ಪ್ರಚಲಿತ

ಬಿಗ್ ಬ್ರೇಕಿಂಗ್! ರಾಜೀನಾಮೆ ನೀಡುತ್ತಾರಂತೆ ಮುಖ್ಯಮಂತ್ರಿ ಕುಮಾರಸ್ವಾಮಿ.?! ಕಾಂಗ್ರೆಸ್ ಕಾಟಕ್ಕೆ ಬೇಸತ್ತ ಕುಮಾರಣ್ಣ..!

ಸರಕಾರ ರಚನೆ ಮಾಡಿದರು ಕೂಡ ಇನ್ನೂ ಕುಮಾರಸ್ವಾಮಿ ಅವರಿಗೆ ಅಧಿಕಾರ ಸಿಗಲಿಲ್ಲ. ಮುಖ್ಯಮಂತ್ರಿಯಾಗಿ ಆಯ್ಕೆಯಾದರೂ ಸ್ವತಂತ್ರವಾಗಿ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ. ತಮ್ಮನ್ನು ನಂಬಿಕೊಂಡ ರಾಜ್ಯದ ಜನರಿಗೆ ಸಿಗಲಿಲ್ಲ ಸರಕಾರದ ಕಡೆಯಿಂದ ಯಾವುದೇ ಖುಷಿಯ ವಿಚಾರ. ಇದು ಸದ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ಸಂಗತಿ. ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರಕಾರ ಕೊನೆಗೂ ರಚನೆಯಾಗಿದೆ. ಆದರೆ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಅನುಮತಿಯಿಲ್ಲದೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗದೆ ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ.!

ಒಂದೆಡೆ ಚುನಾವಣೆಗೂ ಮೊದಲು ಕಾಂಗ್ರೆಸ್ ವಿರುದ್ಧ ಎಚ್‌ಡಿಕೆ ವಾಗ್ದಾಳಿ ನಡೆಸುತ್ತಿದ್ದು, ಇದೀಗ ಅನಿವಾರ್ಯವಾಗಿ ಕಾಂಗ್ರೆಸ್ ಜೊತೆ ಕೈಜೋಡಿಸುವಂತಾಗಿದೆ. ಆದರೆ ಇದೀಗ ಒಂದೊಂದೆ ಒತ್ತಡಗಳು ಬರುತ್ತಿರುವುದರಿಂದ ಕಂಗೆಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿ ಹೋಗುವುದೇ ಲೇಸು ಎಂದು ಹೇಳಿಕೊಂಡಿದ್ದಾರೆ..!

ರಾಜೀನಾಮೆ ನೀಡಿ ಜನರ ಬಳಿಗೆ ತೆರಳುತ್ತಾರಂತೆ ನೂತನ ಸಿಎಂ..!

ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುತ್ತಿರುವ ಕಾಂಗ್ರೆಸ್ ಮುಖಂಡರ ನಡೆಯಿಂದಾಗಿ ಬೇಸತ್ತ ಕುಮಾರಸ್ವಾಮಿ ಅವರು ಎಲ್ಲವನ್ನೂ ಬಿಟ್ಟು ರಾಜೀನಾಮೆ ನೀಡಿ ಹೋಗುತ್ತೇನೆ ಎಂದು ಕಾಂಗ್ರೆಸ್ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ಒಂದೇ ಒಂದು ಕಾರಣಕ್ಕಾಗಿ ಅವರ ಮಾತು ಕೇಳಬೇಕಾಗಿದೆ, ಆದರೆ ಅದನ್ನೇ ನೆಪವಾಗಿಟ್ಟುಕೊಂಡ ಕಾಂಗ್ರೆಸ್ ಪದೇ ಪದೇ ಹೈಕಮಾಂಡ್ ಮೂಲಕ ನಮ್ಮ ಮೇಲೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದರು‌. ಮೇಲ್ನೋಟಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಉತ್ತಮ ಸಂಬಂಧ ಹೊಂದಿರುವಂತೆ ಇದ್ದರೂ ಕೂಡ ಶೀತಲ ಸಮರ ನಡೆಯುತ್ತಲೇ ಇದೆ. ಆದರೆ ಇದು ದನಿ ಕಳೆದಂತೆ ಹೆಚ್ಚಾಗುತ್ತಿದೆ, ಆದ್ದರಿಂದ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿ ಜನರ ಬಳಿಗೆ ತೆರಳಿ ಆರಾಮವಾಗಿರುತ್ತೇನೆ ಎಂದಿದ್ದಾರೆ..!

ಸಮ್ಮಿಶ್ರ ಸರಕಾರದಲ್ಲೀಗ ಅಲ್ಲೋಲ ಕಲ್ಲೋಲ..!

ಕೇವಲ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ಇದೀಗ ಬಿರುಕು ಉಂಟಾಗಿದೆ. ಯಾಕೆಂದರೆ ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್ ಪಾಲು ಹೆಚ್ಚಿರುವುದರಿಂದ ಅಧಿಕಾರ ಚಲಾಯಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಆದರೆ ಇದರಿಂದ ಬೇಸತ್ತ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದೇ ಲೇಸು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಮುಖ್ಯಮಂತ್ರಿಯಾಗಿ ಆಯ್ಕೆಯಾದರೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗದೆ ಬೇಸರಗೊಂಡಿದ್ದಾರೆ. ಒಂದೆಡೆ ಚುನಾವಣೆಗೂ ಮೊದಲು ಹೇಳಿಕೊಂಡಂತೆ ಅಧಿಕಾರಕ್ಕೆ ಬಂದರೆ ಸಂಪೂರ್ಣ ರೈತರ ಸಾಲ ಮನ್ನಾ ಎಂಬುದಾಗಿ ಹೇಳಿರುವುದೇ ಇದೀಗ ಕಟ್ಟು ಹಾಕಿದಂತಾಗಿದೆ. ಆದ್ದರಿಂದ ಇವೆಲ್ಲ ತೊಂದರೆಗಳಿಂದ ತಪ್ಪಿಸಿಕೊಳ್ಳಬೇಕಾದರೆ ರಾಜೀನಾಮೆ ಅನಿವಾರ್ಯವಾಗಿದೆ ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ..!

ಮೈತ್ರಿ ಮಾಡಿಕೊಂಡ ದಿನದಿಂದಲೇ ಆರಂಭವಾದ ಕಿತ್ತಾಟ ಇನ್ನೂ ನಿಲ್ಲಲಿಲ್ಲ. ಒಂದೆಡೆ ಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ ನಾಯಕರು ಒತ್ತಡ ಹೇರುತ್ತಿದ್ದರೆ , ಮತ್ತೊಂದೆಡೆ ಜೆಡಿಎಸ್ ಮುಖಂಡರು ಕುಮಾರಸ್ವಾಮಿ ಅವರ ಹಿಂದೆ ಬಿದ್ದಿದ್ದಾರೆ. ಈ ಇಬ್ಬರ ಮಧ್ಯೆ ಸಿಲುಕಿಕೊಂಡ ಕುಮಾರಸ್ವಾಮಿ ಅವರು ಏನೂ ಮಾಡಲಾಗದ ಪರಿಸ್ಥಿತಿಗೆ ಬಂದು ತಲುಪಿದ್ದಾರೆ..!

–ಅರ್ಜುನ್

Tags

Related Articles

Close