ಪ್ರಚಲಿತ

ಈ ಅರುಂಧತಿ ರಾಯ್ ಯಾರು?! ಭಾರತದ ವಿರುದ್ಧ ಆಕೆ ಮಾತನಾಡುತ್ತಿರುವುದೇಕೆ ?!!!

ಸಾಮಾನ್ಯವಾಗಿ ಪುಸ್ತಕ ಓದುವ ಎಲ್ಲರಿಗೂ ಸುಝಾನ ಅರುಧಂತಿ ರಾಯ್ ಅಂದರೆ ಯಾರು ಎನ್ನುವುದು ಗೊತ್ತಿರಬಹುದು. ಅರುಂಧತಿ ರಾಯ್ ಈಗಾಗಲೇ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದು, ಕೆಲವೊಂದು ಪುಸ್ತಕಗಳು ತುಂಬಾನೇ ಫೇಮಸ್ ಆಗಿದೆ ಕೂಡ!! ಆದರೆ ಈಕೆಯ ಬಗ್ಗೆ ಪೂರ್ತಿಯಾಗಿ ಗೊತ್ತಿರಲು ಸಾಧ್ಯವೇ ಇಲ್ಲ ಬಿಡಿ!! ಹಾಗಾಗಿ ಈಕೆಯ ಬಗ್ಗೆ ಒಂದಿಷ್ಟು ವಿಚಾರಗಳನ್ನು ಮೆಲುಕು ಹಾಕುತ್ತಾ ಹೋದಾಗ, ಈಕೆಯನ್ನು ಭಾರತೀಯಳು ಎನ್ನಬೇಕೇ ಎನ್ನುವ ಒಂದಿಷ್ಟು ಗೊಂದಲಮಯ ವಿಚಾರಗಳ ಬಗ್ಗೆ ಮಾತಾನಾಡುವುದಾದರೆ.

ಅರುಂಧತಿ ರಾಯ್ ಹುಟ್ಟಿದ್ದು ಮೇಘಾಲಯದ ಶಿಲ್ಲಾಂಗ್. ತಂದೆ ರಜಿಬ್ ರಾಯ್, ತಾಯಿ ಮೇರಿ ರಾಯ್. ಹೌದು…ಮೇರಿ ರಾಯ್ ಒಬ್ಬ ಕೇರಳದ ಮಲಿಯಾಳಿಯ ಸಿರಿಯನ್ ಕ್ರಿಶ್ಚಿಯನ್ ಮಹಿಳಾ ಹಕ್ಕುಗಳ ಕಾರ್ಯಕರ್ತರಾಗಿದ್ದರು. ಈಕೆಯ ತಾಯಿಯ ವಿಪರೀತ ದಂಗೆಕೋರ ವರ್ತನೆಯಿಂದ, ತನ್ನ ಗಂಡನಿಂದ ವಿಚ್ಛೇದನವನ್ನು ಪಡೆದುಕೊಂಡು ತನ್ನ ಮಕ್ಕಳೊಂದಿಗೆ ಕೇರಳಕ್ಕೆ ತೆರಳಿದರು! ಅರುಂಧತಿ ರಾಯ್ ತನ್ನ ಶಿಕ್ಷಣವನ್ನು ಕೊಟ್ಟಾಯಂನ ಕಾರ್ಪಸ್ ಕ್ರಿಸ್ಟಿ, ಲವ್ಡೆಲ್‍ನ ಲಾರೆನ್ಸ್ ಸ್ಕೂಲ್‍ನಲ್ಲಿ ಪಡೆದುಕೊಂಡಿದ್ದಲ್ಲದೇ ಅಂತಿಮವಾಗಿ ಆರ್ಕಿಟಿಕ್ಚರ್(ವಾಸ್ತುಶಿಲ್ಪ) ವಿಷಯವಾಗಿ ದೆಹಲಿಯಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ಅಷ್ಟೇ ಅಲ್ಲದೇ ಈಕೆ ವಾಸ್ತುಶಿಲ್ಪಿಯಾಗಿದ್ದ ಗೆರಾರ್ಡ್ ಡಾ ಕುನ್ಹರ ಜೊತೆ ಪ್ರೀತಿಯಲ್ಲೂ ಬಿದ್ದಿದ್ದಳು! ಇವರಿಬ್ಬರು, ಕೆಲವು ತಿಂಗಳುಗಳ ಕಾಲ ಗೋವಾ ಮತ್ತು ದೆಹಲಿಯಲ್ಲಿ ವಾಸಿಸುತ್ತಿದ್ದು ನಂತರ ಸಂಬಂಧವನ್ನು ಮುರಿದುಕೊಂಡರು. ಇದು ವಾಸ್ತುಶಿಲ್ಪದ ಪ್ರಪಂಚದಲ್ಲಿ ಸಿಕ್ಕಿದ ಬಹುದೊಡ್ಡ ಹೊಡೆತವಾಗಿದೆ.

ಸುಝಾನ ಅರುಧಂತಿ ರಾಯ್‍ಗೆ ಎನ್‍ಡಿಟಿವಿ ಮಾಲೀಕ ಪ್ರಣಯ್ ರಾಯ್ ಸೋದರ ಸಂಬಂಧಿಯಾಗಿದ್ದರು ಹಾಗಾಗಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅರ್ಬನ್
ಅಫೇರ್ಸ್‍ನಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡಿದ್ದರು. ತದನಂತರದಲ್ಲಿ ಇವರು ಚಿತ್ರ ನಿರ್ಮಾಪಕರಾದ ಪ್ರದೀಪ್ ಕಿಶನ್ ಅವರನ್ನು ವಿವಾಹವಾಗಿದ್ದು, ಅವರ ಒಂದು ಚಿತ್ರದಲ್ಲಿ ನಟನೆಯನ್ನೂ ಮಾಡಿದ್ದರು. ಆದರೆ ಕೆಲವೇ ಕೆಲವು ವರ್ಷಗಳಲ್ಲಿ ಇವರಿಬ್ಬರ ಸಂಬಂಧ ಮುರಿದು ಬಿತ್ತು!!

ನಂತರದ ದಿನಗಳಲ್ಲಿ ಅರುಧಂತಿ ರಾಯ್‍ಗೆ ‘ಗಾಡ್ ಆಫ್ ಸ್ಮಾಲ್ ತಿಂಗ್ಸ್’ ಪುಸ್ತಕಕ್ಕೆ 1997ರಲ್ಲಿ ‘ಮ್ಯಾನ್ ಬೂಕರ್’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಳು!!
ಅಲ್ಲಿಂದೀಚೆಗೆ ಇವರು ತಮ್ಮ ಆಸಕ್ತಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡು ಬಿಟ್ಟರು ಎಂದೆನಿಸುತ್ತೆ!! ಯಾಕೆಂದರೆ ಈಕೆ ಒರ್ವ ಲೇಖಕಿ ಎಂದು ತಮ್ಮನ್ನು
ತಾವು ಬಿಂಬಿಸಿದ್ದು ತದನಂತರದಲ್ಲಿ ಪೂರ್ಣ ಸಮಯದ ಮಾನವ ಹಕ್ಕುಗಳ ಕಾರ್ಯಕರ್ತರಾಗಿ ಜನಬಿಂಬಿತರಾದರು!! ಅಷ್ಟೇ ಅಲ್ಲದೇ, ಮುಂದೆ ಜಾಗತಿಕ
ಸಂಘಟನೆಯ ವಕ್ತಾರರಾಗಿ ಭಾರತ ಮತ್ತು ಇತರ ಅಭಿವೃದ್ಧಿಶೀಲ ದೇಶಗಳಲ್ಲಿ ಅಭಿವೃದ್ಧಿ ಕಾರ್ಯವನ್ನು ಸ್ಥಗಿತಗೊಳಿಸುವುದರ ಮೇಲೆ ತಮ್ಮನ್ನು ತಾವು
ತೊಡಗಿಸಿಗೊಂಡು ಬಿಟ್ಟಳು!!

ಅರುಂಧತಿ ರಾಯ್ ಅಣ್ವಸ್ತ್ರ, ಕೈಗಾರೀಕರಣ ಮತ್ತು ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿ ಭಾರತದ ನೀತಿಗಳಿಗೆ ವಿರುದ್ಧವಾಗಿದ್ದೇನೆ ಎಂದು ತನ್ನನ್ನು ತಾನೇ
ಘೋಷಿಸಿಕೊಂಡರು (which she describes as “encrypted with genocidal potential” in Listening to
Grasshoppers: Field Notes on Democracy).

ಅಮೇರಿಕನ್ನರಿಗೆ ಮತ್ತು ವಿದೇಶಿ ಬಂಡವಾಳದ ಎನ್‍ಜಿಒಗಳಿಗೂ ಬೇಕಾಗಿದ್ದು ಕೂಡ ಇದೇ ವಿಚಾರ!! ಹಾಗಾಗಿ ಈಕೆ ಭಾರತದಲ್ಲಿರುವ ಎಲ್ಲಾ ಅಭಿವೃದ್ಧಿ
ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು ಬಯಸಿದ್ದರು. ಲಕ್ಷಾಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕೈಗಾರೀಕರಣದ ಪರಿಕಲ್ಪನೆಯ ವಿರುದ್ದವಾಗಿ ಧ್ವನಿ ಎತ್ತಿದ ಮಹಿಳೆ ಈಕೆ!

ಹೌದು.. ಭಾರತದಲ್ಲಿರುವ ಪ್ರತಿಯೊಂದು ಬೆಳವಣಿಗಳನ್ನು, ಅಭಿವೃದ್ಧಿ ಯೋಜನೆಗಳನ್ನು ಸಾಮ್ರಾಜ್ಯಶಾಹಿಗಳನ್ನು ಮತ್ತು ಬಡವರ ವಿರುದ್ಧವಾಗಿ ಅಕ್ಷರಶಃ ವಿರೋಧಿಸಲು ಪ್ರಾರಂಭಿಸಿದರು. ಭಾರತೀಯ ಪರಮಾಣು ಕಾರ್ಯಕ್ರಮದ ಬಗ್ಗೆ ವಿರೋಧಿಸಿದ್ದಲ್ಲದೇ ಪರಮಾಣು ಶಸ್ತ್ರಾಸ್ತಗಳ ಅಭಿವೃದ್ಧಿಯನ್ನು ವಿರೋಧಿಸಿದರು. ಮಾತ್ರವಲ್ಲದೇ ಇದನ್ನು ಮಿಜೋರಾಮ್ ಮತ್ತು ನಾಗಾಲ್ಯಾಂಡ್‍ನ ಬುಡಕಟ್ಟು ಜನಾಂಗಗಳಿಗೆ ವಿರುದ್ದವಾಗಿ ಬಳಸಿಕೊಳ್ಳಲಾಗಿದೆ ಎಂದೂ ಹೇಳಿದರು. ಈಕೆಯ ಸುಳ್ಳು ಪ್ರಚಾರವನ್ನು ಪಶ್ಚಿಮ ಏಜೆನ್ಸಿಗಳು ಹೈಲೈಟ್ ಮಾಡಿದ್ದವು!!! ಅಲ್ಲದೇ ವಾಜಪೇಯಿ ಸರಕಾರದಲ್ಲಿ ರಾಜಸ್ಥಾನದ ಪೊಖ್ರಾನ್‍ನಲ್ಲಿ ಅಣು ಶಸ್ತ್ರಾಸ್ತ್ರಗಳನ್ನು ಪರೀಕ್ಷೆ ಮಾಡಹೊರಟಾಗಲು ಕೂಡ ಅರುಂಧತಿ ರಾಯ್ ಇದನ್ನು ವಿರೋಧಿಸಿದಳು!!

ಅಷ್ಟೇ ಅಲ್ಲದೇ, ನರ್ಮದಾ ಅಣೆಕಟ್ಟು ಯೋಜನೆ ನಡೆದಾಗ ಇದರ ಬಗ್ಗೆ ಮಾತಾನಾಡಿ, ಇದರಿಂದ 50,000 ಗ್ರಾಮಸ್ಥರು ನಿರಾಶ್ರಿತರಾಗುತ್ತಿದ್ದಾರೆ ಎಂದು
ಆರೋಪಿಸಿ ಅದನ್ನು ವಿರೋಧಿಸಿದರು. ಮೇಧಾ ಪಾಟ್ಕರ್ ಅವರೊಂದಿಗೆ ಜೊತೆಗೂಡಿ ನರ್ಮದಾ ಅಣೆಕಟ್ಟು ವಿರುದ್ದದ ಪ್ರತಿಭಟನೆಯಲ್ಲಿ ಗುಜರಾತ್‍ನಲ್ಲಿರುವ
ಲಕ್ಷಾಂತರ ಮಂದಿಗೆ ಸಹಾಯವನ್ನು ಮಾಡಿದ್ದಾರೆ. ಆದರೆ, ತನಿಖೆಗಳ ಪ್ರಕಾರ ಈ ಯೋಜನೆಯನ್ನು ನಿಲ್ಲಿಸಲು ಮೇಧಾ ಪಾಟ್ಕರ್ ಎನ್‍ಜಿಒ ಮತ್ತು ಅರುಂಧತಿ ರಾಯ್ ವಿದೇಶಿ ಏಜೆನ್ಸಿಗಳಿಂದ ಸುಮಾರು 500ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಹಣವನ್ನು ಪಡೆದುಕೊಂಡಿದ್ದಾರೆ ಎಂದು ಹೇಳುತ್ತವೆ. ಆಶ್ರಯ ಪೀಡಿತ ಜನರಿಗೆ ಪುನರ್ವಸತಿಗಾಗಿ ಈ ಹಣವನ್ನು ತೆಗೆದುಕೊಳ್ಳಲಾಗಿದೆ ಆದರೆ ವರದಿಗಳ ಪ್ರಕಾರ ಯಾವುದೇ ರೀತಿಯ ಪುನರ್ವಸತಿಯನ್ನು ಕಲ್ಪಿಸಿದ ದಾಖಲೆಗಳಿಲ್ಲ ಎಂದು ವರದಿಗಳು ತಿಳಿಸಿವೆ.

ಭಾರತದ ದೇಶದಲ್ಲಿದ್ದು ಅರುಂಧತಿ, ಭಾರತದ ವಿರುದ್ಧ ಸುಳ್ಳು ಮಾಹಿತಿಗಳನ್ನು ಹರಡಿಸಿದ್ದಕ್ಕಾಗಿ ಸುಪ್ರೀಂಕೋರ್ಟ್ ನೋಟೀಸ್ ನೀಡಿತ್ತು. ಆದರೆ ಇದನ್ನು ಪ್ರಶ್ನಿಸಿದ ರಾಯ್ ನೋಟೀಸ್‍ನ್ನು ನಿರಾಕರಿಸಿದ್ದಳು ಕೂಡ!! ಹಾಗಾಗಿ ಒಂದು ದಿನದ ಮಟ್ಟಿಗೆ ಜೈಲನ್ನು ಸೇರಿದ್ದರು. ತದನಂತರ ಜೈಲು ಶಿಕ್ಷೆಗೆ ಹೆದರಿ ಮೂರು ತಿಂಗಳು 2,500 ದಂಡವನ್ನು ಪಾವತಿಸಿ ನ್ಯಾಯಾಲಯಕ್ಕೆ ಕ್ಷಮೆಯನ್ನು ಯಾಚಿಸಿದ್ದಳು.

2001ರ ಸಂಸತ್ ಸ್ಫೋಟ ಪ್ರಕರಣದಲ್ಲಿ ಅಪರಾಧಿಯಾಗಿದ್ದ ಅಫ್ಜಲ್ ಗುರುವಿಗೆ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ಬಲವಾಗಿ ವಿರೋಧಿಸಿದ ಮಹಿಳೆ ಈಕೆ!! ಅಷ್ಟೇ ಅಲ್ಲದೇ ನ್ಯಾಯಾಲಯಗಳು ಸಾಂದರ್ಭಿಕ ಪುರಾವೆಗಳ ಆಧಾರದ ಮೇಲೆ ಶಿಕ್ಷೆ ನೀಡಬಾರದು ಎಂದು ಹೇಳಿದ್ದಳು. ಇದು ಇಷ್ಟಕ್ಕೇ ಮುಗಿಲಿಲ್ಲ, ಬದಲಾಗಿ ಭಾರತದ ಶತ್ರು ರಾಷ್ಟ್ರವೆನಿಸಿದ ಪಾಕಿಸ್ತಾನವನ್ನು ಸಮರ್ಥಿಸಿಕೊಂಡು 26/11ರಲ್ಲಿ ನಡೆದ ಮುಂಬೈ ದಾಳಿಯ ಬಗ್ಗೆ ಪಾಕಿಸ್ತಾನವನ್ನು ದೂಷಿಸಬಾರದು ಎಂದು ಹೇಳಿದ್ದಳು. ಆದರೆ ಪ್ರದೇಶದ ಇತಿಹಾಸ ಮತ್ತು ವ್ಯಾಪಕ ಬಡತನ, ಭಾರತದ ವಿಭಜನೆ, ಮುಸ್ಲಿಂಮರ ವಿರುದ್ದದ ದೌರ್ಜನ್ಯಗಳು ಹಾಗೂ ಕಾಶ್ಮೀರದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಸಮರ್ಥಿಸಿಕೊಂಡು ಮಾತಾನಾಡಿದ್ದಳು. ಅದಷ್ಟೂ ಸಾಲದೇ ಮುಂಬೈ ಭಾರತದ ಭಾಗವೇ ಅಲ್ಲ, ಇದು ಪಾಕಿಸ್ತಾನಕ್ಕೆ ಸೇರಬೇಕು ಎಂದು ನೇರವಾಗಿ ಹೇಳಿದ್ದ ಮಹಿಳೆ ಅರುಂಧತಿ!!!

2008ರಲ್ಲಿ ಪಾಕ್ ಪ್ರಾಯೋಜಿತ ಭಯೋತ್ಪಾದಕರೊಂದಿಗೆ ಕೈಜೋಡಿಸಿ ಭಾರತದಿಂದ ಕಾಶ್ಮೀರವನ್ನು ಬಿಡುಗಡೆ ಮಾಡಲು ಬೃಹತ್ ಮಟ್ಟದ ಪ್ರತಿಭಟನೆಯನ್ನು ಏರ್ಪಡಿಸಿದ್ದರು. 2008ರ ಆಗಸ್ಟ್ 18ರಂದು ನಡೆದ ಭಾರತದಿಂದ ಸ್ವಾತಂತ್ರ್ಯ ಕೇಳಬೇಕೆಂದು ಶ್ರೀನಗರದಲ್ಲಿ 5,00,000 ಪ್ರತ್ಯೇಕವಾದಿಗಳೊಂದಿಗೆ ಒಂದು ರ್ಯಾಲಿಯನ್ನು ನಡೆಸಿದ್ದಳು ಈ ಮಹಾತಾಯಿ!!

ನವೆಂಬರ್ 2010ರಲ್ಲಿ ರಾಯ್, ಸೈಯದ್ ಅಲಿ ಷಾ ಗೀಲಾನಿ ಮತ್ತು ಇತರ ಐದುಮಂದಿಯನ್ನು ದೇಶದ್ರೋಹದ ಆರೋಪದ ಮೇಲೆ ದೆಹಲಿ ಪೊಲೀಸರು ದೆಹಲಿಗೆ ಕರೆತಂದಿದ್ದರು. ಯಾಕೆಂದರೆ “ಅಜಾದಿ-ದಿ ಒನ್ಲಿ ವೇ” ಎನ್ನುವ ಸಮಾವೇಶವನ್ನು 2010ರ ಅಕ್ಟೋಬರ್ 21 ರಂದು ಏರ್ಪಡಿಸಿದ್ದರು. ಈ ಸಮಾವೇಶವು ಭಾರತದ ವಿರುದ್ದ ಯುದ್ದ ಮಾಡುವಲ್ಲಿ ಮತ್ತು ಹಿಂಸಾಚಾರವನ್ನು ಉಂಟುಮಾಡುವಲ್ಲಿ ಪ್ರೇರೆಪಣೆಯನ್ನು ನೀಡುವ ಹಾಗಿತ್ತು. ಹಾಗಾಗಿ ಈಕೆಯನ್ನು ಮತ್ತು ಪ್ರತ್ಯೇಕವಾದಿಗಳ ವಿರುದ್ದ ಎಫ್‍ಐಆರ್ ದಾಖಲಿಸಲಾಯಿತು. ಅಷ್ಟಕ್ಕೇ ಮುಗಿಯದೇ, “ಕಾಶ್ಮೀರ ಭಾರತದ ಒಂದು ಅವಿಭಾಜ್ಯ ಅಂಗವಲ್ಲ” ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಳು ಈಕೆ!!

ಅಷ್ಟಕ್ಕೂ ಈಕೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳತ್ತಿದ್ದಾಳೆ ಎಂದರೆ ಕಾರಣವಾದರೂ ಏನು? ವಾಸ್ತವವಾಗಿ, ಈಕೆ ಯಾವುದೇ ರೀತಿಯ ಕಾರಣವಿಲ್ಲದೇ ಈ ರಾಷ್ಟ್ರೀಯ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿಲ್ಲ!! ಬದಲಾಗಿ, ಮಾನವ ಹಕ್ಕು ಕಾರ್ಯಕರ್ತರು ಎಂಬ ಹೆಸರಿನಲ್ಲಿ ಭಾರತೀಯ ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸುವುದಕ್ಕಾಗಿ ಅದೆಷ್ಟೋ ಹಣವನ್ನು ಪಡೆಯುತ್ತಿದ್ದಾಳೆ!! ಪಾಶ್ಚಾತ್ಯ ಪ್ರಾಯೋಜಿತ ಏಜೆನ್ಸಿಗಳು ಭಾರತದ ಆರ್ಥಿಕತೆಯು ವಿಫಲಗೊಳಿಸಲು ಬಯಸುತ್ತಿದ್ದಾರಲ್ಲದೇ ಇಂತದ ಹಣದ ಆಸೆ ಬುರುಕರನ್ನು ತಮ್ಮ ಕಡೆಗೆ ಸೆಳೆದು ಕೋಟಿಗಟ್ಟಲೆ ಹಣವನ್ನು ಇಂತಹ ನೀಚರಿಗೆ ನೀಡುತ್ತಿದ್ದಾರೆ ಆ ಪಾಪಿಗಳು!!

ಹೌದು… ಅವರಿಗೆ ಯಾವತ್ತೂ ಕಾಶ್ಮೀರದ ಸಮಸ್ಯೆ ಬಗೆಹರಿಯಬೇಕೆಂದು ಬಯಸುವುದಿಲ್ಲ! ಆದರೆ, ಇವರು ಬಯಸುವುದು ಮಾತ್ರ ಭಾರತದಲ್ಲಿ ಹಿಂಸಾಚಾರಗಳು ಮುಂದುವರೆಯಬೇಕು ಮತ್ತು ಜನ ಇದರಿಂದ ಬಳಲಬೇಕು ಎಂಬುವುದು!! ಇದಕ್ಕೆಲ್ಲಾ ಐಎಸ್‍ಐ ಮುಖ್ಯ ಸಂಸ್ಥೆಯಾಗಿದ್ದು, ಭಾರತದಲ್ಲಿ ಎಲ್ಲ ರಾಷ್ಟ್ರೀಯ ವಿರೋಧಿ ಲಾಬಿಗಳನ್ನು ಜೀವಂತವಾಗಿ ಮತ್ತು ಸಕ್ರೀಯವಾಗಿರಿಸಿಕೊಳಿಸುವಲ್ಲಿ ನೆರವಾಗುತ್ತಿದ್ದಾರೆ. ಹಾಗಾಗಿ ನಕ್ಸಲರು ಮತ್ತು ಮಾವೋವಾದಿಗಳನ್ನು ಎಡಪಕ್ಷಗಳು ಹೇಗೆ ತಮ್ಮ ರಾಜಕೀಯ ಆಟಗಳಿಗೆ ಬಳಸಿಕೊಳ್ಳುತ್ತಾರೆ ಹಾಗೂ ಬೆಂಬಲ ನೀಡುತ್ತಾರೆ ಎಂಬುವುದೆಲ್ಲವೂ ತೆರೆದ ರಹಸ್ಯಗಳು ಇದ್ದಂತೆ!!

ಇವರೆಲ್ಲ ಬುಡಕಟ್ಟು ಜನರ ಬಗ್ಗೆಯಾಗಲಿ ಅಥವಾ ಬಡಜನರ ಬಗ್ಗೆಯಾಗಲಿ ಕಾಳಜಿ ವಹಿಸುವುದಿಲ್ಲ. ಬದಲಾಗಿ ಇವರ ಮುಖ್ಯ ಉದ್ದೇಶವೇ ಜನರನ್ನು ರಾಷ್ಟ್ರೀಯ
ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ಎನ್ನುವುದು ದೊಡ್ಡ ವಿಪರ್ಯಾಸ!! ಭಾರತದಲ್ಲಿ ಇದ್ದುಕೊಂಡು ಭಾರತದ ನೀರು ಕುಡಿಯುತ್ತಿದ್ದು, ಮುಂಬೈ ಭಾರತದ ಭಾಗವೇ ಅಲ್ಲ ಎಂದವರು ಭಾರತೀಯರೇ??

– ಅಲೋಖಾ

Tags

Related Articles

Close