ಪ್ರಚಲಿತ

ಟಿಪ್ಪುವಿನಿಂದಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಕಿಸ್ತಾನದಲ್ಲಿ ಪ್ರಧಾನಿಯಾನಿಯಾಗುವ ಸಾಧ್ಯತೆ ಇದೆಯಂತೆ!

ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಕಳೆದ ಎರಡು ವರ್ಷಗಳಲ್ಲಿ ಅದ್ದೂರಿಯಾಗಿ ನಡೆಸಿದ ಟಿಪ್ಪು ಜಯಂತಿ ಇದೀಗ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಇದರಿಂದ ಯಾರಿಗೆ ಎಷ್ಟು ಆರ್ಥಿಕ, ಧಾರ್ಮಿಕ , ರಾಜಕೀಯ ಲಾಭಗಳಾದವೋ ಗೊತ್ತಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ ಪಾಕಿಸ್ತಾನದಲ್ಲಿ ಜನಪ್ರಿಯತೆಗಳಿಸಿದ್ದಾರೆ.!! ಅವರನ್ನು ಅಲ್ಲಿನ ಪತ್ರಿಕೆಗಳು, ಟಿವಿ ಚಾನಲ್‍ಗಳು ಇವರನ್ನು ಹಾಡಿ ಹೊಗಳಲು ಪ್ರಾರಂಭಿಸಿವೆ. ಕರ್ನಾಟಕ ಸರಕಾರದ ಸಚಿವರು ತಮ್ಮ ತಮ್ಮ ಇಲಾಖೆಗಲ್ಲಿ ಪೋಟೋವನ್ನು ಇಟ್ಟು ಮಾಲಾರ್ಚನೆ, ಪುಷ್ಪಾರ್ಚನೆ ಮಾಡುತ್ತಿರುವ ಫೋಟೋಗಳನ್ನು ಪಾಕಿಸ್ತಾನದ ಪತ್ರಿಕೆಗಳು , ವೆಬ್ ಪೋರ್ಟಲ್‍ಗಳು ಪ್ರಕಟಿಸುತ್ತಿವೆ. ಭಾರತದ ಉಳಿದೆಲ್ಲವನ್ನೂ ನಖಶಿಖಾಂತ ದ್ವೇಷಿಸುವ ಕಿಚಾಯಿಸುವ ಅಣಕಿಸುವ ಪಾಕಿಸ್ಥಾನಿಗಳಿಗೆ, ದಕ್ಷಿಣದ, ಅದೂ ಮೈಸೂರನ್ನು ಆಳಿಕೊಂಡಿದ್ದ ಟಿಪ್ಪು ಅದು ಹೇಗೆ ಆದರ್ಶ ವ್ಯಕ್ತಿಯಾಗಿರುತ್ತಾನೆ ಎಂಬುವುದನ್ನು ನಾವು ತಿಳಿಯ ಬೇಕಾಗಿದೆ.

ಟಿಪ್ಪು ಸುಲ್ತಾನ್ ರಾತ್ರಿ ಬೆಳಗಾಗುವಷ್ಟರಲ್ಲಿ ದೇವರಾದ ರಾಜನಲ್ಲ! ಆತನನ್ನು ಫಿಕ್ಷನ್, ನಾನ್ ಫಿಕ್ಷನ್ ಕೃತಿಗಳು, ಪಠ್ಯ ಪುಸ್ತಕಗಳು , ಕಾದಂಬರಿಗಳು ಸೀರಿಯಲ್‍ಗಳು ಇವನನ್ನು ದೇವಮಾನವನಂತೆ ಬಿಂಬಿಸುವಂತೆ ಮಾಡಿದೆ ಅಷ್ಟೆ. ಅಫಘಾನಿಸ್ತಾನದ ಕಮ್ಯುನಿಸ್ಟ್ ನಾಯಕನಾದ ನೂರ್ ಅಹ್ಮದ್ ನೂರ್ 50ರ ದಶಕದಲ್ಲಿ ಒಂದು ಪುಸ್ತಕ ಬರೆದಿದ್ದ. ಇದರಲ್ಲಿ ಬರೆದದ್ದು ಈ ಟಿಪ್ಪು ಸುಲ್ತಾನನ ಕತೆ! ಕತೆ ಎಂದರೆ ಪಕ್ಕಾ ಸಿನಿಮಾ ಕತೆ ಇದ್ದ ತರಹ ಇದೆ. ಇದರಲ್ಲಿ ಟಿಪ್ಪುವನ್ನು ಅತಿಮಾನುಷ ವ್ಯಕ್ತಿಯಂತೆ ಚಿತ್ರಿಸಲಾಗಿದೆ. “ಟಿಪ್ಪು ಧೀರ ಯೋಧನಾಗಿದ್ದ, ಪ್ರಜೆಗಳನ್ನು ಈತ ಮಕ್ಕಳಂತೆ ಕಾಣುತ್ತಿದ್ದ. ರಾಜ್ಯ ಅವನ ಕಥೆಯಲ್ಲಿ ಸುಭೀಕ್ಷವಾಗಿತ್ತು, ಖುರಾನಿನ ಸ್ವರ್ಗದ ವಿವರಣೆಯನ್ನು ಹೋಲಿವಂತಿತ್ತು, ಆತ ಅಪ್ಪಟ ಮುಸ್ಲಿಮ್ ಆಗಿದ್ದ, ದಿನಕ್ಕೆ ಐದು ಬಾರಿಯಂತೆ ನಮಾಜು ಮಾಡುತ್ತಿದ್ದ, ಆತ ಜೀವಮಾನದಲ್ಲಿ ಒಮ್ಮೆಯೂ ಪ್ರಾರ್ಥನೆ ತಪ್ಪಿಸಲಿಲ್ಲ, ತನ್ನ ದೇಶವನ್ನು ಉಳಿಸಿಕೊಳ್ಳುವುದಕ್ಕಾಗಿ ಮಕ್ಕಳನ್ನು ಒತ್ತೆ ಇಡುವ ಸಂದರ್ಭಕ್ಕೂ ಹಿಂಜರಿದವನಲ್ಲ, ಅವನ ಕಾಲದಲ್ಲಿ ಆರ್ಥಿಕ ಸ್ಥಿತಿ ಉತ್ತಮಗೊಂಡಿತ್ತು” ಎಂದು ಸಾಲು ಸಾಲು ಸಂಗತಿಗಳನ್ನು ಈ ಕೃತಿಯಲ್ಲಿ ಬರೆಯಲಾಗಿದೆ. ಆ ನಂತರ ಬಂದ ಚರಿತ್ರೆಯ ಕೃತಿಗಳೆಲ್ಲಾ ಇದೇ ಬೊಗಳೆ ಸಂಗತಿಗಳು. ಇಲ್ಲಿನ ಪಠ್ಯ ಪುಸ್ತಕದಲ್ಲೂ ಇದೇ ರೀತಿಯ ಪಾಠವನ್ನು ನಾವೆಲ್ಲಾ ಕಲಿತು ಬಂದಿದ್ದೇವೆ ಅಲ್ಲವೇ? ಪಾಕಿಸ್ತಾನದ ಪಠ್ಯ ಪುಸ್ತಕದಲ್ಲೂ ಇದೇ ಕತೆ! ಭಾರತದಲ್ಲಿ ಮುಸ್ಲಿಮರು ಪಡುತ್ತಿದ್ದ ವೇದನೆಯನ್ನು ಕಂಡ ಟಿಪ್ಪು ದೇವರಂತೆ ಬಂದು ರಕ್ಷಿಸಿದ ಎಂಬ ಬೊಗಳೆ ಕಥೆಯನ್ನು ಪಾಕಿಸ್ತಾನದ ಪಠ್ಯ ಪುಸ್ತಕದಲ್ಲಿ ಬಿಂಬಿಸಲಾಗಿದೆ. ಟಿಪ್ಪು ಕೇವಲ ಕಾಪಾಡಿದ್ದು ಮುಸ್ಲಿಮರನ್ನು ಮಾತ್ರ ಹಿಂದೂಗಳನ್ನು ಚಿತ್ರ ಹಿಂಸೆ ನೀಡಿ ಕೊಂದಿದ್ದು ಅಷ್ಟೆ. ಆತ ಎಷ್ಟು ಜನರನ್ನು ಮತಾಂತರಗೊಳಿಸಿಲ್ಲ? ಎಷ್ಟು ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿಲ್ಲ? ಎಷ್ಟು ಹಿಂದೂ ದೇವಾಲಯಗಳನ್ನು ನಾಶ ಪಡಿಸಿಲ್ಲ? ಅವನು ಮಾಡಿದ ತಪ್ಪು ಒಂದಾ? ಎರಡಾ?ಈತ ಮಾಡಿದ ಘನಾಂಧಾರಿ ಕೆಲಸಗಳನ್ನು ನಮ್ಮ ಬಾಯಿಯಲ್ಲಿ ಹೇಳಿದರೆ ನಮಗೆ ಒಳಿತಲ್ಲ ಎಂದು ಅನಿಸುತ್ತದೆ.

ಪಾಕಿಸ್ತಾನದ  ಒಂದು ವೆಬ್ ಸೈಟ್‍ನಲ್ಲಿ ಬರೆದಿದ್ದ ಟಿಪ್ಪು ಕಥೆಯಲ್ಲಿ ಆತ ಅದೆಷ್ಟು ನ್ಯಾಯ ಶುದ್ಧನಾಗಿದ್ದನೆಂಬೂದನ್ನು ತೋರಿಸಲು ಒಂದು ಉದಾಹರಣೆ ಕೊಡಲಾಗಿದೆ. “ಟಿಪ್ಪುವಿನ ಮಗನೊಬ್ಬ ಒಬ್ಬರ ತೋಟದಲ್ಲಿ ಬೆಳೆದಿದ್ದ ತರಕಾರಿ ಕದ್ದನಂತೆ. ತರಕಾರಿ ಕಳೆದುಕೊಂಡವರು ಆಸ್ಥಾನಕ್ಕೆ ಬಂದು ಟಿಪ್ಪುವಿಗೆ ದೂರು ಕೊಟ್ಟಾಗ ಆಗ ಮಗನಿಗೆ ಶಿಕ್ಷೆ ಕೊಟ್ಟನಂತೆ.!! ಟಿಪ್ಪು ಅದೆಷ್ಟೋ ಬೊಗಳೆ ಕತೆಗಳನ್ನು ನಾವು ಕೇಳಿದ್ದೇವೆ ಆದರೆ ಈ ಕತೆಯನ್ನು ಯಾವ ಇತಿಹಾಸ ಪುಸ್ತಕದಲ್ಲೂ ನೀವು ಓದಿದ್ದೀರಾ? ಈ ಕತೆಗೆ ದಾಖಲೆ ಇವೆಯೇ? ಇನ್ನೊಬ್ಬರ ತೋಟಕ್ಕೆ ಹೋಗಿ ಕದಿಯುವ ಬರ ಟಿಪ್ಪುವಿನ ಮಕ್ಕಳಿಗೆ ಏಕೆ ಬಂತೋ ನಾ ಕಾಣೆ…ಹಾಗಾದರೆ ಟಿಪ್ಪು ಕುಟುಂಬ ಅಷ್ಟೊಂದು ಬಡತನದಿಂದ ಕೂಡಿತ್ತೇ?? ಇದನ್ನು ನಾವೆಲ್ಲಾ ನಂಬಬೇಕೆ?

ಟಿಪ್ಪುವಿನ ಗ್ರಂಥಾಲಯದಲ್ಲಿ 2000ಕ್ಕೂ ಅಧಿಕ ಅತ್ಯುತ್ತಮ ಗ್ರಂಥಗಳಿದ್ದವಂತೆ. ಈ ಮಾಹಿತಿಯನ್ನು ಉಲ್ಲೇಖಿಸುತ್ತಾ ಒಂದು ಪಾಕಿಸ್ತಾನಿ ಪುಸ್ತಕ ಹೇಳುತ್ತದೆ. “ಟಿಪ್ಪುವಿಗೆ ಅರೇಬಿಕ್, ಪರ್ಷಿಯನ್, ಇಂಗ್ಲೀಷ್, ಫ್ರೆಂಚ್, ಉರ್ದು ಭಾಷೆಗಳು ಬರುತ್ತಿದ್ದವು. ಆತ ಒಳ್ಳೆಯ ಕಾವ್ಯ ಪ್ರೇಮಿಯಾಗಿದ್ದ, ಸಾಹಿತ್ಯಾಸಕ್ತನಾಗಿದ್ದ, ಪಂಡಿತರನ್ನೂ, ಲೇಖಕರನ್ನು ಗೌರವಿಸುತ್ತಿದ್ದ.” ಇದನ್ನು ಓದಿದಾಗ ಅಳಬೇಕೋ ಅಥವಾ ನಗಬೇಕೋ ಅಂತ ಅನಿಸುತ್ತದೆ. ಇವನು ಯಾವ ಸೀಮೆಯ ಕಾವ್ಯ ಪ್ರೇಮಿಯೋ, ಪಂಡಿತನೋ ಅಥವಾ ಸಾಹಿತ್ಯಾಸಕ್ತನೋ ನನಗೆ ತಿಳಿತಿಲ್ಲ. ಕಾವ್ಯ, ಸಾಹಿತ್ಯಗಳನ್ನು ಮೆಚ್ಚುತ್ತಿದ್ದ ಎಂಬುವುದಕ್ಕೆ ಯಾವ ಐತಿಹಾಸಿಕ ಪುರಾವೆಗಳು ಇವರಿಗೆ ದೊರಕಿದೆಯೋ? ಉತ್ತಮ ಗ್ರಂಥಾಲಯ ನಿರ್ವಹಿಸುವಷ್ಟು ಗ್ರಂಥ ಪ್ರೇಮಿಯಾಗಿದ್ದರೆ ಮೈಸೂರು ಅರಮನೆಯಲ್ಲಿದ್ದ ಸಾವಿರಾರು ತಾಳೆಗರಿಯ ಗ್ರಂಧಗಳನ್ನು ತನ್ನ ಕುದುರೆ ಲಾಯದಲ್ಲಿ ಹುರುಳಿ ಬೇಯಿಸುವ ಒಲೆಗೆ ಹಾಕಿದ್ದೇಕೆ? ಜೀವನದಲ್ಲಿ ಸಂಸ್ಕøತ ಇಲ್ಲದವನಿಗೆ ಕಾವ್ಯ, ಪಾಂಡಿತ್ಯ, ಸಂಸ್ಕøತದ ಅರಿವು ಇರಲು ಹೇಗೆ ಸಾಧ್ಯ?

ಯುದ್ಧನೌಕೆಗಳಿರಬಹುದು, ಕ್ಷಿಪಣಿ , ತುಪಾಕಿಗಳಿರಬಹುದು.. ಅದರಲ್ಲಿ ನಮಗೆ ಎದ್ದು ಕಾಣುವುದು ಅವುಗಳ ಹೆಸರಿನಿಂದ . ಇದು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ ಯಾವ ದೇಶದಲ್ಲೂ ಕಂಡುಬರುವ, ಕಂಡುಬರಲೇ ಬೇಕಾದ ಸಂಗತಿ ಮತ್ತು ಅವಶ್ಯಕತೆ. ಪಾಕಿಸ್ತಾನ ಒಂದಲ್ಲು ಎರಡಲ್ಲ ಮೂರು ಯುದ್ಧ ನೌಕೆಗಳಿಗೆ ಟಿಪ್ಪುವಿನ ಹೆಸರನ್ನು ನಾಮಕರಣ ಮಾಡಲಾಗಿದೆ.!! ಬ್ರಿಟಿಷರ ಪಾಳೆಯಲ್ಲಿದ್ದ ಎಚ್‍ಎಂಎಸ್ ಆನ್‍ಸ್ಲೋ ಎಂಬ ನೌಕೆಯನ್ನು ಪಾಕಿಸ್ತಾನ ತಾನೊಂದು ಸ್ವತಂತ್ರ ದೇಶ ಎಂದು ಘೋಷಿಸಿಕೊಂಡ ಮೇಲೆ 1949ರಲ್ಲಿ ಖರೀದಿಸಿ ತನ್ನ ಯುದ್ಧ ನೌಕೆಗಳ ಸಾಲಿನಲ್ಲಿ ನಿಲ್ಲಿಸಿತು. ಹಳೆ ಹೆಸರನ್ನು ಕಿತ್ತು ಹಾಕಿ ಟಿಪ್ಪುಸುಲ್ತಾನ್ ಎಂಬ ಅಪ್ಪಟ ದೇಶೀಯ ಹೆಸರನ್ನು ನಾಮಕರಣ ಮಾಡಲಾಯಿತು. ಇದಕ್ಕೆ ನಾಮಕರಣ ಮಾಡಿದ ಸಮಯದಲ್ಲಿ ಕಾಶ್ಮೀರದ ವಿಷಯಕ್ಕಾಗಿ ಭಾರತದ ಮೇಲಿನ ವಿಷಗಾಳಿಯಂತೆ ಹರಡಿಕೊಳ್ಳುತ್ತಿದ್ದ ಕಾಲಘಟ್ಟ ಅದು. ಅಂತಹ ಸಮಯದಲ್ಲಿ ಪಾಕಿಸ್ತಾನ ತನ್ನ ಯುದ್ಧನೌಕೆಗೆ ಭಾರತದಲ್ಲಿ ರಾಜ್ಯವಾಳಿದ ಮೂಲಭೂತವಾದಿಯೊಬ್ಬನ ಹೆಸರನ್ನಿಟ್ಟು ಗೌರವ ಸೂಚಿಸಿತ್ತು. 80ರ ದಶಕದಲ್ಲಿ ತನ್ನ ತೆಕ್ಕೆ ಸೇರಿದ ಡಿ-168 ಎಂಬ ಹಡಗಿಗೂ ಪಾಕಿಸ್ತಾನ ಹೆಸರಿಟ್ಟಿದ್ದು ಟಿಪ್ಪು ಸುಲ್ತಾನ್ ಎಂದು. ಎಚ್‍ಎಂಎಸ್ ಆವೆಂಜರ್ ಎಂಬ ಹಡಗನ್ನು ಕೂಡಾ ಟಿಪ್ಪು ಸುಲ್ತಾನ್ ಎಂದೇ ಕರೆಯಿತು. ಹಾಗಾದರೆ ಟಿಪ್ಪು ಎಷ್ಟರ ಮಟ್ಟಿಗೆ ಪ್ರಸಿದ್ಧಿ ಹೊಂದಿದ್ದ ಎಂಬುವುದನ್ನು ನಾವು ಅರಿತುಕೊಳ್ಳ ಬೇಕಾಗಿದೆ. ಯಾವುದೋ ದೇಶ ಇನ್ಯಾವುದೋ ಖತರ್ನಾಕ್ ರಾಜನ ಹೆಸರನ್ನು ತನ್ನ ಯುದ್ಧೋಪಕರಣಗಳಿಗೆ ನಾಮಕರಣ ಮಾಡುವುದು ಎಂದರೆ ನಂಬಲು ಸಾಧ್ಯವೇ? ಭಾರತ ಎಂದರೆ ಕಾಲ್ಕೆರೆದು ಜಗಳಕ್ಕೆ ಬರುವ ಪಾಕಿಸ್ತಾನಿಗಳು ಟಿಪ್ಪುವಿನ ಹೆಸರನ್ನು ನಾಮಕರಣ ಮಾಡಿದ್ದಾರೆ ಎಂದರೆ? ಭಾರತ ನಿಂತರೆ ತಪ್ಪು, ಕೂತರೆ ತಪ್ಪು ಎಂದು ಎನ್ನುವ ಪಾಕ್ ಯಾಕೆ ತಂಟೆ ತಕರಾರು ಇಲ್ಲದೆ ತನ್ನ ಸಮರ ಸನ್ನದ್ಧ ಯುದ್ಧನೌಕೆಗೆ ಟಿಪ್ಪುವಿನ ಹೆಸರನ್ನು ಅಂತಿಮಗೊಳಿಸಿತು ಮತ್ತು ಟಿಪ್ಪುವಿನ ಹೆಸರನ್ನು ಕಳೆದ 70 ವರ್ಷಗಳಿಂದ ಒಂದಲ್ಲ ಒಂದು ನೌಕೆಗೆ ಹೆಸರು ಇಡುತ್ತಾ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ ಎಂದರೆ ಆತ ಅವರಿಗೆ ಅದೆಷ್ಟು ದೊಡ್ಡ ದೇವರು ಎಂದು ನಾವು ಅರ್ಥ ಮಾಡಿಕೊಳ್ಳ ಬೇಕಾಗಿದೆ.

ಪಾಕ್‍ನಲ್ಲಿ ದೇವರಂತೆ ಪೂಜಿಸುವ ಟಿಪ್ಪುವಿಗೆ  ಇಂದು ಸಿದ್ದರಾಮಯ್ಯ ಸರಕಾರ ಸೇರಿ ಇಂದು ಟಿಪ್ಪು ಜಯಂತಿ ಆಚರಿಸುತ್ತಿದ್ದಾರೆ. ಈ ಮತಾಂಧ, ದೇಶದ್ರೋಹಿ , ಕ್ರೂರಿ ಇಂತಹ ಹಲವಾರು ನಾಮಾಂಕಿತದಿಂದ ಪ್ರಸಿದ್ಧಗೊಂಡ ಟಿಪ್ಪು ಹುಟ್ಟಿದ್ದು 20-11-1750 ಮರಣ ಹೊಂದಿದ್ದು 4-5-1799. ಆದರೆ ಇಂದು ಟಿಪ್ಪು ಜಯಂತಿ ಆಚರಿಸಲು ಕಾರಣವಾದರೂ ಏನು ಎಂಬುವುದು ಅರ್ಥವಾಗುತ್ತಿಲ್ಲ.? ಆದರೆ ನಾವು ಇಂದು ಆಚರಿಸಬೇಕಾದದ್ದು ಶಿವಾಜಿಯ ಧೈರ್ಯ ಸ್ಥೈರ್ಯಗಳನ್ನು ನೆನೆಪಿಸುವ ಹಿಂದೂ ಶೌರ್ಯ ದಿನವನ್ನು ಆಚರಿಸಬೇಕಾಗಿದೆ. ಇಂದು ನಮಗೆ ಎಲ್ಲಕ್ಕಿಂತ ತುರ್ತಾಗಿ ಬೇಕಿರುವುದು ನಾವು ಮರೆತೋ ಹೇಡಿತನದಿಂದಲೋ ಕೈ ಬಿಟ್ಟಿರುವ ಕ್ಷಾತ್ರಧರ್ಮ . ಶಿವಾಜಿಯ ಕಾಲದಲ್ಲಿ ಭಾರತ ಅದೆಂಥ ಸವಾಲುಗಳನ್ನು ಎದುರಿಸುತ್ತಿತ್ತೋ ಅದರ ಹತ್ತರಷ್ಟು ಸಮಸ್ಯೆಗಳಿಂದ ನಾವು ಇಂದು ನಲುಗುತ್ತಿದ್ದೇವೆ. ಸಮಾಜವನ್ನು ನೂರು ಮತ , ನೂರು ಧರ್ಮಗಳ ಹೆಸರಿನಲ್ಲಿ ಒಡೆಯುವವರು ಹೆಚ್ಚಾಗಿರುವ ಸಂದರ್ಭದಲ್ಲಿ ನಾವಿಂದು ಗಟ್ಟಿಯಾಗಿ ಹೇಳಬೇಕಿರುವುದು ಹಿಂ ದೂಗಳೇ ಒಗ್ಗಟ್ಟಾಗಿ ಎಂಬ ಮಾತನ್ನು.

ಕೃಪೆ: ವಿಕ್ರಮ

-ಪವಿತ್ರ

Tags

Related Articles

Close