ಪ್ರಚಲಿತರಾಜ್ಯ

ಸ್ಫೋಟಗೊಂಡಿತು ಶಾಸಕ ಹ್ಯಾರಿಸ್ ಮೇಲಿನ ಅಸಮಾಧಾನ!! ಶಾಂತಿನಗರದಲ್ಲಿ ಹ್ಯಾರಿಸ್ ಗೆ ಸಿದ್ದರಾಮಯ್ಯ ಅವಮಾನ ಮಾಡಿದ್ದು ಹೇಗೆ !?

ಕಾಂಗ್ರೆಸ್ ನ ನೀತಿಗೇ ಕಾಂಗ್ರೆಸ್ ನಾಯಕರೇ ಬಲಿಯಾಗಿರುತ್ತಿರುವುದು ಇದೇ ಮೊದಲೇನಲ್ಲಾ. ಯಾಕೆಂದರೆ ಕಾಂಗ್ರೆಸ್ ನ ನೀತಿಯೇ ಹೀಗೆ. ಅಧಿಕಾರವೊಂದು ತನ್ನ ಕೈಯಲ್ಲಿ ಇದ್ದರೆ ಏನನ್ನು ಮಾಡಲು ಹಿಂದೇಟು ಹಾಕುವುದಿಲ್ಲ. ತಮ್ಮದೇ ನಿರ್ಧಾರಗಳಿಂದ ರಾಜ್ಯದ, ದೇಶದ ಜನತೆಯನ್ನು ಬಲಿ ಪಡೆಯುತ್ತಾರೆ. ಅಧಿಕಾರದ ಮದದಿಂದ ತಾವು ತೋಡಿದ ಹಳ್ಳಕ್ಕೆ ತಾವೇ ಬೀಳುತ್ತಿದ್ದಾರೆ ಈ ಕಾಂಗ್ರೆಸಿಗರು.!

ಚುನಾವಣೆ ಸಮೀಪಿಸುತ್ತಿದ್ದಂತೆ ಟಿಕೆಟ್ ಗಾಗಿ ತೀವ್ರ ಪೈಪೋಟಿಗೆ ಇಳಿದಿರುವ ಕಾಂಗ್ರೆಸ್ ನಾಯಕರು , ತಮ್ಮ ಪಕ್ಷದ ಏಳಿಗೆಗಿಂತ ತಮ್ಮ ಸ್ವಂತ ಏಳಿಗೆಯನ್ನೇ ಬಯಸಿ ಪ್ರಚಾರ ಕಾರ್ಯಕ್ಕೆ ತಯಾರಾಗಿದ್ದಾರೆ. ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕನ ಮಗನೊಬ್ಬ ಮಾಡಿದ ದಾಂಧಲೆ ರಾಜ್ಯಾದ್ಯಂತ ಸುದ್ದಿಯಾಗಿತ್ತು. ದಾಂಧಲೆ ನಡೆಸಿದ ಶಾಸಕರ ಮಗ ಸದ್ಯ ಜೈಲು ಶಿಕ್ಷೆ ಅನುಭವಿಸುತ್ತಿದ್ದರೂ ಕೂಡಾ ಕಾಂಗ್ರೆಸ್ ತನ್ನ ಅಧಿಕಾರದ ಬಲದಿಂದ ಜೈಲಿನಿಂದ ಬಿಡಿಸಲು ಪ್ರಯತ್ನಿಸುತ್ತಲೇ ಇದೆ.

Image result for haris nalapad

ಪಕ್ಷದಿಂದ ದೂರಸರೆಸಲು ಪ್ರಯತ್ನ..!

ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ನಲಪಾಡ್ ರ ಮಗ ಮಹಮ್ಮದ್ ನಲಪಾಡ್ ರೆಸ್ಟೋರೆಂಟ್ ಒಂದರಲ್ಲಿ ಅಮಾಯಕ ಯುವಕನ ಮೇಲೆ ಮಾಡಿದ ಮಾರಣಾಂತಿಕ ಹಲ್ಲೆ ದಿನ ಬೆಳಗಾಗುವುದರ ಒಳಗೆ ರಾಜ್ಯ, ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು. ಚುನಾವಣೆ ಹತ್ತಿರ ಬರುತ್ತಿರುವಾಗಲೇ ಕಾಂಗ್ರೆಸ್ ತನ್ನ ಗೂಂಡಾಗಿರಿ ಮುಂದುವರೆಸಿದ್ದು, ಪಕ್ಷಕ್ಕೆ ದೊಡ್ಡ ಪ್ರಮಾಣದ ಏಟು ಬೀಳುತ್ತದೆ ಎಂದು ಅರಿತಿರುವ ಕಾಂಗ್ರೆಸ್ ಹೈಕಮಾಂಡ್ ಶಾಸಕರ ಗೂಂಡಾ ಮಗನ ಬಗ್ಗೆ ವರದಿ ಪಡೆದಿತ್ತು. ಶಾಸಕರ ಮಗನ ಗೂಂಡಾಗಿರಿ ಯಿಂದ ಪಕ್ಷಕ್ಕೆ ಆದ ಡ್ಯಾಮೇಜ್ ಸರಿಪಡಿಸಲು ಪ್ರಭಾವಿ ಶಾಸಕ ಹ್ಯಾರಿಸ್ ನನ್ನು ರಾಜ್ಯ ನಾಯಕರು ಪಕ್ಷದಿಂದ ಹೊರಗಿಡಲು ಪ್ರಯತ್ನಿಸುತ್ತಲೇ ಇದ್ದಾರೆ.!

ಅಸಮಾಧನದಿಂದಿದ್ದ ಸಿದ್ದರಾಮಯ್ಯ..!

ಹ್ಯಾರಿಸ್ ನಲಪಾಡ್ ಶಾಂತಿನಗರ ಕ್ಷೇತ್ರದ ಶಾಸಕನಾಗಿ ಎರಡು ಬಾರಿ ಆಯ್ಕೆಯಾಗಿ ಕಾಂಗ್ರೆಸ್ ನ ಪ್ರಭಾವಿ ನಾಯಕರಾಗಿ ಬೆಳೆಯುತ್ತಿದ್ದರು. ಕೋಟ್ಯಾಂತರ ರೂಪಾಯಿ ಆಸ್ತಿ ಮಾಡಿಕೊಂಡಿದ್ದ ಹ್ಯಾರಿಸ್ ಒಂದು ರೀತಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಗೂ ತಲೆನೋವಾಗಿದ್ದರು. ಸಿದ್ದರಾಮಯ್ಯನವರು ಈ ಹಿಂದೆಯೇ ಹ್ಯಾರಿಸ್ ಜೊತೆ ಅಲ್ಪ ಮಟ್ಟಿಗೆ ಅಸಮಾಧಾನದಿಂದಲೇ ಇದ್ದರು. ಹ್ಯಾರಿಸ್ ತನ್ನ ಹಂತಕ್ಕೆ ಬಂದರೆ ತನಗೇ ಕಷ್ಟ ಎಂದು ತಿಳಿದಿದ್ದ ಸಿದ್ದರಾಮಯ್ಯನವರು ಅನೇಕ ಬಾರಿ ಹ್ಯಾರಿಸ್ ವಿರುದ್ಧ ಪರೋಕ್ಷವಾಗಿ ಮಾತನಾಡಿದ್ದನ್ನೂ ಕಾಣಬಹುದು.

Image result for siddaramaiah angry

ಹ್ಯಾರಿಸ್ ನ್ನು ದೂರ ತಳ್ಳಿದ ಸಿದ್ದರಾಮಯ್ಯ..!

ಬೆಂಗಳೂರಿನ ಶಾಂತಿನಗರ ದಲ್ಲಿ ಕಾಂಗ್ರೆಸ್ ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಲೇ ಇದ್ದ ಶಾಸಕ ಹ್ಯಾರಿಸ್ ನನ್ನು ಹತ್ತಿರಕ್ಕೆ ಸೇರಿಸಲಿಲ್ಲ. ಶಾಂತಿನಗರದಲ್ಲೇ ಈ ಕಾರ್ಯಕ್ರಮ ನಡೆಯುತ್ತಿದ್ದರೂ ಕ್ಷೇತ್ರದ ಶಾಸಕ ಹ್ಯಾರಿಸ್ ನಲಪಾಡ್ ರನ್ನು ಸಿದ್ದರಾಮಯ್ಯನವರು ವೇದಿಕೆಗೂ ಬರಲು ಬಿಡದೆ ತಮ್ಮ ಹತ್ತಿರ ಬರಲೂ ಬಿಡಲಿಲ್ಲ ಎಂಬ ಸತ್ಯ ಬಯಲಾಗಿದೆ. ಹ್ಯಾರಿಸ್ ನಲಪಾಡ್ ಶಾಂತಿನಗರ ದ ಶಾಸಕರಾಗಿರುವುದರಿಂದ ತನ್ನ ಕ್ಷೇತ್ರದ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಸಿದ್ದರಾಮಯ್ಯನವರಿಗೆ ಹ್ಯಾರಿಸ್ ಮೇಲೆ ಈ ಮೊದಲೇ ಅಸಮಾಧಾನ ಇದ್ದಿದ್ದರಿಂದ ಅದನ್ನೇ ನೆಪವಾಗಿಟ್ಟುಕೊಂಡು ವೇದಿಕೆಗೂ ಬಾರದಂತೆ ಮಾಡಿದ್ದರು.

ಸ್ಫೋಟಗೊಂಡ ಕಾಂಗ್ರೆಸ್ ಒಳಜಗಳ..!

ಕಾಂಗ್ರೆಸ್ ನಲ್ಲಿ ಪದೇ ಪದೇ ಏನಾದರೊಂದು ಕಾರಣಕ್ಕೆ ನಾಯಕರ ಮಧ್ಯೆ ಭಿನ್ನಾಭಿಪ್ರಾಯಗಳು ಮೂಡುತ್ತಲೇ ಇದೆ. ಆದರೂ ತಮ್ಮ ಒಳಜಗಳವನ್ನು ರಾಜ್ಯದ ಮುಂದೆ ಬಹಿರಂಗವಾಗದಂತೆ ಎಚ್ಚರ ವಹಿಸುತ್ತಲೇ ಬಂದಿದ್ದರೂ ಕೂಡಾ ಒಂದಲ್ಲ ಒಂದು ರೀತಿಯಲ್ಲಿ ಕಾಂಗ್ರೆಸ್ ನ ಭಿನ್ನಾಭಿಪ್ರಾಯ ಹೊರ ಜಗತ್ತಿಗೆ ಪ್ರದರ್ಶನವಾಗುತ್ತಲೇ ಇದೆ. ಇದೀಗ ಬಹಿರಂಗವಾಗಿ ತೋರ್ಪಡಿಸಿದ ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕ ಹ್ಯಾರಿಸ್ ನಲಪಾಡ್ ರಿಗೆ ಸೇರಿದ್ದ ಕಾರ್ಯಕರ್ತರ ಎದುರೇ ಛೀಮಾರಿ ಹಾಕಿದ್ದಾರೆ. !

ಕಾಂಗ್ರೆಸ್ ನ ಒಳಜಗಳ ಚುನಾವಣೆ ಸಮೀಪಿಸುತ್ತಿದ್ದಂತೆ ಬಹಿರಂಗಗೊಳ್ಳುತ್ತಿದ್ದು ರಾಜ್ಯದಲ್ಲಿ ಹೊಸ ಶಕೆ ಆರಂಭವಾಗುವುದರಲ್ಲಿ ಸಂಶಯವಿಲ್ಲ. ಕಾಂಗ್ರೆಸ್ ನಾಯಕರೇ ತಮ್ಮ ಪಕ್ಷದ ಅವನತಿಗೆ ಕಾರಣವಾಗುತ್ತಿದ್ದು ರಾಜ್ಯದಲ್ಲಿ ಕಾಂಗ್ರೆಸ್ ನ ಅಂತ್ಯಕಾಲ ಸಮೀಪಿಸಿದೆ.!

–ಅರ್ಜುನ್

Tags

Related Articles

Close