ಪ್ರಚಲಿತ

2017ರಲ್ಲಿ 190 ಉಗ್ರರು ಫಿನಿಶ್! ಅದರಲ್ಲಿ ಒಳಗಿನವರೆಷ್ಟು? ಹೊರಗಿನವರೆಷ್ಟು?

ಭಯೋತ್ಪಾದನೆಯನ್ನು ಮಟ್ಟ ಹಾಕುತ್ತೇವೆ ಎಂದು ಮೋದೀಜಿ ಸುಮ್ಮನೆ ಬಾಯಿ ಮಾತಿಗೆ ಹೇಳೋದಲ್ಲ ಎಂಬುದನ್ನು ಮತ್ತೆ ಸಾಭೀತು ಮಾಡಿದ್ದಾರೆ. ಭಾರತದ ತಂಟೆಗೆ ಬಂದ ಉಗ್ರರನ್ನು ಹೊಡೆದುರುಳಿಸಿ ತನ್ನ 56 ಇಂಚಿನ ಎದೆಯ ಪ್ರತಾಪವನ್ನು ಜಗತ್ತಿನ ಎದುರು ತೋರಿಸಿದ್ದಾರೆ. “ಮೋದಿ ಪ್ರಧಾನಿಯಾದರೆ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳಿಗೆ ಬ್ರೇಕ್ ಬೀಳುತ್ತೆ” ಎಂಬ ಮಾತುಗಳನ್ನು ಸುಳ್ಳು ಮಾಡಲಿಲ್ಲ ಮೋದಿ.
ಅಸಲಿಗೆ ಉಳಿದೆಲ್ಲಾ ರಾಜಕಾರಣಗಳಿಗಿಂತ ಮೋದಿ ಕೇವಲ ರಾಜಕಾರಣಿ ಅಲ್ಲ. ಅವರಿಗೆ ಎಲ್ಲರಿಗಿಂತಲೂ ಚೆಚ್ಚಾಗಿ ಉಗ್ರರ ಬೆದರಿಕೆ ಇದೆ ಎಂಬುವುದು ನಗ್ನ ಸತ್ಯ. ಯಾಕೆಂದರೆ ಅವರು ಈ ಹಿಂದೆಯೇ “ನಾನೊಬ್ಬ ಹಿಂದೂ ರಾಷ್ಟ್ರೀಯವಾದಿ” ಎಂದು ಘರ್ಜಿಸಿಕೊಂಡು ಬಂದವರು. ಹೀಗಾಗಿ ಅವರ ಆಡಳಿತವನ್ನು ವಿಫಲಗೊಳಿಸಬೇಕೆಂದು ಉಗ್ರರು ಕಾಯುತ್ತಲೇ ಇದ್ದರು. ಆದರೆ ಅವರ ಪ್ರಯತ್ನಕ್ಕೆ ಪ್ರತಿಫಲ ಸಿಗಲೇ ಇಲ್ಲ. ಮೋದೀಜಿ ಅಧಿಕಾರಕ್ಕೆ ಬಂದ ನಂತರ ಒಂದೇ ಒಂದು ಭಯೋತ್ಪಾದನಾ ಕೃತ್ಯ ಭಾರತದಲ್ಲಿ ನಡೆದಿಲ್ಲ ಎಂಬುವುದು 56 ಇಂಚಿನ ಎದೆಯುಳ್ಳ ಪ್ರಧಾನಿ ನರೇಂದ್ರ ಮೋದಿಯ ದಕ್ಷ ಆಡಳಿತವೇ ಸಾಕ್ಷಿ.
ಜಮ್ಮು-ಕಾಶ್ಮೀರದ ಬಂಡಿಪೆÇೀರಾದಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಆರು ಲಷ್ಕರ್-ಎ-ತೊಯ್ಬಾ ಉಗ್ರರನ್ನು ಹೊಡೆದುರುಳಿಸಿದ ಬೆನ್ನಿಗೆ ಈ ವರ್ಷ 190 ಉಗ್ರರ ತಲೆ ಉರುಳಿಸಿದ್ದೇವೆ ಎಂದು ಲೆಫ್ಟಿನೆಂಟ್ ಜನರಲ್ ಜೆ.ಎಸ್.ಸಂಧು ಹೇಳಿದ್ದಾರೆ. ಜಮ್ಮು-ಕಾಶ್ಮೀರ ಪೆÇಲೀಸ್ ಮತ್ತು ಸೇನೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, 2017ರಲ್ಲಿ ಇದುವರೆಗೂ 80 ಸ್ಥಳೀಯ ಉಗ್ರರು ಮತ್ತು 110 ವಿದೇಶಿ ಉಗ್ರರನ್ನು ಕಾರ್ಯಾಚರಣೆಯಲ್ಲಿ ಹತ್ಯೆಗೈಯಲಾಗಿದೆ. ಆ ಪೈಕಿ 66 ಉಗ್ರರನ್ನು ಗಡಿ ನಿಯಂತ್ರಣ ರೇಖೆ ಬಳಿ ಅಕ್ರಮ ಒಳನುಸುಳುವಿಕೆ ಸಂದರ್ಭದಲ್ಲಿ ಹೊಡೆದುರುಳಿಸಲಾಗಿದೆ ಎಂದಿದ್ದಾರೆ.
ಕಾಶ್ಮೀರವನ್ನು ಉಗ್ರರ ತವರು ಮಾಡಲು ಪಾಕಿಸ್ತಾನ ಪೆÇೀಷಿತ ಉಗ್ರ ಸಂಘಟನೆಗಳು ಮುಂಚಿ ನಿಂದಲೂ ಯತ್ನಿಸುತ್ತಿವೆ. ಆದರೆ, 125-130 ಉಗ್ರರನ್ನು ಹತ್ಯೆ ಮಾಡುವ ಮೂಲಕ ಕಣಿವೆ ರಾಜ್ಯದಲ್ಲಿ ಪರಿಸ್ಥಿತಿಯಲ್ಲಿ ಗಣನೀಯ ಬದಲಾವಣೆ ತರಲಾಗಿದೆ ಎಂದು ಸಂಧು ವಿವರಿಸಿದ್ದಾರೆ.
ಐಸಿಸ್ ಕಾಶ್ಮೀರಕ್ಕೆ ಕಾಲಿಟ್ಟಿಲ್ಲ 
ನವೆಂಬರ್ 17ರಂದು ಶ್ರೀನಗರ ಝುಕುರಾ ಪ್ರದೇಶದಲ್ಲಿ ಪೆÇಲೀಸ್ ಹತ್ಯೆಮಾಡಿ ಕಾಶ್ಮೀರ ಪ್ರವೇಶಿಸಲಾಗಿದೆ ಎಂದು ಐಸಿಸ್ ಉಗ್ರ ಸಂಘಟನೆ ಹೇಳಿಕೊಂಡಿರುವುದು ಸುಳ್ಳೆಂದು ಜಮ್ಮು-ಕಾಶ್ಮೀರ ಪೆÇಲೀಸ್ ಮಹಾನಿರ್ದೇಶಕ ಎಸ್.ಪಿ.ವೈದ್ ಹೇಳಿದ್ದಾರೆ. ಈಗಾಗಲೇ ಕಣಿವೆಯಲ್ಲಿ ಲಷ್ಕರ್-ಎ-ತೊಯ್ಬಾ ಹುಟ್ಟಡಗಿಸಲಾಗಿದೆ. ಹಾಜಿನ್ ಪ್ರದೇಶದಲ್ಲಿ ಉಗ್ರರ ಚಟುವಟಿಕೆ ಹೆಚ್ಚಿರುವ ಮಾಹಿತಿ ಆಧರಿಸಿ ಸೆಪ್ಟೆಂಬರ್‍ನಿಂದ ಕಾರ್ಯಾಚರಣೆ ತೀವ್ರಗೊಳಿಸಿದ್ದೇವೆ. ಇದರ ಮಧ್ಯೆ ಐಸಿಸ್ ಕಾಲಿರಿಸಿರುವ ಸಂಭಾವ್ಯತೆ ಇಲ್ಲ ಎಂದಿದ್ದಾರೆ.
ಸಿಆರ್‍ಪಿಎಫ್ ಸಹಾಯವಾಣಿ
ಕಾಶ್ಮೀರದ ಯುವಕರುಉಗ್ರ ಸಂಘಟನೆಗಳ ಪ್ರಭಾವದಿಂದ ಹಾದಿ ತಪ್ಪುತ್ತಿರುವುದು ಪ್ರಮುಖವಾಗಿ ಆತಂಕಕಾರಿ ವಿಷಯವಾಗಿತ್ತು. ಪರಿಣಾಮ ಎರಡು ಕಾರ್ಯತಂತ್ರ ಅನುಸರಿಸುತ್ತಿದ್ದೇವೆ ಎಂದು ಲೆಫ್ಟಿನೆಂಟ್ ಜನರಲ್ ಸಂಧು ವಿವರಿಸಿದ್ದಾರೆ. ಮೊದಲನೆಯದು ಉಗ್ರ ಸಂಘಟನೆಯ ಕಾರ್ಯಾಚರಣೆ. ಎರಡನೆಯದು ಯುವಕರಿಗೆ ಪಾಲಕರಿಂದ ತಿಳಿ ಹೇಳಿಸಿ ಶಸ್ತ್ರತ್ಯಜಿಸಲು ಪ್ರೇರೇಪಣೆ. ಜತೆಗೆ ಉಗ್ರಸಂಘಟನೆಯಿಂದ ಹೊರಬರುವ ದಾರಿತೋಚದೆ ತೊಳಲಾಡುತ್ತಿರುವ ಯುವಕರ ನೆರವಿಗೆ ಕೇಂದ್ರೀಯ ಮೀಸಲು ಪೆÇಲೀಸ್ ಪಡೆಯು (ಸಿಆರ್‍ಪಿಎಫ್) 14411 ಹೆಲ್ಪ್‍ಲೈನ್ ಆರಂಭಿಸಿದೆ. ಪೆÇಲೀಸ್ ಭದ್ರತೆಯಲ್ಲಿ ಅಂಥ ಯುವಕರನ್ನು ಮುಖ್ಯವಾಹಿನಿಗೆ ಕರೆ ತರಲಾಗುವುದು ಎಂದು ಸಂಧು ತಿಳಿಸಿದ್ದಾರೆ.
ಉಗ್ರರು ಫಿನಿಷ್
ಬುರ್ಹಾನ್ ವಾನಿ ಹತ್ಯೆಯ ಬಳಿಕ ಆತನ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದ ಹಿಜ್ಬುಲ್ ಮುಜಾಹಿದೀನ್ ಉಗ್ರಸಬ್ಜರ್ ಅಹ್ಮದ್ ಭಟ್ ಮತ್ತುಲಷ್ಕರ್ ಉಗ್ರ ಅಬು ದುಜಾನ ಹತ್ಯೆಯಾದವರಲ್ಲಿ ಪ್ರಮುಖರು. ಲಷ್ಕರ್ ಎ ತೊಯ್ಬಾದ 38ಕ್ಕೂ ಅಧಿಕ ಉಗ್ರರು, ಹಿಜ್ಬುಲ್‍ನ 37, ಅಲ್ ಕೈದಾದ ಝಾಕಿರ್ ಮೂಸಾ ಗುಂಪಿನ ಮೂವರು ಸಹಿತ ವಿವಿಧ ಉಗ್ರ ಸಂಘಟನೆಗಳ 60ಕ್ಕೂ ಹೆಚ್ಚುಉಗ್ರರನ್ನು ಭದ್ರತಾ ಪಡೆಗಳು ಇದುವರೆಗೂ ಹತ್ಯೆಗೈದಿವೆ. ಬಷೀರ್ ಲಷ್ಕರಿ, ಆಜಾದ್ ವುಲಿಕ್, ಸಾಜದ್ ಗಿಲ್ಕರ್, ಅಬು ಹ್ಯಾರಿಸ್, ಅಬುಲ್‍ಅಲಿ, ಅಬುಲ್ ಮಾಲ, ಅನಿಸ್‍ಭಾಯ್, ಅಬು ಉಮರ್, ಅಬು ಮಾವಿಯ ಮತ್ತು ಶೇರ್ ಗುಜ್ರಿ ಮತ್ತಿತರ ಪ್ರಮುಖ ಉಗ್ರರನ್ನು ಸೇನೆ ಹತ್ಯೆ ಮಾಡಿದೆ. ಸ್ಥಳೀಯ ಉಗ್ರರು ತಮ್ಮನ್ನು ಮುಜಾಹಿದೀನ್ ಯೋಧರು ಎಂದು ಕರೆದುಕೊಳ್ಳುವ ಮುನ್ನ ಪಾಕ್ ಕೈಗೊಂಬೆಗಳು ಎಂಬುದನ್ನು ಅರಿಯಲಿ. ಶಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬರಲಿಚ್ಛಿಸುವ ಉಗ್ರ ಸಂಘಟನೆಯಲ್ಲಿನ ಯುವಕರಿಗೆ ಸ್ವಾಗತವಿದೆ.
ಉಗ್ರ ನಿಗ್ರಹದ ರೂವಾರಿ ಟಾಪ್ ಕಾಪ್ ವೈದ್
ಮೂಲತಃ ಜಮ್ಮುವಿನ ಕಥುವಾ ಜಿಲ್ಲೆಯವರಾದ ಜಮ್ಮು-ಕಾಶ್ಮೀರ ಪೆÇಲೀಸ್ ಮಹಾನಿರ್ದೇಶಕ ಎಸ್.ಪಿ.ವೈದ್ ಕಳೆದ ವರ್ಷ ಅಧಿಕಾರ ವಹಿಸಿಕೊಂಡಾಗಿನಿಂದ ಸೇನಾಕಾರ್ಯಾಚರಣೆ ಜತೆಗೆ ಹೆಗಲು ಕೊಟ್ಟು ಕಣಿವೆಯಲ್ಲಿ ಶಾಂತಿ ಸ್ಥಾಪನೆಗೆ ಅವಿರತ ಶ್ರಮಿಸಿದ್ದಾರೆ. ಕಣಿವೆಯ ವಾಸ್ತವತೆ ಪರಿಚಯವಿರುವ 1986ರ ಕಾಶ್ಮೀರ ಕೇಡರ್ ಅಧಿಕಾರಿ, ರಾಜ್ಯದಯುವಕರು ಅನಿವಾರ್ಯತೆಯಿಂದ ಉಗ್ರ ಸಂಘಟನೆಗಳ ಬಾಗಿಲು ತಟ್ಟುವುದನ್ನುಅರಿತು ಸೌಹಾರ್ದಯುತ ವಾತಾವರಣ ನಿರ್ವಣಕ್ಕೆ ಕಾರ್ಯತಂತ್ರ ಹೆಣೆದಿದ್ದರು. ಬಲಪ್ರಯೋಗದ ಬದಲು ಸ್ಥಳೀಯರ ಮನಗೆದ್ದು ಉಗ್ರರ ಅಡಗುತಾಣಗಳ ಕುರಿತು ಗೌಪ್ಯ ಮಾಹಿತಿ ಪಡೆಯುವಲ್ಲಿ ವೈದ್ ಸಿದ್ಧ ಹಸ್ತರು. 2016ರಲ್ಲಿ ಹಿಜ್ಬುಲ್ ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಸ್ಥಳೀಯರೊಂದಿಗೆ ಸಭೆ ನಡೆಸಿ ಉದ್ವಿಗ್ನಗೊಂಡಿದ್ದ ಕಾಶ್ಮೀರವನ್ನು ತಿಳಿಯಾಗಿಸಿದ ಕೀರ್ತಿ ವೈದ್‍ಗೆ ಸಲ್ಲುತ್ತದೆ.
ಮೂವರ ಬಂಧನ
ಜೈಷೆ-ಇ-ಮೊಹಮ್ಮದ್ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ಬದ್ಗಾಂವ್ ಜಿಲ್ಲೆಯಲ್ಲಿಭಾನುವಾರ ಬಂಧಿಸಲಾಗಿದೆ.ಎಸ್‍ಎಲ್‍ಆರ್ ರೈಫಲ್,ಪಿಸ್ತೂಲ್ ಮತ್ತು ಕೆಲವು ಗ್ರನೇಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಕಾಶ್ಮೀರ ಕಣಿವೆ ಹಿಂಸೆ,ಭಯೋತ್ಪಾದನೆ, ಗನ್?ವುತ್ತು ಮಾದಕವಸ್ತುಗಳಿಂದ ಮುಕ್ತವಾಗಬೇಕು ಎಂದು ಯತ್ನಿಸುತ್ತಿದ್ದೇವೆ. ಸಿಆರ್‍ಪಿಎಫ್,ಗುಪ್ತಚರ ದಳಗಳ ಶ್ರಮದಿಂದ ಉಗ್ರಸಂಘಟನೆ ಸೇರಿದ್ದ ಯುವಕರು ಮುಖ್ಯವಾಹಿನಿಗೆ ಮರಳುತ್ತಿದ್ದಾರೆ.
ಪ್ರಧಾನಿ ನರೇಂದ್ರ ಅಧಿಕಾರ ಸ್ವೀಕರಿಸಿದ ನಂತರ ಇಲ್ಲಿಯವರೆಗೂ ಯಾವುದೇ ಉಗ್ರಗಾಮಿಯೂ ಭಾರತಕ್ಕೆ ಒಳ ನುಗ್ಗಲು ಬಿಟ್ಟಿಲ್ಲ….ಒಂದು ವೇಳೆ 190 ಜನ ಉಗ್ರರಲ್ಲಿ ಕನಿಷ್ಟ 10 ಉಗ್ರಗಾಮಿ ಗಳೇನಾದರೂ ಕಾಶ್ಮೀರ ಗಡಿ ದಾಟಿ ಒಳ ನುಸುಳಿದ್ದರೆ ಇಡೀ ಭಾರತವನ್ನು ನಾಶಪಡಿಸಲು ಅವರೇ ಸಾಕಿತ್ತು… ಆದರೆ ಪ್ರಧಾನಿ ನರೇಂದ್ರ ಮೋದಿ ಸರಕಾರ ಮಾತ್ರ ಇಂತಹ ಅವಕಾಶಗಳಿಗೆ ಎಡೆ ಮಾಡಿ ಕೊಡದೆ ಸೇನೆಯನ್ನು ಶಸ್ತ್ರ ಸಚ್ಚಿತವಾಗಿ ಬೆಳೆಸಿ ಭಾರತಕ್ಕೆ ಯಾವುದೇ ಉಗ್ರಗಾಮಿಯನ್ನು ಒಳ ನುಸುಳದಂತೆ ಮಾಡಿ ಅವರನ್ನು ಗಡಿಯಿಂದಾನೇ ಓಡಿಸುತ್ತಾರೆ.
ಕಾಶ್ಮೀರದಲ್ಲಿ ಕಲ್ಲು ತೂರಾಟ ಕೂಡಾ ಇದ್ದಕ್ಕಿದ್ದ ಹಾಗೆ ಕಾಣೆಯಾಯಿತು ಅದು ಯಾಕೆ ಗೊತ್ತೆ? ಪ್ರಧಾನಿ ನರೇಂದ್ರವರ ನೋಟು ರದ್ಧತಿಯೆಂಬ ಐತಿಹಾಸಿಕ ನಿರ್ಣಯವೊಂದು ಇಂತಹ ಯುವಕರನ್ನು ಕಾಲಿ ಕುಳಿತುಕೊಳ್ಳುವಂತೆ ಮಾಡಿತು.. ಮೋದಿಯವರ ನೋಟ್ ಬ್ಯಾನ್‍ಗೂ ಕಾಶ್ಮೀರದಲ್ಲಿ ಕಲ್ಲು ತೂರಾಟ ಮಾಡುವವರಿಗೂ ಏನು ಸಂಬಂಧ ಅಂತ ಎಲ್ಲರೂ ಯೋಚಿಸುತ್ತಿರಬಹುದು… ಕೆಲ ಭಾರತ ವಿರೋಧಿಗಳು ಅವರ ಸಾಹಸ ಮತ್ತು ಚಟುವಟಿಕೆಗಳಿಗೆ ತಕ್ಕನಾದ ದರವನ್ನು ನಿಗದಿಪಡಿಸಲಾಗಿತ್ತು. ಭಾರತೀಯ ಸೇನೆಯ ಮೇಲೆ ಕಲ್ಲೆಸೆದರೆ ದಿನಕ್ಕೆ 100 ರೂಪಾಯಿಗಳು, ಯಾರಾದರೂ ಸೈನಿಕ ಗಾಯಗೊಂಡರೆ ದಿನಕ್ಕೆ 500 ರೂ, ಯಾವುದಾದರೂ ಶಸ್ರ್ತ ಕದ್ದರೆ ಪ್ರತೀ ಶಸ್ತ್ರಕ್ಕೂ 500 ರೂಪಾಯಿ ನಿಗದಿ, ಗ್ರೇನೆಡ್ ಕದ್ದರೆ ಪ್ರತಿಯಾಗಿ 1000 ರೂಪಾಯಿಗಳು ಸೇನಾ ಕೃತ್ಯವೆಸಗಿದರೆ 1000ರೂಗಳು ನಿಗದಿಯಾಗಿತ್ತು…ಇದಕ್ಕೆಲ್ಲಾ ಮುಟ್ಟುಗೋಲು ಹಾಕಿರುವಂತಹದ್ದು  ಮೋದಿಯವರೇ.. ಪ್ರಧಾನಿ ಮೋದಿಯವರ ಜೊತೆ ಬೆನ್ನುಲುಬಾಗಿ ನಿಂತವರಲ್ಲಿ ಜನರಲ್ ಬಿಪಿನ್ ರಾವತ್ ಕೂಡಾ ಒಬ್ಬರು! ಕಾಶ್ಮೀರದಲ್ಲಿ ಆಪರೇಷನ್ ಆಪರೇಷನ್ ಆಲ್ ಔಟ್‍ನ್ನು ಯಶಸ್ವಿಯಾಗಿ ಪೂರೈಸಿ ಕನಿಷ್ಠ 258 ಉಗ್ರರ ಪತ್ತೆ ಹಚ್ಚಿ ವರದಿ ತಂದವರು ಬಿಪಿನ್ ರಾವತ್!!! ನರೇಂದ್ರ ಇಂತಹ ಪ್ರಧಾನಿಯನ್ನು ಪಡೆದ ನಾವೇ ಧನ್ಯರು..
-ಪವಿತ್ರ
Tags

Related Articles

Close