ಪ್ರಚಲಿತ

ಕಾಂಗ್ರೆಸ್ ಮಹಾರಾಜ ರಾಹುಲ್ ಗಾಂಧಿಗೆ ಬಿಗ್ ಶಾಕ್!! ಅಖಿಲೇಶ್ ಯಾದವ್ ಕೈಗೊಂಡ ನಿರ್ಧಾರವೇನು ಗೊತ್ತಾ..?!

ತಾನು ಹೋದಲ್ಲೆಲ್ಲಾ ಸೋಲನ್ನೇ ಅನುಭವಿಸಿಕೊಂಡು ಬಂದಿರುವ ಕಾಂಗ್ರೆಸ್ ಮಹಾರಾಜ ರಾಹುಲ್ ಗಾಂಧಿಗೆ ಈಗ ಮತ್ತೆ ಬಿಗ್ ಶಾಕ್ ಎದುರಾಗಿದೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ರಾಹುಲ್ ಗಾಂಧಿಗೆ ಶಾಕ್ ನೀಡಿದ್ದಾರೆ. ಕಳೆದ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ವೇಳೆ ಭಾರತೀಯ ಜನತಾ ಪಕ್ಷವನ್ನು ಮಣಿಸಲು ನಾನಾ ತಂತ್ರಗಳನ್ನು ಹೂಡಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ಉತ್ತರ ಪ್ರದೇಶದ ಪ್ರಾದೇಶಿಕ ಪಕ್ಷವಾದ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಹೀನಾಯವಾಗಿ ಸೋಲನ್ನು ಅನುಭವಿಸಿತ್ತು.

ಸೋಲು ಅನ್ನೋದು ಹೆಗಲ ಮೇಲೆ ಕುಂತಿದೆ!!!

ರಾಹುಲ್ ಗಾಂಧಿ ಅದ್ಯಾವಾಗ ಕಾಂಗ್ರೆಸ್ ಪಕ್ಷದ ಜವಬ್ಧಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡರೋ ಅಂದಿನಿಂದ ಕಾಂಗ್ರೆಸ್ ಎನ್ನುವ 132 ವರ್ಷಗಳ ಇತಿಹಾಸವುಳ್ಳ ರಾಷ್ಟ್ರೀಯ ಪಕ್ಷಕ್ಕೆ ಶನಿ ಹೆಗಲೇರಿದಂತಾಗಿದೆ. ರಾಹುಲ್ ಗಾಂಧಿ ವಹಿಸಿಕೊಂಡ ಎಲ್ಲಾ ಚುನಾವಣೆಗಳೂ ಸೋತು ಸುಣ್ಣವಾಗಿ ಹೋಗಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್‍ಗೆ ವರ್ಚಸ್ಸು ತರಲು ಇದ್ದಂತಹ ಒಬ್ಬ ಧೀಮಂತ ರಾಜಕಾರಣಿ ಪ್ರಣಬ್ ಮುಖರ್ಜಿಯವರನ್ನು ರಾಷ್ಟ್ರಪತಿ ಮಾಡಿ ರಾಹುಲ್ ಗಾಂಧಿಗೆ 2014ರ ಲೋಕಸಭಾ ಚುನಾವಣೆಯ ಪ್ರಧಾನಿ ಹುದ್ದೆ ಎಂಬಂತೆ ಬಿಂಬಿಸಿ ಚುನಾವಣೆಯನ್ನು ಎದುರಿಸಿತ್ತು ರಾಷ್ಟ್ರೀಯ ಪಕ್ಷ ಕಾಂಗ್ರೆಸ್.

ಆದರೆ ಇದರಲ್ಲಿ ಬಂದ ಫಲಿತಾಂಶ ಮಾತ್ರ ಸ್ವತಃ ಸೋನಿಯಾ ಗಾಂಧಿನೂ ನಿರೀಕ್ಷಿಸಿರಲಿಲ್ಲ. ಅಷ್ಟರ ಮಟ್ಟಿಗೆ ಕಳಪೆ ಸಾಧನೆಯನ್ನು ಮಾಡಿತ್ತು ಈ ರಾಷ್ಟ್ರೀಯ ಪಕ್ಷ ಕಾಂಗ್ರೆಸ್. ಅತ್ತ ಅಮಿತ್ ಶಾ ಅವರ ಚುನಾವಣಾ ರಣತಂತ್ರ, ಮತ್ತೊಂದು ಕಡೆ ನರೇಂದ್ರ ಮೋದಿಯವರ ಅಬ್ಬರದ ಪ್ರಚಾರ. ಇದರಿಂದ ಕಾಂಗ್ರೆಸ್ ಎನ್ನುವ ಪಕ್ಷಕ್ಕೆ ಮೇಲೇಳಲೇ ಆಗಲಿಲ್ಲ. ತಾನು ಮಾಡಿದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಎಲೆಎಲೆಯಾಗಿ ಬಿಚ್ಚಿಟ್ಟಿದ್ದ ಭಾರತೀಯ ಜನತಾ ಪಕ್ಷ, ಮೋದಿ ಮೂಲಕ 2014ರ ಐತಿಹಾಸಿಕ ಲೋಕಸಭಾ ಚುನಾವಣೆಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಇದು ಕಾಂಗ್ರೆಸ್‍ಗೆ ಯಾವ ರೀತಿ ಹೊಡೆತ ನೀಡಿತ್ತು ಎಂದರೆ ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಸಂಸತ್ತಿನಲ್ಲಿ ವಿಪಕ್ಷ ಸ್ಥಾನವನ್ನೂ ಅಧಿಕೃತವಾಗಿ ಕಳೆದುಕೊಳ್ಳುವಂತೆ ಆಗಿತ್ತು. 545 ಸದಸ್ಯರಿರುವ ಸಂಸತ್ತಿನಲ್ಲಿ ಅರ್ಧ ಶತಕ ಭಾರಿಸಲೂ ವಿಫಲವಾಗಿದ್ದ ಕಾಂಗ್ರೆಸ್ ಪಕ್ಷ ಕೇವಲ 44 ಸ್ಥಾನಗಳನ್ನು ಪಡೆದು ಹೀನಾಯವಾಗಿ ಸೋಲನ್ನು ಅನುಭವಿಸುವಂತೆ ಆಗಿತ್ತು.

ಇದು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಗೆ ಅತ್ಯಂತ ಸವಾಲಾಗಿ ಪರಿಣಮಿಸಿತ್ತು. ದೇಶದಲ್ಲಿ ಕಾಂಗ್ರೆಸ್ ಪಕ್ಷದ ನಾಯಕತ್ವದ ಬದಲಾವಣೆಗಾಗಿ ಒತ್ತಾಯಗಳು ಕೇಳಿ ಬಂದಿತ್ತು. ಥೇಟ್ ಇಂದಿರಾ ಗಾಂಧಿಯನ್ನೇ ಹೋಲುವ ಪ್ರಿಯಾಂಕ ಗಾಂಧಿಯನ್ನು ಪಕ್ಷದ ಗದ್ದುಗೆಗೆ ಏರಿಸಲು ಒತ್ತಡವಿತ್ತು. ಆದರೆ ಕಾಂಗ್ರೆಸ್ ಮಾತ್ರ ಕಾದು ನೋಡುವ ತಂತ್ರವನ್ನು ಅನುಸರಿಸಿತ್ತು. ಮುಂದಿನ ರಾಜ್ಯಗಳ ವಿಧಾನ ಸಭಾ ಚುನಾವಣೆಗಳ ಜವಬ್ಧಾರಿಯನ್ನು ಮತ್ತೆ ರಾಹುಲ್ ಗಾಂಧಿಗೆ ನೀಡಲು ಮುಂದಾಯ್ತು.

ಉತ್ತರ ಪ್ರದೆಶದಲ್ಲಿ ತೀವ್ರ ಮುಖಭಂಗ…!!!

ಯೆಸ್… ಶತಾಯ ಗತಾಯ ಭಾರತೀಯ ಜನತಾ ಪಕ್ಷವನ್ನು ಸೋಲಿಸಬೇಕೆಂಬ ಹಠಕ್ಕೆ ಬಿದ್ದಿರುವ ರಾಹುಲ್ ಗಾಂಧಿ ದೇಶದ ಅತೀ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ತನ್ನ ಚುನಾವಣಾ ತಂತ್ರವನ್ನು ಹೆಣೆಯುತ್ತಾರೆ. ಆಡಳಿತ ನಡೆಸುತ್ತಿದ್ದ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವೂ ಕಮಲ ಕಲಿಗಳಿಗೆ ಬೆದರಿತ್ತು. ಆವಾಗ ಬಂದಿದ್ದು ರಾಹುಲ್ ಗಾಂಧಿ. ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಮಾಜವಾದಿ ಪಕ್ಷದ ಸರಗಿನ ಒಳಗೆ ತೂರಿಕೊಂಡು ಬಂದು ಚುನಾವಣೆಯನ್ನು ಎದುರಿಸಿತ್ತು. ಆದರೆ ಫಲಿತಾಂಶ ಅಚ್ಚರಿ. ಭಾರತೀಯ ಜನತಾ ಪಕ್ಷಕ್ಕೆ ನಿರೀಕ್ಷೆಗಿಂತಲೂ ಅಧಿಕ ಸ್ಥಾನಗಳು ಒದಗಿ ಬಂದಿದ್ದು, ಕಾಂಗ್ರೆಸ್ ಹಾಗೂ ಸಮಾಜವಾದ ಪಕ್ಷ ಮಖಾಡೆ ಮಲಗಿತ್ತು.

ಅಖಿಲೇಶ್ ವರ್ಚಸ್ಸು ಕುಂದಿಸಿದರಾ ರಾಹುಲ್..?

ಯಾವಾಗ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಹೀನಾಯ ಸೋಲನ್ನು ಕಂಡಿತೋ ಅಂದಿನಿಂದ ರಾಹುಲ್ ಗಾಂಧಿಯ ಮೇಲೆ ಆರೋಪಗಳ ಸುರಿಮಳೆಯೇ ಗೈಯಲಾಗಿತ್ತು. ಆಡಳಿತ ನಡೆಸುತ್ತಿದ್ದ ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರದ ವರ್ಚಸ್ಸನ್ನೂ ಕೂಡ ರಾಹುಲ್ ಗಾಂಧಿ ಆಗಮನದಿಂದ ಕಳೆಗುಂದಿದೆ ಎಂದು ಆರೋಪಿಸಲಾಗುತ್ತಿದೆ. ಈವರೆಗೂ ಪ್ರಾದೇಶಿಕ ಪಕ್ಷಗಳೊಂದಿಗೆ ಎಲ್ಲೆಲ್ಲಿ ರಾಹುಲ್ ಗಾಂಧಿ ಹೊಂದಾಣಿಕೆ ಮಾಡಿಕೊಂಡಿದ್ದಾರೋ ಅಲ್ಲೆಲ್ಲಾ ಕಾಂಗ್ರೆಸ್‍ನೊಂದಿಗೆ ಅಲ್ಲಿರುವ ಪ್ರದೇಶಿಕ ಪಕ್ಷಗಳೂ ಕೂಡಾ ನೆಲಕಚ್ಚಿರುವ ವಿಚಾರ ದೇಶವ್ಯಾಪಿ ಚರ್ಚೆಗೆ ಕಾರಣವಾಗಿತ್ತು.

ರಾಹುಲ್ ಕೈ ಬಿಟ್ಟ ಅಖಿಲೇಶ್ ಯಾದವ್..!!!

ಹೌದು… ಈ ಬಗ್ಗೆ ಅಖಲೇಶ್ ಯಾದವ್ ಅವರಿಗೆ ಸಂಪೂರ್ಣ ಮನವರಿಕೆ ಆಗಿದೆ. ಹೀಗಾಗಿಯೇ ಅಖಿಲೇಶ್ ಯಾದವ್ ಒಂದು ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದಾರೆ. ತನ್ನ ಸೋಲಿಗೂ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿಯೇ ನೇರ ಕಾರಣ ಎಂದು ಅರ್ಥಮಾಡಿಕೊಂಡಿರುವ ಅಖಿಲೇಶ್ ಯಾದವ್ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಯನ್ನು ದೂರವಿಡಲು ಚಿಂತಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಕಾಂಗ್ರೆಸ್ ಜೊತೆ ಮಾತುಕತೆ ಟೈಮ್ ವೇಸ್ಟ್…

ಕಳೆದ ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಸಮಾಜವಾದಿ ಪಕ್ಷ “ಮುಂದಿನ ಲೋಕಸಭಾ ಚುನಾವಣೆಯ ವೇಳೆ ಯಾವುದೇ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್ ಜೊತೆ ಮಾತನಾಡಿಕೊಳ್ಳುವುದು ಟೈಮ್ ವೇಸ್ಟ್. ಆ ಪಕ್ಷದ ಜೊತೆ ಯಾವುದೇ ಮಾತುಕತೆ ಇಲ್ಲ” ಎಂದು ಖಡಕ್ ಆಗಿಯೇ ಹೇಳಿದೆ. 2017ರ ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಯಲ್ಲಿ 403 ವಿಧಾನ ಸಭಾ ಸದಸ್ಯ ಬಲದ ಸದನದ 325 ಸ್ಥಾನಗಳನ್ನು ಭಾರತೀಯ ಜನತಾ ಪಕ್ಷ ಗೆದ್ದಿತ್ತು. ಈ ವೇಳೆ ಆಡಳಿತ ನಡೆಸುತ್ತಿದ್ದ ಸಮಾಜವಾದಿ ಪಕ್ಷಕ್ಕೆ ಕೇವಲ 47 ಸ್ಥಾನಗಳು ಮೀಸಲಾಗಿತ್ತು. ಅತ್ತ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಕೇವಲ 7 ಸ್ಥಾನಗಳು ಪ್ರಾಪ್ತಿಯಗಿತ್ತು.

ಒಟ್ಟಾರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಇಲ್ಲ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕಡ್ಡಿ ಮುರಿದ ಹಾಗೆ ಹೇಳಿರುವುದು ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಹುದ್ದೆ ಕನಸು ಹೊತ್ತಿರುವ ರಾಹುಲ್ ಗಾಂಧಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಂತು ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close