ಪ್ರಚಲಿತ

ಅಮೇರಿಕ ಹಿಂದೂ ರಾಷ್ಟ್ರವಾಗುತ್ತಿದೆಯಾ? ಜಗತ್ತಿನ ದೊಡ್ಡಣ್ಣನಿಂದ ಮೋದಿಗೆ ಬೃಹತ್ ಉಡುಗೊರೆ!!

ಪ್ರಧಾನಿ ನರೇಂದ್ರ ಮೋದಿಯವರು ವಿದೇಶಿ ಪ್ರವಾಸ ಹೊರಟರೆ ಸಾಕು ಕೆಲ ಜನರಿಂದ ಟೀಕೆಗಳ ಸುರಿ ಮಳೆಯೇ ಸುರಿಯುತ್ತದೆ.. ಅವರು ವಿದೇಶ ಪ್ರವಾಸ ಕೈಗೊಳ್ಳುವಂತಹದ್ದು ಕೇವಲ ದೇಶ ಸುತ್ತುವುದಕ್ಕಲ್ಲ ನಮ್ಮ ಭಾರತದ ಅಭಿವೃದ್ಧಿಗಾಗಿ ಎನ್ನುವುದನ್ನು ಜನರು ಮನದಟ್ಟು ಮಾಡಿಕೊಳ್ಳಬೇಕಾಗಿದೆ.. ಈ ದೇಶದಲ್ಲಿ ಅಲ್ಲದೆ ವಿದೇಶದಲ್ಲೂ ನರೇಂದ್ರ ಮೋದಿಯವರು ಅಂದರೆ ಸಾಕು ಪಂಚ ಪ್ರಾಣ!! ವಿದೇಶದಲ್ಲಿ ಕಾಲಿಟ್ಟರೆ ಸಾಕು ಅಲ್ಲಿ ನಿಜಕ್ಕೂ ಒಂದು ಪ್ರಮುಖ ಬದಲಾವಣೆಯಾಗುತ್ತದೆ.. ಇಷ್ಟು ದಿನ ಟೀಕಿಸುತ್ತಿದ್ದ ಕೆಲ ಜನಗಳಿಗೆ ಈ ವಿಷಯ ತಿಳಿದರಂತೂ ನಿಜವಾಗ ಮುಖಕ್ಕೆ ಹೊಡೆದ ರೀತಿ ಆಗೋದಂತೂ ಖಂಡಿತ!

ಅಂದು ಅಮೇರಿಕಾ ಪ್ರವಾಸ ಕೈಗೊಂಡ ಮೋದಿ ನಿಜಕ್ಕೂ ಅದ್ಭುತ ಬದಲಾವಣೆಯನ್ನು ತಂದಿದ್ದರು ಅನ್ನಬಹುದು.. ಮೋದಿ ಟ್ರಂಪ್ ಗೆಳೆತನ ನಿಜಕ್ಕೂ ಭಾರತ ಮತ್ತು ಅಮೇರಿಕಾದಲ್ಲಿ ಅದ್ಭುತ ಬದಲಾವಣೆಳಾಗಿವೆ. ಭಯೋತ್ಪಾದಕರನ್ನು  ಸಾಕಿ ಸಲಹುತ್ತಿರುವ ಪಾಕಿಸ್ತಾನಕ್ಕೆ  ಭಾರತ ಮಾತ್ರ ಪ್ರತೀಕಾರ ತೀರಿಸಿದ್ದಲ್ಲದೆ ಅಮೇರಿಕಾ ಕೂಡಾ ಪ್ರತೀಕಾರವನ್ನು ತೋರಿಸುತ್ತಿದೆ.

ವಿದೇಶಿ ಮಿಲಿಟರಿ ಧನಸಹಾಯದ ಯೋಜನೆಯಲ್ಲಿ 2016ರ ವಿತ್ತೀಯ ವರ್ಷದಲ್ಲಿ ಕೊಡಲುದ್ದೇಶಿಸಿದ್ದ 1,628 ಕೋಟಿ ರೂ. ಧನಸಹಾಯ ಸ್ಥಗಿತಗೊಳಿಸಲು ನಿರ್ಧರಿಸಲಾರ ನಿಜವಾಗಿಯೂ ಪಾಕ್‍ಗೆ ತಡೆಯಲಾರದ ಶಾಕ್ ಎಂದೇ ಹೇಳ ಬಹುದು… ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಉಗ್ರರ ವಿರುದ್ಧ ಪಾಕ್ ಕ್ರಮ ಕೈಗೊಳ್ಳಬೇಕು ಎಂಬುದು ಅಧ್ಯಕ್ಷ ಟ್ರಂಪ್ ನಿಲುವಾಗಿದೆ. ಇದನ್ನೆಲ್ಲಾ ಯಾತಕ್ಕಾಗಿ ಮಾಡಿದ್ದಾರೆ ತಿಳಿದಿದೆಯೇ ಎಲ್ಲಾ ಮೋದಿ ಹವಾ ಅಷ್ಟೇ.. ಭಾರತಕ್ಕೆ ಏನೇ ಆದರೂ ನಾವಿದ್ದೇವೆ ಎಂದು ಅಮೆರಿಕಾ, ಇಸ್ರೇಲ್ ಭಾರತದ ಸಹಾಯಕ್ಕಾಗಿ ಕೈಚಾಚಿ ನಿಂತಿದೆ… ಇದಕ್ಕೆಲ್ಲಾ ಕಾರಣ ಮೋದಿಜೀಯವರು ಬೆಳೆಸುತ್ತಾ ಬಂದಿರುವ ಬಾಂಧವ್ಯ ಹೊರತು ಬೇರಾವುದು ಅಲ್ಲಾ!!..

Related image

 

ಅಮೇರಿಕಾದಲ್ಲಿ ಭಾರತದ ಹವಾ!!

ಪ್ರಧಾನಿ ನರೇಂದ್ರ ಮೋದಿಯವ ಅಮೇರಿಕಾ ಭೇಟಿಯಿಂದಾಗಿ ಭಾರತದ ಕೆಲವು ಸಂಸ್ಕøತಿಯನ್ನು ಅಮೇರಿಕಾ ಅಳವಡಿಸುತ್ತಿದೆ ಎಂದರೆ ನಂಬಲು ಸಾಧ್ಯವೆ.. ಹೌದು ನಂಬಲೇ ಬೇಕು.. ಪ್ರಧಾನಿ ನರೇಂದ್ರ ಮೋದಿಯವರು ವಿದೇಶ ಪ್ರವಾಸ ಮಾಡಿ ನಮ್ಮ ದೇಶದ ಅಭಿವೃದ್ಧಿ ಮತ್ತು ನಮ್ಮ ಕೆಲ ಸಂಸ್ಕತಿಯನ್ನು ಕೂಡಾ ಆ ದೇಶಕ್ಕೆ ಧಾರೆ ಎರೆದುಕೊಟ್ಟು ಬಂದಿದ್ದಾರೆ ಎಂದು ಹೇಳಬಹುದು… ಇಲ್ಲದಿದ್ದಲ್ಲಿ ನಮ್ಮ ದೇಶದಲ್ಲಿ ನಡೆಯುವ ಹಬ್ಬದ ಬಗ್ಗೆ ಇಲ್ಲಿನ ಜನಗಳಿಗೇ ಇಲ್ಲಿಯ ಹಬ್ಬ ವೈಶಿಷ್ಟ್ಯತೆಗಳ ಬಗ್ಗೆ ಇನ್ನೂ ಕೂಡಾ ಕೆಲ ಜನರಿಗೆ ತಿಳಿದಿಲ್ಲ… ಅದಕ್ಕೆ ಸಾಕ್ಷಿ ಮೋದಿ ಪ್ರಭಾವಕ್ಕೆ ಒಳಗಾಗಿರುವ ಅಮೆರಿಕ ಸಂಸತ್ ಹಿಂದೂಗಳ ಮಹತ್ವದ ಹಬ್ಬ ಸಂಕ್ರಾತಿ (ಪೊಂಗಲ್) ಹಬ್ಬಕ್ಕೆ ರಜೆ ಘೋಷಿಸಿದೆ ಎಂದರೆ ನಿಜಕ್ಕೂ ಆಶ್ಚರ್ಯಕರವಾದ ವಿಷಯವೆಂದೇ ಹೇಳಬಹುದು.. ಮೋದಿ ಯಾವುದೇ ರಾಷ್ಟ್ರಕ್ಕೂ ಭೇಟಿ ನೀಡಿದರೂ ಒಂದು ಮಹತ್ವದ ರಾಜತಾಂತ್ರಿಕ ಯಶಸ್ಸನ್ನು ಕೈಗೊಂಡು ಬರುತ್ತಾರೆ. ಮೋದಿ ಜೀಯವರು ಏನೇ ಮಾಡಿದರೂ ಅದಕ್ಕೊಂದು ಮಹತ್ವ ಪೂರ್ಣವಾದ ಅರ್ಥವಿರುತ್ತದೆ… ಇಷ್ಟು ದಿನ ಟೀಕಿಸುತ್ತಿದ್ದ ಕೆಲ ಜನರಿಗೆ ಈಗಲಾದರೂ ಪ್ರಧಾನಿ ನರೇಂದ್ರ ಮೋದಿಯವರ ಹವಾ ಎಷ್ಟರ ಮಟ್ಟಿಗೆ ವಿದೇಶದಲ್ಲಿ ಹಬ್ಬಿದೆ ಎಂದು..

ಅದಲ್ಲದೆ ಕಳೆದ ಬಾರಿ ನರೇಂದ್ರ ಮೋದಿಯವರು ಇಸ್ರೇಲ್‍ಗೆ ಭೇಟ ನೀಡಿದ್ದಾಗ ಅವರನ್ನ ಆ ಪುಟ್ಟ ದೇಶ ಸತ್ಕರಿಸಿದ ರೀತಿ ಪ್ರತೀ ದೇಶಭಕ್ತ ಭಾರತೀಯರ ಮನದಲ್ಲಿ ಹಾಗೆಯೇ ಇದೆ. ಇಡೀ ಮಂತ್ರಿಮಂಡಲವೇ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮೋದಿಯವರನ್ನ ಸ್ವಾಗತಿಸಿತ್ತು. ವಿಶ್ವದ ಅತ್ಯಂತ ಸುರಕ್ಷಿತ ತಾಣದಲ್ಲಿ ಭಾರತದ ಪ್ರಧಾನಿಗೆ ಭದ್ರತೆ ನೀಡಿ, ರಾಜಾತಿಥ್ಯ ನೀಡಿತ್ತು. ಸ್ವತಃ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಮೆಡಿಟರೇನಿಯನ್ ಸಮುದ್ರ ತೀರಕ್ಕೆ ಮೋದಿಯವರನ್ನ ಕರೆದುಕೊಂಡು ಹೋಗಿದ್ದರು. ಅಷ್ಟೇ ಅಲ್ಲದೇ ಇಸ್ರೇಲಿಗರು ಬೆಳೆಯುವ ವಿಶೇಷವಾದ ಹೂವೊಂದಕ್ಕೆ ಮೋದಿಯವರ ಹೆಸರನ್ನಿಟ್ಟು ಇಸ್ರೇಲ್ ಗೌರವ ಸೂಚಿಸಿತ್ತು.
ಭಾರತ ಮತ್ತು ಇಸ್ರೇಲ್ ನಡುವಿನ ಸಹಕಾರ ಇಷ್ಟು ವರ್ಷ ಬಹುಪಾಲು ರಕ್ಷಣಾ ಕ್ಷೇತ್ರಕ್ಕೆ ಸೀಮಿತವಾಗಿತ್ತು. ಹೀಗಾಗಿಯೇ, ನಮಗೆ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವ ದೇಶಗಳ ಪೈಕಿ ಅಮೆರಿಕ, ರಷ್ಯಾ ನಂತರದ ಸ್ಥಾನದಲ್ಲಿ ಇಸ್ರೇಲ್ ಇತ್ತು. ಇದರಾಚೆಗೂ ಅನೇಕ ಪ್ರಮುಖ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಇದ್ದ ಅವಕಾಶಗಳನ್ನು ಬಳಸಿಕೊಳ್ಳಲು ಎರಡೂ ಕಡೆಯವರು ಮನಸ್ಸು ಮಾಡಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಭೇಟಿ ದ್ವಿಪಕ್ಷೀಯ ಬಾಂಧವ್ಯದಲ್ಲಿ ಹೊಸ ಅಧ್ಯಾಯವನ್ನೇ ತೆರೆದಿದೆ.

ನೀರು, ಕೃಷಿ, ವಿಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಕೈಗಾರಿಕಾ ಸಂಶೋಧನೆ, ಅಣುಚಾಲಿತ ಗಡಿಯಾರ ತಂತ್ರಜ್ಞಾನದಂತಹ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಏಳು ಒಪ್ಪಂದಗಳಾಗಿವೆ. ಇವುಗಳ ಮೊತ್ತ ಸುಮಾರು 500 ಕೋಟಿ ಡಾಲರ್‍ಗಳು (ಸುಮಾರು 32,500 ಕೋಟಿ). ನೀರಿನ ರಕ್ಷಣೆ ಮತ್ತು ಮಿತವ್ಯಯ ಬಳಕೆ, ರಾಡಿ ನೀರು ಸಂಸ್ಕರಣೆ, ಸಂಸ್ಕರಿತ ನೀರನ್ನು ಕೃಷಿ ಕ್ಷೇತ್ರದಲ್ಲಿ ಬಳಸುವುದು ಮತ್ತು ಸಮುದ್ರದ ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತಿಸುವುದರಲ್ಲಿ ತನಗಿರುವ ಪರಿಣತಿಯನ್ನು ಭಾರತದ ಜತೆಗೂ ಹಂಚಿಕೊಳ್ಳಲು ಇಸ್ರೇಲ್ ಮುಂದೆ ಬಂದಿರುವುದು ಇದಕ್ಕೆಲ್ಲಾ ಕಾರಣ ನಮ್ಮ ನರೇಂದ್ರ ಮೋದಿಯವರು.. 260 ಕೋಟಿ ಮೊತ್ತದ ಆವಿಷ್ಕಾರ ನಿಧಿ ಸ್ಥಾಪಿಸಲಾಗಿದೆ. ನವೋದ್ಯಮಗಳಲ್ಲಿ ಎರಡೂ ದೇಶಗಳು ಹೆಸರುವಾಸಿ. ಹೀಗಾಗಿ ಎರಡೂ ಕಡೆಯ ವಿಜ್ಞಾನಿಗಳು ಮತ್ತು ಸಂಶೋಧಕರು ಜಂಟಿಯಾಗಿ ಆವಿಷ್ಕಾರ, ಸಂಶೋಧನೆ ಕೈಗೊಳ್ಳಲು ಈ ಉಪಕ್ರಮ ಉತ್ತೇಜನ ಕೊಡುತ್ತದೆ.

ಎರಡೂ ದೇಶಗಳು ಭಯೋತ್ಪಾದನೆಯ ಹಾವಳಿಯನ್ನು ಎದುರಿಸುತ್ತಿವೆ. ಆದ್ದರಿಂದ ಇಬ್ಬರೂ ಪ್ರಧಾನಿಗಳ ಮಾತುಕತೆಯಲ್ಲಿ ಈ ವಿಚಾರವೂ ಮುಖ್ಯವಾಗಿ ಚರ್ಚೆಗೆ ಬಂದದ್ದು ಸಹಜ. ಆದರೆ ಅಷ್ಟಕ್ಕೇ ಬೇಲಿ ಹಾಕಿಕೊಳ್ಳದೆ ಅದರಾಚೆಗೂ ದೃಷ್ಟಿ ಹರಿಸಿದ್ದು ಒಳ್ಳೆಯ ಬೆಳವಣಿಗೆ. ಅದರ ಅಗತ್ಯವೂ ಇತ್ತು. ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ, ಕಡಿಮೆ ನೀರು ಬಳಸಿ ಅತಿ ಹೆಚ್ಚಿನ ಇಳುವರಿ ಪಡೆಯುವುದರಲ್ಲಿ ಇಸ್ರೇಲ್ ಹೆಸರುವಾಸಿ. ಆ ಜ್ಞಾನ ಸಿಕ್ಕರೆ ನಮ್ಮ ಕೃಷಿ ಕ್ಷೇತ್ರಕ್ಕೆ ಅನುಕೂಲವಾಗುತ್ತದೆ.

Related image

ಈ ಒಪ್ಪಂದ ಅದಕ್ಕೂ ಅವಕಾಶ ಮಾಡಿಕೊಡುತ್ತದೆ. `ಭಾರತದಲ್ಲಿಯೇ ತಯಾರಿಸಿ’ ಅಥವಾ `ಮೇಕ್ ಇನ್ ಇಂಡಿಯಾ’ ಎಂಬ ಮೋದಿ ಮಂತ್ರಕ್ಕೂ ಜೊತೆಯಾಗಲು ಇಸ್ರೇಲ್ ಉತ್ಸುಕತೆ ತೋರಿದ್ದು ವಿಶೇಷ. ಇದರಿಂದ ರಕ್ಷಣಾ ಉತ್ಪನ್ನಗಳ ತಂತ್ರಜ್ಞಾನ ವಿನಿಮಯಕ್ಕೆ ಮತ್ತು ಭಾರತದಲ್ಲಿಯೇ ತಯಾರಿಸಲು ಒತ್ತು ಸಿಗಲಿದೆ. ಭಾರತಕ್ಕೆ ರಕ್ಷಣಾ ಉತ್ಪನ್ನಗಳ ಸರಬರಾಜು ಮತ್ತು ತಂತ್ರಜ್ಞಾನ ವರ್ಗಾವಣೆ ವಿಚಾರದಲ್ಲಿ ಇಸ್ರೇಲ್ ಯಾವತ್ತೂ ಹಿಂಜರಿಕೆ ತೋರಿಸಿಲ್ಲ, ಬಳಕೆಯ ವಿಚಾರದಲ್ಲಿ ಷರತ್ತು ಹಾಕಿಲ್ಲ. ಅದು ಅತ್ಯಂತ ನಂಬಿಕಸ್ಥ ಪೂರೈಕೆದಾರ. ಈಗ ಒಪ್ಪಂದ ಮಾಡಿಕೊಂಡ ಇತರ ಕ್ಷೇತ್ರಗಳಲ್ಲಿಯೂ ಅದರಿಂದ ಇದೇ ರೀತಿಯ ವಿಶ್ವಾಸ ನಿರೀಕ್ಷಿಸಬಹುದು. ಇದು ಮೋದಿ ಅವರ ಈ ಭೇಟಿಯ ಅತಿದೊಡ್ಡ ಫಲಶ್ರುತಿ. ಸ್ವಾತಂತ್ರ್ಯಾನಂತರ ಭಾರತದ ಪ್ರಧಾನಿಯೊಬ್ಬರ ಮೊದಲ ಇಸ್ರೇಲ್ ಭೇಟಿಗೆ ಇದು ಇನ್ನಷ್ಟು ಮೌಲ್ಯ ತಂದುಕೊಟ್ಟಿದೆ. ಹೀಗೆ ಅಮೇರಿಕಾ ಮತ್ತು ಇಸ್ರೇಲ್ ಪ್ರಧಾನಿ ನರೇಂದ್ರ ಮೋದಿಜೀಯವರಿಂದ ಭಾರತಕ್ಕೆ ಬಲು ಹತ್ತಿರವಾದ ಸಂಬಂಧವನ್ನು ಕಲ್ಪಿಸಿದೆ ಎಂದೇ ಹೇಳಬಹುದು.. ವಿಶ್ವದ ದೊಡ್ಡಣ್ಣ ಎಂದೇ ಕರೆಯಲ್ಪಡುವ ಅಮೆರಿಕಾವೇ ಇಂತಹ ಭಾರತದ ಸಂಸ್ಕತಿಯನ್ನು ಎತ್ತಿಹಿಡಿಯುತ್ತಿದೆ ಎಂದರೆ ಇದಕ್ಕೆಲ್ಲಾ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ
ಪವಿತ್ರ

Tags

Related Articles

Close