ಪ್ರಚಲಿತ

ಅಮೇರಿಕಾದ ಅಧ್ಯಯನ ಕೇಂದ್ರವೊಂದು ಮೋದಿ ಜನಪ್ರಿಯತೆಯ ಬಗ್ಗೆ ಏನು ಹೇಳಿದೆ ಗೊತ್ತಾ?

ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಫೆÇೀರ್ಬ್ಸ್ ಪಟ್ಟಿಯಲ್ಲಿ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿ ಹೊರಹೊಮ್ಮಿದ್ದಲ್ಲದೇ, ಫೇಸ್‍ಬುಕ್‍ನಲ್ಲೂ ಗರಿಷ್ಠ ಫಾಲೋವರ್ಸ್ ಹೊಂದುವ ಮೂಲಕ ನಂ.1 ಪಟ್ಟವನ್ನು ಗಿಟ್ಟಿಸಿಕೊಂಡಿದ್ದರು. ಈ ಬೆನ್ನಲ್ಲೇ, ಇದೀಗ ಭಾರತದ ರಾಜಕೀಯದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಪ್ರಭಾವ ಶಾಲಿ ಹಾಗೂ ಜನಪ್ರಿಯ ರಾಜಕಾರಣಿ ಎಂದು ಅಮೇರಿಕದ ಅಧ್ಯಯನ ಕೇಂದ್ರದ ಹೊಸ ಸಮೀಕ್ಷೆಯೊಂದು ಹೇಳಿದೆ.

ಹೌದು… ಫೆಬ್ರವರಿ 21 ರಿಂದ ಮಾರ್ಚ್ 10ರ ನಡುವೆ ನಡೆಸಿದ ಸಮೀಕ್ಷೆಯಲ್ಲಿ 2,464 ಜನರು ಭಾಗವಹಿಸಿದ್ದು, ಮೋದಿಯವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗಿಂತ (58%) 30 ಪಾಯಿಂಟ್ (ಮೋದಿ 88%) ಮುಂದಿದ್ದಾರೆ!! ಅಷ್ಟೇ ಅಲ್ಲದೇ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗಿಂತ(57%) 49 ಪಾಯಿಂಟ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ಗಿಂತ (39%) ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿದ್ದಾರೆ!!

ಈ ಹಿಂದೆ ‘ಹಿಂದುಸ್ತಾನ್ ಟೈಮ್ಸ್’ ಬಾಲಿವುಡ್ ಐಕಾನ್, ಪೆÇಲಿಟಿಕಲ್ ಐಕಾನ್, ಅತ್ಯುತ್ತಮ ಮಾದರಿ ವ್ಯಕ್ತಿ, ಸ್ಫೋಟ್ರ್ಸ್ ಐಕಾನ್ ಹೀಗೆ ಹಲವು ವಿಭಾಗಗಳ ಕುರಿತು ನಡೆಸಿರುವ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ಅತ್ಯುತ್ತಮ ಮಾದರಿ ವ್ಯಕ್ತಿ’ ಎನ್ನುವ ಪಟ್ಟವನ್ನು ಪಡೆದುಕೊಂಡಿದ್ದಲ್ಲದೇ, ಯುವಕರಿಗೆ ಉತ್ತಮ ಆಕರ್ಷಣೆಯನ್ನು ಹೊಂದಿರುವ ವ್ಯಕ್ತಿಯಾಗಿಯೂ ಹೊರಹೊಮ್ಮಿದ್ದರು!! ಇದಷ್ಟೇ ಅಲ್ಲದೇ, ಫೇಸ್‍ಬುಕ್‍ನಲ್ಲಿ ಗರಿಷ್ಠ ಫಾಲೋವರ್ಸ್ ಹೊಂದುವ ಮೂಲಕ ನಂ.1 ಪಟ್ಟ ಗಿಟ್ಟಿಸಿಕೊಂಡಿರುವ ಮೋದಿ ಫೇಸ್‍ಬುಕ್ ವೈಯಕ್ತಿಕ ಪೇಜ್‍ನಲ್ಲಿ ಮೋದಿ ಬರೋಬ್ಬರಿ 4 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ!! ಇನ್ನು, 2 ಕೋಟಿ ಹಿಂಬಾಲಕರೊಂದಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ ಟ್ರಂಪ್ ಅವರು ಎರಡನೇ ಸ್ಥಾನದಲ್ಲಿದ್ದಾರೆ ಎಂದು, ಜಾಗತಿಕ ಮಟ್ಟದಲ್ಲಿ ಅತ್ಯಂತ ಜನಪ್ರಿಯ ನಾಯಕರ ಬಗ್ಗೆ “ಬುರ್ಸನ್- ಮಾಸ್ರ್ಟೆಲ್ಲರ್” ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ!!

ಈ ಹಿಂದೆ, “ಎದ್ದೇಳಿ… ವಿಶ್ವದ ಅತ್ಯಂತ ಪ್ರಮುಖ ಪ್ರಧಾನಿ” ಬರುತ್ತಿದ್ದಾರೆ ಎಂದು, ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಇಸ್ರೇಲ್ ಗೆ ಭೇಟಿ ನೀಡುತ್ತಿರುವ ವೇಳೆನರೇಂದ್ರ ಮೋದಿ ಅವರನ್ನು ಅಲ್ಲಿನ ಪ್ರಮುಖ ಬ್ಯುಸಿನೆಸ್ ದಿನ ಪತ್ರಿಕೆ ಹಾಡಿ ಹೊಗಳಿತ್ತು. ಅಷ್ಟೇ ಅಲ್ಲದೇ, ಬ್ಯುಸಿನೆಸ್ ದಿನ ಪತ್ರಿಕೆ, ‘ದಿ ಮಾರ್ಕ್’ ಪತ್ರಿಕೆ ತನ್ನ ಭಾರತ-ಇಸ್ರೇಲ್ ಸಂಬಂಧಗಳ ಕುರಿತ ಲೇಖನದಲ್ಲಿ, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಯಹೂದಿ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಇಸ್ರೇಲಿಗಳು ದೊಡ್ಡ ನಿರೀಕ್ಷೆಗಳನ್ನು ಹೊಂದಿದ್ದರು. ಆದರೆ “ಅವರು ಹೆಚ್ಚು ಹೇಳಲಿಲ್ಲ”. ಈಗ 1.25 ಬಿಲಿಯನ್ ಜನರ ನಾಯಕ, ಭಾರಿ ಜನಪ್ರಿಯತೆ ಗಳಿಸುತ್ತಿರುವ ಮತ್ತು ಪ್ರಪಂಚದ ಅತಿ ವೇಗವಾಗಿ ಆರ್ಥಿಕ ಬೆಳವಣಿಗೆ ಸಾಧಿಸುತ್ತಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶಕ್ಕೆ ಭೇಟಿ ನೀಡುತ್ತಿರುವುದು ಹೆಚ್ಚಿನ ಗಮನ ಸೆಳೆದಿದೆ ಎಂದು ವಿವರಿಸಿದ್ದರು!!

ಆದರೆ, ಇದೀಗ ಅಮೇರಿಕದ ಅಧ್ಯಯನ ಕೇಂದ್ರ ನಡೆಸಿದ ಹೊಸ ಸಮೀಕ್ಷೆಯೊಂದರಲ್ಲಿ ಮೋದಿ ಅತ್ಯಂತ ಪ್ರಭಾವ ಶಾಲಿ ಹಾಗೂ ಜನಪ್ರಿಯ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ!! 2017 ರ ಫೆ. 21ರಿಂದ ಮಾರ್ಚ್ 10ರ ಮಧ್ಯೆ “ಫ್ಯೂ ರಿಸರ್ಚ್ ಸೆಂಟರ್” ನಡೆಸಿದ ಈ ಸಮೀಕ್ಷೆಯಲ್ಲಿ 2464 ಜನರು ಭಾಗವಹಿಸಿದ್ದರು. ಈ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು 30 ಅಂಕಗಷ್ಟು ಹಿಂದಿಕ್ಕಿರುವ ಪ್ರಧಾನಿ ಮೋದಿ 88% ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ!! ಇನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ 58% ಅಂಕಗಳನ್ನು ಹೊಂದಿದ್ದರೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ 57% ಅಂಕಗಳನ್ನ ಪಡೆದುಕೊಂಡಿದ್ದಾರೆ. ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 39% ಅಂಕಗಳನ್ನು ಪಡೆದುಕೊಂಡಿದ್ದಾರೆ.

ಭಾರತೀಯ ಆರ್ಥಿಕತೆ ಸುಧಾರಿಸುತ್ತಿರುವುದರಿಂದ ಜನರು ಮೋದಿ ಆಡಳಿತವನ್ನು ಮೆಚ್ಚಿಕೊಂಡಿದ್ದು, ಸಮೀಕ್ಷೆಯಲ್ಲಿ ಭಾಗವಹಿಸಿದ ಹತ್ತರಲ್ಲಿ ಎಂಟು ಜನರು 2014ರ ಚುನಾವಣೆ ಬಳಿಕ ಭಾರತದ ಅರ್ಥ ವ್ಯವಸ್ಥೆ ಸುಧಾರಣೆಯಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಭಾರತದ ಆರ್ಥಿಕತೆ ಶೇ. 30ರಷ್ಟು ಸುಧಾರಣೆಯಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ 10 ರಲ್ಲಿ 7 ಜನರಿಗೆ ಮೋದಿ ಆಡಳಿತದ ಬಗ್ಗೆ ತೃಪ್ತಿ ಇದ್ದು, 2014ಕ್ಕೆ ಹೋಲಿಸಿದರೆ ಮೋದಿ ಜನಪ್ರಿಯತೆ ದುಪ್ಪಟಾಗಿದೆ ಎಂದು “ಫ್ಯೂ” ತಿಳಿಸಿದೆ.

ಆರ್ಥಿಕತೆ ತುಂಬಾ ಸುಧಾರಸಿದೆ ಎಂದು ಅಭಿಪ್ರಾಯ ಹೊಂದಿದ ವಯಸ್ಕರ ಸಂಖ್ಯೆ ಕಳೆದ ಮೂರು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದ್ದು, ದಕ್ಷಿಣ ಭಾರತದ ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಪಶ್ಚಿಮದಲ್ಲಿ ಮಹಾರಾಷ್ಟ್ರ, ಗುಜರಾತ್, ಚತ್ತೀಸ್‍ಗಢದಲ್ಲಿ ಮೋದಿ ಜನಪ್ರಿಯತೆ ಹೆಚ್ಚಿದೆ. ಅಷ್ಟೇ ಅಲ್ಲದೇ, 2015ರಿಂದ ಉತ್ತರದಲ್ಲಿ ಮೋದಿ ಜನಪ್ರಿಯತೆ ತುಂಬಾ ಹೆಚ್ಚಾಗಿದ್ದು, ದಕ್ಷಿಣ, ಪಶ್ಚಿಮದಲ್ಲಿ ಹೆಚ್ಚಾಗುತ್ತಿದೆ, ಆದರೆ ಪೂರ್ವದಲ್ಲಿ ಜನಪ್ರಿಯತೆ ಸ್ವಲ್ಪ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ!!

–ಅಲೋಖಾ

Tags

Related Articles

Close