ಪ್ರಚಲಿತ

7 ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಗೂಢಾಚಾರಿಕೆ ಮಾಡಿದ ಜೇಮ್ಸ್ ಬಾಂಡ್ ಗೆ ಪಾಕ್‍ನಿಂದಲೇ ಬಂದಿತ್ತು ಪತ್ರ!! ದೋವಲ್‍ರನ್ನೂ ಬೆಚ್ಚಿ ಬೀಳಿಸುವಂತೆ ಮಾಡಿದ ಆ ಪತ್ರದಲ್ಲೇನಿತ್ತು?

ಅಜಿತ್ ದೋವಲ್ ಹೆಸರು ಕೇಳುವಾಗಲೇ ಮೈ ಜುಮ್ಮೆನ್ನುತ್ತದೆ!! ಭಾರತದ ಜೇಮ್ಸ್ ಬಾಂಡ್ ಎಂದೇ ಪ್ರಖ್ಯಾತಿ ಹೊಂದಿರುವ ದೋವಲ್ ತೀರಾ ಸರಳ ವ್ಯಕ್ತಿ!! ತನ್ನ ಹೆಸರನ್ನೇ ಬದಲಾಯಿಸಿ ಸುಮಾರು ಏಳು ವರ್ಷಗಳ ಪಾಕಿಸ್ತಾನದ ಜೊತೆಗೂಡಿಯೇ ಪಾಕಿಸ್ತಾನಕ್ಕೆ ಚಳ್ಳೆ ಹಣ್ಣು ತಿನ್ನಿಸಿ ಬಂದ ವೀರ!! ಇವರ ಹೆಸರನ್ನು ಕೇಳಿದರೆ ಪಾಕಿಸ್ತಾನ ಗಡ ಗಡ ಅಂತಾ ನಡುತ್ತೆ ಯಾಕೆಂದರೆ ಯಾರೂ ಊಹಿಸಲು ಸಾಧ್ಯವಾಗದಂತಹ ಕೆಲಸವನ್ನು ದೋವಲ್ ಮಾಡಿದ್ದಾರೆ!! ಕೇವಲ ಒಂದಲ್ಲ ಎರಡಲ್ಲ ಬರೋಬ್ಬರಿ ಏಳು ವರ್ಷಗಳ ಕಾಲ ತಾನೊಬ್ಬ ಭಾರತೀಯ ಆದರೂ ಅಂತಹ ಪಾಕ್‍ನ ಕ್ರೂರ ಮನುಷ್ಯರ ಜೊತೆ ಏಳು ವರ್ಷಗಳ ಕಾಲ ಅಲ್ಲೇ ಇದ್ದು ಪಾಕಿಸ್ಥಾನದ ಪ್ರತೀಯೊಂದು ಸಿಕ್ರೆಟ್‍ಗಳನ್ನೂ ಕ್ಯಾಚ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ!! ಅಂತಹ ಸಾಹಸವನ್ನು ಮಾಡಿದ್ದಾರೆ!! ಒಂದು ಬಾರಿ ಯೋಚಿಸಿ ನೋಡಿ ಒಂದು ವೇಳೆ ಆತ ಒಬ್ಬ ಭಾರತೀಯ ಎಂದು ತಿಳಿದರೆ ಪಾಕಿಸ್ಥಾನದವರು ಮತ್ತೆ ಅವರನ್ನು ಜೀವಂತವಾಗಿ ಬಿಡುತ್ತಿದ್ದರಾ? ಅಂತಹ ಶತ್ರು ರಾಷ್ಟ್ರದಲ್ಲೇ ಅಜಿತ್ ದೋವಲ್ 7 ವರ್ಷಗಳ ಕಾಲ ಗೂಢಾಚಾರಿ ಕೆಲಸ ಮಾಡಿದ್ದಾರೆ ಎಂದರೆ ನಿಜವಾಗಿಯೂ ಗ್ರೇಟ್!!

Related image

ಅಜಿತ್ ದೋವಲ್‍ರವರಿಗೆ ಭಾರತದ ಅತ್ಯುನ್ನತ ಶಾಂತಿಕಾಲದ ಕೀರ್ತಿ ಚಕ್ರ ಪ್ರಶಸ್ತಿಯನ್ನು ಪಡೆದ ಮೊದಲ ಪೋಲಿಸ್ ಅಧಿಕಾರಿಯಾಗಿದ್ದಾರೆ!! ಮಿಲಿಟರಿ ಗೌರವಾರ್ಥವಾಗಿ ಪದಕ ಪಡೆದ ಮೊದಲ ಅಧಿಕಾರಿ ಅಜಿತ್ ದೋವಲ್… 1971 ರಿಂದ 1999 ರ ವರೆಗೆ ನಡೆದ 15 ಭಾರತೀಯ ವಿಮಾನಗಳನ್ನು ಅಪಹರಿಸಿದ್ದ ಆತಂಕವಾದಿಗಳನ್ನು ಪ್ರತೀ ಸಲವೂ ಹಿಮ್ಮೆಟ್ಟಿಸಿ ಯಶಸ್ವಿಯಾಗಿ ಮಿಲಿಟರಿ ಆಪರೇಶನ್ ಗಳನ್ನು ಪೂರ್ಣಗೊಳಿಸಿದ್ದು ಅಜಿತ್ ದೋವಲ್ ! ಪಾಕಿಸ್ಥಾನದಲ್ಲಿ ಏಳು ವರ್ಷಗಳ ಕಾಲ ಮುಸಲ್ಮಾನನ ವೇಷ ಹಾಕಿ ವಾಸಿಸಿ, ತನ್ಮೂಲಕ, ಪಾಕಿಸ್ಥಾನದಿಂದ ತೀರಾ ದುರ್ಲಭವಾದ ದಾಖಲೆಗಳನ್ನು ಭಾರತಕ್ಕೆ ಕಳುಹಿಸಿದ್ದ ಚಾಣಕ್ಯನಿಗೆ ಪಾಕಿಸ್ಥಾನದ ವ್ಯಕ್ತಿಯೊಬ್ಬರು ಪತ್ರವನ್ನು ಬರೆದಿದ್ದರು!! ಅದರಲ್ಲೇನಿತ್ತು ಗೊತ್ತೇ?

Related image

ಪಾಕ್‍ನಿಂದ ಜೇಮ್ಸ್‍ಬಾಂಡ್‍ಗೆ ಪತ್ರ!!

ಅಷ್ಟು ವರ್ಷಗಳ ಕಾಲ ಪಾಕಿಸ್ಥಾನಕ್ಕೆ ಚಳ್ಳೆ ಹಣ್ಣು ತಿನ್ನಿಸಿ ಬಂದಿದ್ದ ನಮ್ಮ ಸೇನಾ ಚಾಣಕ್ಯನಿಗೆ ಪಾಕಿಸ್ಥಾನದಿಂದ ಅಜಿತ್ ದೋವಲ್ ಹೆಸರಲ್ಲಿಯೇ ಒಂದು ಪತ್ರ ಬರುತ್ತದೆ!! ಆದರೆ ಆ ಪತ್ರ ಬರೆದಿರುವಂತಹದ್ದು ಒಬ್ಬ ಪಾಕ್‍ನ ಮಾಧ್ಯಮದ ವ್ಯಕ್ತಿ ದೋವಲ್‍ರಿಗೆ ಪತ್ರವೊಂದನ್ನ ಕಳಿಸಿದ್ದ. ಈ ಪತ್ರ 2015 ರಲ್ಲಿ ಅಜಿತ್ ದೋವಲ್ ಹೆಸರಿನಲ್ಲೇ ಕಳಿಸಲಾಗಿತ್ತು. ಮೊದಲ ಬಾರಿಗೆ ಪಾಕಿಸ್ತಾನದಿಂದ ಅಜಿತ್ ದೋವಲ್ ರಿಗೆ ಈ ರೀತಿ ಹೇಳುವ ಧೈರ್ಯವನ್ನ ಪಾಕಿಸ್ತಾನದ ಆ ವ್ಯಕ್ತಿ ತೋರಿಸಿದ್ದ. ಅಷ್ಟಕ್ಕೂ ಆತ ತನ್ನ ಪತ್ರದಲ್ಲಿ ಬರೆದದ್ದಾದರೂ ಏನಿತ್ತು ಗೊತ್ತಾ? ಅಜಿತ್ ದೋವಲ್‍ಜೀಯ ಬಗ್ಗೆ ಗೌರವದಿಂದ ಪತ್ರ ಬರೆದಿದ್ದ ಆ ವ್ಯಕ್ತಿ ತನ್ನ ಪತ್ರದಲ್ಲಿ ಅಜಿತ್ ದೋವಲ್‍ರನ್ನ ಹಾಡಿ ಹೊಗಳಿದ್ದ. ಅಷ್ಟು ಧೈರ್ಯದಿಂದ ಯಾವುದೇ ಕಷ್ಟದ ಪರಿಸ್ಥಿತಿಯಿದ್ದರೂ ಆ ಪರಿಸ್ಥಿತಿಯನ್ನು ಮುನ್ನುಗ್ಗಿ ಎದುರಿಸುವ ಧೈರ್ಯವಂತ ಅಜಿತ್ ದೋವಲ್ ರ ಬಗ್ಗೆ ಆತ ಮೆಚ್ಚುಗೆ ವ್ಯಕ್ತಪಡಿಸಿದ್ದ. ಇದರ ಜೊತೆ ಜೊತೆಗೆ ಆತ ಅಜಿತ್ ದೋವಲ್ ಕುರಿತು ಹೀಗೆ ಬರೆದಿದ್ದ. ನೀವು ನಿಜಕ್ಕೂ ಪ್ರಶಂಸೆಗೆ ಪಾತ್ರರಾದಂತಹ ವ್ಯಕ್ತಿಯಾಗಿದ್ದೀರ… ಆದರೆ ನಾನು ನೀವು ಕೆಲ ದಿನಗಳ ಹಿಂದೆ ನೀಡಿದ್ದ ಭಾಷಣವೊಂದರ  ಕುರಿತು ಮಾತನಾಡಲು ಬಯಸುತ್ತೇನೆ. ಅದರಲ್ಲಿ ನೀವು ಭಾರತ-ಪಾಕಿಸ್ತಾನ ಹಾಗು ಮತಾಂಧ ಜಿಹಾದಿಗಳ ಉಲ್ಲೇಖ ಮಾಡುತ್ತ ಮಾತನಾಡಿದ್ದದ್ದೀರಿ. ಅದರ ಜೊತೆಗೆ ನೀವು ಜಿಹಾದಿಗಳನ್ನು ಹತೋಟಿಗೆ ತರೋದು ಕಷ್ಟದ ಕೆಲಸವೇನೂ ಅಲ್ಲ ಅನ್ನೋದನ್ನ ಹೇಳಿದ್ದಿರಿ. ಇದಕ್ಕೆ ಪ್ರತ್ಯುತ್ತರವಾಗಿ ನಾನು ನಿಮಗೆ ಜಿಹಾದಿಗಳ ಬಗ್ಗೆ ಹೇಳಬೇಕೆಂದರೆ ಇವರಿಗೆ ನಿರ್ದಿಷ್ಟವಾದ ಆಲೋಚನೆ, ಗುರಿ ಇಲ್ಲದೆ ಅವರಿಗೆ ಹಣ ಸಿಕ್ಕಿದರೆ ಸಾಕು ಎಂದು ಅಲ್ಲಿ ದುಡಿಯುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದ!!

Image result for ajit doval

ದೋವಲ್‍ಗೆ ಸಲಹೆ ನೀಡಿದ ಪಾಕ್‍ನ ವ್ಯಕ್ತಿ ಏನಂದ ಗೊತ್ತೇ?!

ಈಗಾಗಲೇ ಎಷ್ಟೊಂದು ರಿಸ್ಕ್ ತೆಗೆದುಕೊಂಡು ಭಾರತದ ಜನರ ರಕ್ಷಣೆಗೋಸ್ಕರ ಎಷ್ಟೋ ಕಷ್ಟಪಟ್ಟಿರುವಿರುವಿರಿ.. ಹಾಗಾಗಿ ನಿಮ್ಮನ್ನು ಯಾವಾಗಲೂ ಭಾರತದ ಜನರು ಗೌರವ ಪ್ರೀತಿಯಿಂದ ಕಾಣುತ್ತಾರೆ.. ಮುಂದೆಯೂ ದೇಶ ಹಾಗೂ ಜನರ ರಕ್ಷಣೆ ಮಾಡುತ್ತಾ ಸದಾ ಹೀಗೆ ಇರಿ ಎಂದು ಪತ್ರವನ್ನು ಮುಗಿಸುತ್ತಾನೆ!!

ಹೀಗೆ ಅಜಿತ್ ದೋವಲ್ ಎಂದರೆ ಈ ದೇಶದ ಜನರಲ್ಲದೆ ಪಾಕಿಸ್ತಾನದವರೂ ಈ ರೀತಿಯಾಗಿ ಕೊಂಡಾಡಿದ್ದಾರೆ ಎಂದರೆ ನಿಜವಾಗಿ ಭಾರತೀಯರಾಗಿ ಇಂತಹ ಒಬ್ಬ ವ್ಯಕ್ತಿಯನ್ನು ನಾವು ಪಡೆದಿದ್ದೇವೆ ಎಂದರೆ ನಾವೇ ಪುಣ್ಯವಂತರು!!

source: https://www.nationalistviews.com

  • ಪವಿತ್ರ
Tags

Related Articles

Close