ಪ್ರಚಲಿತ

ಕಾಂಗ್ರೆಸ್ ವಿರುದ್ದವೇ ಹೈಕಮಾಂಡ್‌ಗೆ ದೂರು ನೀಡಿದ ಕೈ ನಾಯಕ..! ಸೋಲಿನ ಬೆನ್ನಲ್ಲೆ ಕಾಂಗ್ರೆಸ್‌ಗೆ ಮತ್ತೊಂದು ಹೊಡೆತ..!

ರಾಜ್ಯ ರಾಜಕಾರಣ ದಿನೇ ದಿನೇ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇಡೀ ರಾಜ್ಯವೇ ಕಣ್ಣು ಬಿಟ್ಟು ನೋಡುವಂತಾಗಿದೆ. ಒಂದೆಡೆ ಭಾರೀ ಸೋಲು ಅನುಭವಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಇತ್ತ ಭಾರತೀಯ ಜನತಾ ಪಕ್ಷ ಒಬ್ಬಂಟಿಯಾಗಿ ಗದ್ದುಗೆ ಏರಿದೆ. ಬಿಎಸ್ ಯಡಿಯೂರಪ್ಪನವರು ಈಗಾಗಲೇ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದು, ಇತ್ತ ಕಾಂಗ್ರೆಸ್‌ ಮತ್ತು ಜೆಡಿಎಸ್ ಬಿಜೆಪಿಯನ್ನು ವಿರೋಧಿಸಿ ತಮ್ಮ ಬಳಿ ಇರುವ ಶಾಸಕರನ್ನು ಕಾಪಾಡಲು ಪ್ರಯತ್ನಿಸುತ್ತಿದೆ. ಈಗಾಗಲೇ ಕಾಂಗ್ರೆಸ್‌ನ್ನು ಧಿಕ್ಕರಿಸಿ ಹೊರ ನಡೆದಿರುವ ಕೆಲ ಶಾಸಕರು ಸದ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಸಂಪರ್ಕ ಸಿಗದೆ ನಾಪತ್ತೆಯಾಗಿದ್ದಾರೆ. ಮೊದಲೇ ತನ್ನ ಅಸ್ತಿತ್ವ ಕಳೆದುಕೊಂಡು ಪರದಾಡುತ್ತಿರುವ ಕಾಂಗ್ರೆಸ್‌ಗೆ ಹೊಡೆತಗಳ ಮೇಲೆ ಹೊಡೆತ ಬೀಳುತ್ತಿದೆ.!

ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದೇ ಕಾಂಗ್ರೆಸ್..!

ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವತಃ ತಮ್ಮ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿದ್ದಾರೆ ಎಂದು ಇದೀಗ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಮಾಜಿ ಶಾಸಕ ಆರೋಪಿಸಿದ್ದಾರೆ. ಹುನಗುಂದ ಕ್ಷೇತ್ರದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಇಂದು ನಡೆಸಿದ ಆತ್ಮಾವಲೋಕನ ಸಭೆಯಲ್ಲಿ ಕಣ್ಣೀರಿಡುತ್ತಾ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.


ಕಾಂಗ್ರೆಸ್ ಕೇವಲ ನಾಟಕೀಯ ರಾಜಕೀಯ ನಡೆಸುತ್ತಿದೆ, ಸ್ವತಃ ಪಕ್ಷದ ಅಭ್ಯರ್ಥಿಗಳನ್ನೇ ಸೋಲಿಸಲು ಪಕ್ಷದ ಮುಖಂಡರು ಪ್ರಯತ್ನಿಸಿದ್ದರು. ಇದರಿಂದಾಗಿಯೇ ನಾನು ಸೋಲನುಭವಿಸುವಂತಾಗಿದೆ. ಇದರ ವಿರುದ್ಧ ನಾನು ಹೈಕಮಾಂಡ್‌ಗೆ ದೂರು ನೀಡುತ್ತೇನೆ. ಪಕ್ಷದ ಮುಖಂಡರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸುತ್ತೇನೆ ಎಂದು ನಡೆದ ಸಭೆಯಲ್ಲಿ ಹೇಳಿಕೊಂಡಿದ್ದಾರೆ..!

ನಾನೇ ಮುಂದಿನ ಮುಖ್ಯಮಂತ್ರಿ..!

ಕಾಂಗ್ರೆಸ್ ನಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಭಾರೀ ಮುಖಭಂಗ ಅನುಭವಿಸಿರುವ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಇಂದು ತಮ್ಮ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರನ್ನು ಸೇರಿಸಿಕೊಂಡು ಆತ್ಮಾವಲೋಕನ ಎಂಬ ಸಭೆ ಏರ್ಪಡಿಸಿದ್ದರು. ಇಲ್ಲಿ ಮಾತನಾಡಿದ ಕೈ ನಾಯಕ ನನ್ನ ಸೋಲಿಗೆ ಕಾಂಗ್ರೆಸ್ ನೇರ ಕಾರಣ ಎಂದು ಆರೋಪಿಸಿ ಕಣ್ಣೀರಿಟ್ಟರು. ಕಾಂಗ್ರೆಸ್ ನನ್ನನ್ನು ಸೋಲಿಸಿದೆ,ಆದರೆ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳಿಕೊಂಡಿದ್ದಾರೆ.
ಇದೇ ವೇಳೆ ಮಾತನಾಡಿದ ವೀಣಾ ಅವರು ಭಾವುಕರಾಗಿ ಕಣ್ಣೀರಿಟ್ಟರು.ಕಾಂಗ್ರೆಸ್ ಕೇವಲ ಅಧಿಕಾರದ ಆಸೆಗಾಗಿ ನಮ್ಮನ್ನು ಬಳಸಿಕೊಂಡಿದೆ, ಸ್ವತಃ ಪಕ್ಷದ ಅಭ್ಯರ್ಥಿಯನ್ನೇ ಸೋಲಿಸಿದ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಬಾರದು, ಇದರ ವಿರುದ್ಧ ನಾವು ರಾಜ್ಯದ ಪಕ್ಷದ ಹಿರಿಯರಿಗೆ ಮತ್ತು ಹೈಕಮಾಂಡ್ ಗೆ ನೇರವಾಗಿ ದೂರು ನೀಡುತ್ತೇವೆ ಎಂದು ಹೇಳಿಕೊಂಡಿದ್ದಾರೆ..!

ಒಂದೆಡೆ ಕಾಂಗ್ರೆಸ್ ಅಧಿಕಾರಕ್ಕಾಗಿ ಪರದಾಡುತ್ತಿದ್ದರೆ, ಇತ್ತ ಸ್ವತಃ ತಮ್ಮ ಪಕ್ಷದ ನಾಯಕರೇ ತಿರುಗಿ ಬಿದ್ದಿದ್ದು , ಕಾಂಗ್ರೆಸ್‌ಗೆ ಏನೂ ಮಾಡಲಾಗದ ಸ್ಥಿತಿ ಬಂದೊದಗಿದೆ. ತಮ್ಮ ಶಾಸಕರನ್ನು ಉಳಿಸಿಕೊಳ್ಳಲು ಪರದಾಡುತ್ತಿರುವ ಕಾಂಗ್ರೆಸ್ ಗೆ ಕೈ ನಾಯಕನೇ ದೂರು ನೀಡಲು ಹೊರಟಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ..!

–ಅರ್ಜುನ್

Tags

Related Articles

Close