ಪ್ರಚಲಿತ

ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ… ಪ್ರಧಾನಿ ಮೋದಿ ಏನಂದ್ರು ಗೊತ್ತಾ?

ದೇಶಕ್ಕೆ ಕಳೆದ ಹತ್ತು ವರ್ಷಗಳಲ್ಲಿ ಹಲವಾರು ಯೋಜನೆಗಳ ಮೂಲಕ ಅಭಿವೃದ್ಧಿ ಭಾಗ್ಯವನ್ನು ಕರುಣಿಸಿದ ಪ್ರಧಾನಿ ಮೋದಿ ಅವರು ವಿರೋಧಿಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ಅವರ ಸಾಧನೆಗಳನ್ನು ಮೆಚ್ಚಿ ದೇಶದ ಜನರು ಅವರಿಗೆ ಬಹುಪರಾಕ್ ಎನ್ನುವುದು ವಿಪಕ್ಷಗಳಿಗೆ ಹೊಟ್ಟೆನೋವಿನ ವಿಷಯವಾಗಿದೆ. ಆ ಬಳಿಕ ಕಾರಣದಿಂದಲೇ ವಿಪಕ್ಷಗಳು ಅವರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಸುಳ್ಳು ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ.

ಅಂತಹ ವಿರೋಧಿಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಗುಡುಗಿದ್ದಾರೆ. ಇಂದು ಕಾಂಗ್ರೆಸ್ ಪಕ್ಷ ಕೇಂದ್ರಾಡಳಿತದಲ್ಲಿ ಇದ್ದಿದ್ದರೆ ಮೊಬೈಲ್ ಬಿಲ್ 5000ಕ್ಕೂ ಹೆಚ್ಚು ಪಾವತಿ ಮಾಡಬೇಕಾಗಿತ್ತು. ಆದರೆ ಈಗ ಕೇವಲ 400 ರಿಂದ 500 ರೂ. ಗಳಲ್ಲಿ ಮೊಬೈಲ್ ಬಿಲ್ ರಿಚಾರ್ಜ್ ಮಾಡಿದರೆ ಸಾಕು, ತಿಂಗಳ ಅನ್‌ಲಿಮಿಟೆಡ್ ಕಾಲ್ ಮತ್ತು ಡೇಟಾ ಸೇವೆಯನ್ನು ಬಳಕೆ ಮಾಡಬಹುದು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ದೇಶವನ್ನು ಲೂಟಿ ಮಾಡುವ ಯೋಚನೆ ಹೊಂದಿತ್ತು. ಆದರೆ ನಮ್ಮ ಬಿಜೆಪಿ ಸರ್ಕಾರ ಅಭಿವೃದ್ಧಿಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶವನ್ನು ಹೊಂದಿದೆ. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಇದ್ದ ಸಂದರ್ಭದಲ್ಲಿ ತ್ರಿಪುರಾ ಸೇರಿದಂತೆ ಪೂರ್ವದ ಇನ್ನಿತರ ರಾಜ್ಯಗಳಲ್ಲಿ ಸರಿಯಾದ ಮೊಬೈಲ್ ಟವರ್ ಸಹ ಇರಲಿಲ್ಲ. ನಗರದ ಕೆಲವೇ ಕಡೆಗಳಲ್ಲಿ ಮೊಬೈಲ್ ಟವರ್ ವ್ಯವಸ್ಥೆ ಇತ್ತು. ಆದರೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ 5G ವ್ಯವಸ್ಥೆ ಅಭಿವೃದ್ಧಿ ಮಾಡುತ್ತಿದೆ. ಆ ಮೂಲಕ 400-500 ರೂ.ಗಳ ಒಳಗೆ ಅನ್‌ಲಿಮಿಟೆಡ್ ಕಾಲ್, ಅಂತರ್ಜಾಲ ವ್ಯವಸ್ಥೆಯನ್ನು ಜನರು ಅನುಭವಿಸಬಹುದಾಗಿದೆ‌. ಒಂದು ವೇಳೆ ಈ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಾರೆ ಮೊಬೈಲ್ ಬಿಲ್ ನಾಲ್ಕರಿಂದ ಐದು ಸಾವಿರ ರೂ. ಗಳ ವರೆಗೆ ಇರುತ್ತಿತ್ತು ಎಂದು ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಕ್ಷದ ಹಣೆಬರಹವನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷ ತನ್ನ ಅಧಿಕಾರಾವಧಿಯಲ್ಲಿ ಎಂದಿಗೂ ಸಹ ಈಶಾನ್ಯ ರಾಜ್ಯಗಳಿಗೆ ನ್ಯಾಯ ಒದಗಿಸಿ ಕೊಡುವ ಗೋಜಿಗೆ ಹೋಗಲಿಲ್ಲ. ಈ ಭಾಗದ ಸಾರ್ವಜನಿಕರ ಸಂಪತ್ತನ್ನು, ಭವಿಷ್ಯವನ್ನು ಕಮ್ಯೂನಿಸ್ಟ್ ಪಾರ್ಟಿ ಹಾಲು ಮಾಡಿತು. ಆದರೆ ಬಿಜೆಪಿ ಆಳ್ವಿಕೆಗೆ ಬಂದ ಬಳಿಕ ಪರಿಸ್ಥಿತಿ ಬದಲಾಗಿದೆ. ಇಲ್ಲಿನ ಅಭಿವೃದ್ಧಿಯ ಆಶಯವನ್ನು ಬಿಜೆಪಿ ನನಸು ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಇಂದು ಈಶಾನ್ಯ ರಾಜ್ಯಗಳು ಅಭಿವೃದ್ಧಿಯ ಕಡೆಗೆ ಹೆಜ್ಜೆ ಹಾಕುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಸದ್ಯ ಭಾರತ ಸರ್ಕಾರ ದೇಶದಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಈ ಸೌಲಭ್ಯವನ್ನು ತ್ರಿಪುರಾದ ಹೆಚ್ಚಿನ ಜನತೆ ಪಡೆದುಕೊಳ್ಳಲಿದ್ದಾರೆ. ತ್ರಿಪುರಾ ರಾಷ್ಟ್ರೀಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಲು ಮೂರು ಸಾವಿರ ಕೋಟಿ ರೂ. ಗಳಲ್ಲಿ ಕಾಮಗಾರಿಗಳು ನಡೆಯಲಿವೆ ಎಂಬ ಭರವಸೆಯನ್ನು ಅವರು ನೀಡಿದ್ದಾರೆ.

Tags

Related Articles

Close