ಅಂಕಣದೇಶಪ್ರಚಲಿತ

ಇನ್ನು ಕೆಲವೇ ವಾರಗಳಲ್ಲಿ ಚಾಬಹಾರ್ ನಿಲ್ದಾಣದ ಮೂಲಕ ಅಫ್ಘಾನಿಸ್ತಾನಕ್ಕೆ ರಫ್ತು ಮಾಡಲಿದೆ ಭಾರತ !!

ನಮ್ಮ ನೆರೆಯ ರಾಷ್ಟ್ರಗಳಿಂದಾಗಿ ಭಾರತ ಅಭಿವೃದ್ಧಿಯ ಹಾದಿ ಸ್ವಲ್ಪ ಕಷ್ಟಕರವಾಗಿತ್ತು. ಕಲ್ಲಿನ ಹಾದಿಯಲ್ಲೇ ನಡೆಯಬೇಕಾದ ಪರಿಸ್ಥಿತಿ ಒದಗಿ ಬಂದಿತ್ತು. ಹವಳಗಳ ಸರಪಳಿಯನ್ನು ಮಾಡುವಂತೆ, ನೆರೆಯ ರಾಷ್ಟ್ರದ ಬಾಂಧವ್ಯವನ್ನು ಬೆಳೆಸಿ, ನಂತರ ಭವಿಷ್ಯದಲ್ಲಿ ಭಾರತಕ್ಕೇ ಮುಳುವಾಗಬಹುದಾದ ಚೀನಾ ಇದಕ್ಕೊಂದು ಉದಾಹರಣೆ. ಇನ್ನೊಂಡೆದೆ ಪಾಕಿಸ್ತಾನ ಭಾರತದ ಬೆನ್ನಿಗೆ ಚೂರಿ ಹಾಕಲು ವಿಫಲ ಯತ್ನವನ್ನು ಮಾಡುತ್ತಲೇ ಇದೆ. ಭಾರತ ಅಫ್ಘಾನಿಸ್ತಾನದ ವಿಷಯದಲ್ಲಿಯೂ ಪ್ರವೇಶ ಮಾಡಬಾರದೆಂದು ಸದಾ ಹವಣಿಸುತ್ತಿದೆ ಪಾಪಿಸ್ತಾನ.

ಭಾರತದ ಅನೇಕ ರಾಜಕಾರಣಿಗಳು ಇದರ ಶಮನಕ್ಕೆ ಬಹಳಷ್ಟು ಪ್ರಯತ್ನ ಪಟ್ಟಿದ್ದಾರೆ. ಇರಾನ್ ದೇಶದಲ್ಲಿ ಚಾಬಹಾರ್ ನಿಲ್ದಾಣವನ್ನು ಸ್ಥಾಪಿಸುವ ಮೂಲಕ ಶತ್ರು ರಾಷ್ಟ್ರದ ಶಮನಕ್ಕೆ ಪ್ರಥಮವಾಗಿ ಮುಂದಾಗಿದ್ದವರು ಅಟಲ್ ಬಿಹಾರಿ ವಾಜಪೇಯಿಯವರು. ಈ ಯೋಜನೆಯು ಮಧ್ಯ ಏಶಿಯಾದ ಸಂಪರ್ಕವನ್ನು ಇನ್ನೂ ಗಟ್ಟಿಗೊಳಿಸಲಿದೆ ಅಷ್ಟೇ ಅಲ್ಲದೆ, ಮೂರೂ ಕಡೆಯಿಂದಲೂ ಪಾಕಿಸ್ತಾನವನ್ನು ಕಟ್ಟಿ ಹಾಕುವ ಸುಂದರ ಯೋಜನೆಯಾಗಿತ್ತು. ಈ ಯೋಜನೆ ಹಿಂದಿನ ಯುಪಿಎ ಸರಕಾರವಿದ್ಧಾಗ ಆಮೆ ಗತಿಯಲ್ಲಿ ಸಾಗುತ್ತಿತ್ತು.

ಆದರೆ ಕಳೆದ 3-4 ವರ್ಷಗಳಿಂದ ಈ ಯೋಜನೆ ಮತ್ತೊಮ್ಮೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ವಾಜಪೇಯಿಯವರ ಯೋಜನೆ ನನಸಾಗುವ ಲಕ್ಷಣಗಳು ಗೋಚರಿಸುತ್ತಿವೆ. ಭಾರತ ಇದಾಗಲೇ ಚಾಬಹಾರ್ ನಿಲ್ದಾಣ ಒಪ್ಪಂದಕ್ಕೆ ಸಹಿ ಹಾಕಿದ್ದು, ಇರಾನ್ ದೇಶದೊಂದಿಗೆ ರಶ್ಯಾ ದೇಶವನ್ನು ಸಂಪರ್ಕಿಸುವ ರಸ್ತೆಯ ಯೋಜನೆಯ ಅಂಗ ಭಾರತವಾಗಲಿದೆ. ಇದು ಭಾರತದ ಮುಂದಿನ ಯೋಜನೆಗಳಿಗೆ ಪೂರಕವಾಗಿದ್ದು, ಪಾಕಿಸ್ತಾನ-ಚೀನಾ ರಸ್ತೆ ಯೋಜನೆಗೆ ಸಮರ್ಕವಾದ ಉತ್ತರವನ್ನು ಭಾರತ ಈ ರೀತಿಯಾಗಿ ಕೊಟ್ಟಿದೆ.

ಇತ್ತೀಚೆಗೆ ಬಂದ ವರದಿಯ ಪ್ರಕಾರ ಇನ್ನು ಕೆಲವೇ ವಾರಗಳಲ್ಲಿ ಅಫ್ಘಾನಿಸ್ತಾನದ ಮೂಲಕ ಚಾಬಹಾರ್ ನಿಲ್ದಾಣಕ್ಕೆ ಭಾರತ ರಫ್ತು ಮಾಡಲಿದೆ. 35000 ಕಂಟೈನರ್ ಗಳಲ್ಲಿ ಗೋಧಿಯನ್ನು ಭಾರತ ಅಫ್ಘಾನಿಸ್ತಾನದ ಮೂಲಕ ಇರಾನ್‍ನ ನಿಲ್ದಾಣಕ್ಕೆ 2 ವಾರಗಳಲ್ಲಿ ರಫ್ತು ಮಾಡಲಿದೆ.

ಚಾಬಹಾರ್ ನಿಲ್ದಾಣವು ಅಭಿವೃದ್ಧಿಯ ಹಂತದಲ್ಲಿದ್ದು, ವಿಶ್ವ ಗುಣಮಟ್ಟದ ಮೂಲಸೌಕರ್ಯ ವ್ಯವಸ್ಥೆಯನ್ನು ಮಾಡಬೇಕಿದೆ. ಇರಾನ್ ರಾಷ್ಟ್ರದ ಭೇಟಿಯ ಸಂದರ್ಭದಲ್ಲಿ ನಿತಿನ್ ಗಡ್ಕರಿಯು, “2018 ನೇ ವರ್ಷಕ್ಕೆ ಚಾಬಹಾರ್ ನಿಲ್ದಾಣದ ಕಾರ್ಯ ಪೂರ್ಣಗೊಳ್ಳಲಿದ್ದು, ಅದುವರೆಗೆ ಸಣ್ಣ ಪ್ರಮಾಣದ ರಫ್ತನ್ನು ಸಾಗಿಸಬಹುದಾಗಿದೆ” ಎಂದು ಅಭಿಪ್ರಾಯಪಟ್ಟರು.

“ಭಾರತ, ಇರಾನ್ ಹಾಗೂ ಅಫ್ಘಾನಿಸ್ತಾನ ನಡುವೆ ಈ ಒಪ್ಪಂದ ಆಗಿದ್ದು, ಭೂಪ್ರದೇಶದಿಂದಲೇ ಆವೃತವಾಗಿರುವ ಅಫ್ಘಾನಿಸ್ತಾನಕ್ಕೆ ಸರಕುಗಳನ್ನು ರಫ್ತು ಮಾಡಲಿದೆ ಭಾರತ. “ಭಾರತ ಹಾಗೂ ಇರಾನ್ ಗೆ ಐತಿಹಾಸಿಕ ಸಂಬಂಧವಿದ್ದು, ನಾವು ಚಾಬಹಾರ್ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಕಾತರರಾಗಿದ್ದೇವೆ. ಇನ್ನು 12-18 ತಿಂಗಳುಗಳಲ್ಲಿ ಚಾಬಹಾರ್ ನಿಲ್ದಾಣ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ” ಎಂದು ಗಡ್ಕರಿ ಹೇಳಿದರು.

ಚಾಬಹಾರ್ ನಿಲ್ದಾಣವು ಭಾರತದ ಪಾಲಿಗೆ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದಿದ್ದು, ಚೀನಾ-ಪಾಕಿಸ್ತಾನ ಒಪ್ಪಂದಲ್ಲಿ ಭಾರತದ ಗಡಿಯಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಗೆ ತಕ್ಕ ಪ್ರತ್ಯುತ್ತರವನ್ನು ನೀಡಿದಂತಾಗುತ್ತದೆ.

– ವಸಿಷ್ಠ

Tags

Related Articles

Close