ಪ್ರಚಲಿತ

ಕಾಂಗ್ರೆಸ್ಸಿಗರಿಗೆ ಬಿಜೆಪಿಯ ಚಾಣಕ್ಯನಿಂದ ಶಾಕಿಂಗ್ ಸುದ್ದಿ!! ಬುದ್ದಿಜೀವಿಗಳ ಅಪಪ್ರಚಾರಕ್ಕೆ ಪೂರ್ಣವಿರಾಮವಿಟ್ಟ ಅಮಿತ್ ಶಾ!!

ಭಾರತೀಯ ಜನತಾ ಪಕ್ಷವು ಮೇಲ್ವರ್ಗಕ್ಕೆ ಮಾತ್ರ ಸೀಮಿತವಾಗಿದ್ದು, ಕೆಲವರ್ಗದವರನ್ನು ಕಾಲ ಕಸಕ್ಕಿಂತಲೂ ಕಡೆಯಾಗಿ ಕಾಣುತ್ತಾರೆ ಎಂಬಿತ್ಯಾದಿ ಅಪವಾದಗಳನ್ನು ಬಿತ್ತರಿಸುತ್ತಿದ್ದ ಕಾಂಗ್ರೆಸ್ಸಿಗರಿಗೆ ಇದೀಗ ಶಾಕಿಂಗ್ ಸುದ್ದಿಯೊಂದು ಕಾದಿದೆ!!

ದೇಶದಲ್ಲಿ ನೆಹರೂ ವಂಶಾಡಳಿತದ ಅಧಿಕಾರಕ್ಕೆ ಯಾವಾಗ ಪೂರ್ಣವಿರಾಮ ಬಿತ್ತೋ ಅಂದಿನಿಂದ ಎಡಪಂಥೀಯರ ಮೋಸದಾಟಗಳಿಗೂ ಎಡೆಯಿಲ್ಲದಂತಾಯಿತು. ಅಷ್ಟೇ ಅಲ್ಲದೇ ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸಿಗೆ ಇಡೀ ವಿಶ್ವವೇ ಮಾರುಹೋದರೂ ಕೂಡ ಬುದ್ದಿಜೀವಿಗಳಿಗೆ ಮಾತ್ರ ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸನ್ನು ಸಹಿಸಿಕೊಳ್ಳಲು ಆಗಲೇ ಇಲ್ಲ!! ಹಾಗಾಗಿ ನರೇಂದ್ರ ಮೋದಿಯವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ, ಭಾಷಣ ಬಿಗಿಯುತ್ತಾ, ಧರ್ಮಗಳನ್ನು, ಜಾತಿಗಳನ್ನು ಒಡೆದು ಆಳುವ ತಂತ್ರವನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಯೇ ಬಿಟ್ಟರು!!

ಆದರೆ ಧರ್ಮ-ಧರ್ಮಗಳ ಮಧ್ಯೆ, ಜಾತಿ-ಜಾತಿಗಳ ಮಧ್ಯೆ ಕಂದಕಗಳನ್ನು ಸೃಷ್ಟಿಸಿದ್ದ ಕಾಂಗ್ರೆಸ್ಸಿನ ಮಂದಮತಿಗೆ ಇದೀಗ ಮತ್ತೊಂದು ಬಾರಿ ಪೂರ್ಣವಿರಾಮ ಬಿದ್ದಂತಾಗಿದೆ!! ದಲಿತ ದೌರ್ಜನ್ಯ ಕಾಯ್ದೆ ಸಡಿಲಗೊಳಿಸಿರುವ ಸುಪ್ರೀಂಕೋರ್ಟ್ ಆದೇಶವನ್ನು ಖಂಡಿಸಿ ದೇಶಾದ್ಯಂತ ದಲಿತ ಸಂಘಟನೆಗಳು ಪ್ರತಿಭಟನೆಗಿಳಿದಿರುವ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ದಲಿತರ ಪರವಾಗಿಯೇ ಬ್ಯಾಟಿಂಗ್ ಮಾಡಿದ್ದಾರೆ. ಉದ್ಯೋಗ ಮತ್ತು ಶಿಕ್ಷಣದಲ್ಲಿ ಎಸ್ಸಿ, ಎಸ್ಟಿ ಕಾಯ್ದೆಗಿರುವ ಮೀಸಲಾತಿಯನ್ನು ಬಿಜೆಪಿ ತೆಗೆದು ಹಾಕುವುದಿಲ್ಲ. ಬೇರೆಯವರಿಗೂ ತೆಗದು ಹಾಕಲು ಬಿಡುವುದಿಲ್ಲ ಎಂದು ಬಿಜೆಪಿಯ ಜಾಣಕ್ಯ ಅಮಿತ್ ಶಾ ಹೇಳಿದ್ದಾರೆ.

Image result for amit shah with modi

ಹೌದು… ಬಿಜೆಪಿ ಅಧಿಕಾರದಲ್ಲಿ ಇರುವವರೆಗೂ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಹಾಗೂ ಮೀಸಲಾತಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ದೇಶದಲ್ಲಿರುವ ಎಸ್ಸಿ, ಎಸ್ಟಿ ಸಮುದಾಯ ಈ ಕುರಿತು ಚಿಂತೆ ಮಾಡುವ ಅವಶ್ಯಕತೆಯೇ ಇಲ್ಲ ಎಂದು ಭರವಸೆ ನೀಡಿದ್ದಾರೆ. ಆ ಮೂಲಕ ಕೆಲವರು ಹಬ್ಬಿಸಿದ್ದ ಗಾಳಿ ಸುದ್ದಿಗೆ ಈ ಮೂಲಕ ಮಂಗಳ ಹಾಡಿದ್ದಾರೆ.

ಮುಂದಿನ ದಿನಗಳಲ್ಲಿ ಜನರನ್ನು ದಾರಿ ತಪ್ಪಿಸಲು ಕಾಂಗ್ರೆಸ್ ವಿವಿಧ ರೀತಿಯ ಸುಳ್ಳುಗಳನ್ನು ಹರಡುತ್ತದೆ. ಒಮ್ಮೆ ಎಸ್ಸಿ ಎಸ್ಟಿ ಕಾಯ್ದೆ ರದ್ದು ಮಾಡುತ್ತಾರೆ ಎಂದು ಸುದ್ದಿ ಹಬ್ಬಿಸುತ್ತಾರೆ, ಕೆಲವೊಮ್ಮೆ ಮೀಸಲಾತಿ ರದ್ದು ಮಾಡುತ್ತಾರೆ ಭಯ ಹುಟ್ಟಿಸುತ್ತಾರೆ ಎಂದು ಆರೋಪಿಸಿರುವ ಅಮಿತ್ ಶಾ, ಬಿಜೆಪಿ ಅಧಿಕಾರದಲ್ಲಿರುವವರೆಗೂ ಮೀಸಲಾತಿ ಮತ್ತು ಎಸ್ಸಿ ಎಸ್ಟಿ ಕಾಯ್ದೆಗೆ ಯಾವುದೇ ಭಂಗವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ!!

ಕೆಲ ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಸಾರ್ವಜನಿಕ ಚುನಾವಣಾ ಪ್ರಚಾರ ಭಾಷಣದಲ್ಲಿ “ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ; ಎಸ್‍ಸಿ/ಎಸ್‍ಟಿ ಕಾಯಿದೆಯನ್ನು ರದ್ದು ಮಾಡಲಾಗುತ್ತಿದೆ’ ಎಂದು ನೇರವಾಗಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಹರಿಸಿದ್ದರು. ಅಷ್ಟೇ ಅಲ್ಲದೇ ಎಸ್ಸಿ, ಎಸ್ಟಿ ಕಾಯಿದೆ ದುರ್ಬಲಗೊಳಿಸುವುದು, ಮೀಸಲಾತಿ ರದ್ದುಗೊಳಿಸುವ ಕುರಿತು ಬಿಜೆಪಿ ನಿಲುವು ಹೊಂದಿದೆ ಎಂದು ಜನರನ್ನು ದಾರಿತಪ್ಪಿಸಲು ಕಾಂಗ್ರೆಸ್ ಮುಂದಾಗಿದ್ದಂತೂ ಅಕ್ಷರಶಃ ನಿಜ.

ಆದರೆ ಇದೀಗ ಕಾಂಗ್ರೆಸ್ಸಿನ ಬೂಟಾಟಿಕೆಯ ಮಾತುಗಳಿಗೆ ಪೂರ್ಣವಿರಾಮ ಬಿತ್ತಲ್ಲದೇ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾರೂ ಆ ಧೈರ್ಯ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಹೇಳುವ ಮೂಲಕ ಬುದ್ದಿಜೀವಿಗಳ ಅಪಪ್ರಚಾರಕೆರೀ ಮೂಲಕ ಕೊನೆ ಹಾಡಿದ್ದಾರೆ!!

ಮೂಲ https://goo.gl/TndMv9

https://goo.gl/yrmdGp

https://goo.gl/XQe13f

– ಅಲೋಖಾ

Tags

Related Articles

Close