ಪ್ರಚಲಿತ

ಧರ್ಮ ರಾಜಕಾರಣ ಮಾಡುತ್ತಿರುವ ದೆಹಲಿ ಬಿಷಪ್‍ಗೆ ತಿರುಗೇಟು ನೀಡಿದ ಬಿಜೆಪಿ ರಾಷ್ಟ್ರೀಯಾಧ್ಯಕ್ಷ!! ಧರ್ಮ ಆಧಾರದಲ್ಲಿ ಧೃವೀಕರಣ ಒಳ್ಳೆಯದಲ್ಲ ಎಂದ ಅಮಿತ್ ಶಾ!!

ಕೇವಲ ನಾಲ್ಕು ವರ್ಷಗಳ ಆಡಳಿತ ನಡೆಸಿ ಇಡೀ ದೇಶವನ್ನು ಅಭಿವೃದ್ಧಿ ಪಥದತ್ತ ನಡೆಸಿದ್ದು ಈ ಮೋದೀಜೀ!! ಆದರೆ ಅಷ್ಟು ವರ್ಷಗಳಲ್ಲಿ ಕಾಂಗ್ರೆಸ್ಸಿನವರು ಆಡಳಿತ ನಡೆಸಿ ತಮ್ಮ ತಮ್ಮ ಅಭಿವೃದ್ಧಿಯನ್ನು ಮಾಡಿ, ಇದ್ದ ಬದ್ದ ಹಗರಣಗಳನ್ನು ಮಾಡಿ ತಮ್ಮ ಜೇಬು ತುಂಬಿಸಿಕೊಂಡಿದ್ದಲ್ಲದೆ ದೇಶ ಅಭಿವೃದ್ಧಿಯಂತೂ ಮಾಡಿಲ್ಲ!! ಆದರೆ ಇಷ್ಟೆಲ್ಲಾ ದೇಶವನ್ನು ಅಭಿವೃದ್ಧಿ ಮಾಡಿದ  ಪ್ರಧಾನಿ ನರೇಂದ್ರ ಮೋದೀಜೀಯವರನ್ನೇ ಸೋಲಿಸಬೇಕು ಎಂದು ಪಣತೊಡುವವರಿಗೆ ಕಾಂಗ್ರೆಸ್ಸಿನವರ ದುರ್ಬುದ್ಧಿ ಅರ್ಥವಾಗದಿರುವುದು ವಿಪಯಾಸವೇ ಸರಿ!! ಈ ಭಾರತ ದೇಶವೂ ಹಿಂದೂಗಳದ್ದಾದರೂ ಸಹ ಯಾವ ಒಬ್ಬ  ಹಿಂದೂವು ಸಹ ಯಾವುದೇ ಧರ್ಮವನ್ನು ಎಂದೂ ಧೂಷಿಸಲ್ಲ!! ಎಲ್ಲರನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆ!! ಆದರೆ  ಲೋಕಸಭೆ ಚುನಾವಣೆಗೆ ಇನ್ನು ವರ್ಷ ಬಾಕಿ ಇರುವಂತೆಯೇ `ವಿಶೇಷ ಪ್ರಾರ್ಥನಾ ಅಭಿಯಾನ’ ನಡೆಸುವಂತೆ ಎಲ್ಲ ಚರ್ಚ್‍ಗಳಿಗೆ ಸೂಚಿಸಿ ದೆಹಲಿಯ ಆರ್ಚ್ ಬಿಷಪ್ ಅನಿಲ್ ಕ್ಯೂಟೋ ಕಳುಹಿಸಿದ ಪತ್ರ ಕಳೆದೆರಡು ದಿನಗಳಿಂದ ಭಾರಿ ವಿವಾದಕ್ಕೀಡಾಗಿದೆ.

Related image

ಪತ್ರದಲ್ಲಿ ಇರುವುದೇನು?

ದೆಹಲಿಯ ಎಲ್ಲ ಚರ್ಚ್ ಮುಖ್ಯಸ್ಥರನ್ನು ಉದ್ದೇಶಿಸಿ ಆರ್ಚ್ ಬಿಷಪ್ ಅನಿಲ್ ಕೌಟೋ ಮೇ 8ರಂದು ಪತ್ರ ಬರೆದಿದ್ದು, `ದೇಶದಲ್ಲಿ ಪ್ರಕ್ಷುಬ್ಧ ರಾಜಕೀಯ ಸನ್ನಿವೇಶವಿದ್ದು, ನಮ್ಮ ಸಂವಿಧಾನದಲ್ಲಿರುವ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಮತ್ತು ಜಾತ್ಯತೀತ ನಿಲುವುಗಳಿಗೆ ಧಕ್ಕೆಯಾಗುತ್ತಿದೆ. 2019ರ ನಂತರ ಹೊಸ ಸರ್ಕಾರ ರಚನೆಯಾಗಲಿದೆ. 2019ರಲ್ಲಿ ಮೋದಿ ಸರಕಾರ ಉರುಳಿಸಿ ಹೊಸ ಸರಕಾರ ರಚಿಸಲು ಪ್ರತಿ ಶುಕ್ರವಾರದಂದು ಚರ್ಚಿನಲ್ಲಿ ಪ್ರಾರ್ಥಿಸಲು ಭಾರತದ ಕ್ಯಾಥೋಲಿಕ್ಕರಿಗೆ ಪತ್ರವೊಂದನ್ನು ಬರೆದಿದ್ದಾರೆ.

Image result for arch bishap anil

 

ಹಾಗಾಗಿ ದೇಶಕ್ಕೋಸ್ಕರ ಎಲ್ಲ ಚರ್ಚ್‍ಗಳಲ್ಲೂ ಭಾನುವಾರ ವಿಶೇಷ ಪ್ರಾರ್ಥನಾ ಅಭಿಯಾನ ಆರಂಭಿಸಬೇಕು. ಶುಕ್ರವಾರ ಒಂದು ದಿನ ಉಪವಾಸ ಆಚರಿಸಬೇಕು. ಪತ್ರದ ಜತೆಗೆ ಕಳುಹಿಸಿದ ಸಂದೇಶವನ್ನು ಭಾನುವಾರದ ಪ್ರಾರ್ಥನೆ ನಂತರದಲ್ಲಿ ಎಲ್ಲರಿಗೂ ಕೇಳಿಸುವಂತೆ ಪ್ರತಿವಾರವೂ ಓದಬೇಕು. ಈ ಅಭಿಯಾನ ಮೇ 13ರಿಂದಲೇ ಆರಂಭವಾಗಲಿ ಎಂದು ತಿಳಿಸಿದ್ದಾರೆ. ದೆಹಲಿ ಕ್ರೈಸ್ತ ಧರ್ಮ ಪ್ರಾಂತ್ಯದ ಆರ್ಚ್ ಬಿಷಪ್ ಅನಿಲ್ ಕೌಟೊ, ದೆಹಲಿಯ ಧರ್ಮ ಪ್ರಾಂತ್ಯದಡಿ ಬರುವ ಎಲ್ಲಾ ಚರ್ಚುಗಳಲ್ಲಿ ಪ್ರತಿ ಶುಕ್ರವಾರದಂದು ಪ್ರಾರ್ಥನೆ ಮಾಡಬೇಕು ಮತ್ತು ಉಪವಾಸ ಕೈಗೊಳ್ಳಬೇಕು ಎಂದೂ ಈ ಪತ್ರದಲ್ಲಿ ಬರೆಯಲಾಗಿದೆ.

ಖಡಕ್ ಉತ್ತರ ಕೊಟ್ಟ ಅಮಿತ್ ಶಾ!!

ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ ದೆಹಲಿಯ ಚರ್ಚ್ ಮುಖ್ಯಸ್ಥರಿಗೆ ಸರಿಯಾಗಿಯೇ ಛಾಟಿಯೇಟು ನೀಡಿದ್ದಾರೆ. ಯಾವುದೇ ಧರ್ಮ ಹಾಗೂ ಧರ್ಮದ ಪ್ರಚಾರಕರು ಅಥವಾ ಮುಖ್ಯಸ್ಥರು ರಾಜಕೀಯದಿಂದ ದೂರ ಇರಬೇಕು. ಆದರೆ ದೆಹಲಿಯ ಚರ್ಚ್ ನ ಆರ್ಚ್ ಬಿಷಪ್ ಕೇಂದ್ರ ಸರ್ಕಾರದ ವಿರುದ್ದ ಹೀಗೆ ಅಭಿಯಾನ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಖಡಕ್ ಆಗೇ ಹೇಳಿದ್ದಾರೆ!!. ನಾವು ದೇಶದ ಎಲ್ಲ ಸಮುದಾಯಗಳನ್ನು, ಜಾತಿ-ಜನಾಂಗದವರನ್ನು ಒಂದೇ ರೀತಿಯಾಗಿ ಕಾಣುತ್ತೇವೆ ಹಾಗೂ ಗೌರವ ಭಾವನೆಯನ್ನು ಹೊಂದಿದ್ದೇವೆ. ಆದರೆ ಯಾರೂ ಧರ್ಮದ ಆಧಾರದ ಮೇಲೆ ರಾಜಕೀಯ ಪಕ್ಷವನ್ನು ಬೆಂಬಲಿಸುವುದಾಗಲಿ, ಅವರ ಪರ ವಹಿಸಕೊಂಡು ಮಾತನಾಡುವುದಾಗಲಿ ಮಾಡಬಾರದು. ನಾವು ಇದರ ವಿರುದ್ಧ ಇದ್ದೇವೆ ಎಂದು ಹೇಳಿದ್ದಾರೆ.

Related image

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಕ್ರೈಸ್ತ ಧರ್ಮೀಯರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಿದ್ದಾರೆ. ಎಲ್ಲ ಧರ್ಮದವರನ್ನು ಮೋದಿ ಇಷ್ಟಪಡುತ್ತಾರೆ. ಆದರೆ ಯಾವ ದೃಷ್ಟಿಯಿಂದ ಚರ್ಚ್ ಮುಖ್ಯಸ್ಥರು ಹೀಗೆ ಪ್ರಕಟಣೆ ಹೊರಡಿಸಿದ್ದಾರೋ ಗೊತ್ತಿಲ್ಲ. ಒಂದು ಧರ್ಮದ ಮುಖಂಡರು ಹೀಗೆ ರಾಜಕೀಯದಲ್ಲಿ ಮೂಗು ತೂರಿಸುವುದು ಸರಿಯಲ್ಲ ಎಂದು ಅಮಿತ್ ಶಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ರಾಜನಾಥ್ ಸಿಂಗ್ ಗರಂ!!

ಈ ರೀತಿ ಮೋದಿ ಸರಕಾರವನ್ನು ಮುಂದಿನ ಚುನಾವಣೆಯಲ್ಲಿ ಅಧಿಕಾರದಿಂದ ಕೆಳಗಿಸಲು ವಿಶೇಷ ಪ್ರಾರ್ಥನಾ ಅಭಿಯಾನ’ ನಡೆಸುವಂತೆ ಎಲ್ಲ ಚರ್ಚ್‍ಗಳಿಗೆ ಸೂಚಿಸಿ ದೆಹಲಿಯ ಆರ್ಚ್ ಬಿಷಪ್ ಅನಿಲ್ ಕ್ಯೂಟೋ ಕಳುಹಿಸಿದ ಪತ್ರಕ್ಕೆ ರಾಜನಾಥ್ ಸಿಂಗ್ ಕೂಡಾ ಕಿಡಿಕಾರಿದ್ದಾರೆ!! ಅಲ್ಪ ಸಂಖ್ಯಾತರು ಸುರಕ್ಷಿತವಾಗಿರುವ ದೇಶಗಳ ಪೈಕಿ ಭಾರತವೂ ಒಂದು!! ಇಲ್ಲಿ ಜಾತಿ ಧರ್ಮದ ಆಧಾರದಲ್ಲಿ ಯಾವುದೇ ತಾರತಮ್ಯವನ್ನು ಮಾಡುವುದಿಲ್ಲ ಆದರೆ ದೇಶಕ್ಕಾಗಿ ಇಂತಹ ಒಳ್ಳೆಯ ಕೆಲಸ ಮಾಡಿದವರಿಗೆ ಈ ರೀತಿಯಾಗಿ ದೇವರಲ್ಲಿ ಪ್ರಾರ್ಥಿಸುವುದು ನಿಜವಾಗಿಯೂ ಒಳ್ಳೆಯದಲ್ಲ ಎಂಬ ಮಾತನ್ನು ಹೇಳಿದ್ದಾರೆ!!

Image result for rajnath singh

ಹೊಸ ಸರ್ಕಾರಕ್ಕಾಗಿ ಪ್ರಾರ್ಥನಾ ಅಭಿಯಾನ ನಡೆಸಲು ಕರೆ ನೀಡುವ ಮೂಲಕ ಭಾರತದ ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ಮೇಲೆ ಚರ್ಚ್‍ಗಳು ನೇರ ಆಕ್ರಮಣ ಮಾಡುತ್ತಿವೆ. ಬಿಷಪ್‍ಗಳ ಬದ್ಧತೆ ಭಾರತದ ಮೇಲಿಲ್ಲ, ಬದಲಾಗಿ ಪೋಪ್‍ರ ಮೇಲಿದೆ. ಚರ್ಚ್ ಬೆಂಬಲಿತ ಎನ್‍ಜಿಒಗಳ ಮೇಲೆ ಮೋದಿ ಸರ್ಕಾರ ನಿಗಾ ವಹಿಸಿದ್ದಕ್ಕೇ ಈ ಆಕ್ರಮಣ ಎಂದು ಆರೆಸ್ಸೆಸ್ ಸಿದ್ಧಾಂತವಾದಿ ರಾಕೇಶ್ ಸಿನ್ಹಾ ಔಟ್‍ಲುಕ್ ಸಂಸ್ಥೆ ಜತೆ ಮಾತನಾಡುತ್ತ ವ್ಯಾಖ್ಯಾನಿಸಿದ್ದಾರೆ.

ಮೋದೀಜೀಯನ್ನು ಸೋಲಿಸಲು ಇಷ್ಟೆಲ್ಲಾ ಹುನ್ನಾರ ನಡೆಸುತ್ತಿದ್ದಾರೆ ಎಂದರೆ ಮೋದೀಜಿಯ ಪವರ್ ಎಷ್ಟಿದೆ ಎಂದು ಈಗಾಗಲೇ ತಿಳಿದಿರಬಹುದು!! ಮೋದೀಜೀಯ ಬೆಂಬಲಕ್ಕೆ ಯಾರೂ ಯಾವ ರೀತಿ ಪ್ರಾರ್ಥಿಸಿದರೂ ಅವರ ಜೊತೆ ಹಿಂದೂ ಧರ್ಮ ಅವರಿಗೆ ಸಾಥ್ ನೀಡುತ್ತೆ ಎನ್ನುವುದನ್ನು ಯಾರೂ ಮರೆಯಬೇಡಿ!! ಜೈ ಮೋದೀಜೀ!!

source: indianexpress.com
ಪವಿತ್ರ

 

Tags

Related Articles

Close