ಪ್ರಚಲಿತ

ಮೂಲಭೂತವಾದಿ ಇಸ್ಲಾಮಿಗೆ ಸೆಡ್ಡು ಹೊಡೆದ ದಿಟ್ಟ ಭಾರತೀಯ ಕ್ರೀಡಾಪಟು!! ಹಿಜಾಬ್ ತೊಟ್ಟು ಆಡುವ ಇರಾನಿನ ಕಾನೂನಿನ ವಿರುದ್ದ ಧ್ವನಿ ಎತ್ತಿ ಚೆಸ್ ಪಂದ್ಯಾವಳಿಯಿಂದ ಹಿಂಜರಿದ ಸೌಮ್ಯಾ ಸ್ವಾಮಿನಾಥನ್!!

 

ಚದುರಂಗದ ಅಂಗಳದಲ್ಲಿ ಭಾರತದ “ಮಹಿಳಾ ಗ್ರಾಂಡ್ ಮಾಸ್ಟರ್” ಎಂದೆ ಖ್ಯಾತಿವೆತ್ತ ಸೌಮ್ಯಾ ಸ್ವಾಮಿನಾಥನ್ ತನ್ನ ದಿಟ್ಟ ನಿರ್ಧಾರದಿಂದಾಗಿ ಇವತ್ತು ಮನೆ ಮಾತಾಗಿದ್ದಾಳೆ. ಬಾಲಕಿಯರ ವಿಶ್ವ ಜೂನಿಯರ್ ಚಾಂಪಿಯನ್ ಸೌಮ್ಯ ಸ್ವಾಮಿನಾಥನ್ ಅವರು ಜುಲೈ 26 ರಿಂದ ಆಗಸ್ಟ್ 4 ರವರೆಗೆ ಇರಾನ್ ನ ಹಮಾದಾನ್ನಲ್ಲಿ ನಡೆಯಲಿರುವ ‘ಏಷ್ಯನ್ ಟೀಮ್ ಚೆಸ್ ಚಾಂಪಿಯನ್ ಶಿಪ್’ ನಿಂದ ಹೊರಗುಳಿದಿದ್ದಾರೆ. ಇಸ್ಲಾಮಿಕ್ ದೇಶ ಇರಾನಿನ “ಕಡ್ಡಾಯ ಶಿರಸ್ತ್ರಾಣ” ನಿಯಮವು ತನ್ನ ವೈಯಕ್ತಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎನ್ನುವ ಕಾರಣಕ್ಕೆ ಅವರು ಈ ಸ್ಪರ್ಧೆಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಒಂದು ಕಾಲದಲ್ಲಿ ಪಾರ್ಸಿಗಳ ನಾಡಾಗಿದ್ದ ಇರಾನ್ ಇತರ ದೇಶಗಳಂತೆ ತಮ್ಮಿಷ್ಟದಂತೆ ಬದುಕುವ ಸ್ವಾತಂತ್ರ್ಯ ಹೊಂದಿದ್ದ ಇರಾನ್(ಪರ್ಶಿಯಾ) ಕಳೆದ ಮೂವತ್ತೊಂಭತ್ತು ವರ್ಷಗಳಿಂದ ಮೂಲಭೂತವಾದಿ ಇಸ್ಲಾಮಿನ ಕೈಯಲ್ಲಿ ಸಿಲುಕಿ ನಲುಗುತ್ತಿದೆ. 1979 ನಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿಯಿಂದಾಗಿ ಅಲ್ಲಿ ಮಹಿಳೆಯರು ಸೆರೆಮನೆಯ ಬದುಕು ಬಾಳಬೇಕಾಗಿದೆ. ಇರಾನಿನಲ್ಲಿ ಬುರ್ಕಾ ಅಥವಾ ಹಿಜಾಬ್ ತೊಡುವುದು ಅನಿವಾರ್ಯ. ಕೇವಲ ಇರಾನಿಗಳು ಮಾತ್ರವಲ್ಲ, ಇರಾನಿಗೆ ಭೇಟಿ ನೀಡುವ ಇತರ ದೇಶಗಳ ಮಹಿಳೆಯರೂ ಕೂಡಾ ಕಡ್ಡಾಯವಾಗಿ ಹಿಜಾಬ್( ಶಿರವನ್ನು ಮುಚ್ಚುವ ಬಟ್ಟೆ) ಅನ್ನು ತೊಡಲೆ ಬೇಕು. ಕ್ರೀಡಾಳುಗಳು ಕೂಡಾ ಹಿಜಾಬ್ ತೊಟ್ಟುಕೊಂಡೆ ಸ್ಪರ್ಧಿಸಬೇಕು.

ಆದರೆ ಭಾರತದ ದಿಟ್ಟ ಹುಡುಗಿಯೊಬ್ಬಳು ಇರಾನಿನ ಈ ಕುಪದ್ದತಿಗೆ ಸವಾಲೊಡ್ಡಿ ತಾನು ಹಿಜಾಬ್ ತೊಟ್ಟು ಸ್ಪರ್ಧಿಸುವುದಿಲ್ಲ ಎಂದು ಜಗತ್ತಿಗೆ ಸಾರಿದ್ದಾರೆ. “ಹಿಜಾಬ್ ಅಥವಾ ಬುರ್ಖಾ ತೊಡುವಂತೆ ಬಲವಂತ ಪಡಿಸುವುದನ್ನು ನಾನು ಇಷ್ಟ ಪಡುವುದಿಲ್ಲ. ನನ್ನ ಪ್ರಕಾರ ಕಡ್ಡಾಯವಾಗಿ ತಲೆವಸ್ತ್ರ ತೊಡಬೇಕೆನ್ನುವ ಇರಾನಿನ ಕಾನೂನು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ , ಆಲೋಚನೆಯ ಸ್ವಾತಂತ್ರ್ಯ, ಆತ್ಮಸಾಕ್ಷಿ ಮತ್ತು ಧರ್ಮದ ಹಕ್ಕುಗಳು ಸೇರಿದಂತೆ ನೇರವಾಗಿ ಮಾನವಾಧಿಕಾರಗಳ ಉಲ್ಲಂಘನೆಯಾಗಿದೆ. ಪ್ರಸ್ತುತ ಸಂದರ್ಭಗಳಲ್ಲಿ, ನನ್ನ ಹಕ್ಕುಗಳನ್ನು ರಕ್ಷಿಸುವ ಏಕೈಕ ಮಾರ್ಗವೆಂದರೆ ಇರಾನಿಗೆ ಹೋಗದಿರುವುದು.” ಎಂದು ದಿಟ್ಟವಾಗಿ ನುಡಿದಿದ್ದಾರೆ 29 ರ ಹರೆಯದ, ಮಹಿಳೆಯರ ವಿಶ್ವ ಚಾಂಪಿಯನ್ ಪಟ್ಟಿಯಲ್ಲಿ 97ನೇ ಸ್ಥಾನ ಮತ್ತು ಭಾರತದಲ್ಲಿ 5 ನೇ ಸ್ಥಾನದಲ್ಲಿರುವ ಸೌಮ್ಯಾ ಸ್ವಾಮಿನಾಥನ್!!

ನೋಡಿ ಎಷ್ಟೊಂದು ವ್ಯತ್ಯಾಸವಿದೆ ಸೌಮ್ಯಾ ಮತ್ತು ಪ್ರಿಯಾಂಕಾ ಚೋಪ್ಡಾ ಅಂತಹ ಮಹಿಳೆಯರಲ್ಲಿ. ಒಂದೆಡೆ ಕವಡೆ ಕಾಸಿಗೆ ನಟಿಸುವ ಪ್ರಿಯಾಂಕಾನಂತಹ ನಟಿ ಹಿಂದೂಗಳನ್ನು ಆತಂಕವಾದಿಗಳಂತೆ ಬಿಂಬಿಸುವ “ಕ್ವಾಂಟಿಕೋ” ಧಾರಾವಾಹಿಯಲ್ಲಿ ಲಜ್ಜೆಗೆಟ್ಟು ನಟಿಸುತ್ತಿದ್ದರೆ, ಇನ್ನೊಂದೆಡೆ ಸೌಮ್ಯಾನಂತಹ ಮಹಿಳೆ ತನ್ನ ಧರ್ಮದ ಮೌಲ್ಯಗಳು, ಹಣ-ಕೀರ್ತಿ-ಪ್ರತಿಷ್ಠೆಗಳಿಗಿಂತಲೂ ಹೆಚ್ಚೆಂಬುದನ್ನು ಜಗತ್ತಿಗೆ ಸಾರಿದ್ದಾರೆ. ನಾಚಿಕೆ ಆಗ್ಬೇಕು ಪ್ರಿಯಾಂಕಾನಂತಹ ಹಿಂದೂಗಳಿಗೆ. ಸನಾತನ ಧರ್ಮ ಮತ್ತು ಸನಾತನಿಗಳನ್ನು ವಿಶ್ವ ಮಂಚದಲ್ಲಿ ಕೀಳಾಗಿ ತೋರಿಸುವ ಇಂತಹ ಎರಡಾಣೆಯ ನಟಿಯರು ಭಾರತದ ಹೊಸಿಲು ತುಳಿಯಬಾರದು ಅಂತಹ ಪಾಠ ಕಲಿಸಬೇಕು ಅವರಿಗೆ. ಸೌಮ್ಯಾ ಅವರ ದಿಟ್ಟ ನಿರ್ಧಾರಕ್ಕೆ ಖೈಫ್, ಸೆಹವಾಗ್ ನಂತಹ ಕ್ರೀಡಾ ಜಗತ್ತಿನ ಘಟಾನುಘಟಿಗಳು ಸಮರ್ಥನೆ ನೀಡಿದ್ದಾರೆ.

ಇದಕ್ಕೂ ಮೊದಲು, 2016 ರಲ್ಲಿ ಇದೆ ಕಾರಣಕ್ಕಾಗಿ ಅಗ್ರ ಭಾರತೀಯ ಶೂಟರ್ ಹೀನಾ ಸಿಧು ಇರಾನಿನಲ್ಲಿ ನಡೆದ ಏಷ್ಯನ್ ಏರ್ ಗನ್ ಕೂಟದಿಂದ ಹೊರಗುಳಿದಿದ್ದರು. ತಮ್ಮ ಮೌಲ್ಯಗಳಿಗೆ ಬದ್ದವಾಗಿರುವ ಈ ಹುಡುಗಿಯರು ಭಾರತದ ಹೆಮ್ಮೆ. ಈ ದಿಟ್ಟ ಮಹಿಳೆಯರಿಗೊಂದು ನಮನ. ಇರಾನಿನಾದ್ಯಂತ ಹಿಜಾಬ್ ಮತ್ತು ಬುರ್ಖಾ ವಿರುದ್ದವಾಗಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಚಿತ್ರವೆಂದರೆ ಭಾರತದಲ್ಲಿ ಅಲ್ಪರ ಕೂದಲು ಕೊಂಕಿದರೂ ಓಡೋಡಿ ಬರುವ ಮಾನವಾಧಿಕಾರ ಸಂಘಟನೆಗಳು ಇಂತಹ ವಿಷಯಗಳ ಬಗ್ಗೆ ತುಟಿ ಪಿಟಿಕ್ ಎನ್ನುವುದಿಲ್ಲ. ಇವರ ಜರ್ಬುಗಳು ನಡೆಯುವುದು ಭಾರತದ ಹಿಂದೂಗಳ ಮುಂದೆಯೆ. ಅಂತಹವರಿಗೆ ಭಾರತದ ದಿಟ್ಟ ಹಿಂದೂ ಮಹಿಳೆಯರು ಸರಿಯಾದ ಪಾಠವನ್ನೆ ಕಲಿಸಿದ್ದಾರೆ.ತಥಾಕಥಿತ ಮಾನವಾಧಿಕಾರ ಸಂಘಟನೆಗಳು ಈಗ ಅದೆ ಹಿಜಾಬಿನಿಂದ ಮುಖ ಮುಚ್ಚಿಕೊಂಡು ಮೂಲೆಯಲ್ಲಿ ಕೂತಿದ್ದಾರೋ ಏನೋ?!

-ಶಾರ್ವರಿ

Tags

Related Articles

Close