ಇತಿಹಾಸ

ಗಾಂಧಿಯ ಅಹಿಂಸಾ ಹಾಗೂ ಶಾಂತಿ ತತ್ವಗಳೆರಡೂ ನಕಲಿ : ಗೋಪಾಲ್ ಗೋಡ್ಸೆ!!!

69 ವರ್ಷಗಳ ಹಿಂದೆ ಜನವರಿ ಮೂವತ್ತು 1948 ಮಹಾತ್ಮ ಗಾಂಧಿ ನಾಥೂರಾಮ್ ಗೋಡ್ಸೆಯ ಗುಂಡಿಗೆ ಬಲಿಯಾದರು. 1947ರಲ್ಲಿ ಭಾರತ-ಪಾಕ್
ವಿಭಜನೆಯಾಗುವುದಕ್ಕೆ ಮುಖ್ಯ ಕಾರಣವೇ ಈ ಮಹಾತ್ಮ ಗಾಂಧಿ ಎಂದು ನಾಥೂರಾಮ್ ಗೋಡ್ಸೆ ನಂಬಿದ್ದರು. ಗೂಡ್ಸೆ ಮತ್ತು ಆತನ ಸ್ನೇಹಿತ ನಾರಾಯಣ್
ಆಪ್ಟೆಯನ್ನು ಗಲ್ಲಿಗೇರಿಸಲಾಯಿತು.. ನಾಥೂರಾಮ್ ಗೋಡ್ಸೆಯ ಸಯೋದರ ಗೋಪಾಲ್ ಗೋಡ್ಸೆ ಮತ್ತು ಇತರ ಇಬ್ಬರಿಗೆ ಜೀವಾವಧಿ ಶಿಕ್ಷೆಯಾಯಿತು. ಈಗ
ಜೈಲಿನಿಂದ ಬಿಡುಗಡೆಯಾಗಿದ್ದು ಗೋಪಾಲ್ ಗೋಡ್ಸೆಗೆ 84 ವರ್ಷವಾಗಿದೆ. ತನ್ನ ಹೆಂಡತಿಯೊಂದಿಗೆ ಮುಂಬೈಯ ಒಂದು ಸಣ್ಣ ಅಪಾರ್ಟ್‍ಮೆಂಟ್‍ನಲ್ಲಿ
ಜೀವಿಸುತ್ತಿದ್ದಾರೆ. ಗಾಂಧೀಜಿ ಹತ್ಯೆಯಲ್ಲಿ ಪಾಲ್ಗೊಂಡಿದ್ದಕ್ಕೆ ಗೋಪಾಲ್ ಗೋಡ್ಸೆಗೆ ಅತ್ಯಂತ ಹೆಮ್ಮೆ ಇದೆಯಂತೆ.!! ಗೋಪಾಲ್ ಗೋಡ್ಸೆ ತಾನು ಜೈಲಿನಲ್ಲಿದ್ದಾಗ ಯಾರ ಪತ್ರಕರ್ತರೊಂದಿಗೆ ಸಹ ಮಾತನಾಡಲು ಇಚ್ಚಿಸಿರಲಿಲ್ಲ ಆದರೆ ಟೈಮ್ ದೆಲ್ಲಿ ಪತ್ರಿಕೆಯ ವರದಿಗಾರ್ತಿ ಮೀನಾಕ್ಷಿ ಗಂಗೂಲಿ ಜೊತೆ ಮಾತನಾಡಲು ಮಾತ್ರ ಬಯಸಿದ್ದರು. ಮೀನಾಕ್ಷಿ ಗಂಗೂಲಿ ಮಾಡಿದ ಸಂದರ್ಶನದಲ್ಲಿ ಭಾರತೀಯರೆಲ್ಲಾ ನಂಬಲಸಾಧ್ಯವಾದಂತಹ ಮಾಹಿತಿಯನ್ನು ಗೋಡ್ಸೆ ಬಿಚ್ಚಿಟ್ಟರು.!!

ಟೈಮ್: ಜನವರಿ 1948ರಲ್ಲಿ ಏನಾಯಿತು?

ಗೋಡ್ಸೆ: ಜನವರಿ 20 ಗಾಂಧಿ ಪ್ರಾರ್ಥನಾ ಮಂದಿರದ 50 ಮೀಟರ್ ಜಾಗದಲ್ಲಿ ಮದನ್‍ಲಾಲ್ ಪಾವಾ ಗಾಂಧಿ ಬಾಂಬ್ ಸಿಡಿಸಿದ್ದ. ಆ ಸಮಯದಲ್ಲಿ ಅಲ್ಲಿದ್ದ ಎಲ್ಲರೂ ಓಟಕಿತ್ತರು. ಮದನ್‍ಲಾಲ್ ಅನ್ನು ಪೊಲೀಸರು ಸೆರೆಹಿಡಿದಿದ್ದರು. ಆ ಸಮಯದಲ್ಲಿ ನಮಗೆ ಯೋಚನೆ ಶುರುವಾಗಿತ್ತು.. ನಮ್ಮನ್ನು ಪೊಲೀಸರು ಹಿಡಿಯುದಕ್ಕಿಂತ ಮುಂಚೆ ನಾವು ಈ ಕೆಲಸವನ್ನು ಮುಗಿಸಬೇಕು ಎಂದು ಯೋಚನೆ ಮಾಡಿದೆವು. ನಂತರ ನಾಥೂರಾಮ್ ಗೋಡ್ಸೆ ಮುಂದಾಳತ್ವವನ್ನು ವಹಿಸಿ ಗಾಂಧಿಯನ್ನು ಮುಗಿಸುವ ಯತ್ನ ಮಾಡಿದ. ಅದೇ ಸಮಯದಲ್ಲಿ ನಾವೆಲ್ಲಾ ಅವನಿಗೆ ಬೆಂಬಲವಾಗಿ ನಿಂತೆವು.!

ಟೈಮ್: ಯಾಕೆ ಗಾಂಧಿಯನ್ನು ನಿಮಗೆ ಕೊಲ್ಲಬೇಕು ಅಂತನಿಸಿತು.?

ಗೋಡ್ಸೆ: ಈ ಪ್ರಶ್ನೆಗೆ ಉತ್ತರಿಸಿದ ಗೋಪಾಲ್ ಗೋಡ್ಸೆ ಗಾಂಧಿ ಒಬ್ಬ ಕಪಟ ನಾಟಕ ಮಾಡುವ ಮನುಷ್ಯ.!! ಅದೆಷ್ಟೂ ಹಿಂದೂಗಳನ್ನು ಮುಸ್ಲಿಮರು ಕೊಂದರೂ
ಗಾಂಧೀಜಿ ಮಾತ್ರ ಸುಮ್ಮನಿದ್ದರು. ಮನದೊಳಗೆ ಸಂತೋಷಪಟ್ಟರು!!. ಹಿಂದೂಗಳ ಹತ್ಯಾಕಾಂಡವನ್ನು ಮಾಡಲು ಕುಮ್ಮಕ್ಕು ನೀಡಿದ್ದೂ ಇವರೇ.!!

ಟೈಮ್: ನೀವು ಗಾಂಧಿಯನ್ನು ಎಂದಾದರೂ ನೋಡಿದ್ದೀರಾ?

ಗೋಡ್ಸೆ: ಅದಕ್ಕೆ ಉತ್ತರಿಸಿದ ಗೋಡ್ಸೆ… ಹೌದು ಮಹಾತ್ಮ ಗಾಂಧಿಯನ್ನು ನೋಡಿದ್ದೇನೆ.

ಟೈಮ್: ನೀವು ಆ ಸಭೆಯಲ್ಲಿ ಹಾಜರಿದ್ದಿರಾ?

ಗೋಡ್ಸೆ: ಹೌದು ಆ ಸಭೆಯಲ್ಲಿ ನಾನೂ ಹಾಜರಿದ್ದೆ.

ಟೈಮ್: ಅವರು ಒಂದು ಜನ ಸಮೂಹವನ್ನು ಯಾವ ರೀತಿ ರಚಿಸಿದ್ದಾರೆ ಎಂಬುವುದನ್ನು ವಿವರಿಸಬಹುದೇ?

ಗೋಡ್ಸೆ: ಈ ಎಲ್ಲಾ ಕ್ರೆಡಿಟ್ ಮಾಧ್ಯಮದವರಿಗೆ ಸಲ್ಲಬೇಕಾಗುತ್ತದೆ. ಯಾಕೆಂದರೆ ಮೊದಲು ಮಹತ್ಮಾ ಗಾಂಧಿ ಪತ್ರಿಕಾ ವರದಿಗಾರರನ್ನು ತನ್ನತ್ತ ಸೆಳೆದುಕೊಂಡರು. ತಾನು ಮಾಡುತ್ತಿದ್ದ ಎಲ್ಲಾ ವಿಷಯಗಳನ್ನು ಜನರಿಗೆ ಧನಾತ್ಮಕವಾಗಿ ಪ್ರಚಾರ ಮಾಡಲು ಪತ್ರಿಕೆ ಸಹಾಯಮಾಡಿತು. ಗಾಂಧಿ ಹೇಗೆ ನಡೆಯುತ್ತಿದ್ದರು, ಗಾಂಧಿ ಹೇಗೆ ನಗುತ್ತಿದ್ದರು ಇದೆಲ್ಲಾ ಜನರಿಗೆ ಬೇಕಾಗಿರಲಿಲ್ಲ. ಜನಸಮಾನ್ಯರನ್ನು ತನ್ನತ್ತ ಸೆಳೆದು ಕೊಂಡು ಅವರು ಜನರ ಬೆಂಬಲವನ್ನು ಪಡೆದುಕೊಂಡಿದ್ದರು. ಪಾಪ ಆ ಜನಗಳಿಗೆ ಮಾತ್ರ ಈತ ಮಾಡುವುದೆಲ್ಲಾ ಭೋಗಸ್ ಎಂದು ಕೊನೆಯವರೆಗೂ ತಿಳಿದಿರಲಿಲ್ಲ.

ಟೈಮ್: ಆದರೆ ಇದರಿಂದ ನಿಜವಾಗಿಯೂ ಒಳ್ಳೆಯ ಪ್ರಚಾರ ಸಿಕ್ಕಿದೆಯಾ ಮಹತ್ಮಾ ಗಾಂಧಿಗೇ?

ಗೋಡ್ಸೆ: ಸಾಮಾನ್ಯವಾಗಿ ಭಾರತೀಯ ಜನಸಾಮಾನ್ಯರಿಗೆ ಸನ್ಯಾಸತ್ವ ಎಂದರೆ ಆಕರ್ಷಣೆ ಜಾಸ್ತಿ.. ಇದನ್ನೇ ಗಾಂಧೀಜಿಯವರು ಈ ಸನ್ಯಾಸತ್ವವನ್ನು ರಾಜಕೀಯದಲ್ಲಿ ಬಳಸಿದ್ದಾರೆ… ಅವರ ಮರಣದ ನಂತರವೂ ಸರಕಾರ ಇದನ್ನು ಬಳಸಿಕೊಂಡಿತು. ಅವರು ಹಿಂದೂಗಳ ಶತ್ರು ಎಂದು ಸರಕಾರ ಬಲವಾಗಿ ತಿಳಿಸಿತ್ತು.!! ಆದರೆ ಗಾಂಧಿ ಮಾತ್ರ ನಾನೊಬ್ಬ ಬಲವಾದ ಹಿಂದೂ ಎಂದು ತೋರಿಸಲು ಬಯಸಿದ್ದರು. ಹಾಗಾಗಿ ಗಾಂಧಿಯವರು ಸತ್ತಾಗಲೂ ಹೇ ರಾಮ್ ಎನ್ನುವ ಪದವನ್ನು ಸರಕಾರವೇ ಹಾಕಿತು. ಬಾಯಲ್ಲಿ ಹಿಂದುತ್ವವನ್ನು ಮಾತನ್ನು ಮಾತಾಡಿ ಮುಸ್ಲಿಮರಿಗೆ ಸಹಾಯ ಮಾಡಿದ ಕಪಟ ನಾಟಕ ಸೂತ್ರದಾರ ಈ ಗಾಂಧಿ..!!

ಟೈಮ್ : ನಿಮ್ಮ ಪ್ರಕಾರ ಗಾಂಧಿ ಸತ್ತಾಗಲೂ ಹೇ ರಾಮ್ ಎನ್ನುವ ಮಾತನ್ನು ಹೇಳಲಿಲ್ಲವೆಂದೇ?

ಗೋಡ್ಸೆ: ಇಲ್ಲ ಗಾಂಧಿ ಹೇ ರಾಮ್ ಎನ್ನುವ ಮಾತನ್ನು ಹೇಳಿಲ್ಲ.!! ಒಂದು ಸಲ ಯೋಚಿಸಿ ಇದು ಒಂದು ಸ್ವಯಂ ಚಾಲಿತ ಪಿಸ್ತೂಲ್. ಅದರಲ್ಲಿ 9 ಗುಂಡನ್ನು
ಹಾಕಬಹುದಿತ್ತು ಆದರೆ ಅದರಲ್ಲಿದ್ದುದು 7 ಗುಂಡುಗಳನ್ನು ಆ ಸಮಯದಲ್ಲಿ ಹೊಂದಿತ್ತು. ಅದೇ ಸಮಯದಲ್ಲಿ ಗಾಂಧಿ ಬಂದರು. ಆಗ ಗೋಡ್ಸೆ ತನ್ನ ಕೈಯಲ್ಲಿದ್ದ
ಪಿಸ್ತೂಲನ್ನು ಯಾರಿಗೂ ಕಾಣದಂತೆ ಮುಚ್ಚಿಟ್ಟನು. ಅದೇ ಸಮಯದಲ್ಲಿ ಗಾಂಧಿಯ ಹತ್ತಿರ ಒಬ್ಬ ಹುಡುಗಿ ನಿಂತಿದ್ದಳು. ಅವಳಿಗೆ ಯಾವುದೇ ರೀತಿ ತೊಂದರೆ
ಆಗಬಾರದು ಎಂದು ಆಕೆಯನ್ನು ಆಚೆಗೆ ದೂಡಿ ಗಾಂಧಿಗೆ ಗುಂಡಿಕ್ಕಿದನು ಎಂದು ಗೋಡ್ಸೆ ಹೇಳಿದರು. ಒಂದು ಸೆಕೆಂಡ್ ಅಲ್ಲಿ ಅದೆಲ್ಲಾ ನಡೆಯಿತು. ಆ ಸಮಯದಲ್ಲಿ ಯಾವುದೇ ಕಾರಣಕ್ಕೂ ಹೇ ರಾಮ್ ಎನ್ನುವ ಮಾತನ್ನು ಹೇಳಲಿಲ್ಲ. ಎಲ್ಲಾ ನಾಟಕ ಮಾಡುತ್ತಿದ್ದಾರೆ ಅಷ್ಟೆ!!…

ಟೈಮ್: ಗಾಂಧಿಯವರನ್ನು ಶತಮಾನದ ಟೈಮ್ಸ್‍ನ ವ್ಯಕ್ತಿ ಎಂದು ನಾಮಕರಣ ಮಾಡಬೇಕೆಂದು ಅನೇಕರು ಯೋಚಿಸುತ್ತಾರೆ.!!

ಗೋಡ್ಸೆ: ನಾನು ಆತನನ್ನು ಭಾರತದ ಹಿಂದೂಗಳಲ್ಲಿ ಅತ್ಯಂತ ಕ್ರೂರಿ ಎಂದು ಪರಿಗಣಿಸುತ್ತೇನೆ. ಆದರೆ ಈಗ ನಾನು ಆತನಿಗೆ ಹೇಗೆ ಹೇಳಲಿ ನೀನು ಕ್ರೂರಿ ಎಂದು? ಈಗ ಗಾಂಧಿ ಇಲ್ಲವಲ್ಲವೇ?

ಟೈಮ್: ಗಾಂಧಿಯವರು ಸಾಯಬೇಕು ಎಂದು ನೀವು ಏಕೆ ಬಯಸುತ್ತೀರಿ?

ಗೋಡ್ಸೆ: ಅವರು ಯಾವಾಗಲೂ ಹಿಂದೂಗಳಿಗೆ ಸಲಹೆ ನೀಡುತ್ತಿದ್ದರು… ನೀವು ಎಂದಿಗೂ ಮುಸ್ಲಿಮರೊಂದಿಗೆ ಕೋಪಗೊಳ್ಳಬಾರದು ಎಂದು.!!! ಇದು ಯಾವ ರೀತಿಯ ಅಹಿಂಸತ್ತ್ವ ಅಲ್ಲವೇ? ಅವರ ಶಾಂತಿ ತತ್ವ ನಕಲಿಯಾಗಿತ್ತು.!! ಯಾಕೆ ಇವನನ್ನು ಕೊಲ್ಲಬೇಕು ಎಂದರೆ ಒಂದು ಸ್ವತಂತ್ರ ದೇಶದಲ್ಲಿ ಹಿಂದುಗಳನ್ನು ಕೊಲ್ಲಲು ಮುಸ್ಲಿಮರಿಗೆ ಪ್ರೇರೇಪಣೆ ಕೊಡುತ್ತಿದ್ದ ವ್ಯಕ್ತಿ ಆತ.!!

ಟೈಮ್: ಆದರೆ ಗಾಂಧಿ ತತ್ವದ ಪ್ರಕಾರ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ತೋರಿಸು ಎಂದಲ್ಲವೇ? ಇವರ ಯೋಚನೆ ಒಬ್ಬ ಹಿಂಸಾಚಾರವನ್ನು
ನಿಲ್ಲಿಸಿದರೆ ಅಲ್ಲಿಗೆ ಶಾಂತಿಯನ್ನು ಕಾಪಾಡುತ್ತದೆ ಎನ್ನುವ ಉದ್ಧೇಶ ಆಗಿರಬಹುದಲ್ಲವೇ?

ಗೋಡ್ಸೆ: ಆದರೆ ಪ್ರಪಂಚ ಆ ರೀತಿ ಯೋಚಿಸಲಿಲ್ಲವಲ್ಲ.!!

ಟೈಮ್: ನೀವು ಯಾವ ವಿಷಯಕ್ಕಾದರೂ ಗಾಂಧಿಯಲ್ಲಿ ಪ್ರಶಂಸಿಸುವ ವ್ಯಕ್ತಿತ್ವ ಇದೆಯೇ?

ಗೋಡ್ಸೆ: ಮೊದಲನೆಯದಾಗಿ ಗಾಂಧೀಜಿಯವರು ಸಾಮೂಹಿಕ ಜಾಗೃತಿ. ನಮ್ಮ ಶಾಲಾ ದಿನಗಳಲ್ಲಿ ಗಾಂಧಿಯ ವಿಗ್ರಹವಿತ್ತು. ಎರಡನೆಯದಾಗಿ ಅವರು ಸೆರಮನೆಯ ಭಯವನ್ನು ತೆಗೆದು ಹಾಕಿದ್ದರು. !!ಯಾರು ಕಳ್ಳತನ ಮಾಡುತ್ತಾರೋ ಮತ್ತು ಅಸಹಕಾರ ಮಾಡುತ್ತಾರೋ ಅಂತವರು ಮಾತ್ರ ಜೈಲಿಗೆ ಹೋಗಿ ನಾಚಿಕೆ ಪಡಬೇಕು ಎಂದರು!!. ಯುವಕರಾಗಿದ್ದ ನಮಗೆ ಇಂತಹ ಮಾತುಗಳಿಂದ ಉತ್ಸಾಹವನ್ನು ತುಂಬಿದ್ದರು.

ಟೈಮ್: ಅವರ ಅಹಿಂಸಾ ತತ್ವವನ್ನು ಮೆಚ್ಚಿದ್ದೀರಾ?

ಗೋಡ್ಸೆ: ಅಹಿಂಸೆ ಒಂದು ತತ್ವವಲ್ಲ.!! ಅದನ್ನು ಗಾಂಧಿಯೇ ಅನುಸರಿಸಲಿಲ್ಲ.!! ರಾಜಕೀಯದಲ್ಲಿ ಯಾರಿಗೂ ಅಹಿಂಸಾ ತತ್ವವನ್ನು ಅನುಸರಿಸಲಾಗುದಿಲ್ಲ!!. ನೀವು ಇಲ್ಲಿ ಪ್ರಾಮಾಣಿಕತೆಯನ್ನು ತೋರಿಸಲು ಸಾಧ್ಯವಿಲ್ಲ. ಪ್ರತೀ ಕ್ಷಣ ನೀವು ಸುಳ್ಳನ್ನು ಹೇಳಲೇ ಬೇಕು.!! ಪ್ರತೀ ಕ್ಷಣವೂ ನಿಮ್ಮ ಕೈಲ್ಲಿ ಪಿಸ್ತೂಲನ್ನು ಹಿಡಿದುಕೊಳ್ಳಿ ಕೆಲವರನ್ನು ಸಾಯಿಸಿ ಎಂದು ಹೇಳಲೇ ಬೇಕು. ಇಲ್ಲಿ ನಮಗೆ ತಿಳಿದು ಬರುತ್ತದೆ ಗಾಂಧಿ ಒಬ್ಬ ಕಪಟ ಎಂದು.. ಅವರ ಅಹಿಂಸಾ ತತ್ವ ಎಂದಾದರೂ ಅನುಸರಿಸಲು ಸಾಧ್ಯವಾಯಿತೇ? ಕನಿಷ್ಟ ಈಗಲಾದರೂ ಅನುಸರಿಸುತ್ತಿದ್ದಾರೆಯೇ? ಕೇವಲ ಹಿಂದೂಗಳನ್ನು ಮೋಸಗೊಳಿಸಲು ಈ ತತ್ವವನ್ನು ಹಿಂದುಗಳಿಗೆ ಪಾಲಿಸುವಂತೆ ಬೋಧಿಸಿದರು. ಆದರೆ ಆತ ಮಾಡಿದ್ದೇನು? ಬೆನ್ನಿಗೆ ಚೂರಿ ಹಾಕಿದ ಮನುಷ್ಯ ಈ ಗಾಂಧಿ!!

ಟೈಮ್: ಗಾಂಧಿಯನ್ನು ಕೊಲ್ಲಬೇಕಾದರೆ ನಿಮಗೆ ಕಷ್ಟದ ವಿಷಯ ಯಾವುದಾಗಿತ್ತು?

ಗೂಡ್ಸೆ: ನಮ್ಮ ಜೀವನವನ್ನು ಬಿಟ್ಟು ಬಿಡುವುದು ಅಥವಾ ನಮ್ಮನ್ನು ಗಲ್ಲಿಗೇರಿಸುವುದು ನಮಗೆ ಅದು ದೊಡ್ಡ ಅಡಚಣೆಯಲ್ಲ. ಯಾವಾಗ ಸರಕಾರ ಮತ್ತು
ಸಾರ್ವಜನಿಕರಿಂದ ಗಾಂಧಿಯನ್ನು ಕೊಂದಿರುವುದಕ್ಕೆ ಖಂಡಿಸಲ್ಪಡುತ್ತೇವೋ ಆಗ ಮಾತ್ರ ತುಂಬಾ ನೊಂದಿದ್ದೆವು. ಯಾಕೆಂದರೆ ನಮ್ಮ ದೇಶಕ್ಕೆ ರಾಷ್ಟ್ರಪಿತ ಎಂದು ಕರೆಸಿಕೊಳ್ಳುವ ಗಾಂಧಿ ಎಷ್ಟು ದೇಶಕ್ಕೆ ಹಾನಿ ಮಾಡಿದ್ದಾರೆ ಎಂದು ನಮ್ಮ ಭಾರತೀಯ ಜನಗಳಿಗೆ ಅರಿವಿಲ್ಲ.!! ಸಾಮಾನ್ಯ ಮನುಷ್ಯರನ್ನು ಹೇಗೆ ಮೋಸಗೊಳಿಸಿದರು ಎಂಬ ಅರಿವೂ ಅವರಿಗೆ ಇರಲಿಲ್ಲ.!!

ಟೈಮ್: ಜನರು ನಿಮ್ಮನ್ನು ಖಂಡಿಸಿದ್ದಾರೆಯೇ?

ಗೋಡ್ಸೆ: ಹೌದು ಜನರು ನನ್ನನ್ನು ಖಂಡಿಸಿದ್ದಾರೆ. ಯಾಕೆಂದರೆ ಅವರಿಗೆ ಸತ್ಯದ ಅರಿವಿರಲಿಲ್ಲ.!! ಸಾಮಾನ್ಯ ಜನರ ಮನಸ್ಸಿನಲ್ಲಿ ಅಜ್ಞಾವನ್ನೇ ತುಂಬಿದ್ದರು.

ಭಾರತದ ರಾಷ್ಟ್ರಪಿತನಾಗಿ ಇಡೀ ದೇಶಕ್ಕೆ ಯಾವ ರೀತಿ ಮೋಸ ಮಾಡಿದ್ದಾರೆ ಎಂದು ಈಗಲಾದರೂ ತಿಳಿಯಿತೇ? ಹಿಂದುತ್ವದ ಮಂತ್ರ ಹೇಳಿಕೊಂಡು ಮುಸ್ಲಿಮರಿಗೆ ದೇಶ ವಿಭಜನೆಯಲ್ಲಿ ಕುಮ್ಮಕ್ಕು ನೀಡಿದ ಗಾಂಧಿಯನ್ನು ನಾವು ರಾಷ್ಟ್ರಪಿತ ಎಂದು ಕರೆಯಲು ಹೇಗೆ ಸಾಧ್ಯ…? ಏನೂ ಮಾಡದೆ ಕುಳಿತ ಗಾಂಧಿಗೆ ಸ್ವಾತಂತ್ರ್ಯ ಸಿಕ್ಕಿದ್ದು ಇವರಿಂದ ಅಂದರೆ ದೇಶಕ್ಕಾಗಿ ಹೋರಾಟ ಮಾಡಿದ ಅದೆಷ್ಟೋ ವೀರರಿಗೆ ನಾವು ಮಾಡುವ ಮೋಸ ಬೇರೊಂದಿಲ್ಲ ಅಷ್ಟೆ…

Source :Original Link – Read Here / sanskrithimagazine

-ಶೃಜನ್ಯಾ

Tags

Related Articles

Close