ಅಂಕಣ

ಕೇರಳದಲ್ಲಿ ಕೇವಲ ಆರು ತಿಂಗಳಲ್ಲಿ 5000 ಕ್ಕಿಂತ ಹೆಚ್ಚು ಹಿಂದೂಗಳು ಮೃತಪಟ್ಟಿದ್ದಾರೆ; ಇದನ್ನು ಮಾಡಿದ ‌ಮತಾಂಧ ರಾಕ್ಷಸರ ಕುರಿತಾಗಿ ನಿಮಗೆ ಗೊತ್ತೇ?

2002 ರಲ್ಲಿ ನಡೆದ ಗೋಧ್ರಾ ಹತ್ಯಾಖಾಂಡದ ಕುರಿತಾಗಿ ನಾವೆಲ್ಲಾ ಯಾವುದೇ ವಿಚಾರದ ಕುರಿತಾಗಿ ಅರಿವಿಲ್ಲದೇ ವಿಮರ್ಶಿಸುತ್ತೇವೆ. ಅಸಹಿಷ್ಣುವಿನ ಪರಮಾವಧಿ ಎಂದೆಲ್ಲಾ ಅದನ್ನು ವರ್ಣಿಸುತ್ತೇವೆ. ವಾಸ್ತವ ವಿಚಾರಗಳನ್ನು ಬದಿಗಿಟ್ಟು ನಾವು ಅದರ ಕುರಿತಾಗಿ ಮಾತನಾಡುತ್ತಿರುವುದೇ ಒಂದು ದುರಂತ !! ಇವತ್ತು ಗೋಹತ್ಯೆಯನ್ನು ಖಂಡಿಸುವವರು ಕೋಮುವಾದಿಗಳಾಗುತ್ತಾರೆ, ದೇಶದ್ರೋಹಿಗಳ ವಿರುದ್ಧ ಮಾತನಾಡುವವರು, ಹೋರಾಡುವವರು ಅತಿರೇಕದ ರಾಷ್ಟ್ರೀಯವಾದಿಗಳಾಗುತ್ತಾರೆ… ಎಂತಹ ವಿಪರ್ಯಾಸ ನೋಡಿ !!

ಕೇರಳದಲ್ಲಿ ಇದುವರೆಗೆ 5000 ಅಮಾಯಕ ಹಿಂದೂಗಳ ಮಾರಣಹೋಮವೇ ನಡೆದಿತ್ತಲ್ಲ?? ಆದರೆ ನಮಗೆ ಅದರ ಅರಿವೇ ಇಲ್ಲ. ಬ್ರಿಟಿಷರ ವಿರುದ್ಧ ಪ್ರಾರಂಭವಾದ ಹೋರಾಟ ನಂತರ ಹಿಂದೂಗಳ ಹತ್ಯೆಯ ತಾಣವೇ ಆಯಿತೆಂಬುದು ನಮ್ಮ ಅರಿವೆಗೆ ಬಾರದೇ ಹೋದ ದುರಂತದ ವಿಚಾರ. ಲಕ್ಷಾಂತರ ಹಿಂದೂಗಳ ಹತ್ಯೆಯನ್ನು ಮಾಡಿದ್ದಷ್ಟೇ ಅಲ್ಲದೇ, ಹಿಂದೂ ಹುಡಿಗಿಯರನ್ನು ಅತ್ಯಾಚಾರ ಮಾಡಿ ಕಸ ಬಿಸಾಕಿದಂತೆ ಕೊಂದರಲ್ಲ?? ಈ ಅನಾಗರಿಕ ಘಟನೆಯನ್ನು ಇದುವರಗೂ ನಾವು ನೆನಪಿಸಿಕೊಂಡಿಲ್ಲ. ಹೌದು. ಅದೇ ದುರಂತದ ಕುರಿತಾಗಿ ಮಾತನಾಡುತ್ತಿದ್ದೇವೆ. ಮಲಾಬಾರ್ ನರಮೇಧದ ಅಮಾನವೀಯ ರಕ್ತದ ಕಥನ!!

ಹಿಂದೂಗಳನ್ನು ಹತ್ಯೆಗೈಯ್ಯಲೋಸುಗವಾಗಿಯೇ ಕತ್ತಿಗಳನ್ನು ತಯಾರಿಸಿ ಮುಸಲ್ಮಾನರಿಗೆ ಹಂಚುತ್ತಿದ್ದರು. ಆದರೆ ಇತಿಹಾಸಕಾರರೆಂದು ಕರೆಯಲ್ಪಡುವ
ಬುದ್ಧಿಯಿದೆಯೆಂದುಕೊಂಡಿರುವ ಲದ್ಧಿಜೀವಿಗಳು ಅದನ್ನು ರೈತರ ಧಂಗೆಯೆಂದು ಸಂಭೋದಿಸಿದರು. ಆದರೆ ವಾಸ್ತವವಾಗಿ ಹಿಂದೂ ಆಧಿಪತ್ಯವಿರುವ ತಾಣವನ್ನು
ಅಂತ್ಯಗೊಳಿಸಬೇಕೆಂಬುದಾಗಿ ಚಿಂತಿಸಿ ನಡೆಸಿದ ವ್ಯವಸ್ಥಿತ ಯೋಜನೆ ಅದಾಗಿತ್ತು.

ಬಲವಂತವಾಗಿ ಮತಾಂತರಗೊಂಡರು ಲಕ್ಷಾಂತರ ಹಿಂದೂಗಳು !!

ಭಾರತೀಯರೆಲ್ಲಾ ಸ್ವತಂತ್ರಕ್ಕಾಗಿ ಹೋರಾಡುತ್ತಿದ್ದ ಪರ್ವಕಾಲದಲ್ಲಿ, ಕೆಲವು ಮತಾಂಧ ಧಾರ್ಮಿಕ ಮುಖಂಡರು “ಖಿಲಾಫತ್ ಚಳುವಳಿ” ಯನ್ನು ಪ್ರಾರಂಭಿಸಿದರು. ನೆನಪಿರಲಿ. ಇದು ಶತ್ರುವಾದ ಬ್ರಿಟಿಷರ ವಿರುದ್ಧ ಹೋರಾಟ ಮಾಡಲೆಂದೇ ಪ್ರಾರಂಭವಾದ ಚಳುವಳಿ. ಆದರೆ ಕೇರಳದಲ್ಲಿ ಬ್ರಿಟಿಷರು ಮಾಡಿದ ಕುತಂತ್ರದ ಫಲವೇನು ಗೊತ್ತಾ?? ಅದೇ ಚಳುವಳಿಯ ಉದ್ದೇಶ ನಂತರ ಹಿಂದೂಗಳ ಅಂತ್ಯಮಾಡುವಲ್ಲಿಯವರೆಗೆ ತಲುಪಿತು.

ಎರಡೇ ಆಯ್ಕೆಗಳನ್ನು ಹಿಂದೂಗಳಿಗೆ ನೀಡಲಾಗಿತ್ತು. ಒಂದು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಮತಾಂತರವಾಗುವುದು, ಇನ್ನೊಂದು ಸಾವು. ವೀರ
ಹಿಂದೂಗಳನೇಕರು ಸಾವನ್ನೇ ಆಯ್ಕೆ ಮಾಡಿದರು. ಕೆಲವು ಗರ್ಭಿಣಿ ಸ್ತ್ರೀಯರ ಉದರವನ್ನು ಸೀಳಿ ಶಿಶುಗಳನ್ನು ಎಳೆದು ಕೊಂದೇ ಹಾಕಿದರು ಪಾಪಿಗಳು. ಆಗಸ್ಟ್
1921 ರಲ್ಲಿ ಪ್ರಾರಂಭವಾದ ಈ ದೌರ್ಜನ್ಯ ಹಲವು ತಿಂಗಳುಗಳ ಕಾಲ ನಡೆಯಿತು.

ಶತ್ರುವನ್ನು ಮಟ್ಟಹಾಕುವುದು ಬಿಟ್ಟು, ಹಿಂದೂಗಳನ್ನು ಇಸ್ಲಾಂಗೆ ಮತಾಂತರವಾಗಿಸುವುದೇ ಅದರ ಉದ್ದೇಶವಾಯಿತು !!

ಮಲಾಬಾರ್ ನರಹತ್ಯೆಯು ನಡೆದಿದ್ದು ಯಾವುದೇ ಬ್ರಿಟಿಷ್ ಸರಕಾರವನ್ನು ನಾಶ ಮಾಡಬೇಕೆಂದಲ್ಲ, ಆದರೆ ಮಲಾಬಾರ್ ಜಿಲ್ಲೆಯಲ್ಲಿ ಇಸ್ಲಾಂ ಆಧಿಪತ್ಯವನ್ನು
ಸ್ಥಾಪಿಸಲು ಹಾಗೂ ಹಿಂದೂಗಳನ್ನು ಅಲ್ಲಿಂದ ಓಡಿಸುವುದೇ ಉದ್ದೇಶವಾಯಿತು. 1972 ರಲ್ಲಿ ಟಿಪ್ಪೂವಿನ ಮರಣಾನಂತರ ಕಾಲದಲ್ಲಿ , ಮಲಾಬಾರ್ ಪ್ರದೇಶದಲ್ಲಿ
ಮುಸಲ್ಮಾನರ ಸಂಖ್ಯೆ ಕಡಿಮೆಯಾಗದಷ್ಟೂ ಅವರ ಅಧಿಪತ್ಯ ಬೆಳೆದಿತ್ತು. ಈ ವಿಚಾರವನ್ನು ಸಿ. ಗೋಪಾಲನ್ ತಮ್ಮ ಪುಸ್ತಕದಲ್ಲಿ ಉಲ್ಲೇಖವನ್ನೂ ಮಾಡಿದ್ದರು.
1826 ರಿಂದ 1920ರ ವರೆಗೆ ಹಿಂದೂಗಳಲ್ಲಿ ಭಯ ಹುಟ್ಟಿಸುವ ಒಂದೇ ಉದ್ದೇಶದಿಂದ ಅವರ ಮಾರಣಹೋಮವನ್ನು ಮಾಡಿದರು.

ಮೌಲಾನಾ ಮೊಡಿನಿ ಅವರು ಹಿಂದೂಗಳ ಲೂಟಿ ಹಾಗೂ ಹತ್ಯೆಯು ‘ರಕ್ಷಣೆಗೆ ಅವಶ್ಯಕತೆ’ ಎಂದರು, ಆದರೆ ಖಿಲಾಫತ್ ಆಂದೋಲನದ ಪ್ರಧಾನ ನಾಯಕ ಆಗಿನ ಕಾಂಗ್ರೆಸ್ ಹೈ ಕಮಾಂಡ್, ಧಾರ್ಮಿಕ ಉದ್ದೇಶಕ್ಕಾಗಿ ಧಾರ್ಮಿಕ ಹೋರಾಟ ನಡೆಸುತ್ತಿದ್ದೇವೆ, ಅದೊಂದು ಧಾರ್ಮಿಕ ಭಾವನೆ ಎಂದು ಮಲಾಬಾರ್ ನರಹತ್ಯೆಯನ್ನು ಶ್ಲಾಘಿಸಿದರು. ಮಾಪ್ಲಾ ದೌರ್ಜನ್ಯಗಳ ಈ ಅಮಾನವೀಯತೆಯು ಅನ್ನಿ ಬಿಯೆಸೆಂಟ್ ಅನ್ನು ತೀವ್ರವಾಗಿ ಟೀಕಿಸಲು ಪ್ರೇರೇಪಿಸಿತು. ಅಂತಹ ಪರಿಸ್ಥಿತಿಯು ನಿರ್ಮಾಣವಾದುದು ಅಷ್ಟೇ ಸತ್ಯ. “ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲುವುದು, ಇಡೀ ಕುಟುಂಬಗಳನ್ನು ನಾಶ ಮಾಡುವುದು, ಕೊಲೆ, ಅತ್ಯಾಚಾರ, ಲೂಟಿ ಧಾರ್ಮಿಕ ಎಂದು ಪರಿಗಣಿಸುವವರು ಯಾವುದೇ ನಾಗರಿಕ ಸಮಾಜದಲ್ಲಿ ಸಂಯಮವನ್ನು ಹೊಂದುವುದಿಲ್ಲ” ಅವರು ಹೇಳಿದರು. ಒಟ್ಟಾರೆಯಾಗಿ ಅವರು ಅನಾಗರಿಕ, ಅಮಾನವೀಯ, ಯಾವತ್ತೂ ಮರೆಯಲಾಗದ ಹೀನ ಕೃತ್ಯ ಅದಾಗಿದ್ದು ಮಾತ್ರ ಸುಳ್ಳಲ್ಲ.

ಗಲಭೆಗಳ ಸಂದರ್ಭದಲ್ಲಿ, ಹೆಚ್ಚಿನ ಕೋವಿಲಗಾಂಗಳು ಮತ್ತು ಮೇಲಿನ ವರ್ಗದ ಜನರನ್ನೇ ಹೆಚ್ಚಾಗಿ ದಾಳಿ ಮಾಡಲಾಯಿತು, ಲೂಟಿ ಮಾಡಲಾಗಿತ್ತು, ಮಹಿಳೆಯರನ್ನು ಅಪಹರಿಸಿ ಅತ್ಯಾಚಾರ ಮಾಡಿದರು, ಮತ್ತು ಪುರುಷರನ್ನು ಕಳ್ಳತನ ಮಾಡಿದರು. ಆದ್ದರಿಂದ, ಖಿಲಾಫತ್ ಚಳವಳಿ, ಸ್ವಾತಂತ್ರ್ಯ ಹೋರಾಟದ ನ್ಯಾಯಸಮ್ಮತತೆಯನ್ನು ದುರುಪಯೋಗಪಡಿಸಿಕೊಂಡಿದೆಯೆಂಬುದರಲ್ಲಿ‌ ಯಾವುದೇ ಸಂಶಯವಿಲ್ಲ. ಧಾರ್ಮಿಕ ಮುಖಂಡರಿಂದ ರೂಪಿಸಲಾದ ಭೀಕರ, ಹತ್ಯೆಗೆ ಸಂಬಂಧಿಸಿದ ಕಾರ್ಯಸೂಚಿಯ ಪ್ರಕಾರ‌ವೇ ನಡೆದಿದ್ದು ಭೀಕರ ದುರಂತ.ಆರು ತಿಂಗಳುಗಳ ನಂತರ, ದಂಗೆ ಕೊನೆಗೊಂಡು ಅನೇಕರು ಸೆರೆವಾಸವನ್ನೂ ಅನುಭವಿಸಿದರು.

ಮಾಪ್ಲಾ ಗಲಭೆಗಳ ನಂತರ ಮರಣದಂಡನೆ ವಿಧಿಸಲಾಯಿತು.. ಅವರ ಹೆಸರುಗಳು ಇಂತಿವೆ :

*ಅಲಿ ಮುಸಲಿಯರ್ (ಚಳುವಳಿಯ ನಾಯಕ)
*ಕುಣಿ ಕದಿರ್, ಖಿಲಾಫತ್ ಕಾರ್ಯದರ್ಶಿ, ತನೂರು*ವರ್ಯಕೂನ್ಥ್ ಕುನ್ಹಮ್ಮದ್ ಹಾಜಿ,
*ಕುನ್ಜ್ ಕೋಯಾ, ಮಲಪ್ಪುರಂನ ಖಿಲಾಫತ್ ಸಮಿತಿಯ ಅಧ್ಯಕ್ಷ

* ಕೋಯಾ ಟ್ಯಾಂಗಲ್, ಥಂಗಲ್
ಖಿಲಾಫತ್ ಪ್ರಾಂತ್ಯದ ಗವರ್ನರ್ .

*ಚೆಂಬ್ರಾಸ್ಸೆರಿ ಇಂಬಿಚಿ ಕೋಯಾ ಥಾಂಗಲ್ (ಕುತ್ತಿಗೆಯನ್ನು ಕಡಿದು ಮತ್ತು ಬಾವಿಗೆ ಎಸೆಯುವ ಮೂಲಕ ಅವರು 38 ಜನರನ್ನು ಕೊಲ್ಲುವ ಮೂಲಕ ಕುಖ್ಯಾತಯನ್ನು
ಪಡೆದವ)

*ಪಾಲಕಾಮ್ತೋಡಿ ಅವೊವಕರ್ ಮುಸಲಿಯಾರ್,
*ಕೊನ್ನಾರ ಮೊಹಮ್ಮದ್ ಕೋಯ ತಂಗಲ್.

ಈ ಕ್ರೂರ ಸಾಮೂಹಿಕ ಹತ್ಯಾಕಾಂಡ ಅಂತ್ಯಗೊಂಡ ನಂತರ, ಆರ್ಯ ಸಮಾಜವು ಬಲವಾಗಿ ಇಸ್ಲಾಂಗೆ ಮತಾಂತರಗೊಂಡ ಜನರನ್ನು ಮರಳಿ ತರಲು ಕೆಚ್ಚೆದೆಯ ಹಂತವನ್ನು ತೆಗೆದುಕೊಂಡಿತ್ತು. ಸ್ವಾಮಿ ಶ್ರದ್ಧಾನಂದರು ಈ ಕೆಚ್ಚೆದೆಯ ಕ್ರಮವನ್ನು ಪ್ರಾರಂಭಿಸಿ “ಸುದ್ದಿ ಚಳವಳಿ” ಯನ್ನು ಪ್ರಾರಂಭಿಸಿದರು. ಆದರೆ 1926 ರ ಡಿಸೆಂಬರ್ 23 ರಂದು ಅಬ್ದುಲ್ ರಷೀದ್ ಅವರ ಆಶ್ರಮದಲ್ಲಿ ಅವರನ್ನೂ ಹತ್ಯೆಗೈಯ್ಯಲಾಯಿತು.

ಮಹಾತ್ಮ ಗಾಂಧಿಯವರು ಹಿಂದುಗಳ ಹತ್ಯೆಯನ್ನು ಖಂಡಿಸಿಲ್ಲ: ಡಾ. ಬಿ.ಆರ್ ಅಂಬೇಡ್ಕರ್

ಮಹಾತ್ಮ ಗಾಂಧಿಯವರು ಅಹಿಂಸೆಯ ಬೆಂಬಲಿಗರಾಗಿದ್ದರೂ, ಕೇರಳದ ಹಿಂದೂಗಳ ವಿರುದ್ಧ‌ ನಡೆದ ದೌರ್ಜನ್ಯವನ್ನು ವಿರೋಧಿಸುವುದು ಬಿಟ್ಟು‌ ಅವರಾಡಿದ
ಶುಭಸಂದೇಶವೇನು ಗೊತ್ತಾ?? ದೌರ್ಜನ್ಯಕ್ಕೆ ವಿರಾಮ ಹಾಕುವ ಅಗತ್ಯವಿಲ್ಲ !!!! ಎಂದು ಭಾರತೀಯರಿಗೆ (ವಿಶೇಷವಾಗಿ ಹಿಂದೂಗಳು) ಹೇಳಿದ್ದು ವಿಸ್ಮಯವೆಂದು ಅನಿಸುವುದಿಲ್ಲವೇ?? ಎಷ್ಟಿದ್ದರೂ ಮುಸಲ್ಮಾನರ ಮೇಲೆ ಅಗಾಧ ಪ್ರೀತಿ ಇಟ್ಟ ಮಹನೀಯರಲ್ಲವೇ ಅವರು. ಇದನ್ನು “ಪಾಕಿಸ್ತಾನ ಅಥವಾ ಭಾರತ ವಿಭಜನೆ” ಎಂಬ ಪುಸ್ತಕದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರು ಬಹಿರಂಗಪಡಿಸಿದ್ದಾರೆ.

ಡಾ. ಅಂಬೇಡ್ಕರ್ ಅವರು ಹೇಳುವ ‌ಪ್ರಕಾರ, ” ಗಾಂಧಿ ಅಂತಹ ಕೊಲೆಗಳ, ದೌರ್ಜನ್ಯದ ವಿರುದ್ಧ ಎಂದಿಗೂ ಪ್ರತಿಭಟನೆ ಮಾಡಲಿಲ್ಲ. ಮುಸಲ್ಮಾನ ಮುಖಂಡರು ಹೇಗೂ ವಿರೋದಿಸಿರಲಿಲ್ಲ.ಕನಿಷ್ಠ ಪಕ್ಷ ಗಾಂಧಿಯೂ ಇಸ್ಲಾಂ ಧಾರ್ಮಿಕ ಮುಖಂಡರಿಗೆ ಖಂಡಿಸಲು ಕರೆಯನ್ನೂ ಕೊಟ್ಟಿಲ್ಲ. ಅವರು ಅವರ ಮೇಲೆ ಮೌನವಾಗಿರುತ್ತಿದ್ದರು “.

ಹಿಂದೂಗಳ ವಿರುದ್ಧವಾಗಿ ಮಲಬಾರ್ ನಲ್ಲಿ‌ ನಡದಿದ್ದು ಮಾತ್ರ‌ ಅಕ್ಷರಶ: ಅಮಾನವೀಯ ಘಟನೆಯಡಿಯಲ್ಲಿ ಹರಿದುದು ರಕ್ತದ ಹೊಳೆ..ಮಾಪ್ಲಾಸ್ ಮಾಡಿದ ರಕ್ತಪಾತದ ದೌರ್ಜನ್ಯಗಳು ವಿವರಿಸಲಾಗದವು. ದಕ್ಷಿಣ ಭಾರತದಾದ್ಯಂತ, ಭಯಭೀತ ಭಾವನೆಯ ಅಲೆಯು ಪ್ರತಿ ಅಭಿಪ್ರಾಯದ ನೆರಳಿನಲ್ಲೂ ಹಿಂದೂಗಳ ನಡುವೆ ಹರಡಿತು. ಇಷ್ಟೆಲ್ಲಾ ಆದರೂ ತೃಪ್ತಿಯಾಗದ ಕೆಲವು ಖಿಲಾಫತ್ ಮುಖಂಡರ ಆತ್ಮ ಗೋಗರಿಯತ್ತಲೇ ಇತ್ತು. ಅವರು “ಧರ್ಮದ ಸಲುವಾಗಿ ಧೈರ್ಯದಿಂದ ಹೋರಾಡಿದವರಿಗೆ ಅಭಿನಂದನೆಗಳು “ಎಂದರು!!!

‘ಖಿಲಾಫತ್ ಚಳವಳಿ’ ಪ್ರಮುಖ ನೀತಿಯೇ ಇಸ್ಲಾಂ!! ಅದರ ಧ್ಯೇಯವೇ ಇಸ್ಲಾಂ!! ಅದರ ಉಸಿರಾಯಿತು ಇಸ್ಲಾಂ!! ವಿಪರ್ಯಾಸವೇನು ಗೊತ್ತಾ ?? ರಾಷ್ಟ್ರಕ್ಕಾಗಿ
ಹೋರಾಟ ಮಾಡಬೇಕಾದ ಸಮಯದಲ್ಲೇ ಇಸ್ಲಾಂ‌ ಮತಾಂಧರ ಅಟ್ಟಹಾಸವಾಗಿದ್ದು. ಆ ಸಮಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆಗಿತ್ತು ಇಸ್ಲಾಮಿಕ್
ಕಲಿಫೇಟ್!! (ಕಾಲಿಫ್ ಟರ್ಕಿಯ ಸುಲ್ತಾನನಾಗಿದ್ದ ಮುಸ್ಲಿಮರ ಮುಖ್ಯಸ್ಥನಾಗಿ ವಿಶ್ವದಾದ್ಯಂತದ ಪರಿಗಣಿಸಲ್ಪಟ್ಟಿದ್ದ.. ಮತ್ತು , ಮೊದಲ ವಿಶ್ವಯುದ್ಧದಲ್ಲಿ ಟರ್ಕಿಯು
ಸೋತ ನಂತರ ನಿಶಸ್ತ್ರೀಕರಣಗೊಂಡ. ಅವನ ಕಾಲ ಅಲ್ಲಿಗೆ ಅಂತ್ಯವಾಯಿತು).

ನಿಮಗೆ ಅರಿವಿರಲಿ. ಕೇರಳ ರಾಜ್ಯದಲ್ಲಿ ಒಂದು ಜಿಲ್ಲೆಯಲ್ಲಿ ಇಸ್ಲಾಂ ಆಧಿಪತ್ಯವೇ ಇದೆ. ಆ ಜಿಲ್ಲೆಯಲ್ಲಿ ಒಂದು ದೇವಾಲಯದಲ್ಲಿ ಪ್ರಾರ್ಥಿಸಬೇಕಾದರೂ ಭಯದಿಂದಲೇ!! ಯಾವಾಗ ನಮ್ಮ ಜೀವಕ್ಕೆ ಕುತ್ತು ಬರುತ್ತೋ ಎಂದು ಹಿಂದೂಗಳು ಇವತ್ತೂ ಬದುಕುತ್ತಿದ್ದಾರೆ.. ಆ ಜಿಲ್ಲೆ ಬೇರಾವುದೂ ಅಲ್ಲ.. ಅದೇ ಮಲ್ಲಪ್ಪುರಂ. ಕಾಶ್ಮೀರದಲ್ಲಿರುವ ಅಮಾನವೀಯ ಧಾರ್ಮಿಕ ಮತಾಂಧತೆಯ ಕಾರ್ಯ ಕೇರಳದವರೆಗೂ ತಲುಪಿರುವುದು ದುರಂತದ ಪರಮಾವಧಿ!!!

ನಾನಿಲ್ಲಿ ಎರಡು ಪ್ರಶ್ನೆಯನ್ನು ನಿಮ್ಮಲ್ಲಿ ಕೇಳಬೇಕು. ಇಸ್ಲಾಂ ಧರ್ಮದಲ್ಲಿ ಶಾಂತಿಗೆ ಪ್ರಮುಖ ಆದ್ಯತೆಯಿದೆಯೆಂದೆಲ್ಲಾ ಧಾರ್ಮಿಕ ಮುಖಂಡರು ಹೊರಗಿನ ಪ್ರಪಂಚಕ್ಕೆ ಸುಳ್ಳಿನ ಕಂತೆಯನ್ನು ಪ್ರಚಾರ ಮಾಡುತ್ತಿದ್ದಾರಾ? ಖುರಾನ್ ನಲ್ಲಿ ಸ್ವರ್ಗ, ಕತ್ತಿಗಳ ನೆರಳಿನಲ್ಲಿ ಎಂಬುದಾಗಿದೆಯೇ?? ಅಲ್ಲಾನನ್ನು ಸೇರಲು ಜಿಹಾದ್ ಮಾತ್ರ ದಾರಿಯಿದೆಯೆಂದಿದೆಯೇ?? ಇಡೀ ಪ್ರಪಂಚವೇ ಇಸ್ಲಾಂ‌ ಆಗುವಲ್ಲಿಯವರೆಗೆ ಕತ್ತಿಯಿಂದ ಹೋರಾಡಿ!!! ಇದು ಇಸ್ಲಾಂ ನೀಡುವ ಸಂದೇಶವೇ?? ಅವರ ಕೃತ್ಯ ಈಗ ಈ‌ ರೀತಿಯಾಗಿವೆ. ವಿಪರ್ಯಾಸವಂದರೆ ಭಯೋತ್ಪಾದಕರೆಲ್ಲಾ ಮುಸಲ್ಮಾನರಲ್ಲ, ಆದರೆ ಇದುವರೆಗೆ ಸಿಕ್ಕಿಬಿದ್ದವರೆಲ್ಲಾ ಮುಸಲ್ಮಾನರೇ !! ಹೀಗೆ‌ ಒಂದು ಸಂಶಯ..
ಶಾಂತಿಯ‌ ದೂತರೆನಿಸಿದವರು ಉತ್ತರಿಸಬೇಕು. ಶಾಂತಿಯೇ ಇಸ್ಲಾಂ ನ ಧ್ಯೇಯವಾದರೆ ಲವ್ ಜಿಹಾದ್, ಭೂ ಜಿಹಾದ್(ಭೂಮಿಯನ್ನು ಕ್ರಮೇಣ ಆಕ್ರಮಿಸುವುದು) ಎಂದೆಲ್ಲಾ ಯಾಕೆ ಪ್ರಾರಂಭವಾದವು??

ಇನ್ನೊಂದು ಪ್ರಶ್ನೆ. ಒಂದು ಪ್ರತ್ಯೇಕ ಧರ್ಮವನ್ನೇ ಓಲೈಸುವುದಕ್ಕಾಗಿ ಮತ್ತೊಂದು ಧರ್ಮವನ್ನು ಕಡೆಗಣಿಸಿದವರು ಮಹಾತ್ಮ‌ ಆಗಲು ಹೇಗೆ ಸಾಧ್ಯ??

ಈ ಎರಡೂ ಪ್ರಶ್ನೆಗಳಿಗೆ ತಿಳಿದವರು ಉತ್ತರಿಸಬೇಕಿದೆ.

ಮೂಲ :

Life of Mohammad By Muir.

Origin of Muslim Appeasement

Massacre of Hindus in Mopla
– ವಸಿಷ್ಠ

Tags

Related Articles

Close