ಅಂಕಣ

ಈ ಚಿತ್ರದಲ್ಲಿರುವ ವ್ಯಕ್ತಿ ಯಾರೆಂಬುದು ನಿಮಗೆ ನೆನಪಿದೆಯೇ?! ಈ ಚಿತ್ರದ ಹಿಂದಿರುವ ಕಥೆ ಕೇಳಿದರೆ ಬೆಚ್ಚಿ ಬೀಳುತ್ತೀರಿ!

ಗುಜರಾತ್‍ನಿಂದ ಕರಸೇವಕರಾಗಿ ಹೊರಟಿದ್ದ ಸಾವಿರಾರು ಮಂದಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು, ರಾಮಭಕ್ತರನ್ನು ರೈಲಿನಲ್ಲಿ ತೆರಳುತ್ತಿದ್ದಾಗ ರೈಲಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿ, ಸಾಲದ್ದಕ್ಕೆ ಅರೆ ಜೀವವಿದ್ದ ದೇಹಗಳನ್ನು ರಾಡಿನಿಂದ ತಿವಿದು ಕೊಂದ ಪರಿಣಾಮವಾಗಿ ನಡೆದ ದಿಟ್ಟ ಪ್ರತಿಕ್ರಿಯೆಯೇ ಗೋದ್ರಾ
ಹತ್ಯಾಕಾಂಡ. ಆದರೆ ಇಂದಿಗೂ ಗೋದ್ರಾ ಎನ್ನುವ ಹತ್ಯಾಕಾಂಡದ ಕರಿಛಾಯೆ ರಾಷ್ಟ್ರದ ಪ್ರಧಾನಿ ಸಹಿತ ಹಿಂದೂ ಮುಖಂಡರ ರಾಜಕಾರಣಿಗಳ ಮೈಗೆ ಮೆತ್ತಿದೆಯೇ ಹೊರತು ಇಸ್ಲಾಂ ಉಗ್ರರು ನಡೆಸಿರುವ ಸಾವಿರಾರು ಹಿಂದೂಗಳ ಮಾರಣ ಹೋಮವು ಇಂದಿಗೂ ಎಲ್ಲೂ ಕರಿಛಾಯೆಯಾಗಿ ಉಳಿದಿಲ್ಲ.

ಈ ಚಿತ್ರಕ್ಕೆ 16 ವರ್ಷ ಕಳೆಯುತ್ತಾ ಬಂದರೂ ಎಲ್ಲರ ಮನಸ್ಸಿನಲ್ಲೂ ಇನ್ನೂ ಅಚ್ಚಳಿಯದೆ ಉಳಿದಿದೆ.!! ಈ ಚಿತ್ರವನ್ನು ಗಮನಿಸಿದಾಗ ಒಬ್ಬ ವ್ಯಕ್ತಿ ಯಾವ ರೀತಿಯಾಗಿ ಅತ್ಯಂತ ಕ್ರೂರವಾಗಿ ಕಬ್ಬಿಣದ ರಾಡ್ ಅನ್ನು ಹಿಡಿದುಕೊಂಡು ತನ್ನ ಕ್ರೌರ್ಯವನ್ನು ತೋರಿಸುತ್ತಿದ್ದಾನೆ ಎಂದು ನಾವು ಗಮನಿಸಬಹುದು. 2002 ರಲ್ಲಿ ಅಂದರೆ 16 ವರ್ಷಗಳ ಹಿಂದೆ ನಡೆದ ದುರಂತ ಕಥೆ!!. ಈ ಚಿತ್ರವನ್ನು ನೋಡಿದ ಪ್ರತಿಯೊಬ್ಬ ವ್ಯಕ್ತಿಯನ್ನು ಸಹ ಒಂದು ಸಲ ಕೆರಳಿಸುವಂತೆ ಮಾಡುತ್ತದೆ. ಈ ಚಿತ್ರವು ಹಿಂದೂ ಮನುಷ್ಯನ ಕ್ರೂರ ಮುಖವನ್ನು ಇತರ ಮನುಷ್ಯನನ್ನು ಕೊಲ್ಲುವ ರೀತಿ ಒಂದು ಚಿತ್ರವನ್ನು ಸಮಾಜಕ್ಕೆ ತೋರಿಸಿದರೆ ಜನರು ಅವನನ್ನು ಯಾವ ರೀತಿ ಸ್ವೀಕರಿಸುತ್ತಾರೆ?

ಆದರೆ  ಅವನು ಯಾತಕ್ಕಾಗಿ ಈ ರೀತಿ ಕಬ್ಬಿಣದ ರಾಡ್ ಅನ್ನು ಹಿಡಿದುಕೊಂಡು ನಿಂತಿದ್ದಾನೆ ಎಂಬುವುದರ ಬಗ್ಗೆ ಯಾರಿಗಾದರೂ ಅರಿವಿದೆಯೇ? ಚಿತ್ರ ನೋಡಿದಾಕ್ಷಣ ನಮ್ಮ ಮನಸ್ಸು ಕೆರಳುವುದು ಅಂತು ನಿಜ.. ಈ ಚಿತ್ರದಲ್ಲಿರುವ ವ್ಯಕ್ತಿಯ ಹೆಸರು ಅಶೋಕ್ ಪರ್ಮಾರ್! ಅವರು ಗುಜರಾತ್ ದಂಗೆಗಳ ಮುಖವನ್ನು ರೂಪಿಸಿದರು. ಆದರೆ ವಾಸ್ತವವಾಗಿ ಈ ಚಿತ್ರವನ್ನು ತೆಗೆದು ಜನರನ್ನು ತಪ್ಪುದಾರಿಗೆ ಎಳೆಯುವಂತೆ ಮಾಡಿದೆ. ಹಿಂದೂಗಳು ಕೊಲೆಗಾರರು ಮತ್ತು ದಂಗೆಕೋರರು ಎನ್ನುವ ರೀತಿಯಲ್ಲಿ ಚಿತ್ರವನ್ನು ಪತ್ರಕರ್ತರು ಮಾಧ್ಯಮದಲ್ಲಿ ಹಾಕಿರುವುದು ಎಷ್ಟರ ಮಟ್ಟಿಗೆ ಸರಿ..?

Image result for sebastian dsouza fake picture of gujarat riots

ಆದರೆ, ಈ ಅಶೋಕ್ ಪರ್ಮಾರ್ ಎನ್ನುವಂತಹ ವ್ಯಕ್ತಿ ಯಾವ ದಂಗೆಕೋರನೂ ಅಲ್ಲ!! ಕೊಲೆಗಾರನೂ ಅಲ್ಲ!! ಈತ ಎಲ್ಲರಂತೆ ಒಬ್ಬ ಸಾಮಾನ್ಯ ಮನುಷ್ಯನಾಗಿದ್ದ. ಎನ್ನುವಂತಹದ್ದನ್ನು ನಾವು ನಂಬಲೇ ಬೇಕಾಗಿದೆ. ಈತ ಗುಜರಾತ್‍ನಲ್ಲಿ ಒಂದು ಸಣ್ಣ ಅಂಗಡಿಯನ್ನು ಹೊಂದಿದ್ದು, ಆತ ಚಮ್ಮಾರನಾಗಿದ್ದ. ಗುಜರಾತ್ ಗಲಭೆ ಆಗುವ ಕೆಲವೇ ದಿನಗಳ ಮುಂಚೆ ಈತ ಮದುವೆಯಾಗಿದ್ದನು. ಗುಜರಾತ್ ಗಲಭೆಯಿಂದ ಅವನ ಅಂಗಡಿ ನಾಶವಾಗಿ ಅವನು ಬೀದಿಗಿಳಿಯುವಂತಾಗುತ್ತದೆ. ಮುಂದೇನು ಎಂದು ಯೋಚಿಸುತ್ತಾ ಅಲ್ಲೇ ರಸ್ತೆಯಲ್ಲೇ ಕುಳಿತು ಯೋಚಿಸುತ್ತಾ ರಸ್ತೆಯಲ್ಲೇ ಕುಳಿತು ಕೊಂಡಿದ್ದ.

ಅಶೋಕ್ ಪರ್ಮಾರ್ ಗಡ್ಡವನ್ನು ಬಿಟ್ಟು ಪಕ್ಕಾ ಮುಸ್ಲಿಮನಂತೆ ಕಾಣುತ್ತಿದ್ದು ಮತ್ತು ಅವನ ಹಣೆಯ ಮೇಲೆ ಕಿತ್ತಾಳೆ ಬಣ್ಣದ ಪಟ್ಟಿಯನ್ನು ಕಟ್ಟಿ ಕೊಂಡಿದ್ದ.. ಅದೇ
ಸಮಯದಲ್ಲಿ ಮುಂಬೈನ ಛಾಯಾಚಿತ್ರಕಾರನೊಬ್ಬನು ಅಲ್ಲಿಗೆ ಪ್ರವೇಶಿಸುತ್ತಾನೆ. ಅಶೋಕ್ ಪರ್ಮಾರ್‍ನ ಪಕ್ಕಕ್ಕೆ ಬಂದವನೇ ಛಾಯಾಚಿತ್ರಕಾರ ದಂಗೆ ಕೋರನಂತೆ ಭಂಗಿ ಮಾಡಿ ನಿಲ್ಲಲು ಕೇಳಿಕೊಳ್ಳುತ್ತಾನೆ. ಮೂರ್ಖನಂತೆ ಈ ಮನುಷ್ಯ ಕೂಡ ಛಾಯಾಚಿತ್ರಕಾರನ ಮಾತಿನಂತೆ ಪಕ್ಕದಲ್ಲೇ ಬಿದ್ದಿದ್ದ ರಾಡ್ ಎತ್ತಿಕೊಂಡ. ಒಂದು ಕೈಯಲ್ಲಿ ಕಬ್ಬಿಣದ ರಾಡ್ ಎತ್ತಿಕೊಂಡ ಮುಖವನ್ನು ಆಕ್ರೋಶವನ್ನಾಗಿ ಮಾಡಿ ಪೋಟೋಕ್ಕೆ ಪೋಸ್‍ಕೊಡಲು ಹೇಳುತ್ತಾನೆ! ಅದೇ ರೀತಿಯಾಗಿ ಆತನೂ ಮಾಡುತ್ತಾನೆ. ಛಾಯಾಚಿತ್ರಕಾರ ಪೋಟೋವನ್ನು ತೆಗೆದು ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಾನೆ. ಹೇಗೆ ಒಬ್ಬ ಸಾಮಾನ್ಯ ಹಿಂದೂವನ್ನು ಯಾವ ರೀತಿಯಾಗಿ ಸಮಾಜದ ಕೆಂಗಣ್ಣಿಗೆ ಗುರಿ ಮಾಡಿದ ಎಂಬುವುದನ್ನು ನಾವು ನೋಡಿದೆವಲ್ಲವೇ? ಪತ್ರಕರ್ತ ಎಂದರೆ ಮಾಡದ ತಪ್ಪನ್ನು ಸೃಷ್ಟಿಸುವವರಲ್ಲ.. ಆದರೆ ಈ ಛಾಯಾಚಿತ್ರಕಾರ ಮಾಡಿದ್ದಾದರೂ ಏನು? ಇಡೀ ಜನರ ಹಾದಿಯನ್ನೇ ತಪ್ಪಿಸಿಬಿಟ್ಟದ್ದು ಅಷ್ಟೆ!

ಛಾಯಾಚಿತ್ರಕಾರ ಮಾಡಿದ ಮಾಡಿದ ತಪ್ಪು ಇಡೀ ಗುಜರಾತ್ ದಂಗೆಯಲ್ಲಿ ಅಶೋಕ್ ಪರ್ಮಾರ್ ಒಬ್ಬ ಪ್ರಮುಖ ದಂಗೆಕೋರನನ್ನಾಗಿ ಮಾಡುವಂತಾಯಿತು.!!
ಅವನನ್ನು ಪೊಲೀಸರು ಬಂಧಿಸಿ ಹದಿನಾಲ್ಕು ದಿನಗಳ ಕಾಲ ಜೈಲಿನಲ್ಲಿರಿಸಲಾಯಿತು. ಯಾವುದೇ ಸಾಕ್ಷಾಧಾರಗಳು ಇಲ್ಲದ ಕಾರಣ ಇವನನ್ನು ಬಿಡುಗಡೆಗೊಳಿಸಲಾಯಿತು. ನಕಲಿ ಚಿತ್ರವನ್ನು ರೂಪಿಸಿ ಯಾವ ರೀತಿಯಾಗಿ ಹಿಂದೂಗಳನ್ನು ಸಮಾಜಕ್ಕೆ ಕೀಳು ಮಟ್ಟದಲ್ಲಿ ಪತ್ರಕರ್ತರು ತೋರಿಸುತ್ತಾರೆ ಎಂಬುವುದನ್ನು ನಾವು ಗಮನಿಸಬೇಕಾಗಿದೆ. ಆದರೆ ಯಾವುದೆ ಪತ್ರಕರ್ತನೂ ತನಗೆ ಸುದ್ಧಿ ಬೇಕು ಎನ್ನುವ ಉದ್ಧೇಶವನ್ನು ಇಟ್ಟುಕೊಂಡು ಇಂತಹ ನೀಚ ಕೆಲಸಕ್ಕೆ ಯಾವತ್ತೂ ಇಳಿಯಾರದು. ಪತ್ರಕರ್ತ ಎಂದರೆ ಯಾವಾಗಲೂ ಜನರಿಗೆ ನೈಜ ಸುದ್ಧಿಯನ್ನು ಮಾತ್ರ ತಲುಪಿಸಬೇಕು ಅಷ್ಟೆ!!.

ಇನ್ನೊಂದು ಚಿತ್ರವನ್ನು ಗಮನಿಸಿದರೆ ಗುಜರಾತ್ ಗಲಭೆಯಿಂದ ತಾನು ಜೀವನ ನಡೆಸುದಕ್ಕಾಗಿ ಬಿಕ್ಷೆ ಬೇಡುತ್ತಿದ್ದಾನೆ ಎನ್ನುವ ರೀತಿಯಲ್ಲಿ ಈ ಚಿತ್ರವು ಗ್ರಾಸವಾಗುತ್ತದೆ. ಆದರೆ ಇಲ್ಲಿ ನಡೆದದ್ದೇ ಬೇರೆ.. ಎಲ್ಲಾ ಹಿಂದೂಗಳು ಅಲ್ಲಿಂದ ತೆರಳಿದ ನಂತರ ಒಬ್ಬ ಛಾಯಾಚಿತ್ರಕಾರ ಬಂದು ಈ ರೀತಿ ಭಂಗಿಯಲ್ಲಿ ನಿಲ್ಲುವಂತೆ ಹೇಳಿ ಪೋಟೋವನ್ನು ತೆಗೆಯುತ್ತಾನೆ. ಈ ಚಿತ್ರವನ್ನು ನೋಡಿದಾಕ್ಷಣ ಎಲ್ಲರಿಗೂ ಒಂದು ಸಲ ಇಲ್ಲಿನ ಮುಸ್ಲಿಮರನ್ನು ಯಾವ ರೀತಿಯಾಗಿ ಹಿಂದೂಗಳು ಹಿಂಸಿಸಿದ್ದಾರೆ ಎನ್ನುವ ರೀತಿಯಲ್ಲಿ ಈ ಭಾವಚಿತ್ರವು ಕಾಣುತ್ತದೆ. ಅರ್ಕೋದತ್ತಾ ಎಂಬ ಛಾಯಾಚಿತ್ರಗ್ರಾಹಕನಿಂದ ಸಹಾನುಭೂತಿಯನ್ನು ಸೃಷ್ಟಿಸಲು ಹಿಂದೂಗಳನ್ನು ಸಮಾಜದಲ್ಲಿ ಕೆಟ್ಟ ದೃಷ್ಟಿಯಲ್ಲಿ ಪರಿಗಣಿಸಲು ಇಂತಹ ಭಂಗಿಯಲ್ಲಿ ಛಾಯಾಚಿತ್ರಕಾರ ಫೋಟೋವನ್ನು ಕ್ಲಿಕ್ಕಿಸಿದ್ದು ಎಷ್ಟರ ಮಟ್ಟಿಗೆ ಸರಿ?

ಇಲ್ಲಿ ನಾವು ಗಮನಿಸಬೇಕಾದ ಅಂಶ ಏನೆಂದರೆ ಇಲ್ಲಿ ಯಾವುದೇ ಜನಸಮೂಹ ಅಥವಾ ದಂಗೆಕೋರರು ಯಾರೂ ಈ ಚಿತ್ರದಲ್ಲಿ ಕಾಣಸಿಗುವುದಿಲ್ಲ. ಈ ರೀತಿಯಾಗಿ ಜನಸಮೂಹ ಅಥವಾ ದಂಗೆ ಕೋರರು ಮುಸ್ಲಿಮರನ್ನು ಹಿಂಸಿಸುತ್ತಾರೆ ಎಂದರೆ ಪತ್ರಕರ್ತರನ್ನು ಈ ರೀತಿಯ ಭಂಗಿಯಲ್ಲಿ ಭಾವಚಿತ್ರವನ್ನು ತೆಗೆಯಲು ಬಿಡುತ್ತಿದ್ದರೆ? ದಂಗೆಕೋರರು ಅವರ ಕ್ಯಾಮರವನ್ನು ನಾಶಪಡಿಸಲಿಲ್ಲವೇ? ಆತನ ಬೆರಳಿಗೆ ಬ್ಯಾಂಡೇಜನ್ನು ಸುತ್ತಿರುವವರಾದರೂ ಯಾರು? ಇಂತಹ ಚಿತ್ರವನ್ನು ಚಿತ್ರಿಸಿದ್ದು ಬೇರೆ ಯಾರು ಅಲ್ಲ.. ಕಾಂಗ್ರೆಸ್ ಮತ್ತು ಮಾಧ್ಯಮ…!! ಪ್ರತೀ ಚುನಾವಣೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ವಿರುದ್ಧ ಹೇಗಾದರೂ ಸುಳ್ಳನ್ನು ಸೃಷ್ಟಿಸಿ ಚುನಾವಣೆಯಿಂದ ಕೆಳಗಿಳಿಸಬೇಕೆಂಬುವುದು ಅವರ ಉದ್ಧೇಶವಾಗಿದೆ.

ಕಳೆದ ಹಲವಾರು ವರ್ಷಗಳಿಂದ ಗೋದ್ರಾ ಗಲಭೆಯನ್ನು ಮುಂದಿಟ್ಟುಕೊಂಡು ನರೇಂದ್ರ ಮೋದಿಯವರನ್ನು ಅಪರಾದಿ ಸ್ಥಾನದಲ್ಲಿ ನಿಂತು ನೋಡುತ್ತಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ಸಿಗರಂತೂ ಹಲವಾರು ಮುಸ್ಲಿಮರನ್ನು ಕೊಲ್ಲಲಾಯಿತು ಎಂದು ಅರಚಾಟ ನಡೆಸಿದ್ದೇ ನಡೆಸಿದ್ದು. ಆದರೆ ಸತ್ಯ ಒಂದಲ್ಲ ಒಂದು ದಿನ ಹೊರ ಬರಲೇ ಬೇಕು. ಗೋದ್ರಾ ಗಲಭೆ ಆರಂಭಗೊಂಡಿದ್ದು ಯಾಕೆ?ಅಂದು ಫೆಬ್ರವರಿ 27, 2002ರ ಸಮಯ. ಸಬರಮತಿ ಎಕ್ಷ್‍ಪ್ರಸ್ ಎನ್ನುವ ರೈಲು ಅಯೋದ್ಯಾದಿಂದ ಗೋದ್ರಾ ನಿಲ್ದಾಣದತ್ತ ಬರುತ್ತಿತ್ತು. ಇದರಲ್ಲಿ ನೂರಾರು ಕರ ಸೇವಕರು ಬರುತ್ತಿದ್ದರು ಇವರನ್ನೆಲ್ಲಾ ಹತ್ಯೆ ಮಾಡಿರುವಂತಹದ್ದು ಮುಸ್ಲಿಮರು.!!

ಇಸ್ಲಾಮ್ ಧರ್ಮದ ಅಫೀಮನ್ನು ತಲೆಗೆ ಹತ್ತಿಸಿಕೊಂಡ ಕಾಂಗ್ರೆಸ್ಸಿಗರು ಹಿಂದೂಗಳನ್ನು ನಿರ್ದಯವಾಗಿ ಹತ್ಯೆಗೈದರು ಎಂಬ ಸತ್ಯ ಕೊನೆಗೂ ಬೆಳಕಿಗೆ ಬಂದಿದೆ.
ಹಿಂದೂಗಳಿಂದ ಮುಸ್ಲಿಮರಿಗೆ ದೌರ್ಜನ್ಯ ನಡೆಯುತ್ತಲೇ ಇದೆ ಎಂದು ಕಾಂಗ್ರೆಸ್ಸಿಗರಿಗೆ ಗೊತ್ತಿದ್ದರೂ ಈ ಘಟನೆಯ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದೇ
ಅರ್ಥವಾಗುತ್ತಿಲ್ಲ. ಕಾಂಗ್ರೆಸ್ಸಿಗರ ಪಾಪಾದ ಕೊಡ ತುಂಬಿ ತುಳುಕುತ್ತಿದೆ. ಪಾಪಕ್ಕೆ ತಕ್ಕ ಪ್ರತಿಫಲ ಖಂಡಿತಾ ಸಿಗದೇ ಹೋಗುವುದಿಲ್ಲ. ಯಾಕೆಂದರೆ ಕೋಟ್ಯಾಂತರ ಹಿಂದೂಗಳ ಶಾಪ, ಕಣ್ಣೀರಿದೆ.

ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕೆಂಬ ಉದ್ಧೇಶವನ್ನು ಇಟ್ಟುಕೊಂಡು ಈ ರೀತಿಯಾಗಿ ಮಾಡಿದರೆ ಅದು ನಿಮ್ಮ ದಡ್ಡತನ!!.. ಸತ್ಯಕ್ಕೆ ಯಾವಾಗಲೂ
ಜಯವಿದೆ ಎಂಬ ಮಾತನ್ನು ನೀವು ಯಾವಾಗಲೂ ಅರಿತುಕೊಳ್ಳಬೇಕು… ಕಾಂಗ್ರೆಸ್ಸಿಗರು ಮಾಡಿದ ತಪ್ಪನ್ನು ಯಾವಾಗಲೂ ಬಿಜೆಪಿ ಮೇಲೆ ಹೊರಿಸುವುದು
ಯಾವತ್ತೂ ಸರಿಯಲ್ಲ.!! ಇವರ ಜೊತೆ ಮಾಧ್ಯಮದವರೂ ಸೇರಿ ಇಂತಹವರಿಗೆ ಕುಮ್ಮಕ್ಕು ನೀಡುತ್ತಿದ್ದೀರಲ್ಲವೇ? ಇದು ನಿಮ್ಮ ಆತ್ಮಸಾಕ್ಷಿಗೆ ಸರಿಯೆನಿಸುತ್ತಿದೆಯೋ? ಹಣದ ಆಸೆಗಾಗಿ ಇಂತಹ ಸುಳ್ಳು ಸುದ್ಧಿಯನ್ನು ನೀಡುವುದು ಯಾವತ್ತೂ ಸರಿಯಲ್ಲ!! ಇನ್ನಾದರೂ ಇಂತಹ ನಾಲಾಯಕ್ಕು ಕೆಲಸಗಳನ್ನು ನಿಲ್ಲಿಸಿ ಸಮಾಜಕ್ಕೆ ಮಾದರಿಯಾಗುವಂತಹ ಸುದ್ಧಿಗಳನ್ನು ಪ್ರಸಾರ ಮಾಡಿ!

Source: http://timesofindia.indiatimes.com/city/mumbai/Stop-using-me-says-face-of-Gujarat-riots-Ansari/articleshow/51788397.cms

http://www.gujaratriots.com/index.php/2008/05/myth-12-the-photo-of-qutubuddin-ansari-is-genuine/

-ಪವಿತ್ರ

Tags

Related Articles

Close