ಪ್ರಚಲಿತ

ಬ್ರೇಕಿಂಗ್ ! ಖರ್ಜೂರ ನೀಡಿ ಕಾರು ಪಡೆದುಕೊಂಡ ಮುಸ್ಲಿಂ ಸಚಿವ.! ಕಿತ್ತಾಡಿಕೊಂಡವರು ಮತ್ತೆ ಒಂದಾದರು,ರಾಜ್ಯದ ಸ್ಥಿತಿ ಅದೋಗತಿ..!

ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಜೆಡಿಎಸ್‌ನಿಂದ ಹೊರ ಬಂದು ಕುಮಾರಸ್ವಾಮಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದ ಜಮೀರ್ ಅಹ್ಮದ್ ಸದಾ ಒಂದಿಲ್ಲೊಂದು ವಿವಾದಾತ್ಮಕ ವಿಚಾರವಾಗಿಯೇ ಸುದ್ಧಿಯಲ್ಲಿರುವವರು. ಜೆಡಿಎಸ್‌ನಲ್ಲಿ ಶಾಸಕನಾಗಿದ್ದ ಜಮೀರ್ ಅಹ್ಮದ್ ಚುನಾವಣೆಗೂ ಮೊದಲೇ ಪಕ್ಷ ತೊರೆದು ಸಿದ್ದರಾಮಯ್ಯನವರ ಬೆನ್ನ ಹಿಂದೆ ಬಿದ್ದು ಕಾಂಗ್ರೆಸ್ ಸೇರಿಕೊಂಡಿದ್ದರು. ಈ ಸಂದರ್ಭದಲ್ಲಿ ಕೇವಲ ಪಕ್ಷ ತೊರೆದು ಸುಮ್ಮನಾಗದ ಜಮೀರ್ , ಕುಮಾರಸ್ವಾಮಿ ಅವರಿಗೆ ಬಾಯಿಗೆ ಬಂದಂತೆ ಬೈದುಕೊಂಡಿದ್ದರು.

ಕುಮಾರಸ್ವಾಮಿ ಮತ್ತು ಜಮೀರ್ ನಡುವಿನ ಮನಸ್ಥಾಪ ರಾಜ್ಯ ರಾಜಕಾರಣದಲ್ಲಿ ಗದ್ದಲ ಉಂಟು ಮಾಡಿತ್ತು. ಯಾವುದೇ ಕಾರಣಕ್ಕೂ ಮುಖಕ್ಕೆ ಮುಖ ಕೊಟ್ಟು ಮಾತೂ ಕೂಡ ಆಡುವುದಿಲ್ಲ ಎಂಬಂತಿದ್ದ ಜಮೀರ್ ಮತ್ತು ಕುಮಾರಸ್ವಾಮಿ ಇದೀಗ ತಮ್ಮ ಹಳೇ ದೋಸ್ತಿಯೆಡೆಗೆ ಮುಖ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡ ನಂತರದಲ್ಲಿ ಜಮೀರ್ ಅಹ್ಮದ್‌ಗೆ ಸಚಿವ ಸ್ಥಾನವೂ ಲಭಿಸಿತ್ತು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿಗೆ ಬೇಡಿಕೆ ಇಟ್ಟಿದ್ದ ಜಮೀರ್‌ ಆಸೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ತಣ್ಣೀರೆರಚಿದ್ದರು. ಆದರೆ ಇದೀಗ ಖರ್ಜೂರ ಪಡೆದುಕೊಂಡು ಕಾರ್ ನೀಡಿದ್ದಾರೆ ಮುಖ್ಯಮಂತ್ರಿಗಳು..!

ಉಮ್ರಾ ಖರ್ಜೂರದಿಂದ ಮತ್ತೆ ಒಂದಾದ ಜಮೀರ್-ಕುಮಾರಣ್ಣ..!

ಚುನಾವಣೆಯ ಸಂದರ್ಭದಲ್ಲಿ ಬೇರೆ ಬೇರೆಯಾಗಿದ್ದ ಕುಮಾರಸ್ವಾಮಿ ಮತ್ತು ಜಮೀರ್ ಅಹ್ಮದ್ ನಡುವಿನ ಭಿನ್ನಾಭಿಪ್ರಾಯ ಇನ್ನು ಯಾವುದೇ ಕಾರಣಕ್ಕೂ ಸರಿ ಹೋಗುವ ಹಾಗೆ ಕಾಣುತ್ತಿರಲಿಲ್ಲ. ಆದರೆ ರಾಜಕೀಯ ನಾಟಕವನ್ನೇ ಮೈಕರಗತ ಮಾಡಿಕೊಂಡಿರುವ ಕುಮಾರಸ್ವಾಮಿ ಮತ್ತು ಜಮೀರ್ ಮೈತ್ರಿ ಮಾಡಿಕೊಂಡ ನಂತರ ತಮ್ಮ ಬಣ್ಣ ಬದಲಾಯಿಸಿಕೊಂಡಿದ್ದರು. ತಾನು ಸಿಎಂ ಕುಮಾರಸ್ವಾಮಿ ಅವರು ಹೇಳಿದರೆ ಅವರ ಕಾರ್ ಡ್ರೈವರ್ ಆಗಿಯೂ ಕೆಲಸ ಮಾಡಲು ತಯಾರಿದ್ದೇನೆ ಎನ್ನುವ ಮೂಲಕ ರಾಜ್ಯ ರಾಜಕಾರಣದಲ್ಲಿ ಮಂತ್ರಿ ಸ್ಥಾನ‌ ಗಿಟ್ಟಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದ್ದರು.‌ಅದರಂತೆಯೇ ಮಂತ್ರಿ ಸ್ಥಾನ ಪಡೆದುಕೊಂಡ ಜಮೀರ್ ನನಗೆ ಸಣ್ಣ ಕಾರುಗಳು ಬೇಡ, ಫಾರ್ಚುನರ್ ಕಾರ್ ಸರಕಾರ ನೀಡಬೇಕೆಂಬ ಬೇಡಿಕೆ ಇಟ್ಟಿದ್ದರು.

Image result for jameer ahamad

ಆದರೆ ಜಮೀರ್ ಬೇಡಿಕೆಯನ್ನು ನಿರಾಕರಿಸಿದ ಸಿಎಂ ಕುಮಾರಸ್ವಾಮಿ, ಅಂತಹ ಯಾವುದೇ ಅವಕಾಶ ಇಲ್ಲ ಎನ್ನುವ ಮೂಲಕ ಜಮೀರ್ ಆಸೆಗೆ ತೆರೆ ಎಳೆದಿದ್ದರು.‌ಆದರೆ ಇದೀಗ ಕಂಡು ಬಂದ ಬೆಳವಣಿಗೆಯಲ್ಲಿ ಜಮೀರ್ ಅಹ್ಮದ್ ಕುಮಾರಸ್ವಾಮಿ ಅವರಿಗೆ ಉಮ್ರಾ ಖರ್ಜೂರ ನೀಡಿ ಕಾರ್ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಒಲಿಸಿಕೊಳ್ಳಲು ಉಮ್ರಾ ಖರ್ಜೂರ ನೀಡಿದ ಜಮೀರ್ , ಸಿದ್ದರಾಮಯ್ಯನವರು ಬಳಸಿಕೊಂಡಿದ್ದ ಫಾರ್ಚುನರ್ ಕಾರನ್ನು ತಮಗೆ ಬೇಕೆಂಬ ಬೇಡಿಕೆ ಇಟ್ಟಿದ್ದರು.

Image result for kumaraswamy

ಜಮೀರ್ ಅಹ್ಮದ್ ಈ ಹಿಂದೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿಗೆ ಬೇಡಿಕೆ ಇಟ್ಟಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯಾವುದೇ ಕಾರಣಕ್ಕೂ ಆ ಕಾರನ್ನು ನೀಡಲಾಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಉಮ್ರಾ ಯಾತ್ರೆಯಿಂದ ವಾಪಾಸಾಗಿರುವ ಜಮೀರ್ ಅಹ್ಮದ್ ಮುಖ್ಯಾಮಂತ್ರಿಗಳಿಗೆ ಖರ್ಜೂರ ನೀಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ..!

ಸದ್ಯ ಮೈತ್ರಿ ಸರಕಾರದಲ್ಲಿ ಕೇವಲ ಆಡಂಬರದ ರಾಜಕೀಯ ನಡೆಯುತ್ತಿದೆಯೇ ವಿನಃ ರಾಜ್ಯದ ಅಭಿವೃದ್ಧಿಯ ಬಗ್ಗೆ ಯಾವ ಸಚಿವರಿಗೂ ಆಸಕ್ತಿ ಇಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಯಾಕೆಂದರೆ ಜಮೀರ್‌ನಂತಹ ಸಚಿವರು ಕೇವಲ ತಮ್ಮ ವೈಯಕ್ತಿಕ ಲಾಭ ನೋಡುತ್ತಿದ್ದಾರೆ ವಿನಃ ರಾಜ್ಯದ ಜನರ ಅಭಿವೃದ್ಧಿ ಅಲ್ಲ..!

–ಅರ್ಜುನ್

Tags

Related Articles

Close