ಪ್ರಚಲಿತ

ವಿದ್ವತ್ ಪರ ವಕೀಲರಿಗೆ ಶಾಕ್.!! ಜೈಲಿನೊಳಗೆಯೇ ಗೂಂಡಾಗಿರಿ ಮೆರೆದ ನಲಪಾಡ್!! ಸ್ನೇಹಿತನ ವಿರುದ್ಧ ಸಿಡಿದೆದ್ದಿದ್ದೇಕೆ.?!

ಕಳೆದ ನಾಲ್ಕು ದಿನಗಳ ಹಿಂದೆ ಬೆಂಗಳೂರಿನ ಯುಬಿ ಸಿಟಿಯಲ್ಲಿ ಇರುವಂತಹ ಫರ್ಜಿ ಎಂಬ ರೆಸ್ಟೋರೆಂಟ್ ನಲ್ಲಿ ಅಮಾಯಕ ಯುವಕನ ಮೇಲೆ ಕಾಂಗ್ರೆಸ್ ಶಾಸಕನನೊಬ್ಬನ ಮಗ ನಡೆಸಿದ ಹಲ್ಲೆಯಿಂದ ಇಡೀ ರಾಜ್ಯವೇ ಕಾಂಗ್ರೆಸ್ ನ ಕರಾಳ ಮುಖ ಕಾಣುವಂತಾಗಿದೆ. ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಲ್ಲದೇ ತಂದೆ ಶಾಸಕ ಎಂಬ ಅಧಿಕಾರದ ಅಹಂಕಾರದಿಂದ ಉಡಾಫೆಯಿಂದ ವರ್ತಿಸುತ್ತಿದ್ದಾನೆ.

ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ನಲಪಾಡ್ ರ ಪುತ್ರ ಮಹಮ್ಮದ್ ನಲಪಾಡ್ ತನ್ನ ತಂದೆ ಕಾಂಗ್ರೆಸ್ ಶಾಸಕ ಎಂಬ ಅಹಂಕಾರದಿಂದಲೇ ವರ್ತಿಸುತ್ತಿದ್ದ. ರಾತ್ರಿ ಗೆಳೆಯರ ಜೊತೆ ರೆಸ್ಟೋರೆಂಟ್ ಒಂದರಲ್ಲಿ ಮಜಾ ಮಾಡುತ್ತಿದ್ದ ಮಹಮ್ಮದ್ ನಲಪಾಡ್ , ಅಲ್ಲೇ ಇದ್ದ ವಿದ್ವತ್ ಎಂಬ ಯುವಕನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಯಾವುದೋ ಸಣ್ಣ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿತ್ತು, ಆದರೆ ನಲಪಾಡ್ ಕುಡಿದ ಮತ್ತಿನಲ್ಲಿ ಏಕಾಏಕಿ ವಿದ್ವತ್ ಗೆ ಹೊಡೆಯಲು ಆರಂಭಿಸಿದ್ದಾರೆ.

ಘಟನೆ ನಡೆದು ಎರಡು ದಿನಗಳ ಕಾಲ ತಲೆಮರೆಸಿಕೊಂಡಿದ್ದ ನಲಪಾಡ್ ಎರಡು ದಿನಗಳ ಹಿಂದೆ ಪೋಲೀಸರಿಗೆ ಶರಣಾಗಿದ್ದ. ಆದರೆ ಇದು ಕೇವಲ ನಾಟಕೀಯ ಬೆಳವಣಿಗೆಯಾಗಿತ್ತು. ಯಾಕೆಂದರೆ ತಂದೆಯ ಅಧಿಕಾರವನ್ನು ಬಳಸಿಕೊಂಡು ಠಾಣೆಯಲ್ಲೂ ರಾಜಮರ್ಯಾದೆ ಪಡೆಯುತ್ತಿರುವ ನಲಪಾಡ್ ನಂತಹ ಅಪರಾಧಿಗಳಿಗೆ ಈ ಕಾಂಗ್ರೆಸ್ ಸಹಕಾರ ನೀಡುತ್ತಿದೆ ಎಂದರೆ ಕಾನೂನು ಕಾಪಾಡಬೇಕಾದವರು ಯಾರು ಎಂಬ ಪ್ರಶ್ನೆ ರಾಜ್ಯದ ಜನತೆಯಲ್ಲಿ ಮೂಡುತ್ತದೆ.

ಪೋಲಿಸರ ಎದುರೇ ದರ್ಪ..!

ಹ್ಯಾರಿಸ್ ನಲಪಾಡ್ ಕಾಂಗ್ರೆಸ್ ನ ಪ್ರಭಾವಿ ಶಾಸಕರಲ್ಲಿ ಒಬ್ಬರು. ಅದೇ ಕಾರಣದಿಂದಾಗಿ ಮಗ ಮಹಮ್ಮದ್ ನಲಪಾಡ್ ತನ್ನ ತಂದೆಯ ಅಧಿಕಾರದ ಬಲದಿಂದ ಮೆರೆಯುತ್ತಿದ್ದ. ತಾನು ಏನೇ ರಂಪಾಟ ಮಾಡಿದರೂ ತಂದೆ ಕಾಂಗ್ರೆಸ್ ಶಾಸಕ ಆಗಿರುವುದರಿಂದ ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಬಹುದು ಎಂಬ ಮನೋಭಾವನೆ ಹೊಂದಿದ್ದ ನಲಪಾಡ್ ತನ್ನ ಗೆಳೆಯರ ಜೊತೆ ಸೇರಿ ದಾಂಧಲೆ ನಡೆಸುತ್ತಿದ್ದ. ಆದರೆ ಇತ್ತೀಚೆಗೆ ಬೆಂಗಳೂರಿನ ಯುಬಿ ಸಿಟಿಯಲ್ಲಿ ಇರುವ ರೆಸ್ಟೋರೆಂಟ್ ಒಂದರಲ್ಲಿ ವಿದ್ವತ್ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಎಲ್ಲರಿಗೂ ತಿಳಿದಿರುವ ವಿಚಾರ, ನಲಪಾಡ್ ವಿರುದ್ಧ ದೂರು ಕೂಡ ದಾಖಲಾಗಿತ್ತು.
ಆದರೆ ಠಾಣೆಯಲ್ಲಿ ಪೋಲೀಸರು ವಿಚಾರಣೆ ಮಾಡುವ ವೇಳೆಯಲ್ಲೂ ನಲಪಾಡ್ ಪೋಲೀಸರ ಮುಂದೆಯೇ ಕಾಲ ಮೇಲೆ ಕಾಲು ಹಾಕಿ ದರ್ಪ ತೋರಿಸಿದ್ದನು.ಅಧಿಕಾರದ ಮದದಿಂದ ಮೆರೆಯುತ್ತಿದ್ದ ನಲಪಾಡ್ ಹೋದಲ್ಲೆಲ್ಲಾ ಪುಂಡಾಟ ತೋರಿಸುತ್ತಲೇ ಇದ್ದ..!

ಸಿಸಿಬಿ ಪೋಲೀಸರ ಜೊತೆಗೂ ಉಡಾಫೆಯಿಂದ ವರ್ತನೆ..!

ಹೆಚ್ಚಿನ ವಿಚಾರಣೆಗಾಗಿ ನಲಪಾಡ್ ನನ್ನು ಸಿಸಿಬಿ ಪೋಲೀಸರು ಕೋರ್ಟ್ ನಿಂದ ಎಂಟು ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡಬೇಕೆಂದು ನ್ಯಾಯಾಧೀಶರ ಬಳಿ ಕೋರಿದ್ದರು. ಆದರೆ ಎರಡು ದಿನಗಳ ಕಾಲ ಸಿಸಿಬಿ ಪೋಲೀಸರ ಕಸ್ಟಡಿಗೆ ನೀಡಿದ್ದ ಕೋರ್ಟ್, ಹೆಚ್ಚಿನ ವಿಚಾರಣೆ ನಡೆಸುವಂತೆ ಆದೇಶಿಸಿತ್ತು. ಘಟನೆಯ ಬಗ್ಗೆ ವಿಚಾರಣೆ ಮಾಡುತ್ತಿದ್ದ ಸಿಸಿಬಿ ಪೋಲೀಸರ ಯಾವುದೇ ಪ್ರಶ್ನೆಗೂ ನಲಪಾಡ್ ಸರಿಯಾಗಿ ಉತ್ತರಿಸಿರಲಿಲ್ಲ. ಪ್ರತಿಯೊಂದು ಪ್ರಶ್ನೆಗೂ ಉಡಾಫೆ ತೋರಿಸುತ್ತಿದ್ದ ಮಹಮ್ಮದ್ ನಲಪಾಡ್ ಪೋಲೀಸರ ವಿಚಾರಣೆಗೂ ಸ್ಪಂದಿಸಿರಲಿಲ್ಲ. ತನ್ನ ತಂದೆ ಕಾಂಗ್ರೆಸ್ ಶಾಸಕ ಆಗಿರುವುದರಿಂದ ತನಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂಬ ಮನೋಭಾವ ಹೊಂದಿದ್ದ ನಲಪಾಡ್ ಪೋಲೀಸರಿಗೂ ಸರಿಯಾಗಿ ಉತ್ತರಿಸಿರಲಿಲ್ಲ.

ಕೋರ್ಟ್ ನಲ್ಲೂ ದರ್ಪ ಮೆರೆದ ನಲಪಾಡ್..!

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ಯಾಮ್ ಸುಂದರ್ ರವರು ಕೋರ್ಟ್ ನಲ್ಲಿ ವಾದ ಮಂಡಿಸುವ ವೇಳೆ ಆರೋಪಿ ಮಹಮ್ಮದ್ ನಲಪಾಡ್ ವಿದ್ವತ್ ಪರ ವಾದ ಮಾಡುತ್ತಿದ್ದ ಶ್ಯಾಮ್ ಸುಂದರ್ ಕಡೆ ನೋಡಿ ಗುರಾಯಿಸುತ್ತಿದ್ದ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶ್ಯಾಮ್ ಸುಂದರ್, ‘ನಾನು ಕೋರ್ಟ್ ನಲ್ಲಿ ನಾನು ವಿದ್ವತ್ ಪರ ವಾದ ಮಂಡಿಸುತ್ತಿರುವ ವೇಗವಾಗಿ ಆರೋಪಿ ನಲಪಾಡ್ ನನ್ನನ್ನು ನೋಡಿ ಗುರಾಯಿಸುತ್ತಿದ್ದ. ಆದರೆ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಇನ್ನು ಕೋರ್ಟ್ ಹಾಲ್ ನಿಂದ ಹೊರಬರುವಾಗ ನಲಪಾಡ್ ನ ಬೆಂಬಲಿಗರು , ನಮ್ಮ ಲಿಸ್ಟ್ ನಲ್ಲಿ ಇವನೊಬ್ಬ ಸೇರಿಕೊಂಡಿದ್ದಾನೆ. ಹೊರಗೆ ಸಿಗಲಿ ನೋಡಿಕೊಳ್ಳೋಣ ಎಂದು ಮಾತನಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ ಪೋಲೀಸರು ಕೂಡಲೇ ನನಗೂ ಮತ್ತು ನಮ್ಮ ಕಿರಿಯ ವಕೀಲರಿಗೆ ರಕ್ಷಣೆ ನೀಡಿ ಹೊರ ಕರೆತಂದರು’ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಉತ್ತರ ವಿಭಾಗದ ಡಿಸಿಪಿ ಡಾ ಚೇತನ್ ಸಿಂಗ್ ರಾಥೋಡ್ ಗೆ ರಕ್ಷಣೆ ನೀಡುವಂತೆಮನವಿ ಮಾಡಿದ್ದರು.

ನಲಪಾಡ್ ಸಂಗಡಿಗರ ಮೇಲೆ ದೂರು..!

ನಲಪಾಡ್ ಬಂಧನಕ್ಕೆ ಒಳಗಾಗುತ್ತಿದ್ದಂತೆ ಆತನ ಬೆಂಬಲಿಗರಿಂದ ರಂಪಾಟ ಪ್ರಾರಂಭವಾಗಿದೆ. ನಲಪಾಡ್ ವಿರುದ್ದ ಕೋರ್ಟ್ ನಲ್ಲಿ ವಾದ ಮಂಡಿಸಿದ್ದ ಶ್ಯಾಮ್ ಸುಂದರ್ ರವರಿಗೆ ದಿನವಿಡೀ ನಲಪಾಡ್ ನ ಸಂಗಡಿಗರು ಬೆದರಿಕೆ ಒಡ್ಡಿರುವ ಹಿನ್ನೆಲೆಯಲ್ಲಿ ಅವರ ಮೇಲೂ ಶ್ಯಾಮ್ ಸುಂದರ್ , ಪೋಲಿಸ್ ಕಮಿಷನರ್ ಟಿ ಸುನಿಲ್ ಕುಮಾರ್ ದೂರು ನೀಡಿದ್ದಾರೆ. ಮಹಮ್ಮದ್ ನಲಪಾಡ್ ನ ಸ್ನೇಹಿತರು ಸಾಕಷ್ಟು ಕುಪಿತಗೊಂಡಿದ್ದಾರೆ. ಕೋರ್ಟ್ ಆವರಣದಲ್ಲೇ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ವಾದ ಮಂಡನೆ ಬಳಿಕ ಪದೇ ಪದೇ ಬೆದರಿಕೆ ಕರೆಗಳು ಬರುತ್ತಲೇ ಇದೆ. ನನಗೆ ಮತ್ತು ನನ್ನ ಕುಟುಂಬದವರಿಗೆ ರಕ್ಷಣೆ ಒದಗಿಸುವಂತೆ ಕಮಿಷನರ್ ಬಳಿ ದೂರು ನೀಡಿದ್ದಾರೆ.

 

ಜೈಲಿನೊಳಗೆಯೇ ಮಾರಾಮಾರಿ..!

ಸದ್ಯ ವಿಚಾರಣೆ ಮುಗಿಸಿ ೧೪ ದಿನಗಳ ಕಾಲ ಜೈಲುವಾಸ ಅನುಭವಿಸುತ್ತಿರುವ ನಲಪಾಡ್ ಜೈಲಿನ ಒಳಗಡೆಯೂ ರೌಡಿಸಂ ನಡೆಸುತ್ತಿದ್ದಾನೆ. ರೆಸ್ಟೋರೆಂಟ್ ನಲ್ಲಿ ನಲಪಾಡ್ ನಡೆಸಿದ ದಾಂಧಲೆಗೆ ಸಾತ್ ನೀಡಿದ ಸಂಗಡಿಗರನ್ನೂ ಜೈಲ್ ಗೆ ಕಳುಹಿಸಲಾಗಿದೆ. ಈ ವಿಚಾರವಾಗಿ ನಲಪಾಡ್ ನ ಸ್ನೇಹಿತ ಅಬ್ರಾಸ್ ನಲಪಾಡ್ ಗೆ ಪ್ರಶ್ನಿಸಿದ್ದಾನೆ. ‘ನೀನು ಮಾಡಿದ ತಪ್ಪಿಗೆ ಸುಮ್ಮನೆ ನಾವೂ ಶಿಕ್ಷೆ ಅನುಭವಿಸುವಂತಾಗಿದೆ’ ಎಂದು ಕೇಳಿದ್ದಕ್ಕೆ ನಲಪಾಡ್ ತನ್ನ ಸ್ನೇಹಿತ ಅಬ್ರಾಸ್ ನ ವಿರುದ್ಧ ಕೋಪಗೊಂಡು ಹಲ್ಲೆಗೆ ಮುಂದಾಗಿದ್ದಾರೆ.

ಮಾಡಿದ ತಪ್ಪಿಗೆ ಚೂರು ಪಶ್ಚಾತ್ತಾಪ ಪಡದ ಮಹಮ್ಮದ್ ನಲಪಾಡ್ ತನ್ನ ತಂದೆಯ ಅಧಿಕಾರದ ಮದದಿಂದಲೇ ಕಾನೂನಿನ ಮುಂದೆಯೂ ಅಹಂಕಾರದಿಂದಲೇ ವರ್ತಿಸುತ್ತಿದ್ದಾನೆ. ತಂದೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ನಲಪಾಡ್ ನ ಅಧಿಕಾರವನ್ನು ಬಳಸಿಕೊಂಡು ದಾಂಧಲೆ ನಡೆಸುತ್ತಿದ್ದ ಮಗ ಮಹಮ್ಮದ್ ನಲಪಾಡ್ ಸದ್ಯ ಕಂಬಿ ಎಣಿಸುತ್ತಿದ್ದರೂ ತನ್ನ ಅಲಂಕಾರವನ್ನು ಮಾತ್ರ ಕಮ್ಮಿ ಮಾಡಿಕೊಂಡಿಲ್ಲ..!

–ಅರ್ಜುನ್

 

Tags

Related Articles

Close