ಅಂಕಣ

ಚೀನಾವು ದೋಕ್ಲಾಮ್ ನಿಂದ ಹಿಂದೆ ಸರಿಯುವಂತೆ ಮಾಡಿದ ಮೋದಿಯ 56 ಇಂಚಿನ ಎದೆ!!! ರಕ್ಷಣಾ ವಿಶೇಷಜ್ಞರಿಂದ ಅದ್ಭುತ ವಿಶ್ಲೇಷಣೆ!!!

ದೋಕಲಂ ಗಡಿ ಪ್ರದೇಶವನ್ನು ಮುಂದಿಟ್ಟುಕೊಂಡು ಕಳೆದ ಎರಡು ತಿಂಗಳಿಂದ ಪರಸ್ಪರ ಎದುರುಬದುರಾಗಿ ನಿಂತುಕೊಂಡು ಸಂಘರ್ಷದ ವಾತಾವರಣ ಸೃಷ್ಟಿಸಿದ್ದ ಭಾರತ-ಚೀನಾ ರಾಷ್ಟ್ರಗಳ ಸೈನಿಕರು ಕೊನೆಗೂ ವಿವಾದಿತ ಪ್ರದೇಶದಿಂದ ಹಿಂದೆ ಸರಿದುಕೊಂಡಿದ್ದಾರೆ. ಒಂದರ್ಥದಲ್ಲಿ ಭಾರತದೆದುರು ಚೀನಾಕ್ಕೆ ಸೋಲಾಗಿದ್ದು, ಇಡೀ ವಿಶ್ವ ಸಮುದಾಯದ ಮುಂದೆ ಚೀನಾ ಮರ್ಯಾದೆ ಕಳೆದುಕೊಂಡಂತಾಗಿದೆ. ನರೇಂದ್ರ ಮೋದಿ ಸರಕಾರದ ರಾಜತಾಂತ್ರಿಕ ನಡೆಯ ಸ್ಪಷ್ಟ ಗೆಲವು ಎಂದೇ ಅರ್ಥೈಸಲಾಗುತ್ತದೆ. ಎರಡು ಶಕ್ತಿಶಾಲಿ ಪರಮಾಣು ರಾಷ್ಟ್ರಗಳು ಯುದ್ಧ ನಿರ್ಣಯದಿಂದ ಹಿಂದೆ ಸರಿದಿದ್ದು ಹೇಗೆ? ಚೀನಾ ತನ್ನ ಸೇನೆಯನ್ನು ವಾಪಸ್ ಕರೆಸಿದ್ದು ಯಾಕೆ? ಭಾರತ ಚೀನಾದ ಎದುರು ಯುದ್ಧ ಮಾಡದೆ ಗೆದ್ದುಕೊಂಡಿದ್ದು ಹೇಗೆ ಎಂಬೆಲ್ಲಾ ಬಗ್ಗೆ ವಿಶ್ಲೇಷಿಸೋಣ…
ಆರಂಭದಲ್ಲಿ ಮೋದಿ ಸರಕಾರ ದೋಕ್ಲಂ ಗಡಿ ಪ್ರದೇಶಕ್ಕೆ ಸೇನೆಯನ್ನು ರವಾನಿಸುವಾಗ ಎಡಚರು, ಎಪಮಾಧ್ಯಮಗಳು ಎಷ್ಟೆಲ್ಲಾ ತಮಾಷೆ ಮಾಡಿದ್ದರೆಂದರೆ ಇವರೆಲ್ಲಾ ಭಾರತೀಯರೇ ಎನ್ನುವಷ್ಟು ಮಟ್ಟಿಗೆ ಅವರ ಮೇಲೆ ವಾಕರಿಕೆ ಬರುವಂತಾಗಿತ್ತು. `ಫೇಕು ಮೋದಿ ಚೀನಾವನ್ನು ಎದುರು ಹಾಕಿಕೊಂಡು ಭಾರತವನ್ನು ಯಾವ ಗಂಡಾಂತರಕ್ಕೆ ತಂದುಬಿಟ್ಟ, ಈತನ ಭಕ್ತರು ಇನ್ನೂ ಮೋದಿಯ ಭಜನೆ ಮಾಡುತ್ತಿದ್ದಾರೆ… ಒಂದು ವೇಳೆ ಯುದ್ಧ ನಡೆದರೆ ಭಾರತ ಇನ್ನೂ ಹತ್ತು ವರ್ಷ ಹಿಂದಕ್ಕೆ ಸರಿಯುತ್ತದೆ…’ ಎಂದೆಲ್ಲಾ ಆಲಾಪಿಸುತ್ತಿದ್ದರು. ಆದರೆ ಇವರೆಲ್ಲರ ಪ್ರಲಾಪಗಳ ನಡುವೆಯೇ ಕೇಂದ್ರ ಸರಕಾರ ಚೀನಾದೊಡನೆ ಯುದ್ಧ ಮಾಡದೆ ವಿಜಯದುಂಧುಬಿಯನ್ನು ಬಾರಿಸಿದೆ.
ಚೀನಾ ಈ ಹಿಂದಿನಿಂದಲೂ ಕಾಲ್ಕೆರೆದು ಯುದ್ಧ ಮಾಡುವ ಚಾಳಿಯನ್ನು ಬೆಳೆಸಿಕೊಂಡಿದೆ. ತನ್ನ ಸುತ್ತಲಿನ ದೇಶದ ಜೊತೆ ಒಂದಲ್ಲಾ ಒಂದು ರೀತಿಯಲ್ಲಿ ಕಿರಿಕ್
ಮಾಡಿಕೊಂಡು ಯುದ್ಧಾತಂಕ ಸೃಷ್ಟಿಸುವ ಚೀನಾ ಭಾರತದ ಮೇಲೂ ಕಿರಿಕ್ ಮಾಡಿಕೊಂಡು ಬಂದಿತ್ತು. ಅದೇ ದೋಕ್ಲಂ ಗಡಿ ಬಿಕ್ಕಟ್ಟು. ದೋಕ್ಲಂ ಗಡಿಭಾಗದತ್ತ ಧಾವಿಸಿದ್ದ ಚೀನೀ ಸೈನಿಕರು ಅಲ್ಲಿ ರಸ್ತೆ ನಿರ್ಮಿಸಲು ಮುಂದಾಗಿದ್ದರು. ಚೀನಾದಲ್ಲದ ಜಾಗದಲ್ಲಿ ರಸ್ತೆ ನಿರ್ಮಿಸುವುದು ಸರಿಯಲ್ಲ, ಅಲ್ಲದೆ ಈ ನಿರ್ಮಾಣದಿಂದ ಭಾರತ ದೇಶಕ್ಕೆ ಅಪಾಯವಾಗುವ ಸಾಧ್ಯತೆಯೂ ಇತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಸೈನಿಕರು ಚೀನಾ ಸೈನಿಕರನ್ನು ತಡೆದಿದ್ದಲ್ಲದೆ, ಆ ಜಾಗದಲ್ಲಿ ತನ್ನ ತನ್ನ ಸೇನೆಯನ್ನು ನಿಯೋಜಿಸಿತ್ತು. ದೋಕ್ಲಂ ಗಡಿ ಭಾಗದಿಂದ ಸೇನೆಯನ್ನು ಹಿಂಪಡೆಯುವಂತೆ ಭಾರತದ ಮೇಲೆ ಚೀನಾ ಸಾಕಷ್ಟು ಒತ್ತಡ ಹೇರಿದರೂ, ಭಾರತ
ಮಾತ್ರ ಗಣನೆಗೆ ತೆಗೆದುಕೊಂಡಿರಲಿಲ್ಲ. ಕೊನೆಗೆ ಚೀನಾವೇ ತನ್ನ ಸೇನೆಯನ್ನು ಹಿಂಪಡೆಯುವ ನಿರ್ಧಾರಕ್ಕೆ ಬಂದ ಪರಿಣಾಮ ಭಾರತವೂ ತನ್ನ ಸೇನೆಯನ್ನು ವಾಪಸ್ ಪಡೆದುಕೊಂಡಿದೆ. ಇದರಿಂದ ಯುದ್ಧ ಕಾರ್ಮೋಡ ತಿಳಿಯಾದಂತೆ ಆಗಿದೆ.

ಭಾರತ ಸರಕಾರದ ದೃಢತೆ..!
ಪವರ್‍ಫುಲ್ ರಾಷ್ಟ್ರವೊಂದು ಒಂದು ದೇಶದ ವಿರುದ್ಧ ಸೆಟೆದುನಿಂತಿದೆ ಎಂದರೆ ಅದೊಂದು ಆತಂಕ ಪಡುವ ವಿಷಯವೇ ಆಗಿದೆ. ಅದೇ ರೀತಿ ಮಿಲಿಟರಿ ಶಕ್ತ ರಾಷ್ಟ್ರವಾದ ಚೀನಾ ಭಾರತದೆದುರು ಗುಟುರ್ ಹಾಕಿಕೊಂಡು ನಿಂತಿತ್ತು. ಯುದ್ಧ ಸಂಭವಿಸಿಬಿಡುತ್ತದೆ ಎಂದು ಎಲ್ಲರೂ ಆತಂಕಗೊಂಡಿದ್ದರು. ಭಾರತವನ್ನು ಹೆದರಿಸಲು ಚೀನಾ ಪ್ರಯೋಗಿಸಿದ್ದು ಸರಕಾರಿ ಸಾಮ್ಯದ ಪತ್ರಿಕೆಯನ್ನು. ತನ್ನ ಪತ್ರಿಕೆ ಗ್ಲೋಬಲ್ ಟೈಮ್‍ನಲ್ಲಿ ಭಾರತದ ವಿರುದ್ಧ ಯುದ್ಧ ನಡೆಸುವ ಬೆದರಿಕೆಯನ್ನು ಒಡ್ಡುತ್ತಲೇ ಬಂದಿತ್ತು. ಇದರಿಂದಾಗಿ ಎರಡೂ ರಾಷ್ಟ್ರಗಳ ನಡುವೆ ಯುದ್ಧದ ಕ್ಷಣಗಣನೆ ಆರಂಭಗೊಂಡಿತ್ತು. 1962ರ ಯುದ್ಧದ ಬಗ್ಗೆ ಪ್ರಸ್ತಾಪಿಸಿದ ಚೀನಾ ಭಾರತಕ್ಕೆ ಅದೇ ಸ್ಥಿತಿ ಬಂದೊದಗಲಿದೆ ಎಂದು ಬೆದರಿಸುತ್ತಿತ್ತು. ಭಾರತ ದೋಕ್ಲಂ ಭಾಗದಿಂದ ಸೇನೆಯನ್ನು ವಾಪಸ್ ಕರೆಸದಿದ್ದರೆ ಭಾರತವನ್ನು ಬಗ್ಗುಬಡಿಯುವುದಾಗಿ ಎಚ್ಚರಿಸುತ್ತಲೇ ಬರುತ್ತಿತ್ತು. ಆದರೆ ಭಾರತ ಚೀನಾದ ಯಾವ ಗೊಡ್ಡು ಬೆದರಿಕೆಗೂ ಸೊಪ್ಪು ಹಾಕಲೇ ಇಲ್ಲ.ಚೀನಾವು ಆರ್ಥಿಕವಾಗಿ ಶಕ್ತ ರಾಷ್ಟ್ರ. ಜೊತೆಗೆ ಅದರ ಮಿಲಿಟರಿ ಶಕ್ತಿಯೂ ಉತ್ತಮವಾಗಿದೆ. ಇದರ ಹೊರತಾಗಿಯೂ ಭಾರತ ತನ್ನ ಸೇನೆಯನ್ನು ವಾಪಸ್ ಕರೆಸದೆ ಚೀನಾಕ್ಕೆ ಸೆಡ್ಡು ಹೊಡೆಯಿತು. ದೋಕಲಂ ಗಡಿಭಾಗ ಭೂತಾನ್‍ಗೆ ಸೇರಿದ್ದಾದರೂ ಈ ಭಾಗ ಚೀನಾ ವಶವಾದರೆ ಮುಂದೆ ಭಾರತಕ್ಕೂ ಆತಂಕವಿದ್ದಿತ್ತು. ಸಿಕ್ಕಿಂನ ಮತ್ತೂಂದು ಭಾಗದಲ್ಲಿ ಚೀನ ರಸ್ತೆ ನಿರ್ಮಿಸುತ್ತಿದೆ. ಈಗಾಗಲೇ ರಸ್ತೆ, ರೈಲು ಯೋಜನೆಗಳ ನಿರ್ಮಾಣದಿಂದ ಟಿಬೆಟ್ ಮೂಲಕ ನೇಪಾಳದ ಗಡಿಯ ವರೆಗೆ ಬಂದಿದೆ.
ಸಿಕ್ಕಿಂ ಬಳಿಯಲ್ಲಿಯೇ ರಸ್ತೆ ಸಾಗಿ ಭೂತಾನ್ ಪ್ರವೇಶಿಸಿದರೆ ಕತೆ ಮುಗಿದಂತೆಯೇ. ವಿಶೇಷವಾಗಿ ದೇಶದ ಕೊರಳು ಎಂದು ಕರೆಯಿಸಿಕೊಂಡಿರುವ ಪ್ರದೇಶ ಪಶ್ಚಿಮ ಬಂಗಾಲದ ಸಿಲಿಗುರಿ ವ್ಯಾಪ್ತಿಗೆ ಬರುತ್ತದೆ. ಈ ಪ್ರದೇಶದ ಭೌಗೋಳಿಕ ವಿಸ್ತೀರ್ಣ ಕೇವಲ 17 ಕಿ.ಮೀ. ಅಗಲ. ಇಲ್ಲಿಂದ ಚುಂಬಿ ಕಣಿವೆ ಪ್ರದೇಶಕ್ಕೆ 50 ಕಿ.ಮೀ. ಈ ಕಿರಿಯ ಭೂ ಪ್ರದೇಶದ ಬಳಿಗೆ ಚೀನ ಸಂಪರ್ಕವಾದರೆ ಈಶಾನ್ಯ ರಾಜ್ಯಕ್ಕೆ ಮತ್ತಷ್ಟು ಬೆದರಿಕೆ ಬಂದಂತೆಯೇ ಸರಿ. ಚೀನ ವ್ಯಾಪ್ತಿಯಲ್ಲಿರುವ ಚುಂಬಿ ಕಣಿವೆಯವರೆಗೆ ಇರುವ ರಸ್ತೆಯನ್ನು ಭೂತಾನ್‍ನ ದೋಕಲಂವರೆಗೆ ವಿಸ್ತರಿಸಲು ಮುಂದಾಗಿತ್ತು. ಸಿಕ್ಕಿಂ ವ್ಯಾಪ್ತಿಯಲ್ಲಿ ಗಡಿ ತಂಟೆ ಇಲ್ಲದಿದ್ದರೂ ಪ್ರಸ್ತಾವಿತ ರಸ್ತೆ ಯೋಜನೆ ಪೂರ್ತಿಗೊಂಡರೆ ತಲೆನೋವು ಕಟ್ಟಿಟ್ಟ ಬುತ್ತಿ. ಸಮೀಪದಲ್ಲಿಯೇ ಇರುವಂಥದ್ದು ಡಾರ್ಜಿಲಿಂಗ್. ಕೆಲ ದಿನಗಳಿಂದ ಅಲ್ಲಿಯೂ ಸ್ಥಳೀಯ ಕಾರಣಗಳಿಗಾಗಿ ಪ್ರತಿಭಟನೆಗಳು ನಡೆಯುತ್ತಲೇ ಇದೆ. ಇಂಥ ಸಂದರ್ಭಗಳಲ್ಲಿ ನೆರೆಯ ರಾಷ್ಟ್ರದ ರಸ್ತೆ ಕಾಮಗಾರಿ ಶರವೇಗದಿಂದ ಮುಂದುವರಿದೀತು ಎಂದಾದರೆ ಎಷ್ಟು ಯೋಚಿಸಿದರೂ, ಅದು ಕಡಿಮೆಯೇ ಆಗಿ ಹೋದೀತು. ದೊಕ್ಲಾಮ್ ಪ್ರಸ್ತಭೂಮಿ 269 ಚದಕ ಕಿ.ಮೀ. ವ್ಯಾಪ್ತಿ ಇದ್ದು, ಅದನ್ನು ಚೀನ ತನ್ನದೆಂದು ಹೇಳಿಕೊಳ್ಳುತ್ತಿದೆ. ಏಕೆಂದರೆ ಈಶಾನ್ಯ ಭಾಗದ ಅರುಣಾಚಲ ಪ್ರದೇಶದ ಕೆಲವು ಭಾಗಗಳು ತನ್ನವು ಎಂದು ಹೇಳಿಕೊಳ್ಳುತ್ತಿದೆ. ಇದರ ವಿರುದ್ಧ ಭಾರತ ತೀವ್ರ ಪ್ರತಿಭಟನೆ ಮಾಡಿದ ಪರಿಣಾಮ ಚೀನಾ ಈ ದುಸ್ಸಾಹಸದಿಂದಲೂ ಹಿಂದೆ ಸರಿದಿತ್ತು. ದೋಕಲಂ ಗಡಿಭಾಗದಿಂದ ಅಪಾಯವನ್ನರಿತ ಭಾರತ ತರಾತುರಿಯಲ್ಲಿ ಸೇನೆಯನ್ನು ರವಾನಿಸಿ ಚೀನಾದ ರಸ್ತೆ ನಿರ್ಮಾಣ ಕಾರ್ಯಕ್ಕೆ ತಡೆ ನೀಡಿತು.

ಭಾರತದಿಂದ ರಾಜತಾಂತ್ರಿಕ ಒತ್ತಡ!!!
ಸೇನಾ ಹಸ್ತಕ್ಷೇಪ ನಡೆಸುವ ಚೀನಾದ ವರ್ತನೆಗೆ ಕಡಿವಾಣ ಹಾಕಲು ಭಾರತ ಮಿಲಿಟರಿ ಕಾರ್ಯಾಚರಣೆಗೆ ಮುಂದಾಗಿದ್ದರೂ, ಜಾಗತಿಕವಾಗಿ ರಾಜತಾಂತ್ರಿಕ ಒತ್ತಡ ಹೇರಿ ತನ್ನ ಕಾರ್ಯದಲ್ಲಿ ಯಶಸ್ವಿಯಾಗಿದೆ. ರಾಜತಾಂತ್ರಿಕ ಒತ್ತಡವೆಂದರೆ ಒಂದು ವೇಳೆ ಚೀನಾ ಭಾರತದೊಡನೆ ಯುದ್ಧ ಮಾಡಿದರೆ ಯಾವ ರಾಷ್ಟ್ರಗಳೂ ಚೀನಾದ ಪರವಾಗಿ ನಿಲ್ಲುವುದಿಲ್ಲ ಎಂದು ಅರ್ಥ. ಚೀನಾ ಎಷ್ಟೇ ಶಕ್ತಿಶಾಲಿ ರಾಷ್ಟ್ರವಾದರೂ ಬೇರೆ ಶಕ್ತಿಶಾಲಿ ರಾಷ್ಟ್ರಗಳು ಚೀನಾಕ್ಕೆ ಕೈಕೊಟ್ಟು ಭಾರತಕ್ಕೆ ಬೆಂಬಲ ನೀಡಿದರೆ ಭಾರತ ಅನಾಯಾಸವಾಗಿ ಚೀನಾವನ್ನು ಗೆದ್ದು ಬಿಡುತ್ತದೆ. ನರೇಂದ್ರ ಮೋದಿ ಒಂದು ವೇಳೆ ಯುದ್ಧ ನಡೆದಿದ್ದೇ ಆದರೆ ಯಾವ ರಾಷ್ಟ್ರಗಳೂ ಚೀನಾ ಪರ ನಿಲ್ಲದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ಚೀನಾ ಮಾಡುವ ತಪ್ಪುಗಳನ್ನು ಇಡೀ ಜಗತ್ತಿಗೆ ತೋರಿಸಿಕೊಡುವಲ್ಲಿ ಮೋದಿ ಯಶಸ್ವಿಯಾಗಿದ್ದರು. ಒಂದು ವೇಳೆ ಯುದ್ಧ ನಡೆದು ಚೀನಾಕ್ಕೆ ಸೋಲಾಗಬಹುದೆಂಬ ಭೀತಿಯಿಂದ ವಿವಾದಿತ ಪ್ರದೇಶದಿಂದ ತನ್ನ ಸೇನೆಯನ್ನು ವಾಪಸ್ ಪಡೆದುಕೊಂಡಿದೆ. ಚೀನಾ ಸೈನ್ಯ ವಾಪಸ್ ಪಡೆದಿರುವುದು ಮನವರಿಕೆಯಾಗುತ್ತಿದ್ದಂತೆ ಭಾರತವೂ ತನ್ನ ಪಡೆಯನ್ನು ವಾಪಸ್ ಪಡೆದುಕೊಂಡಿದೆ.
ಚೀನಾ ಹಾಗೂ ಜಪಾನ್ ಮೊದಲಿಂದಲೂ ಪರಸ್ಪರ ಶತ್ರುಗಳು. ಆದರೆ ಜಪಾನ್ ಭಾರತದ ಪರಮ ಮಿತ್ರ. ಜಪಾನ್ ಕೂಡಾ ಭಾರತ-ಚೀನಾ ಯುದ್ಧ ನಡೆದರೆ ತಾನು ಹಿಂದುಮುಂದು ನೋಡದೆ ಭಾರತವನ್ನು ಸ್ಪಷ್ಟವಾಗಿ ಬೆಂಬಲಿಸುತ್ತೇವೆ ಎಂದಿತು. ಇನ್ನು ಇಸ್ರೇಲ್ ಮತ್ತು ರಷ್ಯಾ ಕೂಡಾ ಪರೋಕ್ಷವಾಗಿ ಭಾರತವನ್ನು
ಬೆಂಬಲಿಸುವುದಾಗಿ ಹೇಳಿಕೊಂಡಿತು. ಇನ್ನು ಅಮೇರಿಕಾ ಚೀನಾದ ಮಿತ್ರ ರಾಷ್ಟ್ರ ಉತ್ತರ ಕೊರಿಯಾದ ಯುದ್ದೋನ್ಮಾದದ ಬಗ್ಗೆ ಚೀನಾಕ್ಕೆ ಎಚ್ಚರಿಕೆ ನೀಡಿತ್ತು. ಅಲ್ಲದೆ ಅಮೇರಿಕಾ ಹಿಂದಿನಿಂದಲೂ ಚೀನಾದ ವಿರುದ್ಧ ಅಸಮಾಧಾನ ಹೊಂದಿದೆ. ಇದೆಲ್ಲಾ ಚೀನಾಕ್ಕೆ ಏಕಾಂಗಿ ಎಂಬ ಭಾವನೆ ಮೂಡುವಂತೆ ಮಾಡಿತು.
ಚೀನಾದ ಮಹತ್ವಾಕಾಂಕ್ಷಿ ಯೋಜನೆಯಾದ ವನ್ ಬೆಲ್ಟ್ ವನ್ ರೋಡ್(ಔಃಔಖ) ಯೋಜನೆಯು ಚೀನಾದ ವಿಸ್ತರಣವಾದಿ ಧೋರಣೆಯನ್ನು ಹೊಂದಿದೆ ಎಂದು
ಹೇಳಿಕೊಂಡು ಯೋಜನೆಯಿಂದ ಭಾರತ ಹಿಂದೆ ಸರಿದಿದ್ದಷ್ಟೇ ಅಲ್ಲದೆ ಚೀನಾದ ಧೋರಣೆಯ ಬಗ್ಗೆ ಇತರ ರಾಷ್ಟ್ರಗಳಿಗೆ ಸೂಕ್ತ ಎಚ್ಚರಿಕೆಯನ್ನೂ ನೀಡಿತು. ಅಲ್ಲದೆ
ಅಮೇರಿಕಾ ಕೂಡಾ ಯುದ್ಧ ನಡೆದರೆ ಭಾರತದ ಪರವಾಗಿ ನಿಲ್ಲುವುದಾಗಿ ಹೇಳಿಕೊಂಡಿತು. ಹೀಗೆ ಪ್ರಪಂಚದ ಬಲಾಡ್ಯ ರಾಷ್ಟ್ರಗಳನ್ನು ತನ್ನ ಕಡೆ ತಿರುಗುವಂತೆ
ಮಾಡಿಕೊಳ್ಳಲು ನರೇಂದ್ರ ಮೋದಿ ಸಂಪೂರ್ಣವಾಗಿ ಯಶಸ್ವಿಯಾದರು.

ಇನ್ನು ಸೆಪ್ಟೆಂಬರ್ 3ರಂದು ಚೀನಾದಲ್ಲಿ ಬ್ರಿಕ್ಸ್ ಸಮ್ಮೇಳನ ನಡೆಯಲಿದ್ದು, ಇಲ್ಲಿ ಭಯೋತ್ಪಾದನೆ, ಆರ್ಥಿಕತೆ, ಸಂಶೋಧನೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ
ನಡೆಯಲಿದೆ. ಭಾರತ-ಚೀನಾ ಮಧ್ಯೆ ಗಡಿ ಸಮಸ್ಯೆ ಇರುವುದರಿಂದ ಮೋದಿ ಬ್ರಿಕ್ಸ್ ಸಮ್ಮೇಳನಕ್ಕೆ ಭಾಗವಹಿಸುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದರು. ಬ್ರಿಕ್ಸ್ ಸಮ್ಮೇಳನದಲ್ಲಿ ಭಾರತ ಗೈರಾದರೆ ಚೀನಾಕ್ಕೆ ಸಾಕಷ್ಟು ಇರಿಸುಮುರಿಸಾಗುತ್ತದೆ. ಇಂಥಾ ಬುದ್ಧಿವಂತಿಕೆಯ ಕ್ರಮಕೈಗೊಂಡ ಪರಿಣಾಮ ಚೀನಾ ಬಾಲಮುದುಡಿ ಕುಳಿತುಕೊಂಡಿದೆ.

ಆರ್ಥಿಕ ಒತ್ತಡ!!
ಚೀನಾ ಸಾಕಷ್ಟು ಉತ್ಪನ್ನಗಳನ್ನು ಭಾರತಕ್ಕೆ ರಫ್ತು ಮಾಡುತ್ತದೆ. ಆದರೆ ಭಾರತ ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಚಳುವಳಿ ಆರಂಭಿಸಿರುವುದು ಚೀನಾಕ್ಕೆ ದೊಡ್ಡ ಆರ್ಥಿಕ ಹೊಡೆತ ನೀಡಿತು. ಚೀನಾದಿಂದ ಭಾರತಕ್ಕೆ ಮುಖ್ಯವಾಗಿ 93 ಉತ್ಪನ್ನಗಳು ರಫ್ತು ಮಾಡಲಾಗುತ್ತಿದ್ದು, ಇದರ ವಿರುದ್ಧ ಭಾರತ ಆ್ಯಂಟಿ ಡಂಪಿಂಗ್ ಆಕ್ಟ್ ಮೂಲಕ ಪಾಠ ಕಲಿಸಿತು. ಚೀನಾ ಭಾರತದ ಜೊತೆ 51 ಬಿಲಿಯನ್ ಡಾಲರ್‍ನಷ್ಟು ವ್ಯವಹಾರ ಮಾಡುತ್ತಿದೆ. ಅಲ್ಲದೆ 60 ಬಿಲಿಯನ್ ಡಾಲರ್ ಕೆಲಸವನ್ನು ಚೀನಾ ಭಾರತದಲ್ಲಿ ಕೈಗೊಳ್ಳುತ್ತಿದೆ. ಆದರೆ ಚೀನಾ ಕಂಪೆನಿಗಳ ವಿರುದ್ಧ ಭಾರತ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿತು. ಜೊತೆಗೆ ಚೀನಾ ಮೊಬೈಲ್‍ಗಳ
ವಿಶ್ವಾಸಾರ್ಹತೆಯನ್ನು ದೃಢೀಕರಿಸುವಂತೆ ತಾಕೀತು ಮಾಡಿತು. ಜೊತೆಗೆ ಭಾರತದಲ್ಲಿ ಚೀನಾ ವಸ್ತುಗಳ ವಿರುದ್ಧ ಚಳುವಳಿ ಚೀನಾಕ್ಕೆ ಸಾಕಷ್ಟು ಒತ್ತಡ ಉಂಟಾಯಿತು.

ಪ್ರಭಾವ ಬೀರಿದ ಮಿಲಿಟರಿ ಅಂಶಗಳು!!
ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳ ಪೈಕಿ ಭಾರತವೂ ಒಂದು. ಭಾರತಕ್ಕಿಂತ ಚೀನಾ ಬಲಶಾಲಿಯಾಗಿದ್ದರೂ, ಚೀನಾವನ್ನು ಸೋಲಿಸಲೇಬೇಕೆಂದು ಭಾರತ ಸೇನೆ ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ನಿಂತಿತ್ತು. ಭಾರತದ ಮಿಲಿಟರಿ ಮುಖ್ಯಸ್ಥ ಬಿಪಿನ್ ರಾವತ್ ಸ್ವತಃ ದೋಕಲಂಗೆ ಭೇಟಿ ನೀಡಿದ್ದರು. ಚೀನಾ ಭಾರತವನ್ನು ಎಷ್ಟೇ ಹೆದರಿಸಿದರೂ ಭಾರತ ಮಾತ್ರ ತನ್ನ ಸೈನ್ಯವನ್ನು ಹೆಚ್ಚಿಸುತ್ತಲೇ ಹೋಗುತ್ತಿತ್ತು. ಜೊತೆಗೆ ಆ ಭಾಗಕ್ಕೆ ರಸ್ತೆ ನಿರ್ಮಿಸುವ ಕೆಲಸವನ್ನೂ ಭರದಿಂದ ಮಾಡುತ್ತಿತ್ತು. ಗಡಿಭಾಗದಲ್ಲಿ ಯದ್ಧ ಕವಾಯತು ಮಾಡಿ ತಾನೂ ಯುದ್ಧಕ್ಕೆ ಸಿದ್ಧ ಎಂಬ ಪರೋಕ್ಷ ಎಚ್ಚರಿಕೆಯನ್ನು ನೀಡಿತು. ಭಾರತ ಯಾವುದೇ ಮಾತನ್ನಾಡದೆ ಮೌನವಾಗಿಯೇ ಯುದ್ಧಸಿದ್ಧತೆಯಲ್ಲಿ ತೊಡಗಿರುವುದರಿಂದ ಚೀನಾಕ್ಕೆ ಯುದ್ಧದಲ್ಲಿ ಸೋಲಾಗಬಹುದೆಂದು ಚೀನಾದವರು ಭಯಪಟ್ಟರು.
ಟಿಬೆಟ್‍ನವರಿಗೆ ಚೀನಾ ಎಂದರೆ ಮೊದಲಿಂದಲೂ ಆಗಿಬರುವುದಿಲ್ಲ. ಭಾರತಕ್ಕೆ ಟಿಬೆಟ್‍ನವರು ರಸ್ತೆ ನಿರ್ಮಿಸಲು ಇತ್ಯಾದಿ ಕೆಲಸಕ್ಕೆ ಭಾರತಕ್ಕೆ ಸಹಾಯ
ಮಾಡುತ್ತಿದ್ದಾರೆ. ಯುದ್ಧ ನಡೆದರೆ ಟಿಬೆಟ್ ಭಾರತಕ್ಕೆ ಬೆಂಬಲ ನೀಡುವ ಎಲ್ಲಾ ಲಕ್ಷಣಗಳು ಗೋಚರಿಸಿತ್ತು. ಅಲ್ಲದೆ ಮಲಕ್ಕಾ ಜಲಸಂಧಿಯನ್ನು ಭಾರತ ಸೇನೆ
ತಡೆಯುವ ಕೆಲಸವನ್ನು ಮಾಡಿಕೊಂಡಿತ್ತು. ಇನ್ನು ಭಾರತ ಹಾಗೂ ಚೀನಾ ಗಡಿಭಾಗವನ್ನು ಹಂಚಿಕೊಂಡ ಪ್ರದೇಶವೆಲ್ಲಾ ಗುಡ್ಡ, ಹಿಮ, ಕಣಿವೆಗಳಿಂದ ಕೂಡಿದ್ದು, ಭಾರತ ಈ ಪ್ರದೇಶಶದಲ್ಲಿ ಸಲೀಸಾಗಿ ಯುದ್ಧ ಮಾಡುವ ಚಾಕಚಕ್ಯತೆಯನ್ನು ಹೊಂದಿದೆ. ಆದರೆ ಚೀನಾ ಸೈನಿಕರಿಗೆ ಈ ಭಾಗದಲ್ಲಿ ಯುದ್ಧ ಮಾಡುವುದೆಂದರೆ ಒಂದು ಕಠಿಣ ಸವಾಲಾಗಿರುವುದರಿಂದ ಚೀನಾ ಸರಕಾರ ಮೊದಲೇ ಭಯಪಟ್ಟಿತ್ತು. ಇದಕ್ಕೆ ಈ ಮುಂಚೆ ನಡೆದ ಘಟನೆಗಳೂ ಪ್ರಭಾವ ಬೀರಿದವು. ಭಾರತದ ಸ್ವಾತಂತ್ರ್ಯ ದಿನದಂದು ಎರಡೂ ಸೈನಿಕರು ಕೈ-ಕೈ ಮಿಸಲಾಯಿಸಿದ್ದು, ಈ ವೇಳೆ ನಮ್ಮ ಸೈನಿಕರು ತಕ್ಕ ಪಾಠ ಕಲಿಸಿದ್ದರು.
ಇನ್ನು ಭಾರತ ಸರಕಾರ ಬಹುಮತದಿಂದ ಗೆದ್ದ ಸರಕಾರವಾಗಿದ್ದು, ಮೋದಿ ಪರಿಣಾಮಕಾರಿ ಸರಕಾರ ನಡೆಸುತ್ತಿದ್ದಾರೆ. ಪ್ರಧಾನಿ ಮತ್ತು ರಕ್ಷಣಾ ಮುಖ್ಯಸ್ಥ ಬಿಪಿನ್
ರಾವತ್‍ನಿಂದ ಭಾರತದ ಮಿಲಿಟರಿ ಪಡೆ ಶಕ್ತಿಶಾಲಿಯಾಗಿ ಹೊರಹೊಮ್ಮುತ್ತಿದೆ. ಈ ಬಾರಿ ಯುದ್ಧ ಮಾಡಿದರೆ ಚೀನಾಕ್ಕೆ ಒಂದು ಗತಿ ಕಾಣಿಸಲೇಬೇಕೆಂದು ಭಾರತ ತಯಾರಾಗಿ ನಿಂತಿತ್ತು. ಆದರೆ ಭಾರತ ಯುದ್ಧ ಮಾಡಲಿಲ್ಲ. ಯುದ್ಧ ಮಾಡದೆ ಮೋದಿ ಚೀನಾವನ್ನು ಗೆದ್ದರು. ದೇಶದ ವಿದೇಶಾಂಗ ನೀತಿ. ಭಾರತದ ರಕ್ಷಣಾ ಇಲಾಖೆ, ಹಾಗೂ ಭಾರತದ ಪ್ರಧಾನಿ ಎಲ್ಲರ ನಡೆ ಭಾರತ ಚೀನಾ ಯುದ್ಧವಾಗುವುದನ್ನು ತಪ್ಪಿಸಿದೆ.

Tags

Related Articles

Close