್ಯ
Tags

Related Articles

Close