ಪ್ರಚಲಿತ

ಈ ಸಲದ ಗಣರಾಜೋತ್ಸವ ಎಂದಿನಂತಿರದೆ ಐತಿಹಾಸಿಕ ಘಟನೆಯೊಂದಕ್ಕೆ ಸಾಕ್ಷಿಯಾಗಲಿದೆ…! ಸುದ್ದಿಕೇಳಿ ಪಾಕಿಸ್ತಾನ-ಚೀನಾ ಬೆಚ್ಚಿದ್ದು ಯಾಕೆ?!

ಈ ಬಾರಿಯ ಗಣರಾಜ್ಯೋತ್ಸವ ಒಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದೆ. ಯಾಕೆಂದ್ರೆ ಇಂಥದೊಂದ ಘಟನೆ ಹಿಂದೆದೂ ನಡೆದಿರಲೇ ಇಲ್ಲ. ಭಾರತದ ಸಾಮಥ್ರ್ಯ ಸಾಕಷ್ಟು ಹೆಚ್ಚಿದೆ ಎನ್ನುವುದನ್ನು ಈ ಘಟನೆ ಸಾಬೀತುಪಡಿಸಲಿದೆ. ಯಾಕೆಂದರೆ ಈ ಬಾರಿ ಗಣರಾಜ್ಯೋತ್ಸವಕ್ಕೆ ಏಸಿಯನ್ ರಾಷ್ಟ್ರಗಳ ಮುಖ್ಯಸ್ಥರು ಭಾರತದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜೊತೆಗೆ ಇತರ ರಾಷ್ಟ್ರಗಳ ಮುಖ್ಯಸ್ಥರೂ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.

ಈ ಬಾರಿಯ ಗಣರಾಜ್ಯೋತ್ಸವ ಎಂದಿನಂತೆ ಇರುವುದಿಲ್ಲ. ಪ್ರಮುಖ ರಾಷ್ಟ್ರಗಳನ್ನು ಆಹ್ವಾನಿಸಲು ಸರಕಾರ ಎಂದೋ ಚಿಂತನೆ ನಡೆಸಿತ್ತು. ಹಲವು ರಾಷ್ಟ್ರಗಳನ್ನು ಸಂಪರ್ಕಿಸಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗವಹಿಸುವಂತೆ ಮುಕ್ತ ಆಹ್ವಾನವನ್ನು ನೀಡಲಾಗಿದೆ. ಜೊತೆಗೆ ಏಸಿಯನ್ ಸದಸ್ಯ ರಾಷ್ಟ್ರಗಳನ್ನು ಸಂಪರ್ಕಿಸಿ ಆಹ್ವಾನವನ್ನು ನೀಡಲಾಗಿದೆ. ಈ ಪೈಕಿ ವಿಯೆಟ್ನಾಮ್ ಮತ್ತು ಸಿಂಗಾಪುರ್ ಪ್ರಧಾನಮಂತ್ರಿಗಳು ಗಣರಾಜ್ಯ ದಿನದ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು ಖಚಿತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇತರ ಏಸಿಯನ್ ರಾಷ್ಟ್ರಗಳೂ ಕೂಡಾ ತಮ್ಮ ಅಗಮನದ ಬಗ್ಗೆ ದೃಢೀಕರಿಸಲಿವೆ. ಹೀಗೆ ಹಲವಾರು ದೇಶಗಳ ಮುಖ್ಯಸ್ಥರು ಒಟ್ಟಿಗೆ ರಿಪಬ್ಲಿಕ್ ಪರೇಡ್‍ನಲ್ಲಿ ಭಾಗವಹಿಸಿರುವುದು ಇದೇ ಮೊದಲ ಬಾರಿಯಾಗಿದೆ.

ಏಸಿಯನ್ ಒಕ್ಕೂಟದಲ್ಲಿ ಒಟ್ಟು ಹತ್ತು ಸದಸ್ಯ ರಾಷ್ಟ್ರಗಳಿವೆ. ಇಂಡೋನೇಸಿಯಾ, ಥೈಲಾಂಡ್, ಫಿಲಿಫೈನ್ಸ್, ಮಲೇಶಿಯಾ, ಸಿಂಗಾಪುರ್, ವಿಯೆಟ್ನಾಂ, ಮ್ಯಾನ್ಮಾರ್, ಕಾಂಬೋಡಿಯಾ, ಲಾವೋಸ್ ಹಾಗೂ ಬ್ರೂನಿ ಸದಸ್ಯ ರಾಷ್ಟ್ರಗಳು. ಈ ಎಲ್ಲಾ ರಾಷ್ಟ್ರಗಳ ವಿಶ್ವಾಸವನ್ನು ಗಳಿಸಲು ಮೋದಿ ಸರಕಾರ ಯಶಸ್ವಿಯಾಗಿದ್ದು, ಅದರ ಮುನ್ನಡಿಯೆಂಬಂತೆ ಗಣರಾಜ್ಯೋತ್ಸವಕ್ಕೆ ಆಹ್ವಾನ ನೀಡಿದ್ದರು.
ಅದರಂತೆಯೇ ಏಸಿಯನ್ ಒಕ್ಕೂಟದ ಪ್ರತಿಯೊಂದು ರಾಷ್ಟ್ರಗಳ ಎಲ್ಲಾ ನಾಯಕರು ಭಾರತಕ್ಕೆ ಆಗಮಿಸಲು ಒಪ್ಪಿದ್ದಾರೆ.

ಏಸಿಯನ್ ರಾಷ್ಟ್ರಗಳ ಒಕ್ಕೂಟ ಏಷ್ಯಾದಲ್ಲಿ ಅತ್ಯಂತ ಬಲಶಾಲಿಯಾಗಿದೆ. ಮುಖ್ಯವಾಗಿ ಈ ರಾಷ್ಟ್ರಗಳನ್ನು ಭಾರತದ ತೆಕ್ಕೆಗೆ ಹಾಕಬೇಕಿತ್ತು. ಯಾಕೆಂದರೆ ಈ ರಾಷ್ಟ್ರಗಳು ಭಾರತದ ಸಮೀಪವಿದ್ದು, ಹೆಚ್ಚಿನ ರಾಷ್ಟ್ರಗಳು ಚೀನಾವನ್ನು ವಿರೋಧಿಸುತ್ತಿವೆ. ಐರೋಪ್ಯ, ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತದ ಜೊತೆ ನಿಕಟ ಸಂಬಂಧವನ್ನು ಹೊಂದಿದೆ. ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿವೆತ್ತ ಅಮೇರಿಕಾ, ಮುಂದುರಿದ ರಾಷ್ಟ್ರಗಳಾದ ಜಪಾನ್, ಇಸ್ರೇಲ್ ಮುಂತಾದ ರಾಷ್ಟ್ರಗಳು ಭಾರತದ ಹತ್ತಿರವಾಗಿದೆ. ರಷ್ಯಾದ ಬಾಂಧವ್ಯವೂ ಉತ್ತಮವಾಗಿದೆ. ಅದಕ್ಕಾಗಿ ಚೀನಾಕ್ಕೆ ಅಘಾತವನ್ನು ನೀಡಲು ಏಶಿಯನ್ ಒಕ್ಕೂಟಗಳ ಜೊತೆ ನಿಕಟ ಬಾಂಧವ್ಯವನ್ನು ಇಟ್ಟು ಸೆಡ್ಡುಹೊಡೆಯಬೇಕಿತ್ತು. ಇದನ್ನು ಮೋದಿ ಸರಕಾರ ಯಶಸ್ವಿಯಾಗಿ ಸಾಕಾರಗೊಳಿಸಲಿದೆ.

ಈ ರಾಷ್ಟ್ರಗಳು ಭಾರತದ ನಿಕಟವಾದರೆ ಭಾರತದ ಜೊತೆಗಿನ ವ್ಯಾವಹಾರಿಕ, ತಂತ್ರಜ್ಞಾನ, ರಕ್ಷಣೆ, ಇತ್ಯಾದಿ ಸಂಬಂಧಗಳು ಹೆಚ್ಚುತ್ತದೆ. ಇದು ಸಜಹವಾಗಿಯೇ ಚೀನಾಕ್ಕೆ ಸಹಿಸಲು ಸಾಧ್ಯವಾಗುವುದಿಲ್ಲ ಅಲ್ಲದೆ ಏಷ್ಯಾದಲ್ಲಿ ತಾನು ಪ್ರಾಬಲ್ಯತೆ ಮೆರೆಯಬೇಕೆಂಬ ಆಸೆಗೂ ತಣ್ಣೀರು ಎರಚಿದಂತಾಗುತ್ತದೆ. ಭಾರತ ಇತ್ತೀಚೆಗೆ ತನ್ನ ಅತಿದೊಡ್ಡ ಆಕ್ಟ್ ಈಸ್ಟ್ ನೀತಿ (ಆಕ್ಟ್ ಈಸ್ಟ್ ಪಾಲಿಸಿ) ಯ ಮೂಲಕ ಏಸಿಯನ್ ದೇಶ ಗಳೊಂದಿಗೆ ವ್ಯಾಪಕ ಬಾಂಧವ್ಯವನ್ನು ವೃದ್ದಿಸುತ್ತಿದೆ.

ಚೀನಾಗೆ ಮೊದಲಿಂದಲೂ ವಿಯೆಟ್ನಾಂ ಅಂದರೆ ಆಗಿ ಬರೋಲ್ಲ. ವಿಯೆಟ್ನಾಂಗೆ ಚೀನಾ ದ್ರೋಹ ಬಗೆದಿರುವುದನ್ನು ಏಸಿಯನ್ ಒಕ್ಕೂಟ ರಾಷ್ಟ್ರಗಳೂ ತೀವ್ರವಾಗಿ ಖಂಡಿಸಿದೆ. ಇದರ ಪರಿಣಾಮವಾಗಿ ಚೀನಾದ ವಿರೋಧದ ನಡುವೆಯೂ ವಿಯೆಟ್ನಾಂ ಜೊತೆಗೆ ರಕ್ಷಣಾ ಸಹಕಾರವನ್ನು ಭಾರತ ವ್ಯಾಪಕವಾಗಿ ಹೆಚ್ಚಿಸಿದ್ದು ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ..!

ಸಿಂಗಪೂರ್ ಮತ್ತು ವಿಯೆಟ್ನಾಂ ಪ್ರಧಾನ ಮಂತ್ರಿಗಳು ಭಾರತದ ಮಿಲಿಟರಿ ಶಕ್ತಿಯ ಮತ್ತು ಭಾರತೀಯ ರಾಜ್ಯಗಳ ವರ್ಣರಂಜಿತ ಸಂಸ್ಕೃತಿಯನ್ನು ಸಾರುವ ಗಣರಾಜ್ಯ ದಿವಸಕ್ಕೆ ತಮ್ಮ ಪಾಲ್ಗೊಳ್ಳುವಿಕೆಯನ್ನು ಪ್ರಪ್ರಥಮವಾಗಿ ದೃಢಪಡಿಸಿದ್ದಾರೆ ಎನ್ನುವುದನ್ನು ಸರಕಾರಿ ಮೂಲಗಳು ದೃಢೀಕರಿಸಿದೆ. ಮೊದಲೇ ತಿಳಿಸಿದಂತೆ ಈ ದೇಶಗಳ ಜೊತೆಗಿನ ರಕ್ಷಣಾ ಸಂಬಂಧ ಬಲಗೊಳ್ಳಲಿದೆ. ಅದಕ್ಕೆ ಪೂರಕ ಎಂಬಂತೆ ಭಾರತ ಕೂಡಾ ಈ ದೇಶಗಳೊಂದಿಗೆ ಭದ್ರತಾ ಮತ್ತು ರಕ್ಷಣಾ ಸಂಬಂಧಗಳನ್ನು ಬಲಪಡಿಸುತ್ತ ಚಿತ್ತ ಹರಿಸಿದೆ. ಚೀನಾದ ಪ್ರಾದೇಶಿಕ ಆಕ್ರಮಣಕ್ಕೆ ಒಳಗಾದ ವಿಯೆಟ್ನಾಮ್ ಭಾರತದೊಂದಿಗೆ ರಕ್ಷಣಾ ಪಾಲುದಾರಿಕೆಯನ್ನು ಬಯಸಿದ್ದು, ಇದೆಲ್ಲಾ ಗಣರಾಜ್ಯೋತ್ಸವದ ದಿನದಂದು ಸಾಕಾರಗೊಳ್ಳಲಿದೆ.

ವಿಯೆಟ್ನಾಂ ಜೊತೆ ಸಂಬಂಧ ವೃದ್ಧಿಸದಂತೆ ಚೀನಾ ಈ ಹಿಂದಿನಿಂದಲೂ ಭಾರತಕ್ಕೆ ಬೆದರಿಕೆಯೊಡ್ಡಿದ್ದಲ್ಲದೆ ಸೂಕ್ತ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ನೀಡುತ್ತಲೇ ಇತ್ತು. ಆದರೆ ಚೀನಾದ ಗೊಡ್ಡು ಬೆದರಿಕೆಗಳಿಗೆ ಜಗ್ಗದ ಭಾರತ ವಿಯೆಟ್ನಾಂ ಜೊತೆಗೆ ಇತ್ತೀಚೆಗೆ ಭಾರಿ ಪ್ರಮಾಣದಲ್ಲಿ ರಕ್ಷಣಾ ಸಹಕಾರ ಹೆಚ್ಚಿಸಿದೆ, ವಿಯೆಟ್ನಾಮ್ ಮತ್ತು ಭಾರತ ನಡುವಿನ `ರಕ್ಷಣಾ- ಭಾಂದವ್ಯ’ ಅತ್ಯಂತ ತೀವ್ರ ಮತ್ತು ಪರಿಣಾಮಕಾರಿ ಕಂಬವಾಗಿದೆ. ಇದು ಸಹಜವಾಗಿಯೇ ಚೀನಾದ ಹೊಟ್ಟೆ ಉರಿಗೆ ಕಾರಣವಾಗಿದೆ. ಚೀನಾದ ಆಕ್ರಮಣಕಾರಿ ಧೋರಣೆಯನ್ನು ವಿಯೆಟ್ನಾಂ ಈ ಹಿಂದಿನಿಂದಲೂ ಖಂಡಿಸುತ್ತಲೇ ಬಂದಿದ್ದು, ಚೀನಾಕ್ಕೆ ತಕ್ಕ ಶಾಸ್ತಿಯನ್ನೂ ಮಾಡಿತ್ತು.

ವಿಯೆಟ್ನಾಂನ ಭಾರತದ ರಾಯಭಾರಿ ಭಾರತದ ಜೊತೆಗಿನ ರಕ್ಷಣಾ ಒಪ್ಪಂದದ ಬಗ್ಗೆ ಈ ಹಿಂದೆಯೇ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ವಿಯೆಟ್ನಾಮ್ ಜೊತೆಗಿನ ಭಾರತದ ಸಂಬಂಧದ ರಕ್ಷಣಾತ್ಮಕ-ಭದ್ರತಾ ಸಹಕಾರ ಅತ್ಯಂತ ತೀವ್ರ ಮತ್ತು ಪರಿಣಾಮಕಾರಿ ಕಂಬವಾಗಿದೆ ಎಂದು ಕಳೆದ ಸೆಪ್ಟೆಂಬರ್ನಲ್ಲಿ ನಡೆದ ಅಪರೂಪದ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ವಿಯೆಟ್ನಾಂ ಭಾರತದ ರಕ್ಷಣಾ ಪಾಲುದಾರ ರಾಷ್ಟ್ರವಾಗಲಿದೆ. 500 ಮಿಲಿಯನ್ ಡಾಲರ್ ಕ್ರೆಡಿಟ್ ಲೈನ್ ಭಾರತದಿಂದ ರಕ್ಷಣಾ ಸಲಕರಣೆಗಳನ್ನು ಖರೀದಿಸಲು ಭಾರತ ಅವಕಾಶ ಮಾಡಿಕೊಟ್ಟಿದೆ. ಜೊತೆಗೆ ವಿಯೆಟ್ನಾಂ ನೌಕಾಧಿಕಾರಿಗಳು ಮಾತ್ರವಲ್ಲದೆ ಏರ್ ಫೆÇ?ರ್ಸ್ ಸಿಬ್ಬಂದಿಯೂ ಕೂಡ ಭಾರತದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತಾರವಾಗುವ ನಿರೀಕ್ಷೆ ಮೂಡಿಸಿದೆ.

ಚೀನಾ ದೋಕಲಂ ಗಡಿ ವಿಚಾರಕ್ಕೆ ಸಂಬಂಧಿಸಿ ಭಾರತದ ಜೊತೆ ಕಾಲ್ಕೆರೆದು ಯುದ್ಧಕ್ಕೆ ಬಂದಿತ್ತು. ಆದರೆ ಯಾವುದಕ್ಕೂ ಜಗ್ಗದ ಭಾರತವನ್ನು ಕಂಡು ಹಾಗೆಯೇ ಬಾಲ ಮಡಚಿಕೊಂಡು ಜಾಗ ಖಾಲಿ ಮಾಡಿತ್ತು. ಮುಂದೆ ವಿಯೆಟ್ನಾಂ ಸೇರಿ ಏಸಿಯನ್ ರಾಷ್ಟ್ರಗಳ ಜೊತೆಗೆ ಭಾರತ ರಕ್ಷಣಾ ಒಪ್ಪಂದ ವೃದ್ಧಿಸಲಿರುವುದರಿಂದ ಚೀನಾಕ್ಕೆ ಭಾರತದ ವಿರುದ್ಧ ನಡುಕ ಹುಟ್ಟಲಿದೆ.

ಚೇಕಿತಾನ

Tags

Related Articles

Close