ಪ್ರಚಲಿತ

ಒಂದು ವೇಳೆ ಗುಜರಾತಿನಲ್ಲಿ ಕಾಂಗ್ರೆಸ್ ಗೆದ್ದುಬಿಟ್ಟರೆ ಪಾಕಿಸ್ತಾನಕ್ಕಾಗುವ ಲಾಭವೇನು?!

ಗುಜರಾತ್ ಅಖಾಡದಲ್ಲಿ ಬಿಜೆಪಿಗೆ ಸವಾಲೆಸೆದು ಪ್ರತಿಷ್ಠೆಯ ಸಮರಕ್ಕಿಳಿದಿರುವ ಕಾಂಗ್ರೆಸ್‍ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹಿರಿಯ ಕಾಂಗ್ರೆಸ್ಸಿಗ ಮಣಿಶಂಕರ್ ಅಯ್ಯರ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ `ನೀಚ’ ಪದ ಬಳಸಿ ಪಕ್ಷದಿಂದ ಅಮಾನತುಗೊಳ್ಳುವ 2 ದಿನದ ಹಿಂದಷ್ಟೇ ದೆಹಲಿಯ ಅವರ ನಿವಾಸದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ತಂಡ ಪಾಕಿಸ್ತಾನದ ನಾಯಕರ ಜತೆ 3 ಗಂಟೆಗೂ ಅಧಿಕ ಕಾಲ ಗೌಪ್ಯ ಸಭೆ ನಡೆಸಿರುವ ಆರೋಪ ಕೇಳಿಬಂದಿದೆ. ಪ್ರಧಾನಿ ನರೇಂದ್ರ ಮೋದಿ ಈ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದು, ದೇಶದ ಜನತೆಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಅಯ್ಯರ್ ಹೇಳಿಕೆಯಿಂದ ಮುಜುಗರಕ್ಕೆ ಸಿಲುಕಿರುವ ಕಾಂಗ್ರೆಸ್ ಈ ಸವಾಲನ್ನು ಹೇಗೆ ದಾಟಲಿದೆ ಎಂಬುದು ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.

ಜಿದ್ದಾಜಿದ್ದಿನ ಪೈಪೆÇೀಟಿಯಿಂದಾಗಿ ದೇಶವ್ಯಾಪಿ ಕುತೂಹಲ ಕೆರಳಿಸಿರುವ ಗುಜರಾತ್ ವಿಧಾನಸಭಾ ಚುನಾವಣೆಯ 2ನೇ ಹಂತದ ಮತದಾನಕ್ಕೆ 2 ದಿನ ಬಾಕಿ ಇರುವಂತೆಯೇ ಇದೇ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಪಾಕಿಸ್ತಾನದ ನಡುವೆ ತೆರೆಮರೆಯ ಸ್ನೇಹಕೂಟ ನಡೆದಿತ್ತೆಂಬ ಆರೋಪ ಗಂಭೀರ ಚರ್ಚೆಗೆ ವೇದಿಕೆ ನಿರ್ವಿಸಿಕೊಟ್ಟಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಮೂಲಗಳ ವರದಿಯನ್ನೇ ಆಧಾರವಾಗಿಟ್ಟುಕೊಂಡು ಖಾಸಗಿ ಸುದ್ದಿವಾಹಿನಿ ಬಿತ್ತರಿಸಿರುವ ವರದಿ ಬಿಜೆಪಿಗೆ ಹೊಸ ಅಸ್ತ್ರವಾಗಿ ಸಿಕ್ಕಿದೆ.

ಗುಜರಾತ್ ಗಡಿಭಾಗವಾದ್ದರಿಂದ ಅಲ್ಲಿಂದ ಸುಲಭವಾಗಿ ಪಾಕ್ ಭಯೋತ್ಪಾಕರಿಗೆ ಭಾರತಕ್ಕೆ ಬರಲು ಸಾಧ್ಯವಾಗುತಿತ್ತು..
ಈಗ ಮೋದಿ ಸರಕಾರ ಅಧಿಕಾರದಲ್ಲಿರುವುದರಿಂದ ಭಯೋತ್ಪಾದಕರಿಗೆ ಅಷ್ಟು ಸುಲಭದಲ್ಲಿ ಭಾರತಕ್ಕೆ ಒಳಬರಲು ಸಾಧ್ಯವಿಲ್ಲ…ಒಂದು ವೇಳೆ ಕಾಂಗ್ರೆಸ್ ಗುಜರಾತ್‍ನಲ್ಲಿ ಗೆದ್ದರೆ ಪಾಕಿಸ್ತಾನದ ಭಯೋತ್ಪಾದಕರಿಗೆ ಸುಲಭವಾಗಿ ಒಳನುಗ್ಗಿ ತಮ್ಮ ಸಾಮ್ರಾಜ್ಯವನ್ನು ಸುಲಭವಾಗಿ ಸಾಧಿಸಬಹುದು… ಯಾಕೆಂದರೆ ಕಾಂಗ್ರೆಸ್ ಯಾವಾಗಲೂ ಪಾಕಿಸ್ತಾನದೊಂದಿಗೆ ಮೃದು ಧೋರಣೆಯನ್ನು ತೋರಿಸುತ್ತಿರುತ್ತದೆ…

ನಕಲಿ ನೋಟು, ಡ್ರಗ್ಸ್, ಹೆರಾಯಿನ್‍ನಂತಹ ಕಾರ್ಯ ಚಟುವಟಿಕೆಗಳು ಗುಜರಾತ್ ಗಡಿಭಾಗದಲ್ಲಿ ನಡೆಯುತ್ತಲೇ ಇರುತ್ತಿತ್ತು.. ಇದಕ್ಕೆ ಹಲವಾರು ದೊಡ್ಡ ದೊಡ್ಡ ರಾಜಕೀಯವರ ಕುಮ್ಮಕ್ಕು ಕೂಡಾ ದೊರೆಯುತ್ತಿತ್ತು… ಯಾವಾಗ ಮೋದಿ ಸರಕಾರ ಅಧಿಕಾರಕ್ಕೆ ಬಂತೋ ಅಂದಿನಿಂದ ಇದಕ್ಕೆಲ್ಲಾ ಕಡಿವಾಣ ಬಿದ್ದಿತ್ತು…

ವಿವಾದವಾಗಿದ್ದ ರಾಹುಲ್ ಭೇಟಿ..

ತೆರೆಮರೆಯಲ್ಲಿ ನೆರೆ ರಾಷ್ಟ್ರಗಳ ನಾಯಕರೊಂದಿಗೆ ಕಾಂಗ್ರೆಸ್ ನಾಯಕರ ಮಾತುಕತೆ ಇದು ಮೊದಲೇನಲ್ಲ. ಇತ್ತೀಚೆಗಷ್ಟೇ ಡೋಕ್ಲಾಂ ಗಡಿ ಬಿಕ್ಕಟ್ಟು ತೀವ್ರಗೊಂಡ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತದಲ್ಲಿರುವ ಚೀನಾ ರಾಯಭಾರಿಯನ್ನು ಗೌಪ್ಯವಾಗಿ ಭೇಟಿಯಾಗಿದ್ದರು. ಹೀಗಾಗಿ ಪಾಕಿಸ್ತಾನದೊಂದಿಗೆ ನಿರಂತರವಾಗಿ ಮಾತು ಕತೆ ನಡೆಸುತ್ತಿರುವ ಕಾಂಗ್ರೆಸ್ ಗುಜರಾತ್ ಚುನಾವಣೆಯಲ್ಲಿ ಸಹಕಾರವನ್ನು ಬಯಸಿತ್ತು ಎಂಬುವುದಕ್ಕೆ ಬೇರೇ ಯಾವುದೇ ಕಡತಗಳ ಅವಶ್ಯಕತೆಯಿಲ್ಲ… ನಮ್ಮ ದೇಶಕ್ಕೆ ಭಯೋತ್ಪಾದಕರ ಎಂಟ್ರಿಯಾಗುವುದೇ ಗುಜರಾತ್ ಮೂಲಕ.. ಇದೆಲ್ಲಾ ಪಾಕ್ ಮತ್ತು ಕಾಂಗ್ರೆಸ್‍ನ ಸಖತ್ ಪ್ಲಾನ್ ಆಗಿರಬಹುದು..

ಮಣಿಶಂಕರ್ ಅಯ್ಯರ್ ನಿವಾಸದಲ್ಲಿ ಪಾಕ್ ಅಧಿಕಾರಿಗಳ ಜೊತೆ ಮಾತುಕತೆ!

ನವದೆಹಲಿಯ ಜಂಗ್‍ಪುರ ಬಡಾವಣೆಯಲ್ಲಿರುವ ಮಣಿಶಂಕರ್ ಅಯ್ಯರ್ ನಿವಾಸದಲ್ಲಿ ಡಿಸೆಂಬರ್.6ರಂದು ಸಭೆ ಆಯೋಜನೆಗೊಂಡಿತ್ತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಸಭೆಯಲ್ಲಿ ಭಾಗಿಯಾಗಿದ್ದರು. ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಶೀದ್ ಕಸೂರಿ ಒಳಗೊಂಡ ಪಾಕ್ ತಂಡದಲ್ಲಿ ಅಲ್ಲಿನ ಸರ್ಕಾರಿ ಅಧಿಕಾರಿಗಳಿದ್ದರು. ಗುಜರಾತ್ ಮೊದಲ ಹಂತದ ಮತದಾನಕ್ಕೆ ಮೂರು ದಿನ ಮುನ್ನ ಈ ಸಭೆ ನಡೆದಿರುವುದನ್ನು ಪಾಕ್‍ನ ವಿದೇಶಾಂಗ ಸಚಿವಾಲಯದ ಮೂಲಗಳು ಖಚಿತಪಡಿಸಿವೆ.

ಈ ಮಾಹಿತಿಯನ್ನು ಬಹಿರಂಗಪಡಿಸಿದ್ದ ಬಿಜೆಪಿ ಮುಖಂಡ ಹಾಗೂ ಬೋಫೆÇೀರ್ಸ್ ಪ್ರಕರಣದ ಮುಖ್ಯ ಫಿರ್ಯಾದುದಾರ ಅಜಯ್ ಅಗರ್‍ವಾಲ್, ಬೇಹುಗಾರಿಕಾ ಸಂಸ್ಥೆ ಮೂಲಗಳು ಕೂಡ ಈ ವಿಚಾರವನ್ನು ಖಚಿತಪಡಿಸಿರುವುದಾಗಿ ಹೇಳಿದ್ದರು. ಹಾಗಾದರೆ ಕಾಂಗ್ರೆಸ್‍ಗೆ ಮತ್ತು ಪಾಕ್‍ಗೆ ಈ ಚುನಾವಣೆಯ ಅಥವಾ ಬೇರೆ ಯಾವುದೇ ವಿಚಾರವಾದರೂ ಅವರಲ್ಲಿ ಯಾವ ವಿಚಾರದ ಬಗ್ಗೆಯೂ ಚರ್ಚಿಸುವ ಅಗತ್ಯವೇನು ಇದೆಯೇ?… ಪಾಕ್ ಭಯೋತ್ಪಾದಕರನ್ನು ಭಾರತಕ್ಕೆ ಸ್ವಾಗತಿಸುವ ತಯಾರಿ ಈಗಾಗಲೇನಡೆಸುತ್ತಿರುವುದು ಎಲ್ಲರಿಗೂ ಸ್ಪಷ್ಟವಾಗಿ ಗಮನಿಸಬಹುದು.

ಮಣಿಶಂಕರ್ ಅಯ್ಯರ್ ಮನೆಯಲ್ಲಿ ನಡೆದ ಸಭೆಯ ಬಳಿಕ ಗುಜರಾತ್‍ನ ಹಿಂದುಳಿದ ವರ್ಗಗಳು, ಬಡವರನ್ನು ಅವಮಾನಿಸಲಾಗುತ್ತಿದೆ. ಇದೆಲ್ಲವನ್ನು ಗಮನಿಸಿದಾಗ ದೇಶದ ಹಿತಕಾಯುವ ವಿಷಯದಲ್ಲಿ ಕಾಂಗ್ರೆಸ್ ಬದ್ಧತೆ ಬಗ್ಗೆ ಅನುಮಾನ ಮೂಡುತ್ತದೆ. ಆದ್ದರಿಂದ, ಕಾಂಗ್ರೆಸ್ ದೇಶದ ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ಮೋದಿ ಆಗ್ರಹಿಸಿದ್ದರು.
“ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪಾಕಿಸ್ಥಾನ ಕಾಂಗ್ರೆಸ್ ಯಾಕಾದರೂ ಹಸ್ತಕ್ಷೇಪ ಮಾಡುತ್ತಿದೆ ಎಂಬುವುದು ಎಲ್ಲರ ಪ್ರಶ್ನೆಯಾಗಿದೆ. ಗುಜರಾತ್ ಮತದಾನಕ್ಕೆ ನೇರವಾಗಿ ಪಾಕಿಸ್ಥಾನದ ಸಂಬಂಧವಿರುವುದು ಕಾಂಗ್ರೆಸ್ ಪಕ್ಷದ ಪ್ರಮುಖರು ಇತ್ತೀಚೆಗಷ್ಟೇ ಪಾಕ್‍ನ ನಾಯಕರನ್ನು ರಹಸ್ಯವಾಗಿ ಭೇಟಿಯಾಗಿರುವ ವಿಚಾರವನ್ನು ಅವರು ಬಹಿರಂಗ ಪಡಿಸಿದ್ದಾರೆ.
ಅದರಲ್ಲಿ ಭಾರತದಲ್ಲಿರುವ ಪಾಕ್ ಹೈಕಮಿಷನರ್ ಮತ್ತು ಪಾಕಿಸ್ಥಾನದ ಮಾಜಿ ವಿದೇಶಾಂಗ ಸಚಿವರು ಭಾಗಿಯಾಗಿದ್ದರು. ಅಷ್ಟೇ ಅಲ್ಲ, ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್ ಹಾಗೂ ಮಾಜಿ ಉಪರಾಷ್ಟ್ರಪತಿಯೊಬ್ಬರು ಅಲ್ಲಿದ್ದು, 3 ಗಂಟೆಗಳ ಕಾಲ ನೆರೆರಾಷ್ಟ್ರದ ರಾಯಭಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಇದನ್ನೆಲ್ಲ ನೋಡುವಾಗ ಯಾರಿಗಾದರೂ ಅನುಮಾನ ಬರುವುದಿಲ್ಲವೇ’ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ. ಅಲ್ಲದೆ, ಈ ಸಭೆ ನಡೆದ ಮಾರನೇ ದಿನವೇ ಅಯ್ಯರ್ ನನ್ನನ್ನು ನೀಚ ಎಂದು ಕರೆದರು. ಗುಜರಾತ್‍ನ ಜನತೆಯನ್ನು, ಇಲ್ಲಿನ ಹಿಂದುಳಿದ ವರ್ಗಗಳನ್ನು, ಬಡವರನ್ನು ಮತ್ತು ಮೋದಿಯನ್ನು ಅವಮಾನಿಸಿದರು. ಈ ಕುರಿತು ಕಾಂಗ್ರೆಸ್ ದೇಶದ ಜನರಿಗೆ ವಿವರಣೆ ನೀಡಬೇಕು ಎಂದೂ ಮೋದಿ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸ್ಪಷ್ಟನೆ ನೀಡಲಿ

ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಗುಜರಾತ್ ಸಿಎಂ ಆಗಬೇಕು ಎಂದು ಪಾಕ್ ಸೇನೆಯ ಮಾಜಿ ಡಿಜಿಯೊಬ್ಬರು ಹೇಳಿಕೆ ನೀಡಿರುವುದರ ಮರ್ಮವಾದರೂ ಏನು? ಪಾಲನಪುರದಲ್ಲಿ ಭಾನುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿಯವರು ಮಾತನಾಡಿದ್ದು ಪಾಕಿಸ್ತಾನ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದಾದರೂ ಏಕೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.

ಪಾಕ್ ಸೇನೆಯ ಮಾಜಿ ಡಿಐಜಿ ಸರ್ದಾರ್ ಅರ್ಷದ್ ರಫೀಕ್, ಪಾಕ್‍ನ ಬೇಹುಗಾರಿಕಾ ಸಂಸ್ಥೆ ಐಎಸ್‍ಐನ ಮಾಜಿ ಅಧಿಕಾರಿಗಳು ಅಹ್ಮದ್ ಪಟೇಲ್ ಅವರನ್ನೇ ಸಿಎಂ ಮಾಡುವಂತೆ ಕಾಂಗ್ರೆಸ್ ನಾಯಕರಿಗೆ ಪತ್ರ ಬರೆಯುತ್ತಿರುವುದು ಏಕೆಂದು ಮೋದಿ ಪ್ರಶ್ನಿಸಿದ್ದರು. ಮಣಿಶಂಕರ್ ಅಯ್ಯರ್ ಮನೆಯಲ್ಲಿ ಗುಪ್ತಸಭೆ ನಡೆದಿದ್ದು ಅಂದಾಜು 3 ಗಂಟೆ ನಡೆದ ಈ ಸಭೆಯಲ್ಲಿ ಪಾಕಿಸ್ತಾನದ ಹೈಕಮಿಷನರ್, ಮಾಜಿ ವಿದೇಶಾಂಗ ಸಚಿವ, ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾಲ್ಗೊಂಡಿದ್ದರು. ಈ ಸಭೆ ನಡೆದ ಮರುದಿನವೇ ಅಯ್ಯರ್ ಮೋದಿಯನ್ನು ನೀಚ ಎಂದು ನಿಂದಿಸಿದ್ದರು.
ಪಟೇಲ್‍ಗೆ ಜೈ ಎಂದ ಪಾಕ್

ಒಂದೆಡೆ ಅಯ್ಯರ್ ಮನೆಯಲ್ಲಿ ಇಂಥ ಗುಪ್ತ ಸಭೆ ನಡೆದರೆ, ಮತ್ತೂಂದೆಡೆ ಪಾಕ್ ಸೇನೆಯ ಮಾಜಿ ಪ್ರಧಾನ ನಿರ್ದೇಶಕ ಸರ್ದಾರ್ ಅರ್ಷದ್ ರಫೀಕ್ ಅವರು ಕಾಂಗ್ರೆಸ್‍ನ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರೇ ಗುಜರಾತ್ ಮುಖ್ಯಮಂತ್ರಿ ಆಗಬೇಕು ಎಂದು ಹೇಳುತ್ತಾರೆ. ಇದೊಂದು ಗಂಭೀರ ವಿಚಾರ. ಪಾಕ್ ಸೇನೆಯ ಮಾಜಿ ಡಿಜಿಯೊಬ್ಬರು ಗುಜರಾತ್ ಚುನಾವಣೆಯಲ್ಲಿ ಮೂಗು ತೂರಿಸುತ್ತಾರೆಂದರೆ ಅದರ ಅರ್ಥವೇನು ? ಮೊದಲು ಮೋದಿಯ ಶಕ್ತಿಯನ್ನು ಕುಂದಿಸಬೇಕು ಎಂಬ ಹಠಕ್ಕೆ ಬಿದ್ದ ಪಾಕಿಸ್ಥಾನ ಅದೇನೇನೋ ಮಾಡಿದರೂ ಜಗತ್ತು ಕೇಳಲೇ ಇಲ್ಲ. ಜಗತ್ತಿನ ಮುಂದೆ ಮೋದಿಯನ್ನು ತಲೆ ತಗ್ಗಿಸುವಂತೆ ಮಾಡಲು ನಡೆಸಿದ್ದ ಎಲ್ಲಾ ಪ್ರಯತ್ನಗಳೂ ಠುಸ್ ಪಟಾಕಿಯಾಗಿ ಹೋಗಿತ್ತು. ಜಗತ್ತು ಅದನ್ನು ಕೇಳಲೇ ಇಲ್ಲ. ಮೋದಿಗೆ ಜೈ ಅಂದು ಬಿಟ್ಟಿತ್ತು.

ಹೀಗಾಗಿಯೇ ತಮ್ಮ ಸ್ವಂತ ನೆಲದಲ್ಲಿ ಮೋದಿಯನ್ನು ಸೋಲಿಸಿ ಮೋದಿಯ ತಾಕತ್ತನ್ನು ಕಡಿಮೆ ಮಾಡಬೇಕೆಂಬ ಹಠಕ್ಕೆ ಬಿದ್ದಿದೆ ಪಾಕಿಸ್ಥಾನ. ಭಾರತದಲ್ಲಿಯೇ ಮೋದಿಯ ಶಕ್ತಿ ಕುಂದಿದರೆ ಜಗತ್ತಿನಲ್ಲಿ ಅವರ ಮಾತನ್ನು ಕೇಳೋರಿಲ್ಲಾ ಅನ್ನುವ ಮೂಢ ನಂಬಿಕೆ ಪಾಕಿಸ್ಥಾನದ್ದು. ಇದರ ಒಂದು ಅಸ್ತ್ರವೇ ಗುಜರಾತ್ ಚುನಾಚಣೆ. ಗುಜರಾತ್ ಚುನಾವಣೆಗೆ ಪಾಕಿಸ್ಥಾನ ಬಹಿರಂಗವಾಗಿಯೇ ಭಾರತದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದೆ. ಗುಜರಾತ್‍ನಲ್ಲಿ ಮೋದಿಯನ್ನು ಸೋಲಿಸಿ ಎಂದು ಘೋಷಿಸಿ ಬಿಟ್ಟಿದೆ. ತನ್ನ ತವರು ರಾಜ್ಯದಲ್ಲೇ ಮೋದಿ ಸೋತರೆ ಜಾಗತಿಕ ಮಟ್ಟದಲ್ಲಿ ಮೋದಿ ತಲೆ ತಗ್ಗಿಸಿದಂತೆಯೇ ಎಂಬುವುದು ಪಾಕ್ ಲೆಕ್ಕಾಚಾರ. ಹೀಗಾಗಿಯೇ ಪಾಕಿಸ್ಥಾನದ ಮಾಜಿ ಡಿ.ಜಿ. ಅರ್ಷಾದ್ ರಫೀಕ್ ಮೋದಿಯನ್ನು ಸೋಲಿಸುವಂತೆ ಕಾಂಗ್ರೆಸ್‍ಗೆ ಕರೆ ಈ ಮೊದಲೇ ನೀಡಿದ್ದನು.

ಒಂದು ವೇಳೆ ಗುಜರಾತ್‍ನಲ್ಲಿ ಕಾಂಗ್ರೆಸ್ ಗೆದ್ದು ಬಂದರೆ ಪಾಕಿಸ್ತಾನವು ಭಾರತದಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಬಹುದು ಎಂಬ ಆಲೋಚನೆಯನ್ನಿಟ್ಟುಕೊಂಡು ಇಂತಹ ಕೃತ್ಯಗಳನ್ನು ಮಾಡಲು ಕಾಂಗ್ರೆಸ್‍ಗೆ ಕುಮ್ಮಕ್ಕು ನೀಡುತ್ತಿದೆ… ಆದರೆ ನಾವು ಮಾತ್ರ ಕಾಂಗ್ರೆಸ್ ಪಕ್ಷ ಎಲ್ಲೂ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಲು ಎಡೆ ಮಾಡಿ ಕೊಡಬಾರದು ಅಷ್ಟೇ!!.

-ಪವಿತ್ರ

Tags

Related Articles

Close