ಅಂಕಣ

ಈ ದೆಹಲಿ ಮೂಲದ ವಕೀಲನ ಮೇಲೆ ಮೂರನೇ ಬಾರಿಗೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದರು! ಅಗಸ್ಟಾ ವೆಸ್ಟ್ ಲ್ಯಾಂಡ್ ನ ಡೀಲರ್ ಗಳ ಜೊತೆ ಸಂಪರ್ಕ ಹೊಂದಿದ್ದ ಈತ ಯಾರೆಂದು ತಿಳಿದರೆ ಅಚ್ಚರಿಗೊಳಗಾಗುತ್ತೀರಿ!!!

ನೋಟು ರದ್ಧತಿ ನಂತರ ಬ್ರಹ್ಮಾಂಡ ಕಾಳಧನ ಮತ್ತು ಹವಾಲ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ದೆಹಲಿಯಲ್ಲಿ ಆದಾಯ ತೆರಿಗೆ ಮತ್ತು ಪೆÇಲೀಸ್ ಇಲಾಖೆ
ಅಧಿಕಾರಿಗಳು ನಡೆಸಿದ ಮತ್ತೊಂದು ಭರ್ಜರಿ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದರು!! ನೀವು ಯಾವತ್ತು ಈ ವ್ಯಕ್ತಿಯ ಹೆಸರನ್ನು ಕೇಳಿರಲು ಸಾಧ್ಯವೇ ಇಲ್ಲ!! ಆದರೆ ಇವನೊಬ್ಬರ ಉನ್ನತ ಸ್ಥಾನಮಾನ ಹೊಂದಿದ್ದು, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‍ನಲ್ಲಿ ಇವರು ಬಹಳನೇ ಪ್ರಸಿದ್ಧಯನ್ನು ಪಡೆದಿರುವ ವ್ಯಕ್ತಿ!! ಇವಿಷ್ಟೇ ಅಲ್ಲದೇ, ವಿವಾದತ್ಮಾಕ ವಕೀಲನೆಂದಿನಿಸಿರುವ ವ್ಯಕ್ತಿ ಈತ. ಆದರೆ ಈತನ ವಿರುದ್ದ 2016ರ ಡಿಸೆಂಬರ್‍ನಲ್ಲಿ ದೆಹಲಿಯ ಅಪರಾಧ ಇಲಾಖೆ ಮತ್ತು ಐಟಿ ಇಲಾಖೆ ಜಂಟಿ ನೇತೃತ್ವದಲ್ಲಿ ದೆಹಲಿಯಲ್ಲಿನ ಇವನ ನಿವಾಸದ ಮೇಲೆ ದಾಳಿ ಮಾಡಿತ್ತು. ಅದೇ ಸಂದರ್ಭದಲ್ಲಿ ಅಲ್ಲಿದ್ದ ಸುಮಾರು 1000 ಮತ್ತು 500ರ ಮುಖಬೆಲೆಯ 13ಕೋಟಿ ರೂಪಾಯಿಗಳನ್ನು ಮತ್ತು 2000 ರೂಪಾಯಿಯ 2.61ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ!!! ವಿಪರ್ಯಾಸವೆಂದರೆ, ಇಷ್ಟು ಮೊತ್ತದ ಹಣವನ್ನು ಪೊಲೀಸರು ವಶಪಡಿಸಿದರೂ, ಈತನ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ದೊರೆತಿಲ್ಲ ಎನ್ನುವುದೇ ಒಂದು ಕುತುಹಲಕಾರಿಯಾದ ಸಂಗತಿ.

ಹೌದು.. ಐಟಿ ದಾಳಿಯಲ್ಲಿ ಸಿಕ್ಕಿಬಿದ್ದ ವ್ಯಕ್ತಿಯಾದರು ಯಾರು ಗೊತ್ತೇ? ಈತ ದೆಹಲಿ ಮೂಲದ ವಕೀಲ ರೋಹಿತ್ ಟಂಡನ್!! ಆದಾಯ ತೆರಿಗೆ ಇಲಾಖೆಯ
ಅಧಿಕಾರಿಗಳು ಹಾಗೂ ದೆಹಲಿ ಪೆÇಲೀಸರು ಜಂಟಿಯಾಗಿ ವಕೀಲ ರೋಹಿತ್ ಟಂಡನ್ ಕಚೇರಿಯನ್ನು ಜಾಲಾಡಿದ್ರು. ಆದರೆ ಅಲ್ಲಿ ಆಘಾತಕಾರಿಯಾದ ವಿಷಯಗಳು ಬಯಲಾಘಿತ್ತು ಅದೇನೆಂದರೆ, ರಹಸ್ಯವಾಗಿಟ್ಟಿದ್ದ ಕಂತೆ ಕಂತೆ ಹಣ ಸಿಕ್ಕಿಬಿದ್ದಿದ್ದವು!!. 2016ರ ಅಕ್ಟೋಬರ್ 7 ರಂದು ಮೊದಲ ಬಾರಿ ದಾಳಿ ಮಾಡಿದಾಗ ರೋಹಿತ್ ಬಳಿ 125 ಕೋಟಿ ರೂಪಾಯಿ ಸಿಕ್ಕಿತ್ತು. ಅಂದಿನಿಂದ್ಲೂ ಐಟಿ ಅಧಿಕಾರಿಗಳು ಆತನ ಹಣಕಾಸು ವ್ಯವಹಾರಗಳ ಮೇಲೆ ನಿಗಾ ಇಟ್ಟಿದ್ದರು. ಇದಾದ 2 ವಾರಗಳ ಹಿಂದೆ 2ನೇ ಬಾರಿ ನಡೆಸಿದ ದಾಳಿಯಲ್ಲಿ 19 ಕೋಟಿ ರೂಪಾಯಿ ಸಿಕ್ಕಿತ್ತು, ತದನಂತರದಲ್ಲಿ 13.48 ಕೋಟಿ ರೂಪಾಯಿ ಅಕ್ರಮ ಹಣ ವಶಪಡಿಸಿಕೊಳ್ಳಲಾಗಿದೆ!! ರೋಹಿತ್ ಟಂಡನ್ ಬಳಿ 2.31 ಕೋಟಿ ರೂಪಾಯಿ ಮೌಲ್ಯದ ಹೊಸ ನೋಟುಗಳು ಕೂಡ ಇತ್ತು. ಮನಿ ಲಾಂಡರಿಂಗ್ ನಲ್ಲಿ ಸಿಕ್ಕಿಬಿದ್ದ ಮೇಲೆ ಟಂಡನ್ ತನ್ನ ಬಳಿ 144 ಕೋಟಿ ರೂಪಾಯಿ ಅಕ್ರಮ ಹಣ ಇರುವುದಾಗಿ ಘೋಷಿಸಿದ್ದ. ಆದರೆ ಇಲ್ಲಿನ ಅಧಿಕಾರಿಗಳು ಆತನ ಬಳಿಯಿಂದ 157 ಕೋಟಿ ರೂಪಾಯಿ ಹಣ ವಶಪಡಿಸಿಕೊಂಡಿದ್ದಾರೆ!!!

ರೋಹಿತ್ ಟಂಡನ್, ಟಂಡನ್ ಮತ್ತು ಟಂಡನ್(ಟಿ&ಟಿ)ಎನ್ನುವ ಕಾನೂನು ಸಂಸ್ಥೆಯನ್ನು ಹೊಂದಿದ್ದಾನಲ್ಲದೇ ದೆಹಲಿಯಲ್ಲಿ ಹಲವಾರು ಶಾಖೆಗಳನ್ನು ಹೊಂದಿದ್ದಾನೆ!! ಹಾಗಾಗಿ ಟಂಡನ್‍ನಿನ ಶಾಖೆಗಳಿದ್ದ ಶಿವಲಿಕ್ ಪ್ರದೇಶ, ಲಜಪತ್ ನಗರ ಮತ್ತು ಗ್ರೇಟರ್ ಕೈಲಾಶ್-1ನಲ್ಲಿ ದಾಳಿ ನಡೆಸಲಾಗಿತ್ತು!! ಕೈಲಾಶ್ ಕಚೇರಿಯಲ್ಲಿ ಟಿ&ಟಿಯ ಕಪಾಟುಗಳಲ್ಲಿ ಮತ್ತು ಡಾಫಲ್ಸ್ ಬ್ಯಾಗ್‍ಗಳಲ್ಲಿ ಹಣದ ರಾಶಿಗಳು ತುಂಬಿದ್ದವು. ಅಷ್ಟೇ ಅಲ್ಲದೇ, ಪಂಜಾಂಬ್ ರಾಷ್ಟ್ರೀಯ ಬ್ಯಾಂಕ್‍ಗೆ ಸೇರಿದ ಎಣಿಕೆ ಮಷಿನ್ ಕೂಡ ಸಿಕ್ಕಿತ್ತು ಎನ್ನುವುದೇ ಅಚ್ಚರಿಯ ಸಂಗತಿ!! ಈ ಸಂದರ್ಭದಲ್ಲಿ ಬಹಳಷ್ಟು ಬ್ಯಾಂಕ್ ಅಧಿಕಾರಿಗಳು ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸುವುದರಲ್ಲಿ ಭಾಗಿಯಾಗಿದ್ದಾರೆ ಎನ್ನುವುದನ್ನು ಐಟಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದರು!ಅಲ್ಲದೇ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸುವಲ್ಲಿ ತಮಗೆ ನೆರವಾಗಿದ್ದ ಕೋಟಕ್ ಮಹೀಂದ್ರ ಬ್ಯಾಂಕಿನ ಮ್ಯಾನೇಜರ್ ಆಶಿಶ್ ಕುಮಾರ್ ತಮ್ಮಿಂದ 51 ಕೋಟಿ ರೂ. ಪಡೆದಿರುವುದಾಗಿ ಟಂಡನ್ ಹೇಳಿದ್ದ. ಹಾಗಾಗಿ ಆಶಿಶ್‍ನನ್ನು ಡಿ.27ರ ರಾತ್ರಿ ಹಣ ದುರುಪಯೋಗ ಕಾಯಿದೆ (ಪಿಎಂಎಲ್‍ಎ) ಯಡಿ ಪೆÇಲೀಸರು ಬಂಧಿಸಿದ್ದರು!!

ಈ ಎಲ್ಲಾ ವ್ಯವಹಾರಗಳ ರೂವಾರಿಯಾಗಿದ್ದ ಟಂಡನ್ ಕೋಲ್ಕತ ಮೂಲದ ಉದ್ಯಮಿ ಪರಸ್ ಮಲ್ ಲೋಧಾ ಸೇರಿದಂತೆ ಅನೇಕ ಪ್ರಭಾವಿ ಉದ್ಯಮಿಗಳು ಮತ್ತು ವಿವಿಧ ಬ್ಯಾಂಕ್‍ಗಳ ಉನ್ನತಾಧಿಕಾರಿಗಳೊಂದಿಗೆ ಶಾಮೀಲಾಗಿ ಕಾಳಧನ ಮತ್ತು ಹವಾಲಾ ದಂಧೆಯಲ್ಲಿ ತೊಡಗಿದ್ದರು. ಈ ಹಿಂದೆ ಇದೇ ಟಂಡನ್ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ಮುಂದೆ ತೆರಿಗೆ ಪಾವತಿಸದ 125 ಕೋಟಿ ರೂ.ಗಳ ಹಣವನ್ನು ಘೋಷಣೆ ಮಾಡಿ ಹುಬ್ಬೇರುವಂತೆ ಮಾಡಿದ್ದರು. ಹಿಂದಿನಿಂದಲೂ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವಹಿವಾಟು ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಟಂಡನ್ ವಿರುದ್ಧ ಅಧಿಕಾರಿಗಳು ಕಾನೂನು ಕ್ರಮ ಕೈಗೊಂಡಿದ್ದರು.

ಆದರೆ, ಆಘಾತಕಾರಿಯಾದ ಸಂಗತಿ ಏನೆಂದರೆ ರೋಹಿತ್ ಟಂಡನ್, ಶಸ್ತ್ರಾಸ್ತ್ರ ವ್ಯಾಪಾರಿಯಾದ ಅಭಿಷೇಕ್‍ವರ್ಮಾ ಅವರೊಂದಿಗೆ ಸಂಬಂಧವನ್ನು ಹೊಂದಿದ್ದ ಎಂದು ತಿಳಿದು ಬಂದಿದೆ. ಆದರೆ ರೋಹಿತ್ ಟಂಡನ್‍ನನ್ನು ಆ ಸಂದರ್ಭದಲ್ಲಿ ಹಿರಿಯ ವಕೀಲನಾದ ಗೌತಮ್ ಖೈತಾನ್(ಅಗಸ್ಟಾ ವೆಸ್ಟ್ಯಾಂಡ್ ಹಗರಣದಲ್ಲಿ ಬಂಧಿಸಲಾಗಿತ್ತು) ಜಾಮೀನು ನೀಡಿದ್ದು, ಆತನನ್ನು ಜಾಮೀನಿನ ಮೂಲಕ ಬಿಡುಗಡೆಗೊಳಿಸಲಾಯಿತು!!

ಜಂಟಿ ಪೊಲೀಸ್ ಆಯುಕ್ತರು (ಜೆಸಿಪಿ), ಅಪರಾಧ ಇಲಾಖೆಯ ಅಧಿಕಾರಿಯಾದ ರವೀಂದ್ರ ಯಾದವ್ ಹೇಳುವ ಪ್ರಕಾರ, ಟಂಡನ್ ಉನ್ನತ ಮಟ್ಟದ ವ್ಯಕ್ತಿಗಳಿಂದ
ರಕ್ಷಣಾ ಅಧಿಕಾರಿಗಳ ಬೆಂಬಲವನ್ನು ಹಾಗೂ ವಕೀಲರೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದ್ದಾನೆ. ಅಷ್ಟೇ ಅಲ್ಲದೇ, ಪೊಲೀಸರು ಈತನ ಉದ್ಯೋಗಿಗಳಿಗೆ
ಪ್ರಶ್ನೆಯನ್ನು ಕೇಳಿದಾಗ ಅವರು ಹೇಳುವ ಮಾಹಿತಿಗಳು ಬಹಳ ಆಘಾತಕಾರಿಯಾಗಿತ್ತು! ಯಾಕೆಂದರೆ, ಪೊಲೀಸರಿಗೆ ಸಿಕ್ಕಿದ ಮಾಹಿತಿ ಮೆರೆಗೆ, ಈತ ಗ್ಲಾಮರ್ ಮತ್ತು ಪೇಜ್ 3 ಸೆಲೆಬ್ರಿಟಿಗಳನ್ನು ಹೊಂದಿದ್ದು ಅವರೊಂದಿಗೆ ಉತ್ತಮ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ. ಇನ್ನೊಂದು ಕುತುಹಲಕಾರಿಯಾದ ಸಂಗತಿ ಎಂದರೆ ಭಂಡಾರಿ ಮತ್ತು ಖೈತಾನ್ ಇಬ್ಬರೂ ಆಗಾಸ್ಟಾ ವೆಸ್ಟ್ಲಾಂಡ್‍ನಲ್ಲಿ ಭಾಗಿಯಾಗಿದ್ದರು ಎನ್ನುವುದನ್ನು ಹೇಳಿದ್ದಾರೆ.

ಜೋ ಬಾಗ್‍ನಲ್ಲಿ 12,000 ಚದರ ಅಡಿಯ ನಿವಾಸವನ್ನು ಖರೀದಿಸುವವರೆಗೂ ಈ ಮನುಷ್ಯ ಯಾರೆಂದು ಯಾರಿಗೂ ಗೊತ್ತಿರಲಿಲ್ಲ. ಅಲ್ಲದೇ ಇದಕ್ಕೆ 100 ಕೋಟಿ ರೂಪಾಯಿಗಳ ಒಪ್ಪಂದವನ್ನು ಮಾಡಲಾಗಿತ್ತು!!. ಈತ 2014ರ ಜುಲೈನಲ್ಲಿ ಟೌನ್ಡನ್ ರೂವಿಯಾ ಕುಟುಂಬದಿಂದ ಡೆಂಗ್ಲನ್ ಕಾರ್ಪ್ ಎಂಬ ವಿಶೇಷ ಉದ್ದೇಶಿತ ಕಂಪನಿಯ ಮೂಲಕ ಬಂಗಲೆಯನ್ನು ಖರೀದಿಸಿದ್ದರು. ಆದರೆ ಪೊಲೀಸರು ಹೇಳುವ ಪ್ರಕಾರ ಈ ಗುಪ್ತ ನಿಧಿಯಲ್ಲಿ ಪಾಲು ಟಂಡನ್‍ಗೆ ಸೇರಿದೆಯೋ ಅಥವಾ ರಾಜಕಾರಣಿಗಳಿಗೆ ಹಾಗೂ ವಿತರಕರಿಗೆ ಸೇರಿರಬಹುದು ಎನ್ನುವ ಅನುಮಾನವನ್ನು ವ್ಯಕ್ತಪಡಿಸಿದ್ದರು.

ಟಂಡನ್ ಒಬ್ಬ ಕಾರ್ಪೊರೇಟ್ ವಕೀಲನಾಗಿದ್ದು, ಯಾವುದೇ ರೀತಿಯ ದೊಡ್ಡ ಸಂಸ್ಥೆಗಳು ಅವನನ್ನು ನೇಮಕ ಮಾಡಿಲ್ಲ ಎಂದು ದಾಖಲೆಗಳು ತೋರಿಸುತ್ತದೆ. ಹಾಗಾಗಿ ಇಷ್ಟು ದೊಡ್ಡ ಮಟ್ಟದ ಹಣವನ್ನು ಹೇಗೆ ಸಂಪಾದಿಸ ಎಂಬುವುದೇ ಒಂದು ಪ್ರಶ್ನೆಯಾಗಿದೆ? ಶಸ್ತ್ರಾಸ್ತ್ರ ವಿತರಕರೊಂದಿಗಿನ ಇವರ ಸಂಬಂಧಗಳು ಇವೆಯ ಎನ್ನುವ ಪ್ರಶ್ನೆ ಮೂಡಿದ್ದಲ್ಲದೇ, ರಾಜಕಾರಣಿಗಳು ಮತ್ತು ವಿತರಕರೊಂದಿಗೆ ಉನ್ನತ ಮಟ್ಟದಲ್ಲಿ ಭ್ರಷ್ಟಚಾರದಲ್ಲಿ ಭಾಗಿಯಾಗಿದ್ದಾನೆ ಎನ್ನುವ ಗಂಭೀರವಾದ ಪ್ರಶ್ನೆಗಳು ಮೂಡುತ್ತವೆ!! ಇಷ್ಟೆಲ್ಲಾ ನಡೆದರೂ ಈತನ ಬಗ್ಗೆ ದೊಡ್ಡ ಮಟ್ಟದ ಸುದ್ದಿಯಾಗಿಲ್ಲ ಎಂಬುವುದೇ ಒಂದು ದೊಡ್ಡ ಪ್ರಶ್ನೆಯಾಗಿದೆ!!

ಮೂಲ:https://goo.gl/bsnE6p

– ಅಲೋಖಾ

Tags

Related Articles

Close