ಅಂಕಣ

ಅಯ್ಯಾ ನರೇಂದ್ರ ಮೋದಿ!! ನೀವು ಪ್ರಧಾನಿಯಾಗಿ ಮಾಡಿದ್ದೇನು?! ಛೇ! ನೀವೂ ಒಬ್ಬ ರಾಜಕಾರಣಿಯೇ?!

ಅಯ್ಯಾ ನರೇಂದ್ರ ಮೋದಿ ನೀವು ಪ್ರಧಾನಿಯಾಗಿ ಮಾಡಿದ್ದೇನು? ಒಬ್ಬರು ರಾಜಕಾರಣಿಯಾಗಿರುವವರು ಏನು ಮಾಡಬೇಕಿತ್ತೋ ಅದನ್ನು ನೀವು ಮಾಡಿಲ್ಲ ಎಂದಾದರೆ ನಿಮ್ಮನ್ನು ರಾಜಕಾರಣಿ ಎನ್ನಲು ಸಾಧ್ಯವೇ? ನಿಮ್ಮನ್ನು ಹಾಡಿ ಹೊಗಳುವ ಭಕ್ತರಿಗೆ ಬೇರೆ ಕೆಲಸವಿಲ್ಲವೇ? ಯಾಕೆ ಮೋದಿಯನ್ನು ಈ ತರ ಸಮರ್ಥಿಸಿಕೊಳ್ಳುತ್ತೀರಿ? ಈ ಮೋದಿಗೆ ಆಗದಿದ್ದರೆ ಬೇರೆ ರಾಜಕಾರಣಿಗಳನ್ನು ನೋಡಿಯಾದರೂ ಕಲಿಯಬಾರದೇ?

ಸ್ವಾಮೀ ಮೋದೀಜಿ ನೀವು 13 ವರ್ಷ ಗುಜರಾತ್ ಮುಖ್ಯಮಂತ್ರಿಯಾಗಿ, ಮೂರೂವರೆ ವರ್ಷ ಭಾರತದ ಪ್ರಧಾನಿಯಾಗಿದ್ದೀರಿ. ಆದರೆ ನಿಮ್ಮಿಂದ ಒಂದೇ ಒಂದು ರೂಪಾಯಿ ಭ್ರಷ್ಟಾಚಾರ ಮಾಡ್ಲಿಕ್ಕೆ ಆಗಲಿಲ್ಲ. ನೀವೂ ಒಬ್ಬ ರಾಜಕಾರಣಿಯೇ? ಆ ಕಾಂಗ್ರೆಸ್‍ನವರನ್ನು ನೋಡಿಯಾದರೂ ಕಲಿಯಬಾರದೇ? ಬೇರೆ ಯಾರೇ ಪ್ರಧಾನಿಯಾಗಿದ್ದರೂ ಎಷ್ಟೆಲ್ಲಾ ಭ್ರಷ್ಟಾಚಾರ ಮಾಡಿಕೊಂಡು ಸಾಕಷ್ಟು ದುಡ್ಡು ಮಾಡಿ ಸ್ವಿಸ್ ಬ್ಯಾಂಕ್‍ನಲ್ಲಿರಿಸುತ್ತಿದ್ದರು. ಆದರೆ ನಿಮ್ಮಿಂದ ಆಗಲಿಲ್ಲವಲ್ಲ…

ಇಷ್ಟು ವರ್ಷಗಳ ಕಾಲ ರಾಜಕೀಯದಲ್ಲಿದ್ದೀರಿ… ಆದರೆ ನೀವು ರಾಜಕೀಯದಲ್ಲಿದ್ದು ಮಾಡಿದ್ದೇನು? ಆ ನೆಹರೂ, ಆ ಇಂದಿರಾ, ಆ ಸೋನಿಯಾ, ಆ ದೇವೇಗೌಡ, ಎಷ್ಟು ಮಂದಿ ಇದ್ದಾರೆ? ಇವೆರೆಲ್ಲಾ ತನ್ನ ಕುಟುಂಬಿಕರನ್ನೆಲ್ಲಾ ರಾಜಕೀಯಕ್ಕೆ ಕರೆತಂದಿದ್ದರೂ ನಿಮ್ಮ ಇಷ್ಟು ಸುಧೀರ್ಘ ರಾಜಕಾರಣದಲ್ಲಿ ಒಬ್ಬರೇ ಒಬ್ಬ ಕುಟುಂಬಸ್ಥರನ್ನು ರಾಜಕೀಯಕ್ಕೆ ಕರೆತರಲಾಗಲಿಲ್ಲವಲ್ಲ… ಛೆ ನೀವು ರಾಜಕೀಯದಲ್ಲಿದ್ದುಕೊಂಡು ಇಷ್ಟೂ ಮಾಡಲಾಗದೆ ಇದ್ದೇನು ಪ್ರಯೋಜನವಾಯಿತು?

 

ಕುಟುಂಬದ ಸದಸ್ಯರನ್ನು ರಾಜಕೀಯಕ್ಕೆ ಕರೆತರುವುದು ಬಿಟ್ಟುಬಿಡಿ ಆದರೆ ಕುಟುಂಬದ ಹೆಸರಲ್ಲಿ ಒಂದು ಮನೆ, ಕಾರು, ಬಂಗ್ಲೆ, ಆಸ್ತಿ ಏನಾದ್ರೂ ಮಾಡಿಕೊಟ್ಟಿದ್ದೀರಾ? ಇಂದು ಒಬ್ಬ ಗ್ರಾಮ ಪಂಚಾಯತ್ ಸದಸ್ಯನೊಬ್ಬ ಮಾಡುವ ದುಡ್ಡು, ಆಸ್ತಿ ನೋಡಿದ್ದೀರಾ.. ಇಷ್ಟು ದೊಡ್ಡ ಹುದ್ದೆ, ಅಧಿಕಾರ ಬಲ ಇದ್ದರೂ ಕೋಟಿಗಟ್ಟಲೆ ಆಸ್ತಿ ಮಾಡಲಾಗಲಿಲ್ಲ ಅಂದ್ರೆ ನೀವೂ ಒಬ್ಬ ರಾಜಕಾರಣಿಯಾ? ನೀವು ಬೇರೆ ಪಕ್ಷದವರನ್ನು ನೋಡಿ ಕಲಿಯಬೇಕಾದುದು ತುಂಬಾ ಇದೆ ಮೋದೀ!!

ಮೋದೀ ನಿಮಗೆ ಪುರ್ಸೊತ್ತು ಇದ್ದರೆ ಕಾಂಗ್ರೆಸ್‍ನ ಅಧಿದೇವತೆ, ಕಾಂಗ್ರೆಸಿಗರ ಮಹಾಮಾತೆ, ತ್ಯಾಗಮೂರ್ತಿ ಸೋನಿಯಾ ಮೇಡಂನ ನೋಡಿ ಕಲಿಯಿರಿ. ಯಾಕೆ ಗೊತ್ತಾ ಸ್ವಲ್ಪ ಕೆಮ್ಮು ಬಂದ್ರೂ ವಿದೇಶಕ್ಕೆ ತೆರಳಿ ಹೈಟೆಕ್ ಚಿಕಿತ್ಸೆ ಪಡೆದು ವಿದೇಶ ಸುತ್ತಿ ಬರುತ್ತಾರೆ. ಇದೆಲ್ಲಾ ಸರಕಾರದ ದುಡ್ಡಿನಿಂದ. ಆದರೆ ನಿಮ್ಮ ತಾಯಿ
ಹೀರಾಬೆನ್‍ಗೆ ಆರೋಗ್ಯ ಕೆಟ್ಟರೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೀರಲ್ಲಾ? ತಾಯಿಯನ್ನು ಹೈಟೆಕ್ ಆಸ್ಪತ್ರೆಗೆ ಸೇರಿಸಿ ತೆರಿಗೆ ಹಣ ಪೋಲು ಮಾಡದ ನೀವೂ ಒಬ್ಬ ರಾಜಕಾರಣಿಯೇ ಮೋದೀಜೀ?! ಛೇಛೇ!

ನೀವು ಸೋನಿಯಾಳನ್ನು ನೋಡಿ ಇಷ್ಟು ಮಾತ್ರವಲ್ಲ ಇನ್ನೂ ಅನೇಕ ವಿಷ್ಯಗಳನ್ನು ಕಲಿಯುವುದಕ್ಕಿದೆ. ಸರಕಾರಕ್ಕೆ ಸಂಬಂಧಪಡದ ವ್ಯಕ್ತಿ ತನ್ನ ಅಳಿಯ ರಾಬರ್ಟ್ ವಾದ್ರಾನಿಗೆ ಸರಕಾರಿ ದುಡ್ಡಿನಲ್ಲಿ ಝಡ್‍ಪ್ಲಸ್ ಸೆಕ್ಯುರಿಟಿ ಕೊಟ್ಟು, ಐಷಾರಾಮಿ ಕಾರು ಕೊಟ್ಟಿದ್ದಾರೆ. ಆದರೆ ಮೋದಿ ನೀವು ನಿಮ್ಮ ಅಮ್ಮನಿಗೆ ಮಾಡಿದ್ದೇನು? ನಿಮ್ಮ ಅಮ್ಮ ಇಂದೂ ಕೂಡಾ ಆಟೋದಲ್ಲೇ ತಿರುಗುತ್ತಾರಲ್ಲಾ? ದೊಡ್ಡದೊಂದು ಮನೆ ಕೊಟ್ಟು, ಒಂದಷ್ಟು ಐಷಾರಾಮಿ ವಸ್ತುಗಳನ್ನು ಕೊಟ್ಟು, ಐಷಾರಾಮಿ ಕಾರು ಕೊಟ್ಟು ಅಮ್ಮನನ್ನು ನೋಡಿಕೊಳ್ಳಬೇಕಿತ್ತಲ್ಲವೇ? ಜನರ ದುಡ್ಡಲ್ಲಿ ಅಮ್ಮನಿಗೆ ಒಂದು ಕಾರು ಕೊಡಿಸಲಾಗದ ನೀವೂ ಒಬ್ಬ ರಾಜಕಾರಣಿಯಾ ಮೋದೀಜೀ!!

ನೀವು ಕಮ್ಯುನಿಸ್ಟ್, ಕಾಂಗ್ರೆಸಿಗರನ್ನು ನೋಡಿದ್ದೀರಾ? ಅಧಿಕಾರಕ್ಕಾಗಿ ಏನು ಮಾಡಲೂ ಹೇಸುವುದಿಲ್ಲ. ಅವರ ಬಾಯಿಯಲ್ಲಿ ಬರುವ ಅಣಿಮುತ್ತುಗಳನ್ನುಗಮನಿಸಿದ್ದೀರಾ? ಅದೆಲ್ಲಾ ಬಿಟ್ಟಾಕಿ ಈ ಕಿರಾತಕರು ನಿಮ್ಮ ಬಗ್ಗೆಯೇ ಎಷ್ಟೊಂದು ಕೊಳಕು ಮಾತುಗಳಲ್ಲಿ ಮಾತಾಡಿದ್ದಾರೆ? ಛೀ ಅದನ್ನು ಬಾಯಿಯಿಂದ
ಹೇಳುವಂತೆಯೇ ಇಲ್ಲ. ಆದರೆ ರಾಜಕೀಯ ಇತಿಹಾಸದಲ್ಲಿ ನೀವು ಮಾತ್ರ ಇದುವರೆಗೆ ಒಂದೇಒಂದು ಬಾರಿ ಅಪ್ಪಿತಪ್ಪಿಯೂ ಕೆಟ್ಟ ಮಾತುಗಳನ್ನು ಆಡಿಲ್ಲ ಅಂದ್ರೆ ನೀವೂ ಒಬ್ಬ ರಾಜಕಾರಣಿಯಾ?

ತನ್ನ ಇಡೀ ಕುಟುಂಬಿಕರನ್ನು ರಾಜಕೀಯಕ್ಕೆ ಕರೆತಂದು, ತನ್ನ ಸಹೋದರ ಸಹೋದರಿ ಸೇರಿ ಕುಟುಂಬಿಕರಿಗೆಲ್ಲಾ ಆಸ್ತಿ ಕೂಡಿಟ್ಟುಕೊಳ್ಳುವ ಇಂತಹಾ ಸಮಯದಲ್ಲಿ ನೀವು ಮಾಡಿದ್ದೇನು? ನಿಮ್ಮ ಸಹೋದರರು ಇನ್ನೂ ಮಧ್ಯಮ ವರ್ಗದಲ್ಲೇ ಜೀವನ ನಡೆಸುತ್ತಿರುವಾಗ ಜನರ ತೆರಿಗೆ ಹಣದಲ್ಲಿ ಅವರಿಗೆ ಸಾಕಷ್ಟು ಆಸ್ತಿಪಾಸ್ತಿ ಕರುಣಿಸಿ ಬ್ಯಾಂಕ್ ಬ್ಯಾಲನ್ಸ್ ಮಾಡಿಕೊಡದ ನೀವೂ ಒಬ್ಬ ರಾಜಕಾರಣಿಯೇ…?

ಸರಕಾರಿ ದುಡ್ಡಿನಲ್ಲಿ ಇಡೀ ಕುಟುಂಬದವರ ಜೊತೆ ತಿಂಗಳಿಗೊಮ್ಮೆ ವಿದೇಶಕ್ಕೆ ತೆರಳಿ ಮೋಜಿ ಮಸ್ತಿ ಮಾಡುವ ರಾಜಕಾರಣಿಗಳಿರುವಾಗ ನಿಮಗೂ ತನ್ನ ಕುಟುಂಬದವರ ಜೊತೆ ತೆರಳಿ ಮೋಜು ಮಾಡಿ ಬರಬಹುದಲ್ವೇ? ಅದು ಬಿಟ್ಟು ದಿನಕ್ಕೆ 18 ಗಂಟೆ ದುಡಿದು ಕೆಲಸ ಮಾಡುವ ನೀವೂ ಒಬ್ಬ ರಾಜಕಾರಣಿಯೇ? ಮೋದೀಜಿ ನೀವು ಬೇರೆ ರಾಜಕಾರಣಿಗಳನ್ನು ನೋಡಿ ಕಲಿಯಬೇಕಾಗಿರುವುದು ತುಂಬಾ ಇದೆ.

ಗಡದ್ದಾಗಿ ಕುರಿ, ದನ, ಹಂದಿ ಮಾಂಸ ಸೇರಿ ಹೊಟ್ಟೆ ಬಿರಿಯುವಷ್ಟು ತಿಂದು ಕಾಟಾಚಾರಕ್ಕೆ ದೇವಸ್ಥಾನಕ್ಕೆ ಹೋಗಿ ಬರುವ ಅನೇಕ ರಾಜಕಾರಣಿಗಳಿದ್ದಾರೆ. ಆದರೆ ನೀವು ಮಾತ್ರ ಉಪವಾಸ ಮಾಡುತ್ತಾ.. ದೇವಸ್ಥಾನಕ್ಕೆ ಶ್ರದ್ಧಾ ಭಕ್ತಿಗಳಿಂದ ತೆರಳಿ ಬರುತ್ತಿರುವ ನೀವೂ ಒಬ್ಬ ರಾಜಕಾರಣಿಯೇ ಛೆ ಛೆ!!

ಭಾರತದ ರಾಜಕಾರಣಿಗಳು ಓಟಿಗಾಗಿ ಯಾವ ನಾಟಕಕ್ಕೂ ಸಿದ್ದರಿದ್ದಾರೆ. ಮುಸ್ಲಿಮರೆಡೆಗೆ ಹೋಗಿ ಟೋಪಿಯೂ ಹಾಕ್ತಾರೆ, ಏನು ಬೇಕಾದ್ರೂ ಮಾಡ್ತಾರೆ. ಭಾರತದ ರಾಜಕಾರಣಿ ಅಂದಮೇಲೆ ಆತ ಮುಸಲ್ಮಾನರ ಟೋಪಿ ಹಾಕದಿದ್ದರೆ ಹೇಗೆ…. ಹೀಗೆ ಮುಸಲ್ಮಾನರ ಟೋಪಿ ಹಾಕಿ ಕೊನೆಗೆ ಅವರಿಗೂ ಟೋಪಿ ಹಾಕಿ ಮೋಸ ಮಾಡುವ ರಾಜಕಾರಣಿಗಳು ಇರುವಾಗ…. ಹಣೆಯಲ್ಲಿ ಕುಂಕುಮ, ತಿಲಕ, ಗಂಧ ಇಟ್ಕೊಂಡು ನಾನೊಬ್ಬ ಹಿಂದೂ ರಾಷ್ಟ್ರೀಯವಾದಿ ಅಂತ ಕೂಗಿ ಕೂಗಿ ಹೇಳುವ ಮೋದಿ ಒಬ್ಬ ರಾಜಕಾರಣಿಯೇ…? ಛೆ!!

ಸ್ನೇಹಿತರೇ ನಾನಂತೂ ಈ ಮೋದಿಯನ್ನು ನಂಬಿ ಸಂಪೂರ್ಣವಾಗಿ ಹಾಳಾಗಿದ್ದೇನೆ. ಆದರೇನು ಮಾಡುವುದು ಕಷ್ಟ ಆದ್ರೂ ಮೋದಿಯನ್ನೇ ನಂಬುತ್ತೇನೆ. ನನ್ನನ್ನು ನೀವು ಭಕ್ತರೆಂದು ಕರೆದರೂ ನನಗೇನೂ ಬೇಜಾರಿಲ್ಲ. ಮೋದಿಯನ್ನು ನಂಬಿ ಮೋಸ ಹೋಗಿದ್ದೇನೆ. ಆದರೆ ನೀವು ಮೋದಿಯನ್ನು ವಿರೋಧಿಸುವ ದೇಶದ್ರೋಹಿಗಳನ್ನು ಬೆಂಬಲಿಸುತ್ತನೇ ಇರಿ. ದೇಶದ್ರೋಹಿಗಳನ್ನು ಬೆಂಬಲಿಸುತ್ತಾ ಜೋಳಿಗೆ ತುಂಬಿಕೊಳ್ಳುವ ಅವಕಾಶಗಳನ್ನು ಸುಮ್ನೆ ಯಾಕೆ ಕಳೆದುಕೊಳ್ಳುತ್ತೀರಿ?!

postcard team

Tags

Related Articles

Close