ಪ್ರಚಲಿತ

ಮುಂದಿನ ಐದು ವರ್ಷದಲ್ಲಿ ದೇಶದ ರಕ್ಷಣಾ ವ್ಯವಸ್ಥೆಗೆ ಸ್ವದೇಶಿ ನಿರ್ಮಿತ ಐರನ್ ಡೋಮ್

ದೇಶದ ರಕ್ಷಣೆಯ ವಿಚಾರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜಿ ಮಾಡಿಕೊಳ್ಳುವ ವಿಷಯವೇ ಇಲ್ಲ. ರಾಷ್ಟ್ರ ರಕ್ಷಣೆಗೆ ಬೇಕಾದ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವ ಮೂಲಕ ಕೇಂದ್ರ ಸರ್ಕಾರ ಯಾವ ಉದ್ವಿಗ್ನ ಪರಿಸ್ಥಿತಿಯನ್ನೂ ಸಮರ್ಥವಾಗಿ ಎದುರಿಸುವ ಸಿದ್ಧತೆಯನ್ನು ಯಾವಾಗಲೂ ಮಾಡಿಕೊಂಡಿರುತ್ತದೆ. ಹಾಗೆಯೇ, ಯಾವ ಪರಿಸ್ಥಿತಿಯಲ್ಲಿ ಎಂತದ್ದೇ ಆಕ್ರಮಣಗಳನ್ನು ಸಮರ್ಥವಾಗಿ ನಿಭಾಯಿಸಲು ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ಸಹ ಸಿದ್ಧ ಮಾಡಿಟ್ಟುಕೊಳ್ಳುವ ಮೂಲಕ ಮುನ್ನೆಚ್ಚರಿಕೆ ವಹಿಸುತ್ತದೆ ಎನ್ನುವುದು ಸತ್ಯ.

ಹಾಗೆಯೇ ಯಾವುದೇ ಹೊಸ ಬಗೆಯ ತಂತ್ರಜ್ಞಾನವನ್ನು ಸಹ ಸ್ವದೇಶಿಯಾಗಿ ‌ನಿರ್ಮಾಣ ಮಾಡುವ ಚಾಕಚಕ್ಯತೆ ಸಹ ಭಾರತೀಯರಿಗೆ ಇದೆ. ಇದಕ್ಕೆ ಪೂರಕ ಎಂಬಂತೆ ಭಾರತದಿಂದಲೂ ‌ಇಸ್ರೇಲ್‌ನಂತೆ ಸ್ವದೇಶಿ ನಿರ್ಮಿತ ಐರನ್ ಡೋಮ್ ತಯಾರಾಗಲಿದ್ದು, ಐದು ವರ್ಷಗಳ ಅವಧಿಯಲ್ಲಿ ಡಿಆರ್‌ಡಿಒ ಇದನ್ನು ನಿರ್ಮಾಣ ಮಾಡಲಿರುವುದಾಗಿ ಮೂಲಗಳು ತಿಳಿಸಿವೆ.

ಕೆಲ ದಿನಗಳ ಹಿಂದಷ್ಟೇ ಇಸ್ರೇಲ್ ಮತ್ತು ಹಮಾಸ್ ಉಗ್ರ ನಡುವೆ ಯುದ್ಧ ಆರಂಭವಾಗಿದೆ. ಈ ಸಂದರ್ಭದಲ್ಲಿ ಹಮಾಸ್ ಉಗ್ರರು ಇಸ್ರೇಲ್ ವಿರುದ್ಧ ಉಡಾಯಿಸಿದ ಕ್ಷಿಪಣಿಗಳು ಭೂಮಿ ತಾಕುವ ಮೊದಲೇ ಅದನ್ನು ಹೊಡೆದುರುಳಿಸುವ ಮೂಲಕ ವಿಶ್ವದ ಗಮನ ಸೆಳೆದ, ಜೊತೆಗೆ ಬಹಳ ಮುಖ್ಯವಾಗಿ ಇಸ್ರೇಲಿಗರ ಜೀವ ಕಾಪಾಡಿದ ಐರನ್ ಡೋಮ್ ಅನ್ನು ತಯಾರಿಸಲು ಭಾರತ ಸಹ ಉತ್ಸಾಹ ತೋರಿದ್ದು, ಮುಂದಿನ ಐದು ವರ್ಷಗಳಲ್ಲಿ ಇದನ್ನು ಡಿಆರ್‌ಡಿಒ ನಿರ್ಮಾಣ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಭಾರತ ಚೀನಾ ಮತ್ತು ಪಾಕಿಸ್ತಾನ ಎಂಬ ಎರಡು ಕುತಂತ್ರಿ ದೇಶಗಳ ನಡುವೆ ಇದೆ. ಈ ಎರಡೂ ರಾಷ್ಟ್ರಗಳು ಭಾರತದ ಶತ್ರು ರಾಷ್ಟ್ರಗಳಾಗಿವೆ. ಶತ್ರು ದೇಶಗಳಿಂದ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಭಾರತ ಸಹ ಇಸ್ರೇಲ್ ರೀತಿಯಲ್ಲಿ ಸ್ವದೇಶಿ ವಾಯು ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಿದೆ.

ಭಾರತ ಸಿದ್ದಪಡಿಸಲಿರುವ ವಾಯು ರಕ್ಷಣಾ ವ್ಯವಸ್ಥೆಯು 350 ಕಿಮೀ ದೂರದಿಂದಲೇ ಶತ್ರುವಿನ ಅಸ್ತ್ರಗಳನ್ನು ‌ಹೊಡೆದುರುಳಿಸುವ ಸಾಮರ್ಥ್ಯ ಹೊಂದಿರಲಿದೆ. ಇದಕ್ಕಾಗಿ ಡಿಆರ್‌ಡಿಒ ಇಪ್ಪತ್ತು ಸಾವಿರ ಕೋಟಿ ರೂ. ವೆಚ್ಚ ಮಾಡಲಿದೆ. ಇದಕ್ಕೆ ಕುಶ್ ಎಂದು ಹೆಸರಿಟ್ಟಿದ್ದು, ಮುಂದಿನ ಐದು ವರ್ಷಗಳಲ್ಲಿ ಇದನ್ನು ಸಂಪೂರ್ಣಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇಂತಹ ವ್ಯವಸ್ಥೆ ವಿಶ್ವದ ಕೆಲವೇ ಕೆಲವು ದೇಶಗಳಲ್ಲಿ ಇದ್ದು, ಭಾರತವೂ ಅಂತಹ ರಾಷ್ಟ್ರಗಳ ಪಟ್ಟಿಗೆ ಸೇರಲಿದೆ.

Tags

Related Articles

Close