ಅಂಕಣಪ್ರಚಲಿತರಾಜ್ಯ

ಕೇಳ್ರಪ್ಪೋ ಕೇಳಿ!! ಬೆಂಗಳೂರಿನ ರಸ್ತೆ ಮಾಲುಗಳಲ್ಲಿ ಬುರ್ಖಾ ತೊಟ್ಟು ಶಶಿಕಲಾ ಮತ್ತು ಇಳವರಿಸಿಯ ಬಿಂದಾಸ್ ಶಾಪಿಂಗ್ !!!

ಸಾಮಾನ್ಯವಾಗಿ ಕಾರಾಗೃಹದಲ್ಲಿ ಬಂಧಿಸಿದವರಿಗೆ ಶಿಕ್ಷೆಯಾಗುತ್ತದೆ, ಆಗಲೇ ಬೇಕು. ಆದರೆ ಇತ್ತೀಚಿಗೆ ಭವ್ಯ ಭಾರತದ ಕಾರಾಗೃಹಗಳು ಭ್ರಷ್ಟಾಚಾರದ, ಅನೈತಿಕತೆಯ ತಾಣವಾಗಿರುವುದು ಗಾಬರಿಯ ಸಂಗತಿಯೇ!! ಕಾರಾಗೃಹದಲ್ಲಿಯೇ ದ್ವೇಷದ ಕೊಲೆಯಾಗುತ್ತಿವೆ, ಕಾರಾಗೃಹದಲ್ಲಿಯೇ ಗಾಂಜಾಗಳು ಸಲೀಸಾಗಿ ಸಿಗುತ್ತಿವೆ.. ಇವೆಲ್ಲಾ ನಾವು ಹೇಳುತ್ತಿರುವುದಲ್ಲ.. ವರದಿಗಳೇ ಬಾಯಿಬಿಡುತ್ತಿರುವ ಕಹಿಸತ್ಯ!! ಭಾರತ ಎತ್ತ ಕಡೆ ಸಾಗುತ್ತಿದೆ ಸ್ವಾಮೀ??

ಭ್ರಷ್ಟಾಚಾರದ ಆರೋಪವನ್ನು ಹೊತ್ತವರು ಯಾರೂ ಸಾಮಾನ್ಯರಲ್ಲ. ಮಹಾನ್ ದ್ರೋಹಿಗಳು. ಜನರಸೇವೆಗಾಗಿ ಮುಡಿಪಾಗಿಡಬೇಕಾದ ದುಡ್ಡನ್ನು ತಮಗೆ ಕಾರು ಖರೀದಿಸಲು, ಮನೆ ಕಟ್ಟಲು ಉಪಯೋಗಿಸಿತ್ತಿದ್ದಾರೆ. ಅದರ ಪ್ರತಿಫಲವಾಗಿ ಕಷ್ಟಪಟ್ಟು ಸಮಾಜಹಿತವನ್ನು ಬಯಸುವವರು ಶಿಕ್ಷೆಯನ್ನು ಅನುಭವಿಸಲಿ ಎಂಬ ದೃಷ್ಟಿಯಿಂದ ಅಂತಹ ಭ್ರಷ್ಟರನ್ನು ಕಾರಾಗೃಹಕ್ಕೆ ಕಳುಹಿಸುತ್ತಾರೆ. ಆದರೆ ದುರ್ದೈವ.. ಸಾಮಾನ್ಯವಾಗಿ ಕಾರಾಗೃಹದ ಖೈದಿಗಳ ಸಮವಸ್ತ್ರವನ್ನು ಧರಿಸಬೇಕಾದವರು ರೇಷ್ಮೆ ಸೀರೆಯನ್ನು, ಶುಭ್ರವಸ್ತ್ರವನ್ನು ಧರಿಸುತ್ತಾರೆಂದರೆ ಅದು ಯಾವ ರೀತಿಯಲ್ಲಿ ಅವರು ಶಿಕ್ಷೆಯನ್ನು ಅನುಭವಿಸುತ್ತಾರೆಂದು ಅವಲೋಕಿಸಿ? ಅವರಿಗೆ ಜೈಲಿನ ಊಟ ಸಾಕಾಗುವುದಲ್ಲ. ಅವರಿಗೆ ಹೊರಗಿನ ತಿಂಡಿ-ತಿನಿಸುಗಳು ಬೇಕು. ಅವರಿಗೆ ಅಗತ್ಯವಾಗಿ ಬೇಕಾಗಿರುವ ಸಾಮಾಗ್ರಿಗಳು ಪೂರೈಕೆಯಾಗುತ್ತಿವೆ. ಒಟ್ಟಾರೆಯಾಗಿ ಹೇಳುವುದಾದರೆ ಹೊರಗಿನ ಜಗತ್ತಿನಲ್ಲಿ ಯಾವ ರೀತಿಯಲ್ಲಿ ಅವರು ಬದುಕನ್ನು ನಡೆಸುತ್ತಿದ್ದಾರೋ ಅದೇ ರೀತಿಯಲ್ಲಿ ಕಾರಾಗೃಹದಲ್ಲಿಯೂ ಬದುಕನ್ನು ನಡೆಸುತ್ತಿದ್ದಾರೆ.

ಇತ್ತೀಚೆಗೆ ಭ್ರಷ್ಟಾಚಾರದ ಆರೋಪವನ್ನು ಹೊತ್ತ ಆರೋಪದಲ್ಲಿ ಶಶಿಕಲಾ ಅವರು ಕಾರಾಗೃಹದಲ್ಲಿ ಶಿಕ್ಷೆಯನ್ನು ಅನುಭವಿಸಿದರು, ಅನುಭವಿಸುತ್ತಿದ್ದಾರೆ. ಆದರೆ ಅವರು ಅಲ್ಲಿ ಅನುಭವಿಸುತ್ತಿರುವುದು ಶಿಕ್ಷೆಯೇ ಅಥವಾ ರಾಜಾತಿಥ್ಯವೇ?? ಓರ್ವ ರಾಜನಿಗೆ ಕೊಡಬಹುದಾದ ಸತ್ಕಾರವನ್ನು ಶಶಿಕಲಾ ಅವರಿಗೆ ಪರಪ್ಪನ ಅಗ್ರಹಾರದಲ್ಲಿ ನೀಡಲಾಗುತ್ತಿದೆ. ಇದೇ ವಿಚಾರವಾಗಿ ಡಿ ಐ ಜಿ ರೂಪ ಅವರು ಅಂತಹ ಎಲ್ಲಾ ಸಂಗತಿಗಳನ್ನು ಕೆಲವು ದಿನಗಳ ಹಿಂದೆ ಬಯಲಿಗೆಳೆದಿದ್ದರು. ಆದರೆ ಅದಕ್ಕೆ ಅವರಿಗೆ ಸಿಕ್ಕ ಉಡುಗೊರೆ ಏನು ಗೊತ್ತೇ?? ವರ್ಗಾವಣೆ. ಭ್ರಷ್ಟರ ಬಂಡವಾಳವನ್ನು ಬಯಲಿಗೆಳೆದದಕ್ಕಾಗಿ ಸಿಕ್ಕುತ್ತಿರುವ ಪ್ರತಿಫಲವಿದು.

ಅಷ್ಟಕ್ಕೂ ರೂಪ ಅವರು ಹೇಳಿದ ಸಂಗತಿಗಳಾವುದೆಂಬುದು ನಿಮಗೂ ಅರಿವಿರಬಹುದು. ಶಶಿಕಲಾರವರಿಗೆ ಸಾಮಾನ್ಯ ಖೈದಿಗೆ ಕೊಡುತ್ತಿರುವ ಊಟ ಸಾಕಾಗದೇ, ವಿಶೇಷ ಅಡುಗೆಮನೆಯನ್ನು ನಿರ್ಮಿಸಲು ತಯಾರಿಯನ್ನು ನಡೆಸುತ್ತಿದ್ದರು. ಅದಕ್ಕಾಗು ಕಾರಾಗೃಹದ ಅಧಿಕಾರಿಗೆ ಬರೋಬ್ಬರಿ 2 ಕೋಟಿಯಷ್ಟು ಲಂಚವನ್ನು ಕೊಡಲಾಗಿದೆ ಎಂಬ ಆರೋಪವನ್ನು ರೂಪ ಅವರು ಮಾಡಿದ್ದರು. ಅದಕ್ಕೆ ಅಗತ್ಯವಾದ ಸಾಕ್ಷಿಗಳನ್ನೂ ಸಹ ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಿದರೂ ಇನ್ನೂ ಕ್ರಮ ಕೈಗೊಂಡಿಲ್ಲ, ಬದಲಾಗಿ ರೂಪರವರ ವರ್ಗಾವಣೆಯಾಯಿತು.

ಕಾರಾಗೃಹ ಕಾಯ್ದೆ ಹಾಗೂ ನಿಯಮಗಳ ಉಲ್ಲಂಘನೆಯನ್ನು ಜೈಲಿನಲ್ಲಿಯೂ ಮಾಡಿದರೆ, ಅವರಿಗೆ ಇನ್ನು ಯಾವ ರೀತಿಯಲ್ಲಿ ಶಿಕ್ಷೆ ಕೊಡುವುದು?? ಅವರನ್ನು ಹೇಗೆ ದಂಡಿಸುವುದು?? ಶಶಿಕಲಾ ಅವರಿಗೂ ಅದೇ ರೀತಿಯಾಗಿ ಆಗುತ್ತಿರುವುದು ದುರ್ದೈವ!! ಯಾವ ವ್ಯಕ್ತಿಯ ಮೇಲೆ ಕೊಲೆ ಆರೋಪವೂ ಇದೆಯೋ ಅಂತಹ ವ್ಯಕ್ತಿ ಕಾರಾಗೃಹದ ವಿಶೇಷ ಅತಿಥಿ.

ಶಶಿಕಲಾ ಕುರಿತಾಗಿ ಇನ್ನೊಂದು ವಿಚಾರ ಕೇಳಿ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಶಶಿಕಲಾ ಅವರು ಬುರ್ಖಾ ಧರಿಸಿ ಎಂ ಜೀ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಅರೇ ಹೌದಾ? ಬುರ್ಖಾ ಧರಿಸಿ ಜೈಲಿನಿಂದ ಹೊರಗೆ ಹೋಗಿದ್ದಾರೆಂದು ನೋಡಿದವರು ಹೇಳುತ್ತಿಲ್ಲ. ಡಿಐಜಿ ರೂಪ ಅವರು ಸಲ್ಲಿಸಿದ ವರಿದಿಯಲ್ಲಿ ಇದನ್ನು ನಮೂದಿಸಿದ್ದಾರೆ ಅಷ್ಟೇ ಅಲ್ಲದೇ ಅದಕ್ಕೆ ಪೂರಕವಾದ ಸಾಕ್ಷಿಗಳನ್ನೂ ಎಸಿಬಿ ಪೋಲಿಸರಿಗೆ ಯವರಿಗೆ ಹಸ್ತಾಂತರಿಸಿದ್ದಾರೆ. ಅಲ್ಲಿ ಸಾಕ್ಷಿಯಲ್ಲಿ ಶಶಿಕಲಾ ಮತ್ತು ಇಳವರಿಸಿ ಬ್ಯಾಗ್ ಹಿಡಿದು ಸಾಮಾನ್ಯ ವಸ್ತ್ರದಲ್ಲಿ ಜೈಲಿನ ಒಳಗೆ ಪ್ರವೇಶಿಸಿತ್ತಿರುವ ಸಿಸಿಟಿವಿ ದೃಶ್ಯವನ್ನು ಸಲ್ಲಿಸಿದ್ದಾರೆ. ಎಂಜೀ ರಸ್ತೆಯಲ್ಲಿ ಅವರೀರ್ವರೂ ಮಾಡಿದ ಶಾಪಿಂಗ್ ವಿಚಾರ ಕೂಡ ಬಹಿರಂಗಗೊಂಡಿದೆ. ಎಂತಹ ವಿಪರ್ಯಾಸ ನೋಡಿ!!

Watch! Shashikala Seen Entering Jail with a Bag!!!!!

ಎಸಿಬಿ ಜುಲೈ 31 ರಂದು ರೂಪಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿತ್ತು. ರೂಪಾ ಅವರು ವಿಚಾರಣೆ ವೇಳೆ ಶಶಿಕಲಾ ಮತ್ತು ಇಳವರಿಸಿ ಜೈಲಿನಿಂದ ಹೊರಗಿರುವ ಬಗ್ಗೆ ಪ್ರಸ್ತಾಪಿಸಿ , ಸಿಸಿಟಿವಿ ದೃಶ್ಯಾವಳಿಗಳನ್ನು ಲಗತ್ತಿಸಿದರು.

ಇನ್ನೆಷ್ಟು ದಿನ ಭ್ರಷ್ಟರಿಗೆ ಇಂತಹ ಆತಿಥ್ಯ?? ಕಾರಾಗೃಹಗಳು ನಿಜವಾಗಿ ಶಿಕ್ಷಿಸುವ ಸ್ಥಾನವೇ ಆಗಿದ್ದರೆ ಇದೆಲ್ಲ ಅನಾಚಾರದ ವಿರುದ್ಧ ಕ್ರಮ ಕೈಗೊಳ್ಳಲಿ. ಆ ಮೂಲಕ ಜನರಿಗೆ ಕಾನೂನಿನ ಮೇಲೆ ಇರುವ ನಂಬಿಕೆಯನ್ನು ಉಳಿಸಿಕೊಳ್ಳಲಿ. ಇಲ್ಲವಾದರೆ ಭಾರತದ ಸಂವಿಧಾನದ ಕುರಿತಾಗಿ, ಕಾನೂನಿನ ಮೇಲೆ ಇರುವ ನಂಬಿಕೆಯನ್ನು ಕಳೆದುಕೊಳ್ಳಬೇಕಾದೀತು.
– ಆತ್ಮಿಕ

Tags

Related Articles

Close