ಅಂಕಣಇತಿಹಾಸಪ್ರಚಲಿತ

ಕಾಶಿಯ ವಿಶ್ವನಾಥ ದೇಗುಲದ ಮೂಲಸ್ಥಳ ಎಲ್ಲಿದೆ? ಅದಕ್ಕೇನಾಯಿತು?

ಕಾಶಿ ವಿಶ್ವನಾಥ ದೇವಾಲಯವು ಹಿಂದೂಗಳ ಪವಿತ್ರ ಆರಾಧನಾ ಸ್ಥಳವಾಗಿದೆ. ಶಿವದೇವನೇ ಸ್ವತಃ ಇಚ್ಛಿಸಿ ಇಲ್ಲಿ ನೆಲೆಗೊಂಡ ಎಂದು ಪುರಾಣಗಳು ತಿಳಿಸುತ್ತವೆ. ಈ ದೇವಾಲಯ ಉತ್ತರಪ್ರದೇಶದ ವಾರಣಾಸಿಯಲ್ಲಿದೆ. ಪವಿತ್ರವಾದ ಗಂಗಾ ನದಿ ಕಾಶಿ ವಿಶ್ವನಾಥ ದೇಗುಲದ ಬಲಭಾಗದಿಂದ ಹರಿಯುತ್ತಿದೆ. ಆದರೆ ವಿಶ್ವನಾಥ
ದೇಗುಲವಿದ್ದ ಮೂಲ ಜಾಗ ಎಲ್ಲಿದೆ. ಆ ಜಾಗವನ್ನು ಹೇಗೆ ನಾಶ ಮಾಡಲಾಯಿತು? ಮೂಲಸ್ಥಳದಲ್ಲಿ ಈಗ ಏನಿದೆ?

ವಾರಣಾಸಿ ನಗರದ ಬಗ್ಗೆ ಹಿಂದೂಗಳ ಮಹಾನ್ ಹಾಗೂ ಪುರಾತನ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತಗಳಲ್ಲೂ ಉಲ್ಲೇಖಿಸಲಾಗಿದೆ. ಇದು ಭಾರತದ ಸಂಸ್ಕøತ ಯುಗದ ಅತ್ಯಂತ ಪುರಾತನ ನಗರ ಎಂದು ಹೆಸರು ಪಡೆದಿದ್ದು, 3500 ವರ್ಷಗಳ ಇತಿಹಾಸವಿದೆ. ವಿಶ್ವನಾಥ ದೇವಾಲಯದ ಬಗ್ಗೆ ಪುರಾಣಗಳಲ್ಲೇ ಉಲ್ಲೇಖವಿದ್ದು, ಇದು ಸಾವಿರಾರು ವರ್ಷಗಳಷ್ಟು ಪುರಾತನವಾಗಿದೆ. ಈ ದೇವಾಲಯದ ಹೆಸರು ಗರುಡ ಪುರಾಣ, ಸ್ಕಂದ ಪುರಾಣಗಳಲ್ಲೂ ಬರುತ್ತದೆ. ಇಲ್ಲಿನ ಜ್ಯೋತಿರ್ಲಿಂಗವು ಹನ್ನೆರಡು ಜ್ಯೋತಿರ್ಲಿಂಗದಲ್ಲಿ ಒಂದು. ಶಿವನು ಹಿಮಾಲಯವನ್ನು ಬಿಟ್ಟು ಇಲ್ಲಿ ನೆಲೆಸಿದ್ದ.

ಇಡೀ ವಿಶ್ವದಲ್ಲಿನ ಹಿಂದೂಗಳಿಗೆ ಕಾಶಿ ದೇಗುಲದ ಬಗ್ಗೆ ಭಾವನಾತ್ಮಕ ಸಂಬಂಧವಿದೆ. ಇಲ್ಲಿಗೆ ಬಂದು ದರ್ಶನ ಪಡೆದರೆ ಪಾಪ ಕಳೆದು ಪುಣ್ಯ ಲಭಿಸುತ್ತದೆ ಎಂದು
ನಂಬಿಕೆ ಇದೆ!!

ಇಷ್ಟು ಪವಿತ್ರವಾದ ಕಾಶಿ ದೇಗುಲವನ್ನು ಮುಸ್ಲಿಂ ದಾಳಿಕೋರರು ಆಕ್ರಮಣ ನಡೆಸಿ ಧ್ವಂಸ ಮಾಡಿದರು. ಅರಬ್ ಮತ್ತು ಮೊಘಲ್ ಆಕ್ರಮಣಕಾರರು ಈ ದೇಗುಲಕ್ಕೆ ದಾಳಿ ನಡೆಸಿ ಹಿಂದೂಗಳ ಸಂಸ್ಕøತಿಯ ಪ್ರತೀಕವಾಗಿದ್ದ ಪವಿತ್ರ ದೇಗುಲವನ್ನು ನಾಶ ಮಾಡಿದರು. ಹಿಂದೂಗಳ ಸಂಸ್ಕøತಿಯನ್ನು ನಾಶ ಮಾಡಿ ಇಸ್ಲಾಂ ಅನ್ನು ವಿಸ್ತರಿಸಬೇಕೆಂಬ ಹುಂಬತನದಿಂದ ಹಿಂದೂಗಳ ಪವಿತ್ರ ತೀರ್ಥ ಕ್ಷೇತ್ರಗಳ ಮೇಲೆ ದಾಳಿ ನಡೆಸಿ, ದೇವಸ್ಥಾನಗಳನ್ನು ಧ್ವಂಸಗೊಳಿಸಿದರು. ಮೊಘಲರು ಹಿಂದೂ ದೇಗುಲವನ್ನು ನಾಶ ಮಾಡಿ ಅದನ್ನು ಇಸ್ಲಾಂಗೆ ಪರಿವರ್ತಿಸಿ ಅದನ್ನು ತನ್ನದು ಎಂದು ತಿಳಿಸುವ ಅಜೆಂಡಾವನ್ನು ಹೊಂದಿದ್ದರು. ಇಸ್ಲಾಂನ ಏಕದೇವ ವಿಶ್ವಾಸವನ್ನು ಇನ್ನೊಬ್ಬರ ಮೇಲೆ ಹೇರುವ ಸಲುವಾಗಿ ಮತ್ತು ಮೂರ್ತಿ ಪೂಜೆ ಮಾಡುವುದು ಇಸ್ಲಾಂಗೆ ವಿರುದ್ಧ ಎಂದು ಮತಾಂಧತೆಯಿಂದ ಹಿಂದೂ ದೇಗುಲಗಳ ಮೇಲೆ ದಾಳಿ ಮಾಡಿ ನಾಶ ಮಾಡಿದರು.

ಇದೇ ಉದ್ದೇಶವನ್ನು ಹೊಂದಿದ್ದ ಕುತುಬ್ ಉದ್ ದೀನ್ ಐಬಕ್‍ನ ಕಮಾಂಡರ್ ಆಗಿದ್ದ ಮಹಮ್ಮದ್ ಘೋರಿ 1194ರಲ್ಲಿ ಕಣ್ವರಾಜನನ್ನು ಸೋಲಿಸಿ ಕಾಶಿಯನ್ನು
ಧ್ವಂಸಗೊಳಿಸಿದ. ಮಹಾಭಾರತ ಕಾಲದಿಂದಲೇ ಇದ್ದ ಕಾಶಿಯನ್ನು ಈ ರೀತಿ ಮುಸ್ಲಿಮರು ನಾಶ ಮಾಡಿದರು.

1211ರಲ್ಲಿ ಗುಜರಾತ್‍ನ ವ್ಯಾಪಾರಿಯ ಕಾಶಿಯನ್ನು ಪುನರ್ನಿಮಾಣಗೊಳಿಸಿದ. ಆದರೆ ಹುಸೈನ್ ಶಾ ಶರ್ಖಿ(1447-1458) ಕಾಶಿಯನ್ನು ಮತ್ತೊಮ್ಮೆ ನಾಶ
ಮಾಡಿದ. ಅಥವಾ ಸಿಕಂದರ್ ಲೋದಿಯ(1489-1517) ಸಮಯದಲ್ಲೂ ನಾಶವಾಯಿತು ಎನ್ನಲಾಗುತ್ತಿದೆ.

ಆ ಬಳಿಕ ಅಕ್ಬರ್‍ನ ಕಾಲದಲ್ಲಿ ರಾಜಾ ಮಾನ್ ಸಿಂಗ್ ಕಾಶಿಯನ್ನು ಮತ್ತೊಮ್ಮೆ ಕಟ್ಟಿದ. ಈ ವೇಳೆ ಮೊಘಲ್ ಚಕ್ರವರ್ತಿ ತಮ್ಮ ಕುಟುಂಬದೊಳಗೆ ಮದುವೆಯಾಗಲು ಅವಕಾಶ ಮಾಡಿಕೊಟ್ಟನು. ಇದನ್ನು ಸಂಪ್ರದಾಯವಾದಿ ಹಿಂದೂಗಳು ತಿರಸ್ಕರಿಸಿದರು. ರಾಜಾ ತೋದಾರ್ ಮಾಲ್ ಎಂಬಾತ ಅಕ್ಬರ್‍ನ ನಿಧಿಯಿಂದ 1585ರಲ್ಲಿ ಕಾಶಿಯನ್ನು ಮೊದಲೇ ಇದ್ದ ಸ್ಥಳದಲ್ಲಿ ನಿರ್ಮಿಸಿದನು.

ಆಮೇಲೆ ಬಂದ ಅತ್ಯಂತ ಕ್ರೂರಿ ಮೊಘಲ್ ದೊರೆ ಔರಂಗಜೇಬ ಹಿಂದುಗಳನ್ನು ಪ್ರಾಣಿಗಳಿಗಿಂತಲೂ ಕಡೆಯಾಗಿ ನೋಡುತ್ತಿದ್ದ. ಮತಾಂತರಕ್ಕೆ ತೊಡಗಿದ್ದ ಆತ
ಇಸ್ಲಾಂಗೆ ಸೇರಲೊಪ್ಪದ ಹಿಂದೂಗಳನ್ನು ನಿರ್ದಯವಾಗಿ ಹತ್ಯೆ ಮಾಡಿದ. ನೂರಾರು ದೇವಸ್ಥಾನಗಳನ್ನು ಧ್ವಂಸಗೊಳಿಸಿದ. ಕಾಶೀ ವಿಶ್ವನಾಥ ದೇವಾಲಯವೂ ಇದಕ್ಕೆ ಹೊರತಾಗಿರಲಿಲ್ಲ. ಮೊಘಲ್ ಚಕ್ರವರ್ತಿಗೆ ಕಾಶಿಯ ಜನಪ್ರಿಯತೆಯನ್ನು ಸಹಿಸಲಾಗಲಿಲ್ಲ. ಅದಕ್ಕಾಗಿ ಹೆಚ್ಚಿನ ಸೈನಿಕರೊಂದಿಗೆ ಕಾಶಿಗೆ ದಾಳಿ ನಡೆಸಿ, ಅಲ್ಲಿಯೇ ಮಸೀದಿ ನಿರ್ಮಾಣದಲ್ಲಿ ತೊಡಗಿದರು. ಔರಂಗಜೇಬ ಅನೇಕ ಹಿಂದೂ ದೇಗುಲಗಳನ್ನು ಧ್ವಂಸಗೊಳಿಸಿ ಅದರ ಮೇಲೆಯೇ ಮಸೀದಿ ನಿರ್ಮಿಸಿದನು.

1669ರಲ್ಲಿ ಔರಂಗಜೇಬನು ದೇವಾಲಯವನ್ನು ನಾಶಪಡಿಸಿ, ದೇವಸ್ಥಾನದ ಕಟ್ಟಡದ ತುಣುಕುಗಳಿಂದ ಮಸೀದಿ ನಿರ್ಮಿಸಲಾರಂಭಿಸಿದನು. ಸಿಕ್ಕ ಸಿಕ್ಕ ದೇಗುಲಗಳನ್ನು ನಾಶಪಡಿಸಿ ಅದಕ್ಕೆ ಹೆಸರನ್ನಿಡಲು ವಿಫಲರಾದರು. ಯಾಕೆಂದರೆ ಅವರೆಲ್ಲಾ ಅನಕ್ಷರಸ್ಥರಾಗಿದ್ದರು. ಅದಕ್ಕಾಗಿ ಜ್ಞಾನವಿಪಿ ಎಂದು ಕರೆಯಲಾರಂಭಿಸಿದರು. ಎಲ್ಲೆಲ್ಲಾ ದೇವರಿಗೆ ಅಭಿಷೇಕ ಮಾಡಲು ನೀರನ್ನು ಬಳಸಲಾಗುತ್ತಿತ್ತೋ ಅಲ್ಲಿನ ದೇವಸ್ಥಾನಗಳನ್ನು ಕೆಡವಿ ಅದಕ್ಕೆ ಜ್ಞಾನವಿಪಿ ಎಂದು ಕರೆಯಲಾಗುತ್ತಿತ್ತು. ಅದೇ ರೀತಿ ಕಾಶೀಯಲ್ಲೂ ಮಸೀದಿ ನಿರ್ಮಿಸಿ ಅದಕ್ಕೆ ಜ್ಞಾನವಿಪಿ ಎಂದು ಕರೆಯಲಾಯಿತು.

ಕಾಶಿಯಲ್ಲಿನ ಜ್ಯೋತಿರ್ಲಿಂಗವನ್ನು ಉಳಿಸಲು ದೇಗುಲದ ಮುಖ್ಯ ಅರ್ಚಕರು ಪ್ರಾಣವನ್ನೇ ಅರ್ಪಿಸಬೇಕಾಯಿತು. ಕಾಶಿಗೆ ದಾಳಿ ನಡೆಸಿದ ಔರಂಗಜೇಬನು ದೇಗುದಲ್ಲಿದ್ದ ಅರ್ಚಕರನ್ನು ಕತ್ತರಿಸಿ ಕತ್ತರಿಸಿ ತುಂಡು ಮಾಡಿ ಕೊಲೆ ಮಾಡಿದನು. ದೇಗುಲವನ್ನು ಧ್ವಂಸಗೊಳಿಸಲಾಯಿತು. ದೇಗುಲದ ಮುಖ್ಯ ಅರ್ಚಕ ಕಾಶಿಯ ವಿಶ್ವನಾಥನ ಜ್ಯೋತಿರ್ಲಿಂಗವನ್ನು ಹಿಡಿದು ಬಾವಿಗೆ ಹಾರಿ ರಕ್ಷಿಸಿದರು. ಆದರೆ ಇದಕ್ಕಾಗಿ ಅವರು ತನ್ನ ಪ್ರಾಣವನ್ನೇ ಅರ್ಪಿಸಬೇಕಾಯಿತು.

ದೇವಾಲಯದ ಆವರಣದಲ್ಲಿ ಇಂದಿಗೂ ಪುರೋಹಿತರ ಮನೆಗಳಿದ್ದ ಕುರುಹುಗಳನ್ನು ಕಾಣಬಹುದು. ಅವರೆಲ್ಲಾ ಲಿಂಗಕ್ಕೆ ನೀರನ್ನು ಅಭಿಷೇಕ ಮಾಡುತ್ತಿದ್ದರು.
ಔರಂಗಜೇಬನ ನಂತರ ಮರಾಠ ರಾಜ ಮಲ್ಹರ್ ರಾವ್ ಹೋಲ್ಕರ್ (1693-1766) ಮಸೀದಿಯನ್ನು ಕೆಡವಿ ಮತ್ತೆ ಕಾಶಿ ವಿಶ್ವನಾಥನ ದೇಗುಲವನ್ನು ನಿರ್ಮಿಸಲು ಮುಂದಾಗಿದ್ದನು. ಆದರೆ 1780ರಲ್ಲಿ ಮಲ್ಹರ್‍ನ ಸೊಸೆ ಅಹಲ್ಯಾ ಬಾಯಿ ಹೋಲ್ಕರ್ ಮಸೀದಿಯ ಪಕ್ಕದಲ್ಲೇ ಕಾಶಿ ವಿಶ್ವನಾಥ ದೇಗುಲವನ್ನು ನಿರ್ಮಿಸಿದಳು. ಆದ್ದರಿಂದ ಇಂದು ಕಾಶಿ ದೇಗುಲ ವಾರಣಾಸಿಯಲ್ಲಿದೆ.

1750ರಲ್ಲಿ ಜೈಪುರದ ಮಹಾರಾಜರು ದೇಗುಲವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಸುತ್ತಲಿನ ಭೂಮಿಯ ಸಮೀಕ್ಷೆ ನಡೆಸಿದರು. ಕಾಶೀ ದೇಗುಲಕ್ಕೆ ಅವರು ಭೂಮಿಯಿಂದ ಖರೀದಿಸುವ ಉದ್ದೇಶ ಹೊಂದಿದ್ದರು. ಜ್ಞಾನವಿಪಿ ಮಸೀದಿಯ ಅಂಚುಗಳಲ್ಲಿ ಪುರೋಹಿತರ ನಿವಾಸಗಳನ್ನು ಪತ್ತೆಹಚ್ಚಿದರು!!

ಆದಾಗ್ಯೂ, ಮೌಲಾನಾ ಅಬ್ದುಸ್ ಸಲಾಮ್ ಅವರ ಕೆಲವು ಬರಹಗಳ ಪ್ರಕಾರ, ಕಾಶಿ ದೇವಾಲಯ ವಿನಾಶವನ್ನು ಔರಂಗಜೇಬನ ಸಮಯದಲ್ಲಿ ಪ್ರಾರಂಭಿಸಲಾಗಿಲ್ಲ ಬದಲಿಗೆ ಅಕ್ಬರ್‍ನ ಕಾಲದಲ್ಲೇ ಆರಂಭಿಸಲಾಗಿತ್ತು. ಮೊಘಲ್ ಚಕ್ರವರ್ತಿ ಅಕ್ಬರ್‍ನಿಂದಲೇ ಮಸೀದಿಗೆ ಅಡಿಪಾಯವನ್ನು ಹಾಕಲಾಯಿತು ಎಂದು ಅವರು ಹೇಳುತ್ತಾರೆ. ಈ ಜಾಗದಲ್ಲಿ ಷಹಜಹಾನ್ 1048 ಹಿಜ್ರಿ ( ಕ್ರಿ.ಶ 1638-39) ಮಸೀದಿಯ ಸ್ಥಳದಲ್ಲಿ ಇಮಾಮ್-ಇ-ಶರೀಫತ್ ಎಂಬ ಮದ್ರಾಸವನ್ನು ಪ್ರಾರಂಭಿಸಿದ್ದಾನೆ ಎಂದು ವಿವರಿಸಿದ್ದಾರೆ.

ಬ್ರಿಟಿಷ್ ಯಾತ್ರಿಕ ರೆಜಿನಾಲ್ಡ್ ಹೆಬೆರ್ ಅವರು 1824ರಲ್ಲಿ ವಿವರಿಸುತ್ತಾ “ಔಲಂ ಘೀರ್” (ಅಲಮ್ಗಿರ್ ನಾನು ಅಂದರೆ ಔರಂಗಜೇಬ್) ಒಂದು ಪವಿತ್ರ ಹಿಂದೂ ತಾಣವನ್ನು ನೆಲಸಮಗೊಳಿಸಿ ಅದರ ಮೇಲೆ ಮಸೀದಿ ನಿರ್ಮಿಸಿದನು. ಹಿಂದೂಗಳು ಮೂಲ, ಕಾಶಿ ವಿಶ್ವನಾಥ ದೇವಾಲಯದ ನಾಶವನ್ನು ಕಂಡು ಆಳವಾಗಿ ಶೋಕಾಚರಿಸಿದ್ದಾರೆ. ಮಸೀದಿ ಇರುವ ಸ್ಥಳ ಪ್ರಸ್ತುತ ಸ್ಥಳಕ್ಕಿಂತಲೂ ಹೆಚ್ಚು ಪವಿತ್ರವೆಂದು ಪರಿಗಣಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಸಂದರ್ಭ ಎಲ್ಲಾ ಜ್ಞಾನವಿಪಿ ಮಸೀದಿಗಳಿಗೆ ಭಾರೀ ಭದ್ರತೆ ಒದಗಿಸಲಾಗಿತ್ತು. ಕಾಶೀ ವಿಶ್ವನಾಥ ದೇಗುಲದ ಸಮೀಪ ಇರುವ ಮಸೀದಿಯಿರುವ ಸ್ಥಳವು ವಿಶ್ವನಾಥನ ಮೂಲ ದೇಗುಲವಿರುದ ಸ್ಥಳವಾಗಿದೆ. ಇದೇ ರೀತಿ ಹಲವು ಹಿಂದೂಗಳನ್ನು ನಾಶ ಮಾಡಲಾಗಿದೆ.

-ಚೇಕಿತಾನ

Tags

Related Articles

Close