ಪ್ರಚಲಿತ

ಬಿಗ್ ಬ್ರೇಕಿಂಗ್: ಸಚಿವ ಜಾರ್ಜ್ ಬಂಧನಕ್ಕೆ ಕ್ಷಣಗಣನೆ!! ಇತ್ತ ಐಟಿ ಶಾಕ್ ಅತ್ತ ಗಣಪತಿ ಕೇಸ್!! ಕಾಂಗ್ರೆಸ್‍ಗೆ ತೀವ್ರ ಸಂಕಷ್ಟ!!

ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವ ಕೆ.ಜೆ.ಜಾರ್ಜ್ ಗೆ ಐಟಿ ಸರಿಯಾಗಿಯೇ ಶಾಕ್ ನೀಡಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಕಾಂಗ್ರೆಸ್‍ನ ಸಚಿವರು ಹಾಗೂ ಶಾಸಕರ ನಿಜ ಮುಖ ಅನಾವರಣವಾಗುತ್ತಿದ್ದು, ಒಂದೊಂದೇ ಪ್ರಕರಣಗಳು ಬಯಲಾಗುತ್ತಿದೆ. ಈಗ ರಾಜ್ಯದಲ್ಲಿ ಮುಖ್ಯಮಂತ್ರಿಗಳಿಗಿಂತಲೂ ಪ್ರಭಾವವನ್ನು ಬೆಳೆಸಿಕೊಂಡಿರುವ ಕೆ.ಜೆ.ಜಾರ್ಜ್‍ಗೆ ಐಟಿ ಶಾಕ್ ನೀಡಿದೆ.!!

ಗಣಪತಿ ಹತ್ಯೆ ಕೇಸಲ್ಲಿ ಬಂಧನ ಸಾಧ್ಯತೆ..!

ಡಿವೈಎಸ್‍ಪಿ ಗಣಪತಿ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್‍ನ ಪ್ರಭಾವಿ ಸಚಿವ ಕೆ.ಜೆ.ಜಾರ್ಜ್ ಕೈವಾಡ ಬಲವಾಗಿ ಕಾಣುತ್ತಿದ್ದು, ಯಾವುದೇ ಕ್ಷಣದಲ್ಲೂ ಬಂಧನವಾಗುವ ಸಾಧ್ಯತೆ ಇದೆ. ಈಗಾಗಲೇ ಅನೇಕ ವಿಚಾರಣೆಯನ್ನು ಎದುರಿಸಿರುವ ಸಿಬಿಐ ಸಚಿವ ಕೆ.ಜೆ.ಜಾರ್ಜ್‍ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಂಕಷ್ಟವನ್ನು ಎದುರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸಚಿವ ಕೆ.ಜೆ.ಜಾರ್ಜ್ ಯಥಾ ಶೀಘ್ರ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬಿಗ್ ಶಾಕ್ ನೀಡಿದ ಐಟಿ…

ನಿನ್ನೆ ತಾನೇ ರಾಜ್ಯ ಕಾಂಗ್ರೆಸ್ ಸಚಿವ ಕೆ.ಜೆ.ಜಾರ್ಜ್‍ಗೆ ಐಟಿ ಇಲಾಖೆ ಬಿಗ್ ಶಾಕ್ ನೀಡಿದೆ.!! ಗಣಪತಿ ಹತ್ಯೆ ಪ್ರಕರಣ ಬೆನ್ನಲ್ಲೇ ಕೆ.ಜೆ ಜಾರ್ಜ್ ಆಪ್ತರ ಮನೆಗೆ ಐಟಿ ದಾಳಿ ನಡೆಸಿದ್ದಾರೆ.. ವಂದಿತ್ ರೆಡ್ಡಿ ..ಈತ ಆಂದ್ರ ಮೂಲದ ಚಿತ್ತೂರಿನವನು.. ಈತ ಜಾರ್ಜ್ ಮಗ ರಾಣಾನ ಆಪ್ತ ಮಿತ್ರ ನಾಗಿದ್ದಾನೆ.. ಮತ್ತೊಬ್ಬ ಯುಗೇಂಧರ್ ಜಾರ್ಜ್.. ಜಾರ್ಜ್‍ನ ಅತ್ಯಾಪ್ತ ಅಂತಾನೇ ಹೇಳಬಹುದು.. ಈತ ಸಚಿವ ಕೆ.ಜೆ ಜಾರ್ಜ್‍ನ ವ್ಯವಹಾರದ ಲೆಕ್ಕಾಚಾರವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುವವನು… ಇನ್ನೊಬ್ಬ ಸಚಿವ ಜಾರ್ಜ್‍ನ ಮಗ ರಾಣಾನ ಆಪ್ತ ಇಸ್ಮಾಯಿಲ್ ಎನ್ನುವಾತ.. ಈತ ಗನ್ ಅಂಗಡಿಗಳನ್ನು ಹೊಂದಿರುತ್ತಾನೆ.. ಈತ ಜಾರ್ಜ್‍ನ ಬಲಗೈ ಬಂಟ ಅಂತಾನೇ ಹೇಳಬಹುದು.. ಈ ಮೂವರು ಸಚಿವ ಕೆ.ಜೆ ಜಾರ್ಜ್ ಆಪ್ತರ ಮನೆಗೆ ಐಟಿ ದಾಳಿಯಾಗಿರುವುದು ನಿಜವಾಗಿಯೂ ಜಾರ್ಜ್‍ಗೆ ದೊಡ್ಡ ಶಾಕ್‍ವ ಅಂತಾಬನೇ ಹೇಳಬಹುದು..

ಕ್ರೈಸ್ತನೆನ್ನುವ ಕಾರಣನಕ್ಕೋ ಅಥವಾ ಕ್ರಿಸ್ತನ ಮೇಲಿನ ಮೋಹಕ್ಕೋ , ಕಂಕುಳಲ್ಲಿಯೇ ಕೆ.ಜೆ ಜಾರ್ಜ್‍ನನ್ನು ಇಟ್ಟುಕೊಂಡು ಸಲಹುತ್ತಿರುವ ಸಿದ್ದರಾಮಯ್ಯರವರ ಅದ್ಭುತ ಉಪಾಯಗಳಿಗೆಲ್ಲಾ ಬ್ರೇಕ್ ಬೀಳುವ ಸಾಧ್ಯತೆ ಇದೀಗ ಅತ್ಯಂತ ಸನಿಹದಲ್ಲಿದೆ ಎಂದು ಹೇಳ ಬಹುದು..

 


ಗಣಪತಿ ಹತ್ಯೆಯಾಗುವ ಸಂದರ್ಭದಲ್ಲಿ ಕೆ.ಜೆ ಜಾರ್ಜ್ ಗೃಹ ಸಚಿವರಾಗಿದ್ದರು… ಆ ಸಮಯದಲ್ಲಿ ಕೆ.ಜೆ ಜಾರ್ಜ್ ಡಿವೈಎಸ್‍ಪಿ ಗಣಪತಿ ಸಾವಿಗೆ ಕಾರಣ ಕರ್ತರು ಎಂಬ ಮಾತು ಎಲ್ಲೆಡೆ ಹಬ್ಬುತ್ತಿದ್ದಂತೆಯೇ ಇಡೀ ಬಿಜೆಪಿ ಕಾರ್ಯಕರ್ತರು ಸೇರಿ ರಾಜೀನಾಮೆಗೆ ಪ್ರತಿಭಟನೆಯನ್ನು ಕೂಡಾ ಮಾಡುತ್ತಾರೆ… ಆ ನಂತರ ರಾಜೀನಾಮೆಯನ್ನು ಕೂಡಾ ನೀಡುತ್ತಾರೆ… ನಂತರ ರಾಜ್ಯ ಸರಕಾರದಿಂದ ಸುಖಾ ಸುಮ್ಮನೆ ತನಿಖೆಯನ್ನು ಮಾಡುತ್ತಾರೆ..

ಯಾವಾಗಲೂ ರಾಜ್ಯ ಸರಕಾರ ಅವರ ಸರಕಾರದವರ ಜೊತೆ ತನಿಖೆಯನ್ನು ಮಾಡಬೇಕಾದರೆ ಸುಖಾಸುಮ್ಮನೆ ತನಿಖೆ ಮಾಡಿ ಅದರಿಂದ ಅವರನ್ನು ನಿರಪರಾಧಿ ಎನ್ನುವಂತೆ ಮಾಡುತ್ತಾರೆ.. ಇದನ್ನು ಖಂಡಿಸಿ ಮತ್ತೆ ಗಣಪತಿ ಹತ್ಯೆಯ ಮರು ತನಿಖೆಯಾಗಬೇಕು ಎಂದು ಅವರ ಕುಟುಂಬ ಸುಪ್ರಿಂ ಕೋರ್ಟ್ ಮೊರೆ ಹೋಗಿತ್ತು.. ಈ ಬಾರಿ ಸುಪ್ರಿಂ ಕೋರ್ಟ್ ಕೂಡಾ ಸಿಬಿಐ ತನಿಖೆಗೆ ಮಾಡಲು ತಯಾರಾಗಿದೆ… ಈ ಬಾರಿ ಮತ್ತೆ ಗ್ರಹಣ ಕಳೆದ ನಂತರ ಕೆ.ಜೆ ಜಾರ್ಜ್‍ಗೆ ಗ್ರಹಣ ಹಿಡಿದಂತೆ ಕಾಣುತ್ತಿದೆ… ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಿದ ನಂತರದಲ್ಲಿ ಜಾರ್ಜ್ ವಿಚಾರಣೆ ನಡೆಯಲಿದೆ.. ಫೆಬ್ರವರಿ 10 ರಿಂದ 12ರ ಒಳಗಾಗಿ ಸಚಿವ ಜಾರ್ಜ್ ವಿಚಾರಣೆ ಸಾಧ್ಯತೆ ಇದೆ..

ಒಂದು ಕಡೆಯಲ್ಲಿ ಗಣಪತಿ ಹತ್ಯೆ ಕೇಸ್ ಇನ್ನೊಂದು ಕಡೆಯಲ್ಲಿ ತನ್ನ ಆಪ್ತರ ಮನೆಗೆ ಐಟಿ ದಾಳಿಯಾಗಿರುವುದು ನಿಜವಾಗಿಯೂ ದೊಡ್ಡ ಶಾಕ್ ಅಂತಾನೇ ಹೇಳ ಬಹುದು..

-ಪವಿತ್ರ

Tags

Related Articles

Close