ಪ್ರಚಲಿತ

ಉತ್ತರ ಪ್ರದೇಶದ ಹಿಡಿತ ಕಳೆದುಕೊಂಡಿತೇ ಬಿಜೆಪಿ! ಗೋರಖ್ ಪುರದ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು ಇದೊಂದೇ ಒಂದು ಕಾರಣಕ್ಕೆ!

ಅದು ನಿಜಕ್ಕೂ ಆಘಾತವೂ ಹೌದು ಮತ್ತು ನಿರೀಕ್ಷಿಸಿದ್ದೂ ಹೌದು!! ಉತ್ತರ ಪ್ರದೇಶದಲ್ಲಿ, ಭಾರತೀಯ ಜನತಾ ಪಕ್ಷದ ಉಪಚುನಾವಣೆಯ ಸೋಲೊಂದು ನೆರೆಹ ಹೊರೆಯ ರಾಜ್ಯಗಳಿಗೆ ಆಘಾತ!! ಆದರೆ, ಉತ್ತರ ಪ್ರದೇಶದ ಜನರಿಗದು ನಿರೀಕ್ಷಸಿದಂತೆಯೇ ಆಗಿದೆ ಎನ್ನುವ ಭಾವ!! ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಸ್ವಲ್ಪ ಗಂಭೀರವಾಗಿದ್ದಾರೆ! ಅಷ್ಟೇ!! ಆಗಿದ್ದಷ್ಟೇ! ಇತ್ತ, ಕೇವಲ ಉಪಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಇಡೀ ಉತ್ತರ ಪ್ರದೇಶವನ್ನೇ ಗೆದ್ದಂತಾಡುತ್ತಿದೆ! ಸರಕಾರವಿರುವುದು ಯೋಗಿ ಆದಿತ್ಯನಾಥ್ ರವರದ್ದೇ ವಿನಃ ಕಾಂಗ್ರೆಸ್ಸಿನವರದಲ್ಲ! ಕೇವಲ, ಗ್ರಾಮ ಪಂಚಾಯತ್, ನಗರ ವಲಯಗಳಲ್ಲಿ ಪಕ್ಷದ ಅಸ್ತಿತ್ವ ಉಳಿಸಿಕೊಂಡಿರುವ ಕಾಂಗ್ರೆಸ್ ಮುಂದೊಂದು ದಿನ, ಭಾರತದ ರಾಜಕೀಯ ಪುಟಗಳಲ್ಲಷ್ಟೇ ಅಸ್ತಿತ್ವ ಉಳಿಸಿಕೊಳ್ಳುತ್ತದೆಯೇ ವಿನಃ ರಾಜಕೀಯ ವಲಯದಲ್ಲಂತೂ ಅಲ್ಲ!

ಗೋರಖ್ ಪುರ ಮತ್ತು, ಫುಲ್ಪುರ್ ಉಪಚುನಾವಣೆಯ ಫಲಿತಾಂಶ, ಭಾರತೀಯ ಜನತಾ ಪಕ್ಷದ ಪ್ರತಿಯೊಬ್ಬ ಬೆಂಬಲಿಗನಿಗೂ ಆಘಾತವೇ ಬಿಡಿ! ಅದರಲ್ಲಿಯೂ ಸಹ, ಹಿಂದುತ್ವದ ಬೆಂಕಿ ಚೆಂಡು ಎಂದೇ ಹೆಸರಾದ ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಸ್ವಕ್ಷೇತ್ರವದು! ಅದಲ್ಲದೇ, ಉತ್ತರ ಪ್ರದೇಶ! ಯೋಗಿ! ಸತತ ಗೆಲುವು! ಎಂಬಷ್ಟರಲ್ಲೇ ಇದ್ದ ಬೆಂಬಲಿಗರಿಗೆ ಯಾವುದೇ ಕಾರಣಕ್ಕೂ ಊಹಿಸಲೂ ಸಾಧ್ಯವಿಲ್ಲವೆನ್ನುವುದೂ ಅಷ್ಟೇ ಸತ್ಯ! ಯಾಕೆಂದರೆ, ಬಿಜೆಪಿ ಅತಿ ಹೆಚ್ಚು ಹಿಡಿತ ಸಾಧಿಸಿರುವ ರಾಜ್ಯವದು! ಅದರಲ್ಲೂ, ಯೋಗಿ ಆದಿತ್ಯನಾಥ್ ರೆಂದರೆ ಕೇಳಬೇಕಾ?!

ಮಜಾ ಎಂದರೆ, ಯಾವಾಗ ಉತ್ತರ ಪ್ರದೇಶದಲ್ಲಿ ಉಪಚುನಾವಣೆಯಲ್ಲಿ, ಬಿಜೆಪಿ ಸೋಲು ಕಂಡಿತೋ, ರಾಷ್ಟ್ರದ ಮಾಧ್ಯಮಗಳು ಕಾಂಗ್ರೆಸ್ ನ ಗೆಲುವನ್ನು
ತೀರಾ ಎನ್ನುವಂತೆ ವೈಭವೀಕರಿಸಿದರು!! ಅದಲ್ಲದೇ, ಮತ್ತದೇ ಮೋದಿಯನ್ನೂ ಸಹ ಗುರಿಯಾಗಿಸಿದ ಮಾಧ್ಯಮಗಳು “ಇನ್ನು ಮೋದಿ ಅಲೆ ಮುಗಿಯಿತು!!
ಸಮಾಜವಾದಿ ಪಕ್ಷ ಮತ್ತು ಭಾರತೀಯ ಸಮಾಜವಾದಿ ಪಕ್ಷದ ಮಹಾ ಮೈತ್ರಿಯೊಂದು ಭಾರತೀಯ ಜನತಾ ಪಕ್ಷವನ್ನು ಸಂಪೂರ್ಣವಾಗಿ ಗುಡಿಸಿ ಸಾರಿಸಿತು ಎನ್ನುವಷ್ಟರ ಮಟ್ಟಿಗೆ ಮಾಧ್ಯಮಗಳು ಸುದ್ದಿ ಬಿತ್ತರಿಸಿದವು! ಅಯ್ಯೋ! ಸುದ್ದಿ ತಿಳಿದದ್ದೇ , ಪಕ್ಷದ ಪ್ರತಿಯೊಬ್ಬನಿಗೂ ಆತಂಕ!! ಮೋದಿ ಅಲೆ ಕಡಿಮೆಯಾಗುತ್ತ ಬಂದಿತೇ ಎಂದು! ಆದರೆ, ಯಾವ ರಾಜಕೀಯ ತಜ್ಞರೂ ಸಹ, ಎಸ್ ಪಿ ಮತ್ತು ಬಿ ಎಸ್ ಪಿ ಮಹಾಮೈತ್ರಿ ಉತ್ತರ ಪ್ರದೇಶದಲ್ಲಿ ಗೆಲುವು ಸಾಧಿಸಿತು ಎನ್ನುವುರ ಬಗ್ಗೆಯಷ್ಟೇ ಮಾತನಾಡಿದರೇ ವಿನಃ, ಯಾವುದೇ ರಾಜಕೀಯ ವಿಶ್ಲೇಷಣೆಗೂ ಇಳಿಯಲಿಲ್ಲ! ವಾಸ್ತವ ಬೇರೆ ಇದ್ದರೂ ಕೂಡ, ಯಾವ ಮಾಧ್ಯಮಗಳೂ ಸಹ ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋತಿದ್ದೇಕೆ ಎನ್ನುವುದನ್ನೂ ಹೇಳಲೇ ಇಲ್ಲ! ಕೇವಲ, ಬಿಜೆಪಿ ಸೋತಿದೆ ಎನ್ನುವುದೊಂದನ್ನು ಬಿಟ್ಟು! ಪ್ರತೀ ಮಾಧ್ಯಮಗಳೂ, ಎಸ್ ಪಿ ಮತ್ತು ಬಿ ಎಸ್ ಪಿ ಯ ಗೆಲುವೊಂದನ್ನು ವೈಭವೀಕರಿಸುವಾಗ, ಯಾರಿಗೂ ಬಹುಷಃ ಸೋತಿರುವುದರ ಕಾರಣವನ್ನೂ ಯೋಚಿಸಲಾಗಿಸದಷ್ಟು ಬೆಪ್ಪಾಗುವುದು ಸಹಜವೇ ಬಿಡಿ!

ಆದರೆ, ಬಿಜೆಪಿ ಯಾಕೆ ಗೋರಖಪುರದಲ್ಲಿ ಸೋತಿತು ಎನ್ನುವುದನ್ನು ತಿಳಿದುಕೊಳ್ಳುವ ಮೊದಲು, ಬಿಜೆಪಿ ಯ ಕ್ಷೇತ್ರದ ಬಗ್ಗೆ ಮೊದಲು ತಿಳಿದುಕೊಳ್ಳಬೇಕಾಗುತ್ತದೆ! ಈ ಗೋರಖ್ ಪುರ ಕ್ಷೇತ್ರವೊಂದಿದೆಯಲ್ಲವಾ?! ಅದು, ಕೇವಲ ಒಂದು ಅಥವಾ ಎರಡು ವರ್ಷಗಳಿಂದ ಬಿಜೆಪಿಯ ಹಿಡಿತದಲ್ಲಿಲ್ಲ! ಬದಲಾಗಿ, ಬರೋಬ್ಬರಿ ೨೫ ವರ್ಷಗಳಿಂದಲೂ ಸಹ, ಬಿಜೆಪಿ ಯ ಅಧಿಪತ್ಯ ಸಾಧಿಸಿದೆ! ಇದಷ್ಟೂ ಗೆಲುವಿಗೆ ಕಾರಣವಾದವರು ಯೋಗಿ ಆದಿತ್ಯನಾತ್!! ೨೫ ವರ್ಷಗಳಿಂದ, ಯಾವುದೇ ಚುನಾವಣರಯಲ್ಲಿಯೂ ಸೋಲು ಎಂಬುದನ್ನೇ ಕಂಡಿಲ್ಲದ ಯೋಗಿ ಆದಿತ್ಯನಾಥ್ ರಿಗೆ ಇರುವಷ್ಟು ವೈಯುಕ್ತಿಕ ಮತಗಳು ಇಡೀ ದೇಶದಲ್ಲಿಯೇ ಬಹುಷಃ ಮೋದಿಯನ್ನು ಬಿಟ್ಟರೆ ಬೇರೆ ಯಾರಿಗೂ ಇರಲು ಸಾಧ್ಯವಿಲ್ಲವೇನೋ! ಕೇವಲ ರಾಜಕೀಯವಾಗಿ ಮಾತ್ರವಲ್ಲ , ಗೋರಖ್ ಪುರ ಕ್ಷೇತ್ರದಲ್ಲಿರುವ ಜನರಿಗಾಗಲಿ ಅಥವಾ, ಉತ್ತರ ಪ್ರದೇಶದಲ್ಲಿರುವ ಜನರಿಗಾಗಲೀ, ಯೋಗಿ ಆದಿತ್ಯನಾಥ್ ರ ಬಗೆಗೆ ಅಷ್ಟೇ ವ್ಯಾಮೋಹವಿದೆ! ಕೇವಲ ಧಾರ್ಮಿಕತೆಯ ಆಧಾರದ ಮೇಲೆ ಮಾತ್ರವಲ್ಲ, ಅಥವಾ ಕೇವಲ ಹಿಂದೂ ಸಂತ ಎನ್ನುವ ಮಾತ್ರಕ್ಕೂ ಅಲ್ಲ, ಬದಲಾಗಿ ಸಿದ್ಧಾಂತಕ್ಕಪ್ಪಿ ನಡೆಯುವ ಪ್ರಾಮಾಣಿಕ ಮತ್ತು, ಅಭಿವೃದ್ಧಿಯ ಕನಸನ್ನಿಟ್ಟುಕೊಂಡಿರುವ ರಾಜಕೀಯ ಸಂತ ಎನ್ನುವ ಕಾರಣಕ್ಕೂ ಉತ್ತರ ಪ್ರದೇಶದ ಜನ ಯೋಗಿ ಆದಿತ್ಯನಾಥ್ ರನ್ನು ಇಷ್ಟ ಪಡುತ್ತಾರೆ!! ಆದ ಕಾರಣಕ್ಕೋಸ್ಕರ, ಯೋಗಿಯನ್ನು ಸೋಲಿಸುವುದು ಉತ್ತರ ಪ್ರದೇಶದಲ್ಲಿ ಅಸಾಧ್ಯವಾದ ಮಾತಷ್ಟೇ! ಯೋಗಿ ಆದಿತ್ಯನಾಥ್ ಹಿಂದೂ ಸಂತನಾಗಿದ್ದರೂ ಸಹ, ಮುಸಲ್ಮಾನರು ಕೂಡ ಅವರನ್ನು ಬೆಂಬಲಿಸುವ ರೀತಿ,, ಮಠ ಕ್ಕೆ ನಡೆದುಕೊಳ್ಳುವ ರೀತಿ ಮಾತ್ರ
ಅತ್ಯದ್ಭುತವಾದದ್ದಷ್ಟೇ!! ಮುಸಲ್ಮಾನ ರಿಗಾಗಲೀ ಅಥವಾ ಹಿಂದೂವಾದ ಯೋಗಿಗಾಲಿ, ಯಾವುದೇ ದ್ವೇಷವೂ ಇಲ್ಲ! ಅದಲ್ಲದೇ, ಅದೆಷ್ಟೋ ಮುಸಲ್ಮಾನ ಕ್ಷೇತ್ರಗಳೂ ಸಹ ಆದಿತ್ಯನಾಥ್ ರನ್ನು ಅನುಸರಿಸುತ್ತಿವೆ! ಅದೆಷ್ಟೋ ಅಭಿವೃದ್ಧಿ ಕಾರ್ಯಗಳಲ್ಲಿ ಯೋಗಿಯ ಪರ ನಿಂತಿದೆ!

ಆದ್ದರಿಂದ , ಅಧಿಕಾರ ಸ್ವೀಕರಿಸಿದ ಒಂದೇ ವರ್ಷದಲ್ಲಿ, ಯೋಗಿ ತಮ್ಮ ಪ್ರಸಿದ್ಧತೆ ಕಳೆದುಕೊಳ್ಳಲು ಸಾಧ್ಯವೇ ಇಲ್ಲ! ಮತ್ತೊಂದು, ಅಕಸ್ಮಾತ್, ಈಗ ಗೋರಖ್ ಪುರದಲ್ಲಿ ಮತ್ತೊಮ್ಮೆ ಯೋಗಿ ಆದಿತ್ಯನಾಥ್ ರೇ ನಿಂತರೂ, ಇಡೀ ಕಾಂಗ್ರೆಸ್ ಸಂಪೂರ್ಣವಾಗಿ ವಾಶ್ ಔಟ್ ಆಗಿ ಹೋಗುತ್ತದೆ!! ಆದ್ದರಿಂದ, ಕೇವಲ ಉಪಚುನಾವಣೆಯಲ್ಲಿ ಬಿಜೆಪಿ ಸೋತಿದ್ದರೆ, ಅದರ ಅರ್ಥ ಯೋಗಿ ಆದಿತ್ಯನಾಥ್ ತಮ್ಮ ಬೆಂಬಲಿಗರನ್ನು ಕಳೆದುಕೊಂಡರೆಂದೆನ್ನಿಸುವುದು ಮೇಲ್ನೋಟಕ್ಕಾದರೂ ಕೂಡ, ವಾಸ್ತವ ಮಾತ್ರ ಬೇರೆಯೇ!!

ಅಷ್ಟಕ್ಕೂ ಸೋತಿದ್ದಕ್ಕೆ ಕಾರಣಗಳೇನು ಗೊತ್ತಾ?!

ಮೊದಲನೆಯಾದಾಗಿ, ಗೋರಖ್ ಪುರ ಕ್ಷೇತ್ರದ ರಾಜನೆಂದರೆ ಅದು ಕೇವಲ ಯೋಗಿ ಆದಿತ್ಯನಾಥ್ ಮಾತ್ರ! ಆ ಕ್ಷೇತ್ರದಲ್ಲಿ, ಯೋಗಿ
ಆದಿತ್ಯನಾಥ್ ರ ಬೆಂಬಲವಿಲ್ಲದೇ ಯಾವನೂ ಗೆಲ್ಲುವುದಕ್ಕೂ ಸಾಧ್ಯವಿಲ್ಲ ಮತ್ತು ಸೋಲುವುದಕ್ಕೂ ಸಾಧ್ಯವಿಲ್ಲ!! ಅಂತಹ ಪರಿಸ್ಥಿತಿಯಲ್ಲಿ, ಉತ್ತರ ಪ್ರದೇಶದ ಉಪಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಉಪೇಂದ್ರ ದತ್ ಶುಕ್ಲಾ !! ಅದೂ ಸಹ, ಯೋಗಿ ಆದಿತ್ಯನಾಥ್ ರ ಯಾವ ಬೆಂಬಲವೂ ಇಲ್ಲದ ವ್ಯಕ್ತಿಯನ್ನಯ ಗೋರಖ್ ಪುರದಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರಷ್ಟೇ! , ಎರಡನೆಯದಾಗಿ, ಗೋರಖ್ ಪುರ ಕ್ಷೇತ್ರಕ್ಕೆ ಸಂಪೂರ್ಣವಾಗಿ ಅಪರಿಚಿತನಾದ ಅಭ್ಯರ್ಥಿಯನ್ನು ಬಿಜೆಪಿ ಹಾಕಿದ್ದೂ ಸಹ, ಯೋಗಿ ಬೆಂಬಲಿಗರಿಗೆ ಹಿಂದೆ ಸರಿಯಲು ಕಾರಣವಾಯಿತು! ಗೋರಖ್ ಪುರದವರಿಗೆ ಬೇಕಿದ್ದದ್ದು, ಮಠದ ಮೂಲದ ಅಭ್ಯರ್ಥಿ ಎಂಬುದು ಗೊತ್ತಿದ್ದರೂ ಸಹ, ಬಿಜೆಪಿ ತಪ್ಪು ಹೆಜ್ಜೆ ಇಟ್ಟಿತಷ್ಟೇ!

ಅದರಲ್ಲೂ ನೋಡಿ! ಗೋರಖ್ ಪುರ ಕ್ಷೇತ್ರ ಬೇರೆ ಅಲ್ಲ! ಯೋಗಿ ಆದಿತ್ಯನಾಥ್ ರ ಅಡ್ಡಾ ಬೇರೆ ಅಲ್ಲ ಎನ್ನುವ ಮಾತಿರಬೇಕಾರೆ, ಸ್ವತಃ ಯೋಗಿಯ ಬೆಂಬಲವಿಲ್ಲದ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಯೋಗಿ ಬೆಂಬಲಿಗರು ಬೆಂಬಲಿಸುತ್ತಾರಾ?! ಉತ್ತರ ಪ್ರದೇಶದಲ್ಲಿ ಯೋಗಿ ಎಲ್ಲಿರುತ್ತಾರೋ ಅಲ್ಲಿ, ಜನರಿರುವಾಗ, ಯೋಗಿಯ ಬೆಂಬಲವಿಲ್ಲದ ಅಭ್ಯರ್ಥಿಗೆ ಮತ ನೀಡುತ್ತಾರಾ?!! ಸಾಧ್ಯವೇ ಇಲ್ಲ! ಹಿಂದೂ ಯುವ ವಾಹಿನಿಯೊಂದರಷ್ಟು ಬೆಂಬಲ ಯೋಗಿಗಿರುವಷ್ಟು ಬೇರೆ ಯಾರಿಗೂ ಇಲ್ಲ! ಲಕ್ಷಗಟ್ಟಲೇ ಮತಗಳು ಯೋಗಿಗೆ ಹಿಂದು ಯುವ ವಾಹಿನಿಯ ಕಾರ್ಯಕರ್ತರಿಂಲೇ ಬಂದಿದೆ! ಅದರಲ್ಲೂ, ಯೋಗಿ ಆದಿತ್ಯನಾಥ್ ಸ್ಪರ್ಧಿಸುತ್ತಾರೆಂದರೆ, ಸ್ವತಃ ಕರೆಯದಿದ್ದರೂ, ಇಚ್ಛೆ ಪಟ್ಟು ಚುನಾವಣಾ ಅಭಿಯಾನದಲ್ಲಿ ಪಾಲ್ಗೊಳ್ಳುವ ಯುವ ವಾಹಿನಿಯ ಕಾರ್ಯಕರ್ತರು ಈ ಸಲ, ಗೋರಖ್ ಪುರದ ಅಭ್ಯರ್ಥಿಯ ಪರವಾಗಿ ನಿಲ್ಲಲೇ ಇಲ್ಲ! ಯಾವುದೇ ರೀತಿಯ ವಿರೋಧವನ್ನೂ ಮಾಡದೇ, ಬೆಂಬಲವನ್ನೂ ನೀಡದೇ ತಟಸ್ಥರಾಗಿ ಉಳಿದಿದ್ದು ಮತ್ತು, ಮತದಾರರಿಗೆ ಅಭ್ಯರ್ಥಿಯ ಬಗ್ಗೆ ಸರಿಯಾಗಿ ಮನವರಿಕೆ ಮಾಡದೇ, ಯಾವುದೇ ರೀತಿಯ ಚುನಾವಣಾ ಪ್ರಚಾರದಲ್ಲೂ ಸಹ ಭಾಗವಹಿಸದೇ ಇದ್ದದ್ದೊಂದು ಬಿಜೆಪಿಗೆ ಬಹುದೊಡ್ಡ ಆಘಾತವಷ್ಟೇ!!

“Yogi Adityanath was not happy with Upendra Dutt Shukla being named candidate of Gorakhpur and he wanted someone from the Mahant community only to win.”

ಅತ್ತ , ಎಸ್ ಪಿ ಮತ್ತು ಬಿ ಎಸ್ ಪಿ ಯ ಕೊನೇ ಕ್ಷಣದ ಮಹಾ ಮೈತ್ರಿಯೊಂದು ಬಿಜೆಪಿ ವಿರೋಧಿ ಮತಗಳಿಗೆ ಇನ್ನಷ್ಟು ಬಲ ತುಂಬಿತಷ್ಟೇ!! ಯೋಗಿ ಆದಿತ್ಯನಾಥರ ಬಹುತೇಕ ಬೆಂಬಲಿಗರು, ಬಿಜೆಪಿಯ ಅಭ್ಯರ್ಥಿಗೆ ಮತ ನೀಡುವುದರಿಂದ ಹಿಂಸೆ ಸರಿದರು! ಜೊತೆಗೆ, ಮತದಾನದಲ್ಲಿಯೂ ಸಹ ಸರಿಯಾಗಿ
ಪಾಲ್ಗೊಳ್ಳಲೂ ಇರದೇ ಇದ್ದದ್ದೂ ಸಹ ಬಿಜೆಪಿಯ ಸೋಲಿಗೆ ಕಾರಣ! ಕಳೆದ ಚುನಾವಣೆಗಿಂತ , ಈ ಚುನಾವಣೆಗೆ ಹೋಲಿಸಿದರೆ ಅರ್ಧಕ್ಕರ್ಧ ಕತದಾನ ನಡೆದೇ ಇಲ್ಲ! ಕೇವಲ, ೪೮% ರಷ್ಟು ಮಾತ್ರ ಮತದಾನ ನಡೆದಿದೆ! ಅದರಲ್ಲಿದ್ದದ್ದು ಬಹುತೇಕ, ಬಿಜೆಪಿ ವಿರೋಧಿ ಮತಗಳಷ್ಟೇ!!

ಅಷ್ಟಾದರೂ ಸಹ, ಬಿಜೆಪಿಯನ್ನೇನೂ ಅಷ್ಟು ಸುಲಭವಾಗಿ ಸೋಲಿಸಕ್ಕಿಗಾಲೇ ಇಲ್ಲ ಎಸ್ ಪಿ ಮತ್ತು ಬಿಎಸ್ ಪಿ ಗೆ! ಕೊನೆಯ ತನಕವೂ ಕೂಡ, ಮತಗಳನ್ನು ಗಳಿಸಲಿಕ್ಕೆ ಮಹಾಮೈತ್ರಿ ಹೊಂದಿದ ಪಕ್ಷವೊಂದು ಕಷ್ಟ ಪಡುತ್ತಲೇ ಇತ್ತಷ್ಟೇ! ಯೋಗಿ ಆದಿತ್ಯನಾಥ್ ರ ಬೆಂಬಲಿಗರು ಗೋರಖ್ ಪುರದ ಅಭ್ಯರ್ಥಿಯ ನ್ನು ಸ್ವಾಗತಿಸಿದೇ ಇದ್ದದ್ದು ಮತ್ತು, ಮತದಾನವನ್ನೇ ಮಾಡದಿದ್ದುದು ಬಿಜೆಪಿಯ ಸೋಲಿಗೆ ಮುಖ್ಯ ಕಾರಣವೇ ಹೊರತು ಯೋಗಿ ಆದಿತ್ಯನಾಥ್ ರಲ್ಲ! ಅಥವಾ, ಕಾಂಗ್ರೆಸ್ಸಿನ ಬಗೆಗಿನ ಒಲವೂ ಅಲ್ಲ!! ಅಂದರೆ, ಎಸ್ ಪಿ ಮತ್ತು ಬಿ ಎಸ್ ಪಿಯ ಮಹಾ ಮೈತ್ರಿ ಯಾವ ಅದ್ಭುತವನ್ನೂ ಮಾಡಿರಲಿಲ್ಲ! ಮತ್ತು, ಯಾವುದೇ ರೀತಿಯ ಜಾದುವೂ ನಡೆದಿರಲಿಲ್ಲ! ಬದಲಾಗಿ ಸ್ವತಃ ಬಿಜೆಪಿ ಪರೀಕ್ಷೆಗಿಳಿದಿತ್ತಷ್ಟೇ!! ಕ್ಷೇತ್ರಕ್ಕೆ ಸಂಪೂರ್ಣಾವಾಗಿ ಅಪರಿಚಿತ ಅಭ್ಯರ್ಥಿಯನ್ನು ಆಯ್ಕರ ಮಾಡಿದರೆ ಏನಾಗುತ್ತದೆ ಎಂಬಂತಹ ರಾಜಕೀಯ ತಂತ್ರಗಳ ಪರೀಕ್ಷೆಗಿಳಿದಿತ್ತು ಬಿಜೆಪಿ! ಅದರಲ್ಲೂ,
ಯೋಗಿಯ ಕ್ಷೇತ್ರದಲ್ಲಿ ಏನಾಗಬಹುದು ಎಂಬುದಷ್ಟೆ!!

ವಾಸ್ತವದಲ್ಲಿ, ಯೋಗಿಯ ಅಲೆಯೂ ಕಡಿಮೆಯಾಗಿಲ್ಲ! ಮೋದಿಯ ಅಲೆಯೂ ಕಡಿಮೆಯಾಗಿಲ್ಲ! ಬದಲಾಗಿ, ಬಿಜೆಪಿ ಬೆಂಬಲಿಗರು ಅಭ್ಯರ್ಥಿಯ ವಿಚಾರಕ್ಕೆ ಮತದಾನದಿಂದಲೇ ಹಿಂದೆ ಸರಿದರೇ ವಿನಃ ಇನ್ಯಾವ ಕಾರಣಕ್ಕೂ ಅಲ್ಲ! ಅದೂ ಹೋಗಲಿ, ಮಾಯಾವತಿಯ ಪಕ್ಷವೊಂದಕ್ಕೇ ಆಗಲಿ, ಅಥವಾ ಎಸ್ ಪಿ ಪಕ್ಷಕ್ಕಾಗಲಿ, ಅಥವಾ ಇನ್ನಾವುದೋ ಪ್ರಾದೇಶಿಕ ಪಕ್ಷಕ್ಕಾಗಲಿ, ಉತ್ತರ ಪ್ರದೇಶದಲ್ಲಿ ಸ್ವಂತವಾಗಿ ನಿಂತು, ಯಾವುದೇ ಮೈತ್ರಿ ಮಾಡಿಕೊಳ್ಳದೇ ಬಿಜೆಪಿಯನ್ನು ಗೆಲ್ಲಲು ಸಾಧ್ಯವೇ ಇಲ್ಲ! ಅದು ಇನ್ನೊಮ್ಮೆ ಸಾಬೀತಾಗಿದೆ! ಅದನ್ನು ಬಿಡಿ! ತನ್ನ ಸ್ವಂತ ರಾಜ್ಯದಲ್ಲಿಯೇ, ಮಾಯಾವತಿ ಠೇವಣಿ
ಕಳೆದುಕೊಂಡು ಕೂತಿರುವಾಗ. ಈ ಮಹಾ ಮೈತ್ರಿಯ ಗೆಲುವೊಂದು ಆಕೆಗೇನು ಸಂತಸವನ್ನೂ ತಂದಿಲ್ಲ! ಬದಲಾಗಿ, ಆಕೆಗೆ ಖಚಿತವಾಗಿ ಹೋಗಿದೆ! ಇದೆಷ್ಟೇ ಗೆದ್ದರೂ ಸಹ, ಬಿಜೆಪಿಯನ್ನು ಎದುರಿಸಲು ಸಾಧ್ಯವೂ ಇಲ್ಲ ಮತ್ತು ಈಗಾಗಲೇ ತನ್ನ ಬಲವನ್ನೂ ಕಳೆದುಕೊಂಡಿರುವ ಬಿಎಸ್ ಪಿ ಮತ್ತು ಮಾಯಾವತಿಗೆ ಎಸ್ ಪಿ ಜೊಇತೆಗೆ ಅಥವಾ ,ಇನ್ಯಾವುದೇ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಅಷ್ಟೇ ಅನಿವಾರ್ಯವಾಗಿತ್ತು ಸಹ!

ಕಾರಣ ಇಷ್ಟೇ!! ಮತ ನೀಡಿದವರೆಲ್ಲ ಬಹುತೇಕ ವಿರೋಧಿಗಳೇ!! ಮತದಾನ ಮಾಡದೇ ಮನೆಯಲ್ಲಿ ಕುಳಿತವರು ಬೆಂಬಲಿಗರು! ಸೋಲದೇ ಇನ್ನೇನಿದ್ದೀತು?! ಹೇಳಿ!!

– ಪೃಥು ಅಗ್ನಿಹೋತ್ರಿ

Tags

Related Articles

Close