ಪ್ರಚಲಿತ

ಅಪರಾಧ ಕೃತ್ಯಗಳಲ್ಲಿ ಮುಸಲ್ಮಾನರದ್ದೇ ಮೇಲುಗೈ: ಬದ್ರುದ್ದೀನ್ ಅಜ್ಮಲ್

ದೇಶದಲ್ಲಿ ನಡೆಯುವ ಅಪರಾಧಿ ಕೃತ್ಯಗಳಲ್ಲಿ ಮುಸಲ್ಮಾನರ ಪಾಲು ಹೆಚ್ಚಾಗುತ್ತಿದೆ ಎಂದು ಅಸ್ಸಾಂನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನ ನಾಯಕ ಬದ್ರುದ್ದೀನ್ ಅಜ್ಮಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅತ್ಯಾಚಾರ, ದರೋಡೆ, ಡಕಾಯಿತಿ, ಲೂಟಿ ಸೇರಿದಂತೆ ಇನ್ನೂ ಹಲವಾರು ರೀತಿಯ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಹಾಗೆ ಭಾರತದಲ್ಲಿ ನಾವು ಮುಸಲ್ಮಾನರೇ ನಂಬರ್ ಒನ್ ಆಗಿದ್ದೇವೆ ಎಂದು ಹೇಳಿದ್ದಾರೆ. ಕಾರಾಗೃಹಕ್ಕೆ ಹೋಗುವುದರಲ್ಲಿಯೂ ‌ನಮ್ಮವರ ಪಾಲೇ ಹೆಚ್ಚು ಎಂದು ತಿಳಿಸಿದ್ದಾರೆ. ಇವರ ಈ ಹೇಳಿಕೆಗೆ ಭಾರೀ ಪ್ರಮಾಣದಲ್ಲಿ ವಿರೋಧ ವ್ಯಕ್ತವಾದರೂ, ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ತಮ್ಮ ಮಾತಿನ ಮೇಲೆ ನಿಲ್ಲುವ ಮೂಲಕ, ಇಸ್ಲಾಂ ಸಮುದಾಯದ ಕ್ರೂರತ್ವವನ್ನು ತಿಳಿಸಿದ್ದಾರೆ.

ಇವರ ಹೇಳಿಕೆಗೆ ವಿರೋಧ ವ್ಯಕ್ತವಾದ ಬಳಿಕ ತಮ್ಮ ಹೇಳಿಕೆಗೆ ಸಂಬಂಧಿಸಿದ ಹಾಗೆ ಸ್ಪಷ್ಟನೆ ನೀಡಿರುವ ಅವರು, ನಾನು ಯಾವುದೇ ತಪ್ಪಾದ ಹೇಳಿಕೆ ನೀಡಿಲ್ಲ. ಮುಸಲ್ಮಾನರಲ್ಲಿರುವ ಶಿಕ್ಷಣದ ಕೊರತೆಯೇ ಅವರನ್ನು ಹೆಚ್ಚು ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಗಳಾಗುವ ಹಾಗೆ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಜಗತ್ತಿನಾದ್ಯಂತ ಮುಸಲ್ಮಾನರಲ್ಲಿ ಶಿಕ್ಷಣದ ಕೊರತೆಯನ್ನು ನಾನು ಮನಗಂಡಿದ್ದೇನೆ. ಮುಸಲ್ಮಾನ ಮಕ್ಕಳು ಓದುತ್ತಿಲ್ಲ. ಉನ್ನತ ಶಿಕ್ಷಣ ಪಡೆಯುತ್ತಿಲ್ಲ. ಕನಿಷ್ಟ ಪಕ್ಷ ಮೆಟ್ರಿಕ್ಯುಲೇಶನ್ ಸಹ ಸಂಪೂರ್ಣ ಮಾಡಲು ನಮ್ಮ ಸಮುದಾಯದವರಿಂದ ಸಾಧ್ಯವಾಗುತ್ತಿಲ್ಲ. ಇದನ್ನು ನಾನು ಬೇಸರದಿಂದಲೇ ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಹಾಗೆಯೇ ನಮ್ಮ ಹುಡುಗರು ಮಹಿಳೆಯರ ಜೊತೆ ದುರುದ್ದೇಶದಿಂದ ವರ್ತಿಸಬಾರದು ಎಂದು ಹೇಳಿದ್ದಾರೆ.

ಇಸ್ಲಾಂ ಮತದಲ್ಲಿ ‌ಜನಿಸಿದ ನಾವು ಮಹಿಳೆಯರನ್ನು ನೋಡಿದಾಗ ಲೈಂಗಿಕ ಭಾವನೆ ಹೊಂದಬಾರದು. ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಜೊತೆಗೆ ಗೌರವದಿಂದ ವರ್ತಿಸಬೇಕು. ನಮ್ಮ ಕುಟುಂಬದಲ್ಲಿಯೂ ಹೆಣ್ಣು ಮಕ್ಕಳಿದ್ದಾರೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಹಾಗಾದಾಗ ನಮ್ಮಲ್ಲಿ ಮಹಿಳೆಯರನ್ನು ಕಂಡಾಗ ಕೆಟ್ಟ ಯೋಜನೆ ಬಾರದು ಎಂದು ಹೇಳಿದ್ದಾರೆ.

ಮುಸಲ್ಮಾನರ ಅಭಿವೃದ್ಧಿಯ ಕೊರತೆಗೆ ಕಡಿಮೆ ಶಿಕ್ಷಣವೇ ಕಾರಣವಾಗಿದೆ. ನಾವು ವಿದ್ಯಾವಂತರಲ್ಲ. ಸಾಕ್ಷರತೆಯೇ ನಮ್ಮ ದೊಡ್ಡ ಸಮಸ್ಯೆಯಾಗಿದೆ. ನಮ್ಮ ಯುವ ಜನರು ಶಿಕ್ಷಣ ಹೆಚ್ಚೆಚ್ಚು ಪಡೆಯುವಂತಾಗಬೇಕು ಎಂದವರು ಹೇಳಿದ್ದಾರೆ. ಶಿಕ್ಷಣ ಪಡೆದಲ್ಲಿ ಮಾತ್ರ ಎಲ್ಲಾ ಅನಿಷ್ಟಗಳಿಂದ ಮುಕ್ತಿ ಸಾಧ್ಯ ಎಂದಿದ್ದಾರೆ. ಎಲ್ಲಾ ಧರ್ಮದವರು ಸೂರ್ಯ ಚಂದ್ರರ ಬಳಿ ಹೋಗಲು ಉತ್ಸಾಹ ತೋರುತ್ತಿದ್ದರೆ, ನಮ್ಮವರು ಜೈಲಿಗೆ ಹೋಗಲು ಉತ್ಸಾಹ ತೋರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Tags

Related Articles

Close