ಪ್ರಚಲಿತ

ಬೆಳಿಗ್ಗೆ ಉಗ್ರರ ದುಷ್ಕ್ರತ್ಯ..! ಸಂಜೆಯಾಗುತ್ತಲೇ ಉಗ್ರರ ಎನ್ ಕೌಂಟರ್..! ಮೋದಿ ಸರಕಾರದಿಂದ ದಿಟ್ಟ ಉತ್ತರ!!

ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುತ್ತಲೇ ಭಾರತೀಯ ಸೇನೆಯಿಂದ ಬಲಪಡಿಸುವ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ದೇಶದ ಭದ್ರತೆಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಸೇನೆಗೆ ಒದಗಿಸುತ್ತಿರುವ ಮೋದಿ ಸರಕಾರ ಈಗಾಗಲೇ ಸೇನೆಗೆ ಬೇಕಾದ ಎಲ್ಲಾ ಸಶಸ್ತ್ರ ಗಳನ್ನು ಒದಗಿಸುತ್ತಿದ್ದಾರೆ..!

ಗಡಿಯಲ್ಲಿ ಪದೇ ಪದೇ ಬಾಲ ಬಿಚ್ಚುತ್ತಿರುವ ಪಾಕಿಸ್ತಾನ ಗಡಿಭಾಗದಲ್ಲಿ ಭಾರತೀಯ ಸೇನೆಯ ಮೇಲೆ ಗುಂಡಿನ ದಾಳಿ ನಡೆಸುತ್ತಲೇ ಇದೆ.ಇದಕ್ಕೆ ತಕ್ಕ ಉತ್ತರ ನೀಡುತ್ತಲೇ ಬಂದಿರುವ ಭಾರತೀಯ ಸೇನೆ ಪಾಕಿಸ್ತಾನದ ಸೈನಿಕರ ಮೇಲೂ ಪ್ರತಿದಾಳಿ ನಡೆಸುತ್ತಲೇ ಇದೆ.ಈಗಾಗಲೇ ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸಿ ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ್ದ ಪಾಕಿಸ್ತಾನ ಪ್ರೇರಿತ ಉಗ್ರ ಸಂಘಟನೆ ಜೈಷ್ ಮೊಹಮದ್ ಈಗಾಗಲೇ ಭಾರತದ ಗಡಿ ಪ್ರವೇಶಿಸಿ ಭಾರತದಲ್ಲಿ ಉಗ್ರ ಕ್ರತ್ಯ ನಡೆಸಲು ಪ್ರಯತ್ನಿಸುತ್ತಲೇ ಇದೆ.

ಪಠಾಣ್ ಕೋಟ್ ಮೇಲೆ ಉಗ್ರರ ದಾಳಿ ನಡೆದ ಬೆನ್ನಲ್ಲೇ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನ ಗಡಿ ಪ್ರವೇಶಿಸಿ ಸೇನಾ ಶೀಬಿರ ಮತ್ತು ಉಗ್ಋಆಶ್ರಯ ತಾಣಗಳನ್ನು ಧ್ವಂಸ ಮಾಡಿತ್ತು ಮತ್ತು ನಲುವತ್ತಕ್ಕೂ ಹೆಚ್ಚು ಪಾಕಿಸ್ತಾನ ಸೈನಿಕರನ್ನು ನರಕಕ್ಕೆ ಕಳುಹಿಸಿತ್ತು..!

ಆದರೆ ಇದೀಗ ಮತ್ತೆ ಪಠಾಣ್ ಕೋಟ್ ನ ಸಂಜ್ವಾನ್ ಸೇನಾ ಶಿಬಿರದ ಮೇಲ ಮಾಡಿದ ದಾಳಿಯಲ್ಲಿ ಮತ್ತೆ ಮೂರು ಜನ ಯೋಧರು ಮತ್ತು ಓರ್ವ ಯೋಧನ ಮಗಳು ಹುತಾತ್ಮರಾಗಿದ್ದಾರೆ.ಆದರೆ ದಾಳಿಯನ್ನು ಗಂಭೀರವಾಗಿ ಪರಿಗಣಿಸಿದ ಮೋದಿ ಸರಕಾರ ತಕ್ಷಣ ಕಾರ್ಯಾಚರಣೆ ಆರಂಭಿಸಿ ಉಗ್ರರನ್ನು ಹೆಡೆಮುರಿಕಟ್ಟಲು ಸೂಚಿಸಿತ್ತು.ಕೂಡಲೇ ಗಡಿಭಾಗದಲ್ಲಿ ಕಟ್ಟಚ್ಚರ ಘೋಷಿಸಿದ ಪೋಲೀಸರು ಮತ್ತು ಭಾರತೀಯ ಸೇನೆಯು ಉಗ್ರರ ದಮನಕ್ಕೆ ಬಲೆ ಬೀಸಿತ್ತು..! ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಗುಂಡಿನ ದಾಳಿಗೆ ಓರ್ವ ಉಗ್ರ ಬಲಿಯಾಗಿದ್ದಾನೆ…!

ಸೇನಾ ನೆಲೆಯ ಮೇಲೆ ದಾಳಿ ನಡೆದ ಕೂಡಲೆ ಕಾರ್ಯಾಚರಣೆಗೆ ಇಳಿದ ಭಾರತೀಯ ಸೇನೆ ಉಗ್ರರನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದೆ.ಭಾರತೀಯ ಸೇನೆಯ ಮೇಲೆ ಅಪಾರ ನಂಬಿಕೆ ಮತ್ತು ಪ್ರೀತಿ ಹೊಂದಿರುವ ನರೇಂದ್ರ ಮೋದಿಯವರು ಸೇನೆಗೆ ಈಗಾಗಲೇ ಎಲ್ಲಾ ರೀತಿಯ ಅವಕಾಶವನ್ನು ಒದಗಿಸಿದ್ದಾರೆ.ಭಾರತೀಯ ಸೇನೆಯ ಮೇಲೆ ದಾಳಿ ನಡೆದರೆ ತತ್ ಕ್ಷಣ ತಕ್ಕ ಉತ್ತರ ನೀಡುವಂತೆ ಸೂಚನೆ ನೀಡಲಾಗಿತ್ತು.ಅದೇ ಕಾರಣದಿಂದಾಗಿ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಉಗ್ರರನ್ನು ಎನ್ ಕೌಂಟರ್ ಮಾಡಲಾಗಿದೆ..!!

ಎನ್ ಕೌಂಟರ್ ಗೆ ಬಲಿಯಾದ ಉಗ್ರನ ಬಳಿ ಎಕೆ ೪೭ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.ಈಗಾಗಲೇ ಪಾಕಿಸ್ತಾನವು ಭಾರತದ ಮೇಲೆ ದಾಳೀ ನಡೆಸಲು ಹೊಂಚು ಹಾಕುತ್ತಲೇ ಇದೆ‌‌.ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಆಗುತ್ತಲೇ ಪಾಕಿಸ್ತಾನ ಚೀನಾ ಸೇರಿದಂತ ಶತ್ರು ರಾಷ್ಟ್ರಗಳಿಗೆ ನಡುಕ ಉಂಟಾಗಿತ್ತು.ಇದೇ ಕಾರಣಕ್ಕಾಗಿ ಪಾಕಿಸ್ತಾನವು ಉಗ್ರರನ್ನು ಬಳಸಿಕೊಂಡು ಭಾರತದ ಮೇಲೆ ದಾಳಿ ನಡೆಸಲು ಅವಕಾಶಕ್ಕಾಗಿ ಕಾಯುತ್ತಿದೆ.ಆದರೆ ಭಾರತೀಯ ಸೇನೆಯನ್ನು ಬಲಪಡಿಸಿಕೊಂಡ ಮೋದಿ ಸರಕಾರ ಸೇನೆಗೆ ಬೇಕಾದ ಎಲ್ಲಾ ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಿತ್ತು.

ಭಾರತೀಯ ಸೇನೆಯ ಮೇಲೆ ದಾಳಿ ನಡೆಸಿದ ಕಲವೇ ಗಂಟೆಗಳಲ್ಲಿ ಪಾಕ್ ಉಗ್ರರನ್ನು ಹತ್ಯೆ ಮಾಡಿದ ಸೇನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ..!

–ಅರ್ಜುನ್

Tags

Related Articles

Close