ಅಂಕಣ

ಗೋಧ್ರಾ ಗಲಭೆಯಲ್ಲಿ ನರೇಂದ್ರ ಮೋದಿಯನ್ನು ಗುರಿಯಾಗಿಸಿದ್ದ ರಣಹದ್ದುಗಳು ಈಗ ಇನ್ನೊಬ್ಬರನ್ನು ಗುರಿಯಾಗಿಸಿ ವಿರೋಧಿಸುತ್ತಿದೆ! ಅವರ ಹೊಸ ‘ಗುರಿ’ ಯಾರು ಗೊತ್ತೇ?!

ಗೋಧ್ರಾ ಗಲಭೆ ಆಗಿದ್ದೇ ಆಗಿದ್ದು, ಒಂದಷ್ಟು ಮಾಧ್ಯಮಗಳು ಹಾಗೂ ರಣಹದ್ದುಗಳು ಅಂದು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಬೆನ್ನನ್ನು 2002 ರಿಂದ 2014 ರ ವರೆಗೂ ಹಿಡಿದು ಕುಕ್ಕಿದ್ದೇ ಕುಕ್ಕಿದ್ದು! ಕುಕ್ಕಿ ಕೊಕ್ಕು ಮುರಿಯಿತೇ ವಿನಃ ನರೇಂದ್ರ ಮೋದಿಯವರು ತಾವ ಸೊಪ್ಪೂ ಹಾಕಲಿಲ್ಲ.!! ಗೋಧ್ರಾ ಗಲಭೆಯ ಬಗ್ಗೆ ಮೋದಿ ಯಾಕೆ ಮಾತನಾಡಲಿಲ್ಲ ಎಂದೆಲ್ಲ ಪ್ರಶ್ನಿಸಿದ ಮಾಧ್ಯಮಗಳಿಗೆ ಮೋದಿಯೇ ವಿಲನ್ ಆಗಿ ಕಂಡು, ಅವರ ಮೇಲೆ ದಾವೆಯನ್ನೂ ಹೂಡಿ, ಕೊನೆಗೆ ನ್ಯಾಯಾಲಯ ಅಂತಿಮವಾಗಿ ಕ್ಲೀನ್ ಚಿಟ್ ನೀಡಿದ್ದು ಗೊತ್ತೇ ಇದೆ!!! ಆದರೆ, ಈಗ ಅದೇ ಮಾಧ್ಯಮಗಳು ಮೋದಿಯವರ ಸಂದರ್ಶನಕ್ಕಾಗಿ ಕಾಯುತ್ತಾ ಇದೆ!

ಒಂದಷ್ಟು ಮಾಧ್ಯಮಗಳು ‘ಜಾತ್ಯಾತೀತ’ವಾದ ಸುದ್ದಿ ವಾಹಿನಿ ಎಂದು ಬಿಂಬಿಸಿಕೊಂಡರೂ ಸಹ, ಕೊನೆಗೆ ಹಿಂದೂ ವಿರೋಧಿಯಾಗಿ ಹಾಗೂ ರಾಷ್ಟ್ರದ್ರೋಹಿಯಾಗಿ ಅಂತ್ಯ ಕಂಡವಷ್ಟೇ! ಜಾತ್ಯಾತೀತ ರಾಷ್ಟ್ರ ಮಾಡುತ್ತೇನೆಂದು ಹೊರಟ ಯಾವ ಮಾಧ್ಯಮದವನೂ ಸಹ ಇವತ್ತು ‘ಸಿಕ್ಯುಲರ್’ ಆದನೇ ಹೊರತು ಸೆಕ್ಯುಲರ್ ಅಲ್ಲವೇ ಅಲ್ಲ ಬಿಡಿ!

ಯಾವಾಗ ಅತಿರೇಕವೆನ್ನುವಷ್ಟು ಸುಳ್ಳು ಸುದ್ದಿಗಳು ಹಬ್ಬತೊಡಗಿದವೋ, ಸಮಾಜದಲ್ಲಿ ಸುಳ್ಳೆಂಬುದೇ ಸತ್ಯವೆನಿಸಿಕೊಳ್ಳತೊಡಗಿತೋ, ಆಗ postcard.news
ಎನ್ನುವ ಸುದ್ದಿವಾಹಿನಿಯೊಂದು ಹುಟ್ಟಿತು. ಬರೀ ಸುದ್ದಿಯನ್ನು ಪ್ರಚುರಪಡಿಸುವುದೊಂದೇ ಅಲ್ಲ, ಬದಲಾಗಿ ಸತ್ಯಾಸತ್ಯತೆ ಅರಿತು ಸಿದ್ಧಾಂತಗಳ ಮೇಲೆ ಹುಟ್ಟಿದ
postcardnews ಗೆ ಹೆಮ್ಮೆಯಿದೆ! ಹೌದು! ದೇಶದ ಹಿತಾಸಕ್ತಿಯ ಬಗ್ಗೆ, ರಾಷ್ಟ್ರೀಯತೆಯ ಬಗ್ಗೆ ಹಾಗೂ ಧರ್ಮದ ಸಿದ್ಧಾಂತಗಳ ನಂಬಿ ನಡೆವ ಸುದ್ದಿ ವಾಹಿನಿ
ಎಂಬ ಹೆಮ್ಮೆ! ಇದೊಂದೇ ಕಾರಣ ಸಾಕಾಯ್ತು, ಕೆಲವು ಮಾಧ್ಯಮಗಳ ನಾಮಕರಣ ಕಾರ್ಯಕ್ರಮಕ್ಕೆ! ನಮ್ಮನ್ನು ಬಲಪಂಥದವರೆಂದರು! ಅದನ್ನು ನಾವು ‘ಗೌರವ ಸೂಚಕ’ ಎಂದು ಸ್ವೀಕರಿಸಿದೆವು! ಆದರೆ, ಇದರಿಂದ ಸ್ವತಃ ಸೆಕ್ಯುಲರ್ ಮಾಧ್ಯಮಗಳೇ ಒಪ್ಪಿಬಿಟ್ಟವು!! ‘ದೇಶಭಕ್ತಿ’ ಇರುವುದು ಕೇವಲ ‘ಬಲಪಂಥ’ದಲ್ಲಿಯೇ ಎಂದು!!

ನಮ್ಮ ಸುದ್ದಿವಾಹಿನಿಗೆ ಅದೆಷ್ಟೋ ಹಣ ಹರಿದು ಬರುತ್ತೆ ಅಂತೆಲ್ಲ ಕಲ್ಪನಾಲೋಕದಲ್ಲಿ ವಿಹರಿಸಿ ಬೊಗಳೆ ಕೊಚ್ಚಿದರಷ್ಟೇ ಈ ತಿರುಬೋಕಿಗಳು! ಆದರೆ, ಇವತ್ತಿಗೂ
ಸಹ,ಯಾವುದೇ ರಾಜಕೀಯ ವ್ಯಕ್ತಿಯಿಂದಲೂ ಹಣ ತೆಗೆದುಕೊಳ್ಳದೇ ಇರುವ ಏಕೈಕ ಸುದ್ದಿವಾಹಿನಿಯಿದು..! ಉಳಿದೊಂದಿಷ್ಟು ಮಾಧ್ಯಮಗಳು ತಮ್ಮ ಸ್ವತ್ತು
ಹೆಚ್ಚಿಸಿಕೊಳ್ಳಲು ದುಡ್ಡು ತೆಗೆದುಕೊಂಡು ಪರದೆಯ ಮೇಲೆ ಇಲ್ಲದೇ ಇರೋ ಸತ್ಯಗಳನ್ನೆಲ್ಲ ಹೇಳಿದ ಪರಿಣಾಮ ಎಲ್ಲರೂ ಹಾಗೆಯೇ ಅಂದುಕೊಂಡದ್ದರಲ್ಲಿ ತಪ್ಪಿಲ್ಲ ಬಿಡಿ! ಆದರೆ, ಅದೆಷ್ಟೇ ಆರೋಪ ಮಾಡಿದರೂ ಸಹ ಸರಿಯಾದ ಸಾಕ್ಷಿ ಕೊಡಲಿಕ್ಕಾಗದೆಯೇ ಸೋತಿದ್ದರು!

ರಾಣಾ ಅಯ್ಯುಬ್ ನಿಂದ ಬರ್ಖಾ ದತ್ತಳ ತನಕ ಎಲ್ಲರೂ ಸಹ ಮೋದಿಯನ್ನು ತೆಗಳೇ ತಮ್ಮ ಭವಿಷ್ಯ ರೂಪಿಸಿಕೊಂಡವರಷ್ಟೇ! ‘ಪೇಯ್ಡ್ ಮೀಡಿಯಾ’ ಕ್ಕೆ ಬೊಗಳುವವರು ಬೇಕಿತ್ತು! ಬರ್ಖಾ ದತ್ ಸಿಕ್ಕಳು! ಮಜಾ ಅಂದ್ರೆ ಈಗವರೇ postcard news ನನ್ನು ಗುರಿಯಾಗಿಸಿ ಊಳಿಡುತ್ತಿರುವುದಷ್ಟೇ!!!!

ನಾವೇನು ಮಾಡಿಲ್ಲ ಸ್ವಾಮಿ!!!!

ಹಾ! ನಾವೇನೂ ಮಾಡಿಲ್ಲ! ನಾವು ಹೇಗೆ ಭಾರತೀಯ ಸುದ್ದಿ ವಾಹಿನಿಗಳು ನಂಬಲಿಕ್ಕೆ ಯೋಗ್ಯವಾಗದೇ ಇರುವಂತಹ ಸ್ಥಿತಿಯನ್ನು ಮುಟ್ಟಿದೆ ಹಾಗೂ ಜಗತ್ತಿನಲ್ಲಿ ಎಷ್ಟನೇ ಸ್ಥಾನದಲ್ಲಿ ಕುಖ್ಯಾತಿ ಪಡೆದಿದೆ ಎಂದೂ ಹಾಗೇ, ಇಂತಹ ಕುಖ್ಯಾತಿಗೆ ಸಹಾಯ ಮಾಡಿದ ಒಂದಷ್ಟು ಮಾಧ್ಯಮದವರ ಹೆಸರನ್ನು ಹಾಕಿದ್ದಷ್ಟೇ! ತಗಳ್ರಪಾ! ಶುರುವಾಯ್ತು ನೋಡಿ ನಾಯಿ ಬೊಗಳೋ ಶಬ್ದ!! ಫೇಕು ನ್ಯೂಸ್ ಅಂತೆಲ್ಲ ಹರಿಹಾಯ್ದು, ತಮ್ಮ ಟೀವಿನಲ್ಲೆಲ್ಲ ಬಿಟ್ಟಿ ಪ್ರಚಾರ ಕೊಟ್ಟು ಸಹಕರಿಸಿದರು ನಮಗೆ!!!!

ಇವತ್ತೂ ಕೂಡ, ‘World Economic Forum’ ನ ಟ್ವೀಟ್ ನಿಮಗೆ ಲಭ್ಯವಿದೆ! ಅದರ ಸಮೀಕ್ಷೆಯ ಬಗ್ಗೆಯೂ ಲಭ್ಯವಿದೆ! ಜೊತೆಗೆ, ನಮ್ಮ ಲೇಖನವೂ ಲಭ್ಯವಿದೆ!!!!

ಆದರೆ, ಶಶಿ ತರೂರ್, ರಾಣಾ ಅಯ್ಯುಬ್, ಬರ್ಖಾ ದತ್ ಎಂಬ ಮೋದಿ ವಿರೋಧಿಗಳು ಮೋದಿಯನ್ನಂತೂ ಬಿಡಲಿಲ್ಲ, ನಂತರದ ಗುರಿ ನಾವಾದೆವು ಅಷ್ಟೇ!

ಬರೀ ಅವರೊಂದೇ ಅಲ್ಲ!!!

ಹಾ! ಕರ್ನಾಟಕದಲ್ಲಿಯೂ ಸಹ, ನಾವೆಲ್ಲಿ ತಿರುಪೆ ಎತ್ತುವ ಎಡಪಂಥೀಯರ ಬಗ್ಗೆ, ಸಿದ್ಧಾಂತಗಳ ಬಗ್ಗೆ, ಒಂದಷ್ಟು ‘ಪೇಯ್ಡ್ ಪೀಪಲ್’ ರವರ ಬಗ್ಗೆ ಅಪರೋಕ್ಷವಾಗಿಯೇ ಪ್ರಶ್ನಿಸಿದೆವೋ, ಅಲ್ಲಿಂದ ಶುರುವಾಯ್ತು ಕರ್ನಾಟಕದ ಸೆಕ್ಯುಲರ್ ಗಳೆಂಬ ರಣಹದ್ದುಗಳ ಹಾರಾಟ!!! ಇವರೂ ಮೋದಿಯನ್ನು ವಿರೋಧಿಸಿದವರೇ!!!! ಆಹಾ! ಬೂದುಗುಂಬಳದ ಕಾಯಿ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವಂತೆ ಉರಿ ಬಿತ್ತು ಒಂದಷ್ಟು ಎಡಪಂಥೀಯರಿಗೆ!!!

ಸಮಾಧಾನವಿದೆ ನಮಗೆ! ನಮಗೆ ಬಯ್ಯುವುದರಿಂದ, ವಿರೋಧಿಸುವುದರಿಂದ ಅವರಿಗೊಂದಿಷ್ಟು ಹೊಟ್ಟೆಗೆ ಹಿಟ್ಟು ಸಿಗುವುದೇ ಆದರೆ, ನಮಗೆ ಖುಷಿಯೇ!!! ಅವರು ಕಲ್ಪನಾಲೋಕದಲ್ಲಿಯೇ ವಿಹರಿಸುತ್ತಾ ಕೂರಲಿ ಬಿಡಿ! ಅಭ್ಯಂತರವಿಲ್ಲ!!!

ಯಾವಾಗ ಒಂದಷ್ಟು ಮಾಧ್ಯಮಗಳು, ಸೈನಿಕರ ಕೆನ್ನೆಗೆ ಬಾರಿಸಿದವರನ್ನು ಬೆಂಬಲಿಸಿದವೋ, ನಾವು ವಿರೋಧಿಸಿದ್ದೇವೆ! ಯಾವಾಗ, ರಾಷ್ಟ್ರವಿರೋಧಿಗಳನ್ನು ಬೆಂಬಲಿಸಿದರೋ, ಆಗಲೂ ನಾವು ವಿರೋಧಿಸಿದ್ದೇವೆ! ಯಾವಾಗ ಭಾರತದ ಸಂಸ್ಕ್ರತಿಯ ಬಗ್ಗೆ ಅವಹೇಳನ ಮಾಡಲು ಶುರು ಹಚ್ಚಿದರೋ, ಆಗಲೂ ನಾವು ವಾಸ್ತವ ವಿಷಯಗಳ ಮೂಲಕ ವಿರೋಧಿಸಿದ್ದೇವೆ! ಇದು ಪೋಸ್ಟ್ ಕಾರ್ಡ್ ನ್ಯೂಸ್”!! ಯಾವುದೋ ರಾಜಕೀಯದ ಬೊಗಳೆಯ ಬಾಯಿಯಲ್ಲ!

ಈ ಪೋಸ್ಟ್ ಕಾರ್ಡ್ ರಾಷ್ಟ್ರೀಯತೆ ಹಾಗೂ ದೇಶಭಕ್ತಿಯ ಸ್ಥಂಭಗಳ ಮೇಲೆ ನಿಂತಿದೆ!!! ನಾವು ಭಾರತದ ಅಭ್ಯುದಯಕ್ಕಾಗಿ, ರಾಷ್ಟ್ರದ ಹಿತಕ್ಕಾಗಿ, ಲೋಕ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ! ಅಲ್ಲದೇ, ಖಂಡಿತವಾಗಿಯೂ ನಾವು ಹಿಡಿದ ಕೆಲಸವನ್ನು ಪೂರ್ಣಗೊಳಿಸುತ್ತೇವೆಂಬ ನಂಬಿಕೆಯೂ ಇದೆ! ಹಠವೂ ಇದೆ!! ಯಾರ ತೆಗಳಿಕೆಗೂ ನಾವು ಬಗ್ಗುವವರಲ್ಲ! ಯಾರ ಹೊಗಳಿಕೆಗೂ ನಾವು ಬೀಗುವವರೂ ಅಲ್ಲ! ಕೇವಲ ರಾಷ್ಟ್ರ ಭಕ್ತರಷ್ಟೇ!!!

– ತಪಸ್ವಿ

Tags

Related Articles

Close