ಪ್ರಚಲಿತ

ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಪಕ್ಷ ದಾಖಲೆ ಬರೆದಿದೆ: ಪ್ರಧಾನಿ ಮೋದಿ

ಕಾಂಗ್ರೆಸ್ ದೇಶಕ್ಕೆ ಅಂಟಿದ ಮಾರಕ ರೋಗ ಎಂಬುದು ಎಲ್ಲರಿಗೂ ಗೊತ್ತು. ಕುಟುಂಬ ರಾಜಕಾರಣಕ್ಕಾಗಿ ಇಡೀ ದೇಶವನ್ನೇ ಲೂಟಿ ಹೊಡೆದು, ದೇಶವಾಸಿಗಳ ಕಣ್ಣಿಗೆ ಮಣ್ಣೆರಚಿ ಸ್ವ ಅಭಿವೃದ್ಧಿಯ ಆಶಯದ ಜೊತೆಗೆ ಉಸಿರಾಡುತ್ತಿರುವ ಪಕ್ಷ ಒಂದಿದೆ ಎಂದರೆ ಅದು ಕಾಂಗ್ರೆಸ್ ಎಂದು ಯಾವುದೇ ಸಂದೇಹವಿಲ್ಲದೆ ಕಣ್ಣು ಮುಚ್ಚಿ ಹೇಳಬಹುದು. ಅಂತಹ ಇತಿಹಾಸ ಕಾಂಗ್ರೆಸ್ ಪಕ್ಷಕ್ಕೆ ಇದೆ.

ಚತ್ತೀಸ್‍ಗಢದಲ್ಲಿ ನಡೆಯಲಿರುವ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ ಪ್ರಧಾನಿ ಮೋದಿ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಮತ್ತು ಅಭಿವೃದ್ಧಿ ಈ ಎರಡೂ ಜೊತೆಗಿರಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಕಾಂಗ್ರೆಸ್ ಪಕ್ಷದ ನಾಯಕರು, ಶಾಸಕರು, ಸಚಿವರು ಸ್ವ ಲಾಭದ ದೃಷ್ಟಿಯಿಂದ ಸ್ವಾರ್ಥಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ದೇಶವನ್ನು, ದೇಶದ ಜನರನ್ನು ರಕ್ಷಣೆ ಮಾಡುವುದು, ಹಿಂದುಳಿದ ವರ್ಗಗಳ ಜನರ ಹಕ್ಕುಗಳನ್ನು ರಕ್ಷಣೆ ಮಾಡುವುದು ಮೊದಲಾದ ಜನಾಭಿವೃದ್ಧಿ ಕೆಲಸಗಳನ್ನು ಬಿಜೆಪಿ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಚತ್ತೀಸ್ಘಡದಲ್ಲಿ ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರದ ಸೋಲುಗಳನ್ನು ಅಲ್ಲಿನ ಜನರು ಕಂಡಿದ್ದಾರೆ. ಇಲ್ಲಿನ ಐದು ವರ್ಷಗಳ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ನಾಯಕರು ಮತ್ತು ಅವರ ಕುಟುಂಬ ವರ್ಗ ಮಾತ್ರವೇ ಅಭಿವೃದ್ಧಿ ಕಂಡಿರುವುದಾಗಿದೆ. ಅವರ ಆಸ್ತಿ, ಬಂಗಲೆಗಳ ವ್ಯಾಪ್ತಿ ದೊಡ್ಡದಾಗಿದೆ ಎಂದು ಪ್ರಧಾನಿ ತಿಳಿಸಿದರು.

ಕಾಂಗ್ರೆಸ್ ಬಡವರಿಗಾಗಿ ಏನು ನೀಡಿದೆ?, ದಲಿತರು, ಹಿಂದುಳಿದ ವರ್ಗ, ಬುಡಕಟ್ಟು ಜನರಿಗೆ ಏನು ನೀಡಿದೆ? ಎಂದು ಆಲೋಚಿಸಬೇಕಿದೆ. ಕಾಂಗ್ರೆಸ್ ಆಡಳಿತದಲ್ಲಿ ಸುಸಜ್ಜಿತ ರಸ್ತೆಗಳ ನಿರ್ಮಾಣವಾಗಿಲ್ಲ, ಶಾಲೆಗಳು ಮೂಲ ಸೌಕರ್ಯದ ಸಮಸ್ಯೆಯನ್ನು ಎದುರಿಸುತ್ತಿವೆ. ಆಸ್ಪತ್ರೆಗಳ ನಿರ್ವಹಣೆ ಸರಿಯಾಗಿಲ್ಲ. ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ವಿಚಾರದಲ್ಲಿ ದೊಡ್ಡ ದಾಖಲೆಯನ್ನೇ ನಿರ್ಮಾಣ ಮಾಡಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

ಚತ್ತೀಸ್‍ಗಢ ರಾಜ್ಯದ ಅಸ್ಮಿತೆಯನ್ನು ಬಲ ಪಡಿಸುವುದು ಬಿಜೆಪಿ ಪಕ್ಷದ ಮುಖ್ಯ ಉದ್ದೇಶ. ರಾಜ್ಯದ ಹಿಂದುಳಿದ ವರ್ಗಗಳ, ಬುಡಕಟ್ಟು ಜನರ ಹಕ್ಕುಗಳ ರಕ್ಷಣೆ ಬಿಜೆಪಿಯ ಉದ್ದೇಶ. ದೇಶದ ಪ್ರಮುಖ ರಾಜ್ಯಗಳ ಪಟ್ಟಿಗೆ ಚತ್ತೀಸ್‍ಗಢವನ್ನು ಸೇರ್ಪಡೆ ಮಾಡುವುದು ಸಹ ನಮ್ಮ ಪ್ರಮುಖ ಉದ್ದೇಶವಾಗಿದೆ. ಈಗಾಗಲೇ ಈ ಕೆಲಸವನ್ನು ಬಿಜೆಪಿ ಮಾಡಿದೆ. ಕಾಂಗ್ರೆಸ್ ಭ್ರಷ್ಟ ಪಕ್ಷ ವಾಗಿದ್ದು, ಅಭಿವೃದ್ಧಿ ಮತ್ತು ಕಾಂಗ್ರೆಸ್‌ ಅನ್ನು ಒಟ್ಟಿಗೆ ನೋಡಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

Tags

Related Articles

Close