ಪ್ರಚಲಿತ

ಗಂಜಿ ಗಿರಾಕಿಗಳ ಬಂಡವಾಳ ಬಯಲು ಮಾಡುತ್ತಿರುವ PostCard ನ ತೇಜೋವಧೆಗೆ ವಿರೋಧಿಗಳ ಸಂಚು!! ಗಂಜಿ ಕೊಡಿಸಿ ಕುಡಿಸುವ ಗಿರಾಕಿಗಳ ಸಾವಿಗಷ್ಟೇ ಮಾತಾಡ್ತಾವಾ ಪ್ರಕಾಶ್ ರೈ ಹಾಗು ಆತನ ಬಂಟರು?

ಎಡಪಂಥೀಯ ಚಿಂತನೆಗಳಿರೊ ವ್ಯಕ್ತಿಗಳ ಹತ್ಯೆಯಾದರೆ ಅಬ್ಬರಿಸಿ ಬೊಬ್ಬಿರಿಯೊ ಬುದ್ಧಿಜೀವಿಗಳು, ಪ್ರಗತಿಪರರು, ವಿಚಾರವಾದಿಗಳು, ಸೆಕ್ಯೂಲರ್’ಗಳ ಸಾಲಿಗೆ ಹೊಸ ಅಭ್ಯರ್ಥಿಯ ಸೇರ್ಪಡೆಯಾಗಿದೆ, ಅದ್ಯಾರು ಅಂತೀರಾ? ಅದೇ ನಮ್ಮ ಪ್ರಕಾಶ್ ರೈ ಕಣ್ರೀ!!

ಅದು ಕಾವೇರಿ ನೀರಿನ ಗಲಾಟೆ ನಡೆದಿದ್ದ ಸಂದರ್ಭ, ಇಡೀ ಕರ್ನಾಟಕ ತಮಿಳುನಾಡಿನ ಹಠಮಾರಿ ಧೋರಣೆಗೆ ಸಿಡಿದೆದ್ದಿತ್ತು. ಕುಡಿಯೋದಕ್ಕೆ ನೀರಿಲ್ಲ ಇನ್ನು ತಮಿಳುನಾಡಿನ ಕೃಷಿಗೋಸ್ಕರ ನೀರೆಲ್ಲಿಂದ ಬಿಡೋಣ ಸ್ವಾಮಿ ಅಂತ ಕನ್ನಡಿಗರು ಗೋಳಿಡುತ್ತಿದ್ದ ಸಂದರ್ಭವದು. ಅದೇ ಸಂದರ್ಭದಲ್ಲಿ ಕನ್ನಡಿಗನೇ ಆಗಿರೋ ಫಿಲಂ ವಿಲನ್ ಒಬ್ಬ ತನ್ನ ಫಿಲಂ ಪ್ರೊಮೋಷನ್’ನಲ್ಲಿ ಬ್ಯುಸಿಯಾಗಿದ್ದ. ಖಾಸಗಿ ಟಿವಿ ಚಾನೆಲ್ಗೆ ಇಂಟರ್‌ವ್ಯೂ ಕೊಡಬೇಕಿದ್ದ ಸಂದರ್ಭದಲ್ಲಿ ಈ ಖಳನಟನಿಗೆ ಟಿವಿ ಆ್ಯಂಕರ್ ಒಂದು ಪ್ರಶ್ನೆಯನ್ನ ಕೇಳಿದ್ದಳು. “ಸರ್ ನೀವು ಈ ಕಾವೇರಿ ವಿಚಾರದ ಬಗ್ಗೆ ಏನಂತೀರ?”

ಅದಕ್ಕೆ ಕೆಂಡಾಮಂಡಲವಾದ ಆ ಖಳನಟ ಫಿಲಂನಲ್ಲಿ ಖಳನಾಯಕನ ಆ್ಯಕ್ಟಿಂಗ್ ಮಾಡೋಷ್ಟು ದೊಡ್ಡ ಆ್ಯಕ್ಟ್ ಮಾಡಿ ಟಿವಿ ಆ್ಯಂಕರ್’ನ ವಿರುದ್ಧ ತಿರುಗಿಬಿದ್ದಿದ್ದ.

“ನಾನು ರಾಜಕಾರಣಿಯಲ್ಲ ನಾನೊಬ್ಬ ನಟ, ನನಗೆ ಭಾಷೆ, ರಾಜ್ಯ ಅನ್ನೋ ಸಸಂಕೋಲೆಯಿಲ್ಲ. ಯಾವ ಸಮಯದಲ್ಲಿ ಯಾವ ಪ್ರಶ್ನೆ ಯಾರಿಗೆ ಕೇಳಬೇಕು ಅನ್ನೋ ಕಾಮನಸೆನ್ಸ್ ಇಲ್ವಾ ನಿಮಗೆ? ಯಾವ ಚಾನೆಲ್ರೀ ಇದು? ಕಾಂಟ್ರವರ್ಸಿ ನೋಡಬೇಕಾ? ಕಾಂಟ್ರವರ್ಸಿ ಮಾಡ್ಲಾ? ಹೇಗ್ ಮಾಡ್ತೀನ್ ನೋಡಿ? ಬ್ಲಾ ಬ್ಲಾ ಬ್ಲಾ” ಅಂತ ಮೈಕ್ ಕಿತ್ತೊಗೆದು ಹೊರನಡೆದಿದ್ದ ಆ ಖಳನಟ ಮೊನ್ನೆ ತಾನೆ ಕಮ್ಯುನಿಸ್ಟರ ಕಾರ್ಯಕ್ರಮವೊಂದಕ್ಕೆ ಹೋಗಿ ತಾನೇ ಹೇಳಿದ್ದ “ತಾನೊಬ್ಬ ನಟ ಹೊರತು ರಾಜಕಾರಣಿಯಲ್ಲ” ಅನ್ನೋ ಮಾತನ್ನೂ ಮರೆತು “ಮೋದಿ ಹಾಗು ಯೋಗಿ ನನಗಿಂತ ದೊಡ್ಡ ನಟರು, ಅವರು ನಟನೆಯಲ್ಲಿ ನನ್ನನ್ನೂ ಮೀರಿಸುತ್ತಾರೆ, ನನಗೆ ಬಂದಿರೋ ರಾಷ್ಟ್ರಪ್ರಶಸ್ತಿಗಳನ್ನ ಅವರೊಬ್ಬರಿಗೇ ಕೊಟ್ಟು ಬಿಡಬೇಕನ್ನಸ್ತಿದೆ” ಅಂತ ರಾಜಕೀಯದ ಮಾತುಗಳನ್ನಾಡೇಬಿಟ್ಟಿದ್ದ.

ಅಷ್ಟಕ್ಕೂ ಆತ ಈ ಮಾತುಗಳನ್ನಾಡಿದ್ದಾದರೂ ಯಾಕೆ? ಅದಕ್ಕೆ ಕಾರಣ ಇತ್ತೀಚೆಗೆ ನಡೆದ ಗೌರಿ ಲಂಕೇಶ್ ಹತ್ಯೆ. ಗೌರಿ ಲಂಕೇಶ್ ಹತ್ಯೆತಾದ ತಕ್ಷಣ ಎದ್ದೋ ಬಿದ್ದೋ ಅಂತ ಕರ್ನಾಟಕಕ್ಕೆ ಓಡಿ ಬಂದ ಪ್ರಕಾಶ್ ರೈ “ಏನ್ ನಡೀತಿದೆ ಕರ್ನಾಟಕದಲ್ಲಿ” ಅಂತ ಬಾಯಿ ಬಡ್ಕೊಂಡಿದ್ದ.

ಕರ್ನಾಟಕದಲ್ಲಿ, ಕರ್ನಾಟಕದಲ್ಲಿ ಬಿಡಿ ಸ್ವತಃ ತಾನು ಹುಟ್ಟಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಆದ ಹಿಂದೂ ಕಾರ್ಯಕರ್ತರ ಹೆಣ ಬಿದ್ದಾಗ “ಏನ್ ನಡೀತಿದೆ ನಮ್ ಜಿಲ್ಲೇಲಿ?” ಅಂತ ಕೇಳೋಕೆ ಪುರುಸೊತ್ತಿಲ್ಲದಿದ್ದ ರೈ ದಿಢೀರನೆ ಗೌರಿ ಲಂಕೇಶ್ ಹತ್ಯೆಯ ಬಗ್ಗೆ ತನ್ನ ‘ಧ್ವನಿ’ಯನ್ನ ಎತ್ತಿದ್ದ.

ಅಷ್ಟಕ್ಕೂ ಗೌರಿ ಲಂಕೇಶ್ ಹತ್ಯೆ ನಡೆದದ್ದು ಕರ್ನಾಟಕದಲ್ಲಿ ಅದೂ ರಾಜಧಾನಿ ಬೆಂಗಳೂರಿನಲ್ಲಿ. ಸರಕಾರವಿರೋದು ಕಾಂಗ್ರೆಸ್, ಕಾನೂನು ಸುವ್ಯವಸ್ಥೆ ಕಾಪಡುವ ಕೆಲಸ ಇರೋದು ರಾಜ್ಯ ಸರ್ಕಾರದ ಗೃಹ ಇಲಾಖೆಯದ್ದು. ಆದರೆ ಪ್ರಕಾಶ್ ರೈ ಗೆ ರಾಜ್ಯ ಸರ್ಕಾರವನ್ನ ಟೀಕೆ ಮಾಡುವಷ್ಟು ಪುರುಸೊತ್ತೇ ಇರಲಿಲ್ಲ. ಬಂದವನೇ ಮೋದಿ ಈ ಬಗ್ಗೆ ಮೌನವಹಿಸಿದ್ದಾರೆ, ಮೋದಿ ಗೌರಿ ಲಂಕೇಶ್ ಬಗ್ಗೆ ಧ್ವನಿಯೆತ್ತಬೇಕು ಅಂತ ರಾಜ್ಯ ಸರ್ಕಾರವನ್ನ ಬಿಟ್ಟು ಕೇಂದ್ರಸರ್ಕಾರದ ಮೇಲೆ ತನ್ನ ವಾಚಾಳಿ ಅಸ್ತ್ರ ಬಿಟ್ಟಿದ್ದ.

ಅಷ್ಟಕ್ಕೂ ಕರ್ನಾಟಕದಲ್ಲಿ ನಡೆದಿರೋ ಹತ್ಯೆಗಳಿಗೂ ಮೋದಿಗೂ, ಉತ್ತರಪ್ರದೇಶದ ಯೋಗಿ ಆದಿತ್ಯನಾಥರಿಗೂ ಸಂಬಂಧವಾದರೂ ಏನು?

ಯೋಗಿ ಆದಿತ್ಯನಾಥರು ಗೋರಖನಾಥ ಮಂದಿರದ ಮಹಾಂತರು. ಅವರು ಪೂಜೆ ಪುನಸ್ಕಾರಗಳಲ್ಲಿ ಭಾಗವಹಿಸೋದು ಸರ್ವೇ ಸಾಮಾನ್ಯ. ಪೂಜೆ ಪುನಸ್ಕಾರಗಳನ್ನ ಮಾಡುತ್ತ ಧಾರ್ಮಿಕವಾಗೇ ಇದ್ದರೂ ಕೂಡ ಯೋಗಿ ಆದಿತ್ಯನಾಥರು ಉತ್ತರಪ್ರದೇಶವನ್ನ ಮಾತ್ರ ರೌಡಿಮುಕ್ತ, ಹಸಿವುಮುಕ್ತ, ರೋಡ್ ರೋಮಿಯೋ ಮುಕ್ತ ರಾಜ್ಯ ಮಾಡುವತ್ತ ದೊಡ್ಡ ಹೆಜ್ಜೆಯನ್ನೇ ಹಾಕಿದ್ದಾರೆ ಅನ್ನೋದು ಬಹುಶಃ ಖಳನಟ ರೈಗೆ ಗೊತ್ತಿಲ್ಲ ಅನಿಸುತ್ತೆ.

ಯೋಗಿ ಆದಿತ್ಯನಾಥರು ಪೂಜಾರಿಯಂತೆ ಕಾಣ್ತಿದಾರೆ ಅನ್ನೋ ಪ್ರಕಾಶ್ ರೈಗೆ ತನ್ನ ರಾಜ್ಯದ ಮುಖ್ಯಮಂತ್ರಿ ಉರ್ದು ಕಾರ್ಯಕ್ರಮಗಳಿಗೆ ಹೋಗೋದು, ಇಫ್ತಿಯಾರ್ ಪಾರ್ಟಿಗಳಲ್ಲಿ ಗೋಲ್ ಟೋಪಿ ಹಾಕ್ಕೊಂಡು ಬಿರಿಯಾನಿ ತಿನ್ನೋದು, ಚಿಕನ್ ವ್ಯಾಪಾರ ಮಾಡೋಕೆ ಅಲ್ಪಸಂಖ್ಯಾತರಿಗೆ 1.25 ಲಕ್ಷ ಸಹಾಯ ಮಾಡ್ತೀನಿ ಅಂದಿದ್ದು, ಕಸಾಯಿಖಾನೆ ತೆಗೀರಿ ನಾ ಅದಕ್ಕೆ ಪರ್ಮಿಷನ್ ಕೊಡ್ತೀನಿ ಅಂತಂದಿದ್ದು, ಶಾದಿಭಾಗ್ಯ ತಂದು ಮುಸ್ಲಿಂ ಹೆಣ್ಣುಮಕ್ಕಳಿಗೆ ಮದುವೆಭಾಗ್ಯ ಕೊಡ್ತೀನಿ ಅಂತಂದಿದ್ದು, ರಾಜ್ಯದ ಹಿಂದೂ ಮಂದಿರಗಳ ದುಡ್ಡನ್ನ ನೂರಾರು ಹಜ್ ಭವನ ನಿರ್ಮಾಣಕ್ಕೆ ಕೋಟಿ ಕೋಟಿ ಹಣದ ರೂಪದಲ್ಲಿ ಖರ್ಚು ಮಾಡಿಸಿದ್ದು, ನಮ್ಮ ತೆರಿಗೆಯ ಹಣದಲ್ಲಿ ಅಲ್ಪಸಂಖ್ಯಾತರಿಗೆ ವಿಶೇಷ ಸೌಲಭ್ಯಗಳನ್ನ ಕೊಡಿಸುತ್ತಿರೋದನ್ನ ನೋಡಿಯೂ ಪ್ರಕಾಶ್ ರೈ ಗೆ ನಮ್ಮ ರಾಜ್ಯದ ಮುಖ್ಯಮಂತ್ರಿ “ಮಸೀದಿಯ ಮೌಲ್ವಿ” ಕಂಡಂಗೆ ಕಾಣ್ತಿದಾರೆ ಅಂತ ಯಾವತ್ತೂ ಅನಿಸಲೇ ಇಲ್ಲ.

ಉತ್ತರಪ್ರದೇಶಕ್ಕೂ ಈ ರೈ ಗು ಏನ್ ಸಂಬಂಧ? ಕಾವೇರಿ ವಿಚಾರ ಬಂದಾಗ “ತಾನೊಬ್ಬ ನಟ ಅಷ್ಟೇ ಹೊರತು ರಾಜಕಾರಣಿಯಲ್ಲ, ಇದೊಂದು ಗಂಭೀರ ವಿಷಯ ಇದರ ಬಗ್ಗೆ ನಾ ಪ್ರತಿಕ್ರಿಯಿಸಲ್ಲ” ಅಂದಿದ್ದ ರೈ ಗೆ ಸಡನ್ ಆಗಿ ತಾನೊಬ್ಬ ನಟ ಅನ್ನೋದು ಮರೆತು ಹೋಯಿತಾ?

ಗೌರಿ ಲಂಕೇಶ್ ಹತ್ಯೆಗೆ ಮಾತ್ರ ಧ್ವನಿಯೆತ್ತಿದ ಪ್ರಕಾಶ್ ರೈ2013 ರಿಂದ 2017 ರವರೆಗೆ ಈ ದೇಶದಲ್ಲಾದ 20 ಕ್ಕೂ ಹೆಚ್ಚು ಪತ್ರಕರ್ತರ ಹತ್ಯೆಗಳು ಕಾಣಿಸಲಿಲ್ಲವೇ?

‘ಐಬಿಎನ್’‍ನ ರಾಜೇಶ್ ವರ್ಮ, ‘ದೇಶಬಂಧು’ವಿನ ಸಾಯಿ ರೆಡ್ಡಿ, ‘ಆಜ್’ ಪತ್ರಿಕೆಯ ರಾಕೇಶ್ ಶರ್ಮ, ‘ಆಂಧ್ರಪ್ರಭಾ’ದ ಎಮ್.ವಿ.ಎನ್. ಶಂಕರ್, ‘ದೈನಿಕ್ ಜಾಗರಣ್’‍ನ ಮಿಥಿಲೇಶ್ ಪಾಂಡೆ, ‘ಆಜ್ ತಕ್‍’ನ ಅಕ್ಷಯ್ ಸಿಂಗ್, ‘ಸಮಾಚಾರ್’‍ನ ಜಗೇಂದ್ರ ಸಿಂಗ್, ‘ತಾಜಾ ಟಿವಿ’ಯ ಇಂದ್ರದೇವ್ ಯಾದವ್…..

ಹೀಗೇ ಹೇಳ್ತಾ ಹೋದರೆ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತದೆ. ಈ ಯಾರ ಕೊಲೆಗಳೂ ಸುದ್ದಿಯಾಗಲಿಲ್ಲ, ಯಾವ ಪ್ರಕಾಶ್ ರೈ ಕೂಡ ಇವುಗಳ ವಿರುದ್ಧ ಧ್ವನಿಯೆತ್ತಲಿಲ್ಲ. ಯಾಕೆಂದರೆ ಇವರ್ಯಾರೂ ಎಡಪಂಥೀಯರಾಗಿರಲಿಲ್ಲವಲ್ಲ! ಯಾರೂ ಮೋದಿಯನ್ನು ವಾಚಾಮಗೋಚರ ಬಯ್ಯುವ ಗಂಜಿಪಡೆಯ ಗಿರಾಕಿಯಾಗಿರಲಿಲ್ಲವಲ್ಲ! ಬಿಜೆಪಿಯನ್ನು ಅನಗತ್ಯವಾಗಿ ಟೀಕಿಸುವ, ಕಾಂಗ್ರೆಸ್ ಪಕ್ಷವನ್ನು ಇಂದ್ರ ಚಂದ್ರ ಎಂದು ಆಕಾಶಕ್ಕೇರಿಸಿ ಕೂರಿಸುವ ಕೆಲಸವನ್ನು
ಈ ಪತ್ರಕರ್ತರು ಮಾಡುತ್ತಿರಲಿಲ್ಲವಲ್ಲ.

ಆದರೆ ಮೋದಿಯನ್ನು ಏಕವಚನದಲ್ಲಿ ಬಾಯಿಗೆ ಬಂದಂತೆ ಬಯ್ಯುತ್ತಿದ್ದ, ಹಿಂದೂ ಧರ್ಮಕ್ಕೆ ಅಪ್ಪ ಅಮ್ಮ ಇದ್ದಾರೇನ್ರೀ ಎಂದು ಕೇಳುತ್ತ ಸಾರ್ವಜನಿಕರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುತ್ತಿದ್ದ, ಅಮಿತ್ ಶಾರ ಬೋಳುತಲೆಯನ್ನು ಕಿಚಾಯಿಸಿಕೊಂಡು ನಗುತ್ತಿದ್ದ, ಯೋಗಿ ಆದಿತ್ಯನಾಥರನ್ನ ಕೋಮುವಾದಿಯೆನ್ನುತ್ತಿದ್ದದ್ದನ್ನ, ಮೋದಿಯನ್ನ ಫೇಕು ಅಂತ ಕಿಚಾಯಿಸಿದ್ದ, ಜೆಎನ್’ಯೂ ನಲ್ಲಿ ದೇಶವಿರೋಧಿ ಘೋಷಣೆ ಕೂಗಿ ದೇಶದ್ರೋಹದ ಕೇಸ್’ನಲ್ಲಿ interim bail ಮೇಲೆ ಹೊರಗೆ ಬಂದಂತ ಕನ್ಹಯ್ಯ, ಉಮರ್ ಖಾಲೀದರನ್ನ ತನ್ನ ಮಕ್ಕಳು ಎಂದುಕೊಂಡಿದ್ದವಳನ್ನ, ಒಟ್ಟಾರೆ ಯಾವುದೇ ಆರೋಗ್ಯವಂತ ಮನುಷ್ಯನ ಚಹರೆ ಇಲ್ಲದೇ ಇದ್ದ ಗೌರಿ ಸತ್ತದ್ದು ಮಾತ್ರ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತದೆ ಎಂದರೆ ಗಂಜಿಪಡೆ ಅದಕ್ಕಾಗಿ ಹಗಲಿರುಳು ಎಷ್ಟು ದುಡಿದಿರಬಹುದು ಎಂದು ಯೋಚಿಸಿ. ಯಾರ ಸಾವಿನಿಂದ ಯಾರು ಹೆಚ್ಚು ಲಾಭ ಎತ್ತುತ್ತಾರೋ ಅವರೇ ಆ ಹತ್ಯೆಯ ಸಂಚು ರೂಪಿಸಿರುವ ಸಾಧ್ಯತೆಯೂ ಇದೆ ಎಂಬ ಕೋನದಲ್ಲಿ ಯೋಚಿಸುವುದಾದರೆ ಗೌರಿಯ ಹತ್ಯೆ ಎಲ್ಲರಿಗಿಂತ ಹೆಚ್ಚು ಗಂಜಿಪಡೆಗೇ ಅಗತ್ಯವಿತ್ತು ಎನ್ನಬಹುದು.

ಆ ಗಂಜೀಪಡೆಗೆ ಮತ್ತೊಬ್ಬ ಗಂಜಿ ಗಿರಾಕಿಯ ಆಗಮನವಾಗಿದೆ, ಅದೇ ಆ ಖಳನಟ ಪ್ರಕಾಶ್ ರೈ.

ಇಂಥ ಗಂಜಿಗಿರಾಕಿಗಳ ಕರಾಳಮುಖವನ್ನ expose ಮಾಡುತ್ತಿರೋ ನಮ್ಮ POST CARD KANNADA ದ ಮೇಲೂ ಗಂಜಿಗಿರಾಕಿಗಳ ಚೇಲಾಗಳು ಟಾರ್ಗೇಟ್ ಮಾಡಲು ಮುಂದಾಗಿದ್ದಾರೆ. PostCard ಎಂಬ ನಮ್ಮ logo ವನ್ನ RostCard ಅಂತ ಮಾಡಿ ಸುಳ್ಳು ಸುದ್ದಿ ಹಬ್ಬಿಸಿ ಪ್ರಕಾಶ್ ರೈ ಯನ್ನ ಖಳನಟನಿಂದ ಹೀರೋ ಮಾಡೋಕೆ ಈ ಚೇಲಾಗಳು ಹೊರಟಿದ್ದಾರೆ.

ಕೋಟ್ಯಂತರ ರೂ. ಆಸ್ತಿ ಮಾಡಿರುವ ರೈ ಅದ್ಯಾವಾಗ್ಲೋ ಫಿಲಂ ಶೂಟಿಂಗನಲ್ಲೋ ಅಥವ ಎಲ್ಲೋ ಹೋಗುವಾಗ ಯಾವುದೋ ಬುಡಕಟ್ಟು ಬಡಮಕ್ಕಳನ್ನ ಭೇಟಿಯಾಗಿದ್ದ ಫೋಟೋವೊಂದನ್ನ ಹಾಕಿ “ರೈ ಬುಡಕಟ್ಟು ಬಡಮಕ್ಕಳ ಜೊತೆಗೆ” ಅಂತ ಫೋಟೋ ಹಾಕಿ ಅದರ ಜೊತೆಗೇ ಪ್ರತಾಪ್ ಸಿಂಹರವರು ಕೇಂದ್ರದ ಮಂತ್ರಿಯೊಬ್ಬರನ್ನ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳುತ್ತಿರುವ ಫೋಟೋ ಹಾಕಿ “ನೋಡಿ ಪ್ರತಾಪ್ ಸಿಂಹ ಶ್ರೀಮಂತರ ಜೊತೆ” ಅಂತ ಹಾಕಿ ವಿಕೃತಿ ಮೆರೆಯುತ್ತಿರೋದನ್ನ ನೋಡಿದರೆ ಇವುಗಳಿಗೆ ಗಂಜಿಗಾಗಿ ಎಷ್ಟು ದುಡ್ಡು ಸಿಗುತ್ತಿರಬಹುದು ಅನ್ನೋ ಪ್ರಶ್ನೆ ಕಾಡುತ್ತಿದೆ.

Postcard ಕಲ್ಲಡ್ಕದ ಶ್ರೀರಾಮವಿದ್ಯಾಕೇಂದ್ರದ 3016 ಬಡಮಕ್ಕಳ ಊಟಕ್ಕಾಗಿ ಅದೆಷ್ಟು ಶ್ರಮಿಸಿದೆ, ಮೂಡಬಿದಿರೆಯಲ್ಲಿ ಜಿಹಾದಿಗಳಿಂದ ಕೊಲೆಗೀಡಾದ ಪ್ರಶಾಂತ್ ಪೂಜಾರಿಯವರ ಕುಟುಂಬಕ್ಕೆ online campaign ಮಾಡಿ ಅದೆಷ್ಟು ಧನಸಹಾಯ ಮಾಡಿದೆ.ಅನ್ನೋದು ಈ ಗಂಜಿಗಿರಾಕಿಗಳಿಗೇನ್ ಗೊತ್ತು?

ಒಟ್ಟಿನಲ್ಲಿ ಈ ಗಂಜಿಗಿರಾಕಿಗಳ ಗಂಜೀಭಾಗ್ಯವನ್ನ ಪೋಸ್ಟ್ ಕಾರ್ಡ್ ಬಯಲು ಮಾಡುತ್ತಿರೋದು ಇವುಗಳಿಗೆ ನುಂಗಲಾರದ ಗಂಜಿಯಾಗಿ ಪರಿಣಮಿಸಿದ್ದಂತೂ ನಿಜ.

ಗಂಜಿ ಕುಡಿಯಲೂ ಆಗುತ್ತಿಲ್ಲ ನುಂಗಲೂ ಆಗುತ್ತಿಲ್ಲ ಅನ್ನೋ ಪರಿಸ್ಥಿತಿ ಈ ಗಂಜಿಗಿರಾಕಿಗಳದ್ದಾಗಿದೆ ಅಷ್ಟೇ!!

ಇವುಗಳು ಅದೆಷ್ಟೇ ತೇಜೋವಧೆ ಮಾಡೋಕೆ ಪ್ರಯತ್ನಪಟ್ಟರೂ ಪೋಸ್ಟ್ ಕಾರ್ಡ್ ಮಾತ್ರ ಸತ್ಯವನ್ನು ಜನರೆದುರಿಡೋದು ಹಾಗು ಈ ಗಂಜಿಗಿರಾಕಿಗಳ ಕುತಂತ್ರವನ್ನ ಬಯಲು ಮಾಡೋದನ್ನ ನಿಲ್ಲಿಸಲ್ಲ.

– Vinod Hindu Nationalist

Tags

Related Articles

Close