ಪ್ರಚಲಿತ

ಪ್ರಧಾನಿ ಮೋದಿ ಅವರು ‘ಪಶ್ಚಾತ್ತಾಪ ಪಡಬೇಕಾದೀತು’ ಎಂದಿದ್ದೇಕೆ?

ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ದೇಶದೆಲ್ಲೆಡೆ ಸುದ್ದಿಯಾಗಿದ್ದ ಚುನಾವಣಾ ಬಾಂಡ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದಾರೆ.

ಚುನಾವಣಾ ಬಾಂಡ್ ರದ್ದು ಮಾಡಿದ್ದು, ಇದಕ್ಕಾಗಿ ಮುಂದೊಂದು ದಿನ ಎಲ್ಲರೂ ಪರಿತಪಿಸುತ್ತಾರೆ. ಕಪ್ಪು ಹಣದ ವಿರುದ್ಧ ಹೋರಾಟ ನಡೆಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣಾ ಬಾಂಡ್‌‌ಗಳನ್ನು ಬಳಕೆಗೆ ತಂದಿತ್ತು. ಚುನಾವಣಾ ಸಮಯದಲ್ಲಿ ಲೆಕ್ಕಕ್ಕೆ ಸಿಗದ ನಗದು ಅಥವಾ ಅಪರಾಧ ಚಟುವಟಿಕೆಗಳಿಂದ ಬಂದ ಹಣವನ್ನು ಪ್ರಚಾರ ಕಾರ್ಯಗಳಿಗೆ ಬಳಕೆ ಮಾಡದ ಹಾಗೆ ತಡೆಯಲು ಇದು ತಡೆಯುತ್ತಿತ್ತು. ಜೊತೆಗೆ ಪಕ್ಷಕ್ಕೆ ಬಂದ ಹಣದ ದಾಖಲೆಗಳನ್ನು ಸಹ ಈ ವ್ಯವಸ್ಥೆ ಒದಗಿಸುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಹಾಗೆ ಸುಳ್ಳು ಸುದ್ದಿ ಹರಡಿದ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಚುನಾವಣಾ ಸಮಯದಲ್ಲಿ ಅಕ್ರಮ ಕಪ್ಪು ಹಣಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ನಮ್ಮ ಸರ್ಕಾರ ಈ ವ್ಯವಸ್ಥೆಯನ್ನು ಪರಿಚಯಿಸಿರುವುದಾಗಿದೆ‌. ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ಎದುರಿಸಿದ ಬಳಿಕ ಚುನಾವಣಾ ಬಾಂಡ್‌ಗಳನ್ನು ಹದಿನಾರು ಕಂಪೆನಿಗಳು ಖರೀದಿ ಮಾಡಿವೆ. ಈ ಖರೀದಿಯಲ್ಲಿ ‌ಸುಮಾರು 63% ಗಳಷ್ಟು ಮೊತ್ತವು ಬಿಜೆಪಿಯ ಹೊರತಾಗಿ ಇತರ ಪಕ್ಷಗಳಿಗೆಯೇ ಹೋಗಿದೆ ಎಂದು ಅವರು ನುಡಿದಿದ್ದಾರೆ.

ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವ ಚುನಾವಣಾ ಬಾಂಡ್‌ಗೆ ಸಂಬಂಧಿಸಿದ ಹಾಗೆ ವಿರೋಧ ಪಕ್ಷಗಳು ಸುದ್ದಿ ಹರಡುತ್ತಿವೆ. ಆದರೆ ಪ್ರಾಮಾಣಿಕವಾಗಿ ಆಲೋಚಿಸಿದರೆ ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ರದ್ದಾಗಿರುವುದಕ್ಕೆ ಎಲ್ಲರೂ ಪಶ್ಚಾತ್ತಾಪ ಪಡಲೇಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಚುನಾವಣಾ ಬಾಂಡ್ ರದ್ದತಿಯು ಕಪ್ಪು ಹಣದ ಬಳಕೆಯನ್ನು ಪ್ರೋತ್ಸಾಹಿಸುವಂತಾಗಿದೆ. ಇದರಿಂದಾಗಿ ಚುನಾವಣಾ ಸಮಯದಲ್ಲಿ ಕಪ್ಪು ಹಣದ ಬಳಕೆ ನಡೆಯುತ್ತದೆ. ಇದನ್ನು ತಡೆಯುವುದಕ್ಕಾಗಿಯೇ ಈ ವ್ಯವಸ್ಥೆಯನ್ನು ನಾವು ಆರಂಭ ಮಾಡಿದ್ದೆವು. ಆದರೆ ಈಗ ಈ ವ್ಯವಸ್ಥೆ ರದ್ದಾಗಿದ್ದು, ಇದು ಕಾಳ ಧನ್ ಉಪಯೋಗಿಸುವವರಿಗೆ ಅನುಕೂಲ ಒದಗಿಸಿ ಕೊಟ್ಟಂತಾಗಿದೆ ಎನ್ನುವುದು ಸತ್ಯ.

Tags

Related Articles

Close