ಪ್ರಚಲಿತ

ಇನ್ನು ಮುಂದೆ ಕಾಶಿ ವಿಶ್ವನಾಥ ದೇಗುಲದಲ್ಲಿ ಖಾಕಿ ಖದರ್ ಮಾಯ!! ಪೋಲೀಸರಿಗೆ ಹೊಸ ಸಮವಸ್ತ್ರ ನೀತಿಯನ್ನು ಜಾರಿಗೊಳಿಸಿದ ಪೊಲೀಸ್ ಇಲಾಖೆ ಮಾಡಿದ್ದೇನು ಗೊತ್ತೇ??

ಕೆಲವು ವರ್ಷಗಳ ಹಿಂದೆ ದಾಳಿ ಭೀತಿ ಎದುರಿಸುತ್ತಿದ್ದ ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇಗುಲಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗುತ್ತಿರುವ ವಿಚಾರ ತಿಳಿದೇ ಇದೆ!! ಹಾಗಾಗಿ ದಿನದ 24 ಗಂಟೆಯೂ ಮೂರು ಸರದಿಯಲ್ಲಿ ಪೆÇಲೀಸ್ ಭದ್ರತೆ ಒದಗಿಸಲಾಗುತ್ತಿರುವ ಜೊತೆಯಲ್ಲಿಯೇ ಇನ್ನು ಮುಂದೆ ದೇಗುಲದಲ್ಲಿ ಕಾರ್ಯನಿರ್ವಹಿಸುವ ಪೆÇಲೀಸರಿಗೆ ಹೊಸ ಸಮವಸ್ತ್ರ ನೀತಿಯನ್ನು ಜಾರಿಗೊಳಿಸಲಾಗಿದೆ.

ಹೌದು…. ಪೆÇಲೀಸರ ಸಮವಸ್ತ್ರ ಎಂದರೆ ಖಾಕಿ ಖದರ್, ಶ್ರೇಣಿಗೆ ತಕ್ಕಂತೆ ಸ್ಟಾರ್ ಗಳು, ಸೊಂಟಕ್ಕೆ ದಪ್ಪದೊಂದು ಬೆಲ್ಟು, ಕಾಲಿಗೆ ಶೂ, ತಲೆಗೊಂದು ಟೋಪಿ, ಸೊಂಟಕ್ಕೊಂದು ಗನ್ನು ಇರುವುದು ಸರ್ವೇ ಸಾಮಾನ್ಯ!! ಆದರೆ ಹಿಂದೂಗಳ ಪವಿತ್ರ ದೇವಾಲಯವಾದ ಕಾಶಿಯ ವಿಶ್ವನಾಥ ದೇವಾಲಯದಲ್ಲಿ ಇನ್ನು ಮುಂದೆ ಭದ್ರತೆಗೆ ನಿಯೋಜನೆಗೊಂಡಿರುವ ಪೆÇಲೀಸರು ಇದ್ಯಾವ ಉಡುಗೆಯಲ್ಲೂ ಮಿಂಚುವುದಿಲ್ಲ. ಅಷ್ಟೇ ಅಲ್ಲದೇ ಧಾರ್ಮಿಕ ಕ್ಷೇತ್ರ ಇನ್ನು ಮುಂದೆ ಪೆÇಲೀಸರ ತಂಗುದಾಣವಾದಂತೆ ಭಾಸವಾಗುವುದೂ ಇಲ್ಲ. ಯಾಕೆಂದರೆ ಇಲ್ಲಿನ ಪೊಲೀಸರು ಇನ್ನು ಮುಂದೆ ಖಾಕಿ ಖದರ್ ಬದಲು ಹೊಸ ಸಮವಸ್ತ್ರದಲ್ಲಿ ಮಿಂಚಲಿದ್ದಾರೆ!! ಅಷ್ಟಕ್ಕೂ ಆ ಸಮವಸ್ತ್ರವಾದರೂ ಯಾವುದು ಗೊತ್ತೇ??

ಸಂಪದ್ಭರಿತವಾಗಿದ್ದ ಹಿಂದೂಸ್ತಾನವು ಮೊಘಲರ ಆಡಳಿತಕ್ಕೆ ತುತ್ತಾಗಿ ಅದೆಷ್ಟೋ ಹಿಂದೂಗಳ ಮಾರಣ ಹೋಮಗಳು ನಡೆದಿವೆಯಲ್ಲದೇ ಅದೆಷ್ಟೋ ಜಗತ್ಪ್ರಸಿದ್ಧ ದೇವಾಲಯಗಳನ್ನು ಕೆಡವಿ ಅಲ್ಲಿ ಮಸೀದಿಯನ್ನು ಕಟ್ಟಿ ಇಸ್ಲಾಂ ಸಾಮ್ರಾಜ್ಯವನ್ನು ಕಟ್ಟುವ ಕನಸನ್ನೂ ಈ ಮೊಘಲರು ಹೊಂದಿದ್ದಂತೂ ನಿಜ!! ಅಷ್ಟೇ ಅಲ್ಲದೇ, ಈ ಮೊಘಲರು ತನ್ನ ಕುತಂತ್ರ ಬುದ್ಧಿಯಿಂದ ಭಾರತವನ್ನು ಕೊಳ್ಳೆ ಹೊಡೆದಿದ್ದಲ್ಲದೇ ಪುರಾತನ ದೇವಾಲಯಗಳಿದ್ದ ಸೌಂದರ್ಯವನ್ನು ಸಹಿಸಲಾಗದೇ ಅವುಗಳನ್ನು ನಾಶಮಾಡಿದ್ದಲ್ಲದೇ ಕಳ್ಳರಂತೆ ಚಿನ್ನಾಭರಣಗಳನ್ನು ದೋಚಿ ದೇವಾಲಯಗಳನ್ನೇ ನಿರ್ನಾಮ ಮಾಡಿದ್ದು ಗೊತ್ತೇ ಇದೆ!! ಇದಕ್ಕೆ ಜ್ವಲಂತ ಸಾಕ್ಷಿಯಾಗಿರುವುದೇ ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇಗುಲ!!

3500 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ವಾರಣಾಸಿಯ ಪ್ರಸಿದ್ಧ, ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕಾಶಿ ವಿಶ್ವನಾಥ ದೇವಾಲಯವನ್ನು ಮೊಘಲ್ ದೊರೆ ಔರಂಗಜೇಬನು ಧ್ವಂಸ ಮಾಡಿಸಿದನು ಎನ್ನುವುದನ್ನು ಇತಿಹಾಸದ ಪುಟಗಳು ಸಾರಿ ಸಾರಿ ಹೇಳುತ್ತಿವೆ!! ತದ ನಂತರದ ವರ್ಷಗಳಲ್ಲಿ ಮರಾಠ ರಾಣಿ ಅಹಲ್ಯಾಬಾಯಿ, ಹೋಳ್ಕರ ಸಮೀಪದಲ್ಲಿ ದೇವಾಲಯವನ್ನು ಪುನಃ 1780ರಲ್ಲಿ ನಿರ್ಮಿಸಿದರು. ಆದರೆ ಮೂಲ ದೇವಸ್ಥಾನದ ಅವಶೇಷಗಳ ಮೇಲೆ “ಗ್ಯಾನವಾಪಿ ಮಸೀದಿಯನ್ನು” ಔರಂಗಜೇಬನು ಕಟ್ಟಿಸಿದನು ಎನ್ನುವ ವಿಚಾರ ತಿಳಿದೇ ಇದೆ!!

ತದನಂತರದಲ್ಲಿ 1983 ರಿಂದ ಉತ್ತರ ಪ್ರದೇಶದ ಸರ್ಕಾರವು ಈ ದೇವಸ್ಥಾನದ ಉಸ್ತುವಾರಿಯನ್ನು ವಹಿಸಿಕೊಂಡಿದೆ. ಹೀಗಿರಬೇಕಾದರೆ ಕೆಲವು ವರ್ಷಗಳ ಹಿಂದೆ ದಾಳಿ ಭೀತಿ ಎದುರಿಸುತ್ತಿದ್ದ ಕಾಶಿ ವಿಶ್ವನಾಥ ದೇಗುಲಕ್ಕೆ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ದಿನದ 24 ಗಂಟೆಯೂ ಮೂರು ಸರದಿಯಲ್ಲಿ ಪೆÇಲೀಸ್ ಭದ್ರತೆ ಒದಗಿಸಲಾಗಿದ್ದು, ಇದೀಗ ಕಾಶಿ ವಿಶ್ವನಾಥ ದೇಗುಲದ ಗರ್ಭಗುಡಿಯ ಸಮೀಪ ಕಾರ್ಯ ನಿರ್ವಹಿಸುವ ಪೆÇಲೀಸರು ಹೊಸ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು ಎನ್ನುವ ಆದೇಶ ಕೇಳಿ ಬಂದಿದೆ!!

ಹೌದು… ವಾರಾಣಸಿ ಇಲ್ಲಿನ ಪ್ರಸಿದ್ಧ, ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕಾಶಿ ವಿಶ್ವನಾಥ ದೇಗುಲದಲ್ಲಿ ಪೆÇಲೀಸರು ಹೊಸ ಸಮವಸ್ತ್ರದಲ್ಲಿ ಕಂಡುಬರುತ್ತಾರೆ. ಖಾಕಿ ಖದರ್ರಿನ ಬದಲು ಕಾಶಿ ವಿಶ್ವನಾಥ ದೇಗುಲದ ಗರ್ಭಗುಡಿಯ ಸಮೀಪ ಕಾರ್ಯ ನಿರ್ವಹಿಸುವ ಪೆÇಲೀಸರು ಕಡ್ಡಾಯವಾಗಿ ಧೋತಿ-ಕುರ್ತಾ ಧರಿಸಬೇಕೆಂಬ ನಿಯಮವನ್ನು ಜಾರಿಗೆ ಮಾಡಿ ಪೆÇಲೀಸ್ ಇಲಾಖೆ ಆದೇಶ ನೀಡಿದೆ.

ದಾಳಿ ಭೀತಿ ಎದುರಿಸುತ್ತಿದ್ದ ಕಾಶಿ ವಿಶ್ವನಾಥ ದೇಗುಲಕ್ಕೆ ಹೆಚ್ಚಿನ ಭದ್ರತೆ ನಿಯೋಜಿಸುವ ಸಲುವಾಗಿ ದಿನದ 24 ಗಂಟೆಯೂ ಮೂರು ಸರದಿಯಲ್ಲಿ ಪೆÇಲೀಸ್ ಭದ್ರತೆ ಒದಗಿಸಲಾಗಿದೆ. ಹಾಗಾಗಿ ಇದೀಗ ಕಾಶಿ ವಿಶ್ವನಾಥ ದೇಗುಲದ ಗರ್ಭಗುಡಿಯ ಸಮೀಪ ಕಾರ್ಯ ನಿರ್ವಹಿಸುವ ಪೆÇಲೀಸರು ಕಡ್ಡಾಯವಾಗಿ ಧೋತಿ-ಕುರ್ತಾ ಧರಿಸಬೇಕಾಗಿದೆ ಎಂದರೆ ನಿಜಕ್ಕೂ ಕೂಡ ಅಚ್ಚರಿಯ ವಿಚಾರವಾಗಿದೆ!! ಈ ಕುರಿತು ಪೆÇಲೀಸ್ ವರಿಷ್ಠಾಧಿಕಾರಿ ಆದೇಶವನ್ನು ಹೊರಡಿಸಿದ್ದು, ಅದರಂತೆಯೇ 18 ಪೆÇಲೀಸರಿಗೆ ಧೋತಿ-ಕುರ್ತಾ ಸಮವಸ್ತ್ರವನ್ನು ಇಲಾಖೆಯಿಂದ ಪೂರೈಸಲಾಗಿದೆ ಎಂದು ತಿಳಿದು ಬಂದಿದೆ.

ದೇಗುಲದಲ್ಲಿ ಹೊಸ ಸಮವಸ್ತ್ರದಲ್ಲಿ ಪೆÇಲೀಸರನ್ನು ಕಂಡು ಕೆಲವು ಭಕ್ತಾಧಿಗಳು ಆಶ್ಚರ್ಯ ಚಕಿತರಾಗಿದ್ದಾರೆ. ಈ ಹಿಂದೆ ಕೆಲವು ಭಕ್ತಾಧಿಗಳು ಪೆÇಲೀಸರು ಬೆಲ್ಟ್ ಧರಿಸಿ, ಇಲಾಖೆ ಸಮವಸ್ತ್ರದಲ್ಲಿಯೇ ಗರ್ಭಗುಡಿ ಬಳಿ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಈಗ ಪೆÇಲೀಸರು ಕಡ್ಡಾಯವಾಗಿ ಧೋತಿ-ಕುರ್ತಾ ಸಮವಸ್ತ್ರ ಧರಿಸಲು ಸೂಚಿಸಲಾಗಿದೆ. ಸದ್ಯ ಪೆÇಲೀಸ್ ಇಲಾಖೆಯ ಈ ಹೊಸ ನಿಯಮವನ್ನು ದೇವಾಲಯದ ಆಡಳಿತ ಮಂಡಳಿ ಸ್ವಾಗತಿಸಿದೆ.

ಪೆÇಲೀಸರು ಬೂಟು, ಬೆಲ್ಟ್ ಹಾಗೂ ಸಮವಸ್ತ್ರ ಧರಿಸಿ ಗರ್ಭಗುಡಿಯ ಪ್ರವೇಶ ಮಾಡುತ್ತಿರುವುದನ್ನು ಕಂಡು ಭಕ್ತರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೆÇಲೀಸ್ ಇಲಾಖೆ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದ್ದು, 54 ಪೆÇಲೀಸರಿಗೂ ಪೆÇಲೀಸ್ ಇಲಾಖೆಯೇ ಧೋತಿ, ಕುರ್ತಾ ವಿತರಸಲಿದೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಕಾಶಿ ವಿಶ್ವನಾಥ ದೇವಾಲಯಕ್ಕೆ ಬಾಂಬ್ ದಾಳಿ ಬೆದರಿಕೆ ಇದ್ದ ಕಾರಣ ದಿನದ 24 ಗಂಟೆಯೂ ಪೆÇಲೀಸ್ ಭದ್ರತೆ ನಿಯೋಜಿಸಲಾಗಿತ್ತು!! ಹಾಗಾಗಿ ಇನ್ನು ಮುಂದೆ ಈ ಪೆÇಲೀಸರೂ ಭಕ್ತರ ಹಾಗೆಯೇ ಕಂಡು ಬಂದರೂ ಅಚ್ಚರಿಯಿಲ್ಲ.

ಈ ಕುರಿತು ಮಾಹಿತಿ ನೀಡಿರುವ ವಾರಾಣಾಸಿಯ ಗ್ಯಾನವಾಪಿ ಎಸ್ಪಿ ಶೈಲೇಂದ್ರ ಕುಮಾರ್ ರೈ, ಈ ವಸ್ತ್ರ ಸಂಹಿತೆ ನಿಯಮ ದೇವಾಲಯದ ಗರ್ಭಗುಡಿಯ ಬಳಿ ಕಾರ್ಯನಿರ್ವಹಿಸುವ ಪೆÇಲೀಸರಿಗೆ ಮಾತ್ರ ಅನ್ವಯವಾಗುತ್ತದೆ. ಇನ್ನುಳಿದ ಪೆÇಲೀಸರು ತಮ್ಮ ಸಾಮಾನ್ಯ ಸಮವಸ್ತ್ರ ಧರಿಸಿ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದ್ದಾರೆ. ಈ ನಿಯಮ ಸೋಮವಾರದಿಂದಲೇ ಜಾರಿಯಾಗಿದ್ದು, ಧೋತಿ-ಕುರ್ತಾ ಧರಿಸಿ ಕಾರ್ಯನಿರ್ವಹಿಸುತ್ತಿದ್ದ ಪೆÇಲೀಸರನ್ನು ಕಂಡ ಭಕ್ತರು ಆಶ್ಚರ್ಯ ವ್ಯಕ್ತಪಡಿಸಿದ್ದಂತೂ ಅಕ್ಷರಶಃ ನಿಜ!!

ಕಾಶಿ ವಿಶ್ವನಾಥ ದೇವಾಲಯಕ್ಕೆ ಬಿಗಿ ಭದ್ರತೆಯಿದ್ದರೂ ಕೂಡ ಭಯೋತ್ಪಾದಕರು ಮಾತ್ರ ಆಗಾಗ ನಾವು ಬಾಂಬು ಹಾಕುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರಲ್ಲದೇ ಪ್ರತೀ ಬಾರಿ ಎಚ್ಚರಿಸುತ್ತಲೇ ಬಂದಿರುವ ವಿಚಾರ ತಿಳಿದೇ ಇದೆ!! ಹಿಂದೂಗಳ ಪವಿತ್ರ ಕ್ಷೇತ್ರವಾಗಿರುವ ಈ ದೇವಾಲಯ ಎಂದಿಗೂ ಉಗ್ರರ ಟಾರ್ಗೆಟ್ ಲಿಸ್ಟ್ ನಲ್ಲಿ ಇರುವುದಂತೂ ನಿಜ!! ಇದಕ್ಕೆ ಪೂರಕವಾಗಿ ಕಾಶಿ ವಿಶ್ವನಾಥ ದೇವಾಲಯ ಬಳಿಕ ಮಸೀದಿಯೊಂದರ ಎದುರು ನೆಲಮಹಡಿಯಲ್ಲಿ ಕೊರೆದ ಮಿನಿ ನಗರ ಅಥವಾ ಸಮುಚ್ಚಯವೊಂದು ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು!! ಆದರೆ ಇದೀಗ ಪೊಲೀಸರ ಸಮವಸ್ತ್ರವನ್ನೇ ಬದಲಾಯಿಸಿರುವ ಪೊಲೀಸ್ ಇಲಾಖೆ ಉಗ್ರರಿಗೆ ತಕ್ಕ ಪಾಠ ಕಲಿಸಲಿರುವುದಂತೂ ಗ್ಯಾರೆಂಟಿ!!

ಮೂಲ:https://timesofindia.indiatimes.com/city/varanasi/cops-in-dhoti-kurta-surprise-pilgrims-at-iconic-kashi-temple/articleshow/63485835.cms

– ಅಲೋಖಾ

Tags

Related Articles

Close