ಪ್ರಚಲಿತ

ಪ್ರಧಾನಿ ನರೇಂದ್ರ ಮೋದಿಯವರ ಉಜ್ವಲ ಯೋಜನೆಗೆ ಮತ್ತೊಂದು ಗರಿ!! ವಿಶ್ವ ಆರೋಗ್ಯ ಸಂಸ್ಥೆಯಿಂದ ಶ್ಲಾಘನೆ!!

ಪ್ರಧಾನಿ ನರೇಂದ್ರ ಮೋದಿಯವರು ಬಡವರ ಏಳಿಗೆಗಾಗಿ ಈಗಾಗಲೇ ಹತ್ತು ಹಲವಾರು ಯೋಜನೆಗಳನ್ನು ಹೊರತಂದಿದ್ದು, ಬಡ ಕುಟುಂಬದ ಮಹಿಳೆಯರಿಗಾಗಿ ಉಪಯುಕ್ತವಾಗಲಿ ಎಂದು `ಪ್ರಧಾನಮಂತ್ರಿ ಉಜ್ವಲ ಯೋಜನೆ’ಯನ್ನು ಜಾರಿ ಮಾಡುವುದರ ಮೂಲಕ ಕೋಟ್ಯಾಂತರ ಜನರಿಗೆ ಉಪಯೋಗಕಾರಿಯಾಗಿದ್ದಾರೆ!! ಈ ಯೋಜನೆಯಡಿ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತವಾಗಿ ಎಲ್.ಪಿ.ಜಿ ಸೌಲಭ್ಯ ಕಲ್ಪಿಸಲಾಗಿದ್ದು ಮುಂದಿನ 3 ವರ್ಷದ ಒಳಗೆ ಬಿಪಿಎಲ್ ಕುಟುಂಬದ 5 ಲಕ್ಷ ಮಹಿಳೆಯರಿಗೆ ಉಚಿತ ಗ್ಯಾಸ್ ಸೌಲಭ್ಯ ಒದಗಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.

ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ `ಪ್ರಧಾನಮಂತ್ರಿ ಉಜ್ವಲ’ ಯೋಜನೆ ಮಹಿಳೆಯರ ಪಾಲಿಗೆ ನಿಜಕ್ಕೂ ವರದಾನವಾಗಿದೆ. ಬಡ ಕುಟುಂಬದ ಮಹಿಳೆಯರಿಗೆ ಉಚಿತ ಅಡುಗೆ ಅನಿಲ (ಎಲ್‍ಪಿಜಿ) ಸಂಪರ್ಕ ಒದಗಿಸಲು 8,000 ಕೋಟಿ ರೂಪಾಯಿ ಯೋಜನೆಗೆ ಸಂಪುಟ ಅನುಮೋದನೆ ನೀಡಿ, ಹೊಗೆ ಗೂಡುಗಳಲ್ಲಿ ಬೇಯುತ್ತಿದ್ದ ಗ್ರಾಮೀಣ ಮಹಿಳೆಯರಿಗೆ ಕೊನೆಗೂ ಮುಕ್ತಿ ಸಿಕ್ಕಿದೆ!! ಇದೀಗ ಪ್ರಧಾನಿ ನರೇಂದ್ರ ಮೋದೀಜಿಯವರ ಉಜ್ವಲ ಯೋಜನೆಯನ್ನು ಹಾಡಿಹೊಗಳಿದ್ದಾರೆ!!

Related image

ಪ್ರಧಾನ ಮಂತ್ರಿ ಉಜ್ವಲ ಯೋಜಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಶ್ಲಾಘನೆ!!

ಗ್ರಾಮೀಣ ಭಾಗದ ಮಹಿಳೆಯರಿಗೆ ಹೊಗೆ ರಹಿತ ಅಡುಗೆ ಮನೆಯನ್ನು ಕಲ್ಪಿಸಿಕೊಡುವ ಮಹತ್ತರ ಉದ್ಧೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದ ಉಜ್ವಲ ಯೋಜನೆಯನ್ನು ವಿಶ್ವಸಂಸ್ಥೆ ತನ್ನ ವರದಿಯಲ್ಲಿ ಶ್ಲಾಘಿಸಿದೆ!! ದೇಶಗಳು ಒಂದು ತರನಾದ ವಾಯುಮಾಲಿನ್ಯವನ್ನು ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.. ಉದಾಹರಣೆಗೆ ಭಾರತದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಿಂದಾಗಿ ಬಡತನ ರೇಖೆಗಿಂತ ಕೆಳಗಿನ 32 ಮಿಲಿಯನ್ ಮಹಿಳೆಯರಿಗೆ ಎಲ್‍ಪಿಜಿ ದೊರೆತಿದ್ದು ಇದರಿಂದಾಗಿ ಅವರಿಗೆ ಶುದ್ಧ ಅಡುಗೆ ಮನೆ ದೊರೆತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ!!

ಉತ್ತರಪ್ರದೇಶದ ಬಲ್ಲಿಯ ಗ್ರಾಮದಲ್ಲಿ 2016ರ ಮೇ 1 ರಂದು ಮೋದಿಯವರು ಉಜ್ವಲ ಯೋಜನೆಗೆ ಚಾಲನೆಯನ್ನು ನೀಡಿದ್ದರು!! 2019ರ ವೇಳೆಗೆ ಈ ಯೋಜನೆಯಡಿ ದೇಶದ ಮೂಲೆ ಮೂಲೆಯ 5 ಕೋಟಿ ಜನರಿಗೆ ಉಚಿತ ಎಲ್‍ಪಿಜಿ ನೀಡುವ ಗುರಿಯನ್ನು ಇದು ಹೊಂದಿದೆ!!

ಉರುವಲು ಆಧಾರಿತ ಒಲೆಗಳು ಮಹಿಳೆಯರ ಆಯುಷ್ಯವನ್ನೇ ಮುಕ್ಕುತ್ತಿತ್ತು. ಅವರ ಜೀವನ ಮಟ್ಟವನ್ನೇ ಶಿಥಿಲಗೊಳಿಸುತ್ತಿತ್ತು. ಉಜ್ವಲ ಯೋಜನೆ ಎಲ್ಲೆಡೆ ಪರಿಣಾಮಕಾರಿಯಾಗಿ ಜಾರಿಯಾದರೆ ಇದೊಂದು ದೊಡ್ಡ ಆರೋಗ್ಯ ರಕ್ಷೆ ನೀಡುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಕೇವಲ ಹೆಣ್ಣು ಮಕ್ಕಳಷ್ಟೇ ಅಲ್ಲ; ಇಡೀ ಕುಟುಂಬದ ಜೀವನ ಮಟ್ಟ ಸುಧಾರಣೆಯಲ್ಲೂ ಗಣನೀಯ ಕೊಡುಗೆ ನೀಡಬಲ್ಲದು. ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ಸಿಲಿಂಡರ್ ಪೂರೈಕೆಯ ಉದ್ಯೋಗ ಕೂಡ ಉಂಟಾಗುತ್ತದೆ.

Image result for WHO pollution report praises PM Modi’s signature Ujjwala scheme

ಪ್ರಧಾನಮಂತ್ರಿ ನರೇಂದ್ರ ಮೋದಿಯವರ “ಪ್ರಧಾನಮಂತ್ರಿ ಉಜ್ವಲ ಯೋಜನೆ’ ಮೇ 1ರಂದು ದೇಶಾದ್ಯಂತ ಚಾಲನೆ ಪಡೆದಿದ್ದು, ಇದರನ್ವಯ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗುತ್ತದೆ. ಮೋದಿ ನೇತೃತ್ವದ ಬಿಜೆಪಿ ಸರಕಾರ ಹಲವು ಜನಪ್ರಿಯ ಯೋಜನೆ ಮೂಲಕ ವಿಶ್ವದ ಗಮನ ಸೆಳೆಯುತ್ತಿದೆಯಲ್ಲದೇ ಬಡವರಿಗಾಗಿ ಉಜ್ವಲ ಸಿಲಿಂಡರ್ ಹಂಚಿಕೆ, ಜನ್‍ಧನ್‍ಯೋಜನೆ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳು ಜನರಿಗೆ ಹತ್ತಿರವಾಗಿವೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಎಂದರೇನು?

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಹ ಕುಟುಂಬಗಳಿಗೆ ಎಲ್‍ಪಿಜಿ ಸಂಪರ್ಕಕ್ಕೆ 1,600 ಸಹಾಯಧನ ನೀಡಲಾಗುತ್ತದೆ. ಆದ್ದರಿಂದ ಎಲ್‍ಪಿಜಿ ಸಂಪರ್ಕ ಪಡೆಯಲು ಹಣ ನೀಡುವ ಅಗತ್ಯವಿಲ್ಲ. ಆದರೆ ಬಳಿಕ ಬಳಸುವ ಸಿಲಿಂಡರ್ಗಳಿಗೆ ಹಣ ನೀಡಬೇಕಾಗುತ್ತದೆ.

ಈ ಯೋಜನೆಯನ್ನು ಉದ್ಘಾಟಿಸಿ ಮಾತಾನಾಡಿದ ಮೋದಿ `ನಾನು ಅತೀ ಬಡ ಕುಟುಂಬದಲ್ಲಿ ಹುಟ್ಟಿದ್ದೇನೆ. ನಮ್ಮ ಮನೆಯಲ್ಲಿ ಕಿಟಕಿಗಳೇ ಇರಲಿಲ್ಲ.ನನ್ನ ತಾಯಿ ಕಟ್ಟಿಗೆಗಳನ್ನು ಬಳಸಿ ಅಡುಗೆ ಮಾಡುತ್ತಿದ್ದರು .ಈ ವೇಳೆ ಮನೆಯಲ್ಲಿ ಹೊಗೆ ತುಂಬಿಕೊಂಡು ನಮ್ಮ ತಾಯಿ ನಮಗೆ ಕಾಣಿಸುತ್ತಿರಲಿಲ್ಲ’ ಎಂದಿದ್ದಾರೆ!! ಯೋಜನೆಯಡಿ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತವಾಗಿ ಎಲ್‍ಪಿಜಿ ಸೌಲಭ್ಯ ಕಲ್ಪಿಸುವುದಾಗಿದೆ. ಮುಂದಿನ 3 ವರ್ಷದ ಒಳಗೆ ಬಿಪಿಎಲ್ ಕುಟುಂಬದ 5 ಲಕ್ಷ ಮಹಿಳೆಯರಿಗೆ ಉಚಿತ ಗ್ಯಾಸ್ ಸೌಲಭ್ಯ ಒದಗಿಸುವುದು ಯೋಜನೆಯ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನೊಳಗೊಂಡ ಸಂಪುಟ 8,000 ಕೋಟಿ ರೂ. ಮೊತ್ತದ “ಪ್ರಧಾನಮಂತ್ರಿ ಉಜ್ವಲ ಯೋಜನೆ”ಯನ್ನು ಮೂರು ವರ್ಷಗಳ ಅವಧಿಯಲ್ಲಿ ಉಚಿತವಾಗಿ ಕಲ್ಪಿಸಲು ಅನುಮೋದನೆ ನೀಡಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್ ಹೇಳಿದ್ದಾರೆ. ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಆರಂಭಿಕವಾಗಿ 2000 ಕೋಟಿ ಬಿಡುಗಡೆ ಮಾಡಲಾಗಿದ್ದು, 2016-17ನೇ ಸಾಲಿನಲ್ಲಿ ಸುಮಾರು 1 ಕೋಟಿ 50 ಲಕ್ಷ ಕುಟುಂಬಗಳು ಈ ಯೋಜನೆ ಅಡಿ ಎಲ್.ಪಿ.ಜಿ ಸಂಪರ್ಕ ಒದಗಿಸಗಿಸಲಾಗಿದೆ!!

ಪ್ರಧಾನಿ ನರೇಂದ್ರ ಮೋದಿಯವರ ಈ ಯೋಜನೆಯಿಂದ ದೇಶದ ಮೂಲೆ ಮೂಲೆಗಳಲ್ಲಿಯು ಇದರ ಪ್ರಯೋಜವನ್ನು ಜನರು ಪಡೆದಿದ್ದಾರೆ!!

  • ಪವಿತ್ರ
Tags

Related Articles

Close