ಪ್ರಚಲಿತ

ದೇಶಭಕ್ತ ಭಾರತೀಯರಾದ ನಾವೆಲ್ಲಾ ಧನ್ಯರಾಗಿದ್ದೇವೆ.. ಯಾಕೆ ಗೊತ್ತಾ?

ಭಾರತೀಯರು ಧನ್ಯರಾಗಿದ್ದಾರೆ. ಇದಕ್ಕೆ ಕಾರಣ ಎರಡಿದೆ. ಕೋಟ್ಯಾಂತರ ಭಾರತೀಯರ ಆಸೆಯಂತೆ ಪ್ರಭು ರಾಮಲಲ್ಲಾ ತನ್ನ ಜನ್ಮಭೂಮಿಯ ಭವ್ಯ ಮಂದಿರದಲ್ಲಿ ವಿರಾಜಿತನಾಗಿದ್ದಾನೆ. ಭಕ್ತರಿಗೆ ನೆಮ್ಮದಿ ನೀಡುತ್ತಿದ್ದಾನೆ. ಇನ್ನೊಂದು, ನಾವು ನಮ್ಮ ದೇಶದ ಆತ್ಮದ ಹಾಗೆ ಇರುವ ವ್ಯಕ್ತಿ, ಜನರು ಹೇಳದೆಯೇ ಅವರ ಮನಸಿನ ಆಕಾಂಕ್ಷೆಗಳನ್ನು ಪೂರೈಸುವ ವ್ಯಕ್ತಿ ಶಕ್ತಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಡೆದ ಕಾರಣಕ್ಕೆ ಭಾರತೀಯರಿಂದು ಧನ್ಯರಾಗಿದ್ದಾರೆ ಎನ್ನುವುದು ಸತ್ಯ.

ನಿನ್ನೆಯಷ್ಟೇ ಭಾರತೀಯರಿಗೆ, ರಾಮ ಭಕ್ತರಿಗೆ ಆನಂದದ ಕ್ಷಣ. ಸುಮಾರು ಐನೂರು ವರ್ಷಗಳ ಕಾಯುವಿಕೆಗೆ ಅಂತ್ಯ ದೊರಕಿ, ಪ್ರಭು ಶ್ರೀರಾಮ ತನ್ನ ಜನ್ಮಭೂಮಿಯ ಭವ್ಯ ರಾಷ್ಟ್ರ ಮಂದಿರದಲ್ಲಿ ನೆಲೆಗೊಂಡ ದಿನ. ಈ ಮಹತ್ಕಾರ್ಯಕ್ಕೆ ನಾಂದಿ ಹಾಡಿದ್ದು ಪ್ರಧಾನಿ ಮೋದಿ ಮತ್ತು ಅವರ ಸರ್ಕಾರ‌. ಅಯೋಧ್ಯೆಯ ರಾಮ ಜನ್ಮಭೂಮಿ ಪ್ರಭು ಶ್ರೀರಾಮನಿಗೆಯೇ ಸೇರಿದ್ದು ಎನ್ನುವ ಹಾಗೆ ಸುಪ್ರೀಂ ಕೋರ್ಟ್ನಲ್ಲಿ ಸಾಬೀತಾಗಿದ್ದು, ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಗಳು ದೇಶ, ವಿದೇಶಗಳ ಜನರ ಕಾರಣದಿಂದಲೇ ಆರಂಭವಾಗಿದ್ದು, ಕೊನೆಗೆ ಈಗ ರಾಷ್ಟ್ರಕ್ಕೆ ಶ್ರೀರಾಮ, ರಾಷ್ಟ್ರ ಮಂದಿರ ಸಮರ್ಪಿತವಾದದ್ದು ಎಲ್ಲದರ ಹಿಂದೆಯೂ ಪ್ರಧಾನಿ ಮೋದಿ ಎಂಬ ಶಕ್ತಿಯ ಪರಿಶ್ರಮ ಎದ್ದು ಕಾಣುತ್ತಿದೆ.

ಅಂದ ಹಾಗೆ ಸಾಮಾನ್ಯರಲ್ಲಿ ಸಾಮಾನ್ಯರಿಗೆ ಬಿಜೆಪಿ, ಪ್ರಧಾನಿ ಮೋದಿ ಅವರು ರಾಮ ಮಂದಿರದ ವಿಚಾರದಲ್ಲಿ ಮಾನ್ಯತೆ ನೀಡಿಲ್ಲ ಎಂದು ಕೆಲವು ಜಂತುಗಳು, ರಾಮ ಮಂದಿರದ ವಿಚಾರದಲ್ಲೂ ಅಪಶ್ರುತಿ ಎತ್ತಲು ಹೊರಟಿವೆ. ಅಂತಹವುಗಳಿಗೆ ಪ್ರಧಾನಿ ಮೋದಿ ಅವರು ರಾಮ ಮಂದಿರ ಎನ್ನುವ ರಾಷ್ಟ್ರ ಮಂದಿರ ಕಟ್ಟಲು ಶ್ರಮ ವಹಿಸಿದ ಸಾಮಾನ್ಯ ವ್ಯಕ್ತಿಗಳಿಗೆ ಹೂಮಳೆಗೆರೆದು, ಪುಷ್ಪವೃಷ್ಟಿ ಮಾಡಿ ಗೌರವಿಸಿದ್ದು, ನಮ್ಮ ಈ ಸಂತಸಕ್ಕೆ ಕಾರಣರಾದವರಿಗೆ ಸಂತೋಷ ನೀಡಿದ್ದು ಕಾಣದೇ ಇರುವುದು ದುರಂತವಲ್ಲದೆ ಮತ್ತೇನಲ್ಲ.

ಹೌದು ಅಯೋಧ್ಯೆಯಲ್ಲಿ ರಾಮ ಲಲ್ಲಾನನ್ನು ಕೂರಿಸಿ, ಆ ಬಳಿಕ ಮಂದಿರ ನಿರ್ಮಾಣ ಕಾರ್ಯಗಳಲ್ಲಿ ಶ್ರಮ ವಹಿಸಿದ ಕಾರ್ಮಿಕರಿಗೆ ಪ್ರಧಾನಿ ಪುಷ್ಪ ವೃಷ್ಟಿ ಮಾಡಿದ್ದಾರೆ. ನಮ್ಮ ದೇಶದ ಪ್ರತಿಷ್ಟಿತ ಸ್ಥಾನದಲ್ಲಿರುವ ವ್ಯಕ್ತಿ ಪ್ರಧಾನಿ ಮೋದಿ ಅವರು, ತಾವು ಅಲಂಕರಿಸಿರುವ ಸ್ಥಾನದ ಗೌರವವನ್ನು, ಘನತೆಯನ್ನು ಬಡ ಕಾರ್ಮಿಕರಿಗೆ ಸೂಕ್ತ ಗೌರವ ಸಲ್ಲಿಸುವ ಮೂಲಕ ಹೆಚ್ಚಿಸಿಕೊಂಡಿದ್ದಾರೆ ಎನ್ನುವುದರಲ್ಲಿ ಎರಡು ಮಾಡಿಲ್ಲ.

ನಮ್ಮನ್ನಾಳುವ ವ್ಯಕ್ತಿಯೋರ್ವ ಊರಿಗೆ ಅರಸನಾದರೂ, ಪ್ರಜೆಗಳಿಗೆ ತಮ್ಮಲ್ಲಿ ಓರ್ವ ಎಂಬ ಹಾಗೆ ಭಾವನೆ ಬರುವಂತೆ ತಮ್ಮ ನಡತೆಯನ್ನು ರೂಢಿಸಿಕೊಂಡಿರುವುದು ಭಾರತೀಯರಾದ ನಮ್ಮೆಲ್ಲರ ಭಾಗ್ಯವಲ್ಲದೆ ಬೇರೇನಲ್ಲ. ಇಂತಹ ವ್ಯಕ್ತಿ ನಮ್ಮನ್ನಾಳುತ್ತಿರುವುದು ನಮ್ಮ ಪುಣ್ಯವಲ್ಲದೆ ಬೇರೇನು.

ಒಂದು ಕಡೆಯಲ್ಲಿ ದೇಶದ ಅಭಿವೃದ್ಧಿ, ಇನ್ನೊಂದು ಕಡೆಯಲ್ಲಿ ದೇಶವನ್ನು ವಿಶ್ವ ಪ್ರಿಯ ರಾಷ್ಟ್ರವನ್ನಾಗಿ ಪರಿವರ್ತನೆ ಮಾಡಿರುವುದು, ಮಗದೊಂದು ಕಡೆಯಲ್ಲಿ ದೇಶದ ಜನರ ಮನವನ್ನರಿತು ಭಾರತಕ್ಕೆ ಬೇಕಾದ ಸೌಕರ್ಯಗಳು, ಜನರ ಆಶೋತ್ತರಗಳನ್ನು ಈಡೇರಿಸುತ್ತಿರುವ ಪ್ರಧಾನಿ ನಮ್ಮ ದೇಶದ ಆಸ್ತಿಯೇ ಸರಿ. ಇಂತಹ ಪುಣ್ಯ ಪುರುಷನನ್ನು ಪಡೆದ ನಾವೆಷ್ಟು ಧನ್ಯರು ನೀವೇ ಯೋಚಿಸಿ.

ಇನ್ನು ಸೇನೆಯ ಹೆಲಿಕಾಪ್ಟರ್‌ಗಳು ರಾಮ‌ಲಲ್ಲಾ ಮಂದಿರದ ಗರ್ಭಗೃಹದಲ್ಲಿ ಪ್ರತಿಷ್ಠಾಪಿತನಾಗುತ್ತಿದ್ದ ಹಾಗೆಯೇ ಮಂದಿರದ ಮೇಲೆ ಹೂಮಳೆಗೆರೆದವು. ಆ ಮೂಲಕ ಆ ಐತಿಹಾಸಿಕ ಕ್ಷಣಕ್ಕೆ ಮತ್ತಷ್ಟು ಕಳೆ ತಂದು ಕೊಡುವ ಕೆಲಸವನ್ನು ಸೇನೆ ಮಾಡಿದ್ದು ಸಹ ಒಂದರ್ಥದಲ್ಲಿ ಈ ದೇಶದ ಜನರ ಆಶೋತ್ತರಗಳಿಗೆ ನೀಡಿದ ಗೌರವ.

ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರನ್ನು ನಾವೆಲ್ಲರೂ ಬಹುಮತದಿಂದ ಆಯ್ಕೆ ಮಾಡಿ ಪ್ರಧಾನಿ ಪಟ್ಟದಲ್ಲಿ ಕೂರಿಸಿಕೊಂಡಿದ್ದಕ್ಕೂ ಸಾರ್ಥಕತೆಯನ್ನು ಶ್ರೀರಾಮ ಮಂದಿರದ ಮೂಲಕ ಸಾಧಿಸಿದ್ದೇವೆ. ಅವರ ಆಡಳಿತದಲ್ಲಿ ನಮ್ಮ ದೇಶದಲ್ಲಾಗುತ್ತಿರುವ ಸಕಾರಾತ್ಮಕ ಬದಲಾವಣೆಗಳು, ವಿಶ್ವದಲ್ಲೇ ಭಾರತ ನಾಯಕನ ಹಾಗೆ ಬೆಳೆಯುತ್ತಿರುವುದು, ದೇಶದಲ್ಲಾಗುತ್ತಿರುವ ಅಭಿವೃದ್ಧಿಯ ಪರ್ವ ನಮ್ಮ ದೇಶದ ಪರಮ ವೈಭವವನ್ನು ಮರಳಿ ತರುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸರ್ಕಾರದ ಪ್ರಯತ್ನಗಳು ಮಾದರಿ ಮತ್ತು ಪ್ರಶಂಸನೀಯ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close