ಪ್ರಚಲಿತ

ನಮ್ಮ ಸೋಲಿಗೆ ಸಿದ್ದರಾಮಯ್ಯನೇ ಕಾರಣ!! ಸಿದ್ದು ವಿರುದ್ಧ ಶುರುವಾಯ್ತು ಸೋಲಿನ ಬಾಣ!!

ಈಗಾಗಲೇ ಕಾಂಗ್ರೆಸ್ ಜೆಡಿಎಸ್ ಜೊತೆ ಮೈತ್ರಿಯಾಗಲು ಮುಂದಾಗಿದೆ!! ಇದಾಗಲೇ ಹಲವಾರು ಭಿನ್ನಾಭಿಪ್ರಾಯ ಮೂಡಿದ್ದರೂ ಸಹ ಈಗ ಕಾಂಗ್ರೆಸ್ 79 ಸ್ಥಾನಗಳನ್ನು ಗಿಟ್ಟಿಸಿಕೊಂಡು ತಾನು ಅಧಿಕಾರ ಸ್ವೀಕರಿಸಲು ಆಗಲ್ಲ ಎಂದು ತಿಳಿದೊಡನೆ ಜೆಡಿಎಸ್ ಜೊತೆ ಕೈಜೋಡಿಸಿದ್ದಾರೆ!! ಈಗಾಗಾಲೇ ಹಾವು ಮುಂಗುಸಿಯಂತಿದ್ದ ಕಾಂಗ್ರೆಸ್-ಜೆಡಿಎಸ್ ಇದೀಗ ಒಗ್ಗಟ್ಟಾಗಿದ್ದಾರೆ!! ಇದೀಗ ಸಿಎಂ ಸಿದ್ದರಾಮಯ್ಯನವರಿಗೆ ಜೆಡಿಎಸ್ ಜೊತೆ ಕೈ ಮಿಲಾಯಿಸುತ್ತಲೇ ಒಡಕು ಶುರುವಾಗಲು ಆರಂಭವಾಗಿದೆ!! ತನ್ನ ಪಕ್ಷದವರೇ ಸಿಎಂ ಸಿದ್ದರಾಮಯ್ಯ ಜೊತೆ ಗರಂ ಆಗಿದ್ದಾರೆ!!

ಸಿದ್ಧರಾಮಯ್ಯನವರ ವಿರುದ್ಧ ವಾಗ್ಧಾಳಿ ನಡೆಸಿದ ಕೋಳಿವಾಡ!!

ಜೆಡಿಎಸ್‍ನೊಂದಿಗೆ ಮೈತ್ರಿ ಸರ್ಕಾರ ರಚಿಸಲು ಮುಂದಾಗಿರುವ ಕಾಂಗ್ರೆಸ್‍ನಲ್ಲಿ ಆರಂಭದಲ್ಲೇ ಒಡಕು ಮೂಡಿದ್ದು, ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೋಳಿವಾಡ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿ ತಮ್ಮ ಸಿಟ್ಟನ್ನು ಹೊರಹಾಕಿದರು.

ಈಗಾಗಲೇ 79 ಸ್ಥಾನಗಳನ್ನು ಪಡೆದು ಕಾಂಗ್ರೆಸ್ ಸೋಲುವುದಕ್ಕೆ ಪ್ರಮುಖ ಕಾರಣ ಸಿದ್ದರಾಮಯ್ಯನವರೇ!! ಪರಿಸ್ಥಿತಿ ಬದಲಾದಂತೆ ಹೈಕಮಾಂಡ್ ಅನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಕೆ ಮಾಡಿಕೊಂಡವರು ಸಿದ್ದರಾಮಯ್ಯ. ವಿಧಾನಸಭೆಯಲ್ಲಿ ನಾನು ಕಾಂಗ್ರೆಸ್‍ನ ನಿರ್ಧಾರಗಳ ಪರವಾಗಿ ನಿಲ್ಲುತ್ತಿದ್ದೆ. ಕಾಂಗ್ರೆಸ್‍ನ ರಕ್ತ ಸಿದ್ದರಾಮಯ್ಯನಲ್ಲಿ ಇಲ್ಲ. ಪರಮೇಶ್ವರ್ ಸೋಲಿಗೆ ಸಿದ್ದರಾಮಯ್ಯನೇ ಕಾರಣ. ಕಳೆದ ಬಾರಿ ಇನಾಮ್ ದಾರ್ ಹಾಗೂ ನನ್ನನ್ನು ಸೋಲಿಸೋಕೆ ಪ್ರಯತ್ನಪಟ್ಟಿದ್ದರು. ಈ ಬಾರಿ ರಾಣಿಬೆನ್ನೂರಿನಲ್ಲಿ ಕೆಪಿಜೆಪಿ ಅಭ್ಯರ್ಥಿ ಆರ್. ಶಂಕರ್‍ಗೆ ಸಪೋರ್ಟ್ ಮಾಡಿದರು ಎಂದು ಸಿದ್ದರಾಮಯ್ಯ ವಿರುದ್ಧ ಆರೋಪಿಸಿದರು. ಈ ಮನುಷ್ಯನನ್ನು ಕಾಂಗ್ರೆಸ್‍ನಲ್ಲಿ ಉಳಿಸಿಕೊಳ್ಳಬಾರದು. ಇವರನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡಿದರೆ ಕಾಂಗ್ರೆಸ್ ಪಕ್ಷ ಉಳಿಯುವುದಿಲ್ಲ. ಈತನನ್ನು ಅಧ್ಯಕ್ಷನನ್ನಾಗಿ ಮಾಡದಂತೆ ಹೈಕಮಾಂಡ್‍ಗೆ ಮನವಿ ಮಾಡುತ್ತೇನೆ. ಪರಮೇಶ್ವರ್, ಡಿಕೆಶಿ ಅಥವಾ ಲಿಂಗಾಯತ ನಾಯಕರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಲಿ ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ!!

Image result for k.b koliwad which party

ಸಿದ್ದರಾಮಯ್ಯರನ್ನು ಕಾಂಗ್ರೆಸ್‍ನಲ್ಲಿ ಉಳಿಸಬಾರದು. ಇವರಿಗೆ ಕಾಂಗ್ರೆಸ್‍ನಲ್ಲಿ ಯಾವುದೇ ಅಧಿಕಾರ ಕೊಡಬಾರದು. ಇವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ರೆ ಕಾಂಗ್ರೆಸ್ ಉಳಿಯುವುದಿಲ್ಲ. ಇವರ ನೇತೃತ್ವದಲ್ಲಿ ಯಾವುದೇ ಕಾರಣಕ್ಕೂ ಲೋಕಸಭೆ ಚನಾವಣೆಗೆ ಹೋಗಬಾರದು. ಜಿ. ಪರಮೇಶ್ವರ್, ಡಿಕೆಶಿ ಅಥವಾ ಬೇರಾರಾದರೂ ಲಿಂಗಾಯತ ನಾಯಕರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ ಎಂದು ಹೈಕಮಾಂಡ್‍ಗೆ ಮನವಿ ಮಾಡುತ್ತೇನೆ ಎಂದು ಕೆ.ಬಿ. ಕೋಳಿವಾಡ ಹೇಳಿದ್ದಾರೆ. ಸಿದ್ದರಾಮಯ್ಯಗೆ ಜಾತಿ ಮತ್ತು ಅಧಿಕಾರ ಇದ್ರೆ ಏನು ಬೇಕಾದರೂ ಮಾಡುತ್ತಾರೆ. ಪರಿಸ್ಥಿತಿ ಬದಲಾದಂತೆ ಹೈಕಮಾಂಡನ್ನು ಬಳಕೆ ಮಾಡಿಕೊಂಡಿದ್ದಾರೆ. ತವರು ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋತು ಬದಾಮಿಯಲ್ಲಿ ಸಣ್ಣ ಅಂತರದಿಂದ ಗೆದ್ದಿದ್ದಾರೆ. ಒಬ್ಬ ಮುಖ್ಯಮಂತ್ರಿಯಾದಂಥವರಿಗೆ ನಾಚಿಕೆಯಾಗಬೇಕು. ಆದ್ರೆ ನನ್ನ ಎದುರಲ್ಲಿ ಅವರು ಇನ್ನೂ ಚೋಟ. ಇವರು ಜೀವನದಲ್ಲಿ ಮುಂದೆಂದೂ ಅಧಿಕಾರದಲ್ಲಿರುವುದಿಲ್ಲ. ಇದು ಅವರಿಗೆ ಕೊನೆಯ ಅಧಿಕಾರವಷ್ಟೇ, ಎಂದು ಮಾಜಿ ಶಾಸಕ ಕೋಳಿವಾಡ ಭವಿಷ್ಯ ನುಡಿದಿದ್ದಾರೆ.

ನಾನು ಅಪ್ಪಟ ಕಾಂಗ್ರೆಸ್ಸಿಗ. ಸ್ಪೀಕರ್ ಆಗಿ ಸರಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ವಿಧಾನಸಭೆಯಲ್ಲಿ ಕಾಂಗ್ರೆಸ್‍ನ ನಿರ್ಧಾರಗಳ ಪರವಾಗಿ ನಾನು ನಿಂತಿದ್ದೇನೆ. ನನ್ನ ಹನಿಹನಿ ರಕ್ತ ಕೂಡ ಕಾಂಗ್ರೆಸ್ಸೇ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ. ಪಕ್ಷದಲ್ಲಿ ಯಾವುದೇ ಸಾಮಾನ್ಯ ಸ್ಥಾನ ಕೊಟ್ಟರೂ ನಿಭಾಯಿಸಲು ಸಿದ್ಧ ಎಂದು ಕೆ.ಬಿ. ಕೋಳಿವಾಡ ಅಭಿಪ್ರಾಯಪಟ್ಟಿದ್ದಾರೆ.

Image result for siddaramaiah

ಬಾಗೂರು ಮಂಜೇಗೌಡ ಕೂಡಾ ಸಿದ್ಧರಾಮಯ್ಯ ವಿರುದ್ಧ  ಗರಂ:

ಇದಾಗಲೇ ಕೋಳಿವಾಡ ಸಿದ್ದರಾಮಯ್ಯನವರ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದಂತೆ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಕೂಡಾ ಸಿದ್ದರಾಮಯ್ಯನವರ ಜೊತೆ ಮುನಿಸಿಕೊಂಡಿದ್ದಾರೆ!!

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದರೆ ಹಾಸನ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಕಗ್ಗೊಲೆಯಾಗಲಿದೆ ಎಂದು ಹೊಳೆನರಸೀಪುರ ಕ್ಷೇತ್ರ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಬಾಗೂರು ಮಂಜೇಗೌಡ ಹೇಳಿದ್ದಾರೆ. ಕೈ-ದಳ ದೋಸ್ತಿ ಆದ್ರೆ ಹಾಸನದಲ್ಲಿ ಕಾಂಗ್ರೆಸ್ ಸಮಾಧಿಯಾಗಲಿದೆ. ಸಮ್ಮಿಶ್ರ ಸರ್ಕಾರ ರಚನೆಯಾಗಬಾರದು. ಕೈ-ದಳ ದೋಸ್ತಿಯಿಂದ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಕಗ್ಗೊಲೆಯಾಗಲಿದೆ ಎಂದು ಸಮ್ಮಿಶ್ರ ಸರಕಾರ ರಚನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ತಮ್ಮ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಚಾರಕ್ಕೆ ಬರಲಿಲ್ಲ. ಅವರ ಮೇಲೆ ಯಾವ ಒತ್ತಡ ಇತ್ತೋ ನನಗೆ ಗೊತ್ತಿಲ್ಲ. ನಾನು ಹರಕೆಯ ಕುರಿ ಆಗಿಲ್ಲ, ಬಲಿಪಶು ಆಗಿಲ್ಲ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿದರು. ಕುಮಾರಸ್ವಾಮಿ ಸಿಎಂ ಆಗಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರು. ಆದರೆ, ಅವರೇ ಎಚ್‍ಡಿಕೆಯನ್ನು ಸಿಎಂ ಮಾಡಲು ಹೊರಟಿಲ್ಲವೇ? ಭಾವನಾತ್ಮಕ ವಿಷಯದಲ್ಲಿ ರೇವಣ್ಣ ಅವರಿಗೆ ಗೆಲುವಾಗಿದೆ. 270 ಗ್ರಾಮಗಳಲ್ಲಿ ದೇವಾಲಯ ಅಪೂರ್ಣ ವಾಗಿರುವುದರಿಂದ ಜನ ಅವರಿಗೆ ವೋಟು ಹಾಕಿದ್ದಾರೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯನವರ ಸರ್ವಾಧಿಕಾರದ ಆಡಳಿತವೇ ಅವರಿಗೆ ಮುಳುವಾಯಿತು ಎಂದರೆ ತಪ್ಪಾಗದು. ಯಾಕೆಂದರೆ ಸಿದ್ದರಾಮಯ್ಯನವರನ್ನು ಕಂಡರೆ ಸ್ವತಃ ಕಾಂಗ್ರೆಸಿಗರೇ ಉರಿದು ಬೀಳುತ್ತಿದ್ದರು. ಆದರೆ ಅಧಿಕಾರದ ಅಹಂಕಾರದಿಂದ ಸಿದ್ದರಾಮಯ್ಯನವರು ಇದ್ಯಾವುದನ್ನೂ ಲೆಕ್ಕಿಸದೆ ದರ್ಪ ಮೆರೆಯುತ್ತಿದ್ದರು. ಇದು ಚುನಾವಣೆಯ ನಂತರವೂ ಮುಂದುವರಿದಿದೆ, ಯಾಕೆಂದರೆ ನಮ್ಮನ್ನು ಸೋಲಿಸಿದ್ದು ಸಿದ್ದರಾಮಯ್ಯನವರೇ ಎಂದು ಕಾಂಗ್ರೆಸ್ ನಲ್ಲಿ ಸೋತ ಅಭ್ಯರ್ಥಿಗಳು ದೂರಿದ್ದಾರೆ. ಸಿದ್ದರಾಮಯ್ಯನವರ ಸ್ಪರ್ಧಿಸಿದ ಎರಡು ಕ್ಷೇತ್ರಗಳಲ್ಲಿ ಒಂದನ್ನು ಮಾತ್ರ ಅಲ್ಪ ಮತದಿಂದ ಗೆದ್ದಿದ್ದು, ಚಾಮುಂಡೇಶ್ವರಿಯಲ್ಲಿ ಭಾರೀ ಮುಖಭಂಗ ಅನುಭವಿಸಿದ್ದಾರೆ. ಆದ್ದರಿಂದ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಸಿದ್ದರಾಮಯ್ಯನವರೇ ನೇರ ಕಾರಣ ಎಂದು ಕಾಂಗ್ರೆಸಿಗರೇ ದೂರಿದ್ದಾರೆ..!

source:

vijayavani

  • ಪವಿತ್ರ
Tags

Related Articles

Close