ಅಂಕಣಪ್ರಚಲಿತ

ಟಿಪ್ಪು ಜಯಂತಿ ಮಾಡಲು ಹಣವಿದೆ! ಎಮ್ ಎಲ್ ಎ ಗಳಿಗೆ ಚಿನ್ನದ ಬಿಸ್ಕತ್ ಕೊಡಲು ಹಣವಿದೆ! ಗೊಮ್ಮಟನೇ! ನೀನಾದೆ ಅನಾಥ!

ಸಿದ್ಧರಾಮಯ್ಯನ ಸರಕಾರಕ್ಕೆ ಏನಾಗಿದೋ ತಿಳಿತಿಲ್ಲ!!…ಹಿಂದೂ, ಬುದ್ದ, ಜೈನರ ದೇವಾಲಯಗಳಿಗೆ ಒಂದು ಪೈಸೆ ಖರ್ಚು ಮಾಡಬೇಕಂದರೂ ಅತ್ತ ಇತ್ತ ನೋಡುತ್ತಿದೆ.!! ಅದೇ ಮುಸ್ಲಿಮರ ಮಸೀದಿಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಂದರೂ ಹಿಂದೆ ಮುಂದೆ ನೋಡದೆ ಅವರುಗಳಿಗೆ ಸಹಾಯ ಮಾಡಲೂ ತಯಾರಿರುತ್ತಾರೆ…ಅವರ ಹಜ್ ಯಾತ್ರೆಗೆ ಸಾವಿರಾರು ಕೋಟಿ ಸಬ್ಸಿಡಿ ಕೊಡುತ್ತಾರೆ!!! ಹಿಂದೂಗಳ ಅಮರನಾಥ ಯಾತ್ರೆಗೆ ಸುಂಕ ಕಟ್ಟುವಂತೆ ಮಾಡುತ್ತಾರೆ!!! ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಬಂದ ಅದೆಷ್ಟೋ ಹಣವನ್ನು ಮುಸ್ಲಿಮರ ಮಸೀದಿ ಹಾಗೂ ಕ್ರೈಸ್ತರ ಚರ್ಚ್‍ಗಳ ನಿರ್ಮಾಣಕ್ಕೆ ಕೊಡುತ್ತೀರಲ್ಲವೇ ಇದೇನಾ ನಿಮ್ಮ ಸಂಸ್ಕøತಿ ಸಿದ್ದರಾಮಯ್ಯನವರೇ…? ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಒಬ್ಬ ದೇಶದ್ರೋಹಿ ಎಂದು ಗೊತ್ತಿದ್ದೂ ಗೊತ್ತಿದ್ದೂ ಅವನ ಹುಟ್ಟುಹಬ್ಬಕ್ಕೆ ಅದೆಷ್ಟೋ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹುಟ್ಟುಹಬ್ಬ ಆಚರಿಸಿದರಲ್ಲವೇ ಎದೆಲ್ಲಾ ನಿಮಗೆ ಶೋಭೆ ತರುತ್ತದೆಯೇ ಸಿದ್ದರಾಮಯ್ಯನವರೇ?

ವಿಶ್ವ ವಿಖ್ಯಾತ ಶ್ರವಣ ಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಉದ್ಘಾಟನೆಗೆ ಕೇವಲ 2 ತಿಂಗಳು ಬಾಕಿ ಇದ್ದರೂ ಕುಡಿಯುವ ನೀರು, ರಸ್ತೆ
ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಯಾವುದೇ ಕಾಮಗಾರಿ ಆರಂಭವಾಗದಿರುವುದು ಭಕ್ತ ವಲಯದಲ್ಲಿ ದುಗುಡ ಮೂಡಿಸಿದೆ.!!
ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಬಾಹುಬಲಿಯ ಮಹಾಮಜ್ಜನಕ್ಕೆ ಸರಕಾರ ತೋರಿಸುವ ನಿರ್ಲಕ್ಷ್ಯ ಇಡೀ ರಾಜ್ಯದ ಮಾನವನ್ನೇ ಹರಾಜು ಹಾಕುವ ಆತಂಕ ಮೂಡಿಸಿದೆ!!. 12 ವರ್ಷಗಳಿಗೊಮ್ಮೆ ನಡೆಯುವ ಗೊಮ್ಮಟೇಶ್ವರನ ಮಹಾಮಮಜ್ಜನವನ್ನು ಕಣ್ತುಂಬಿ ಕೊಳ್ಳಲು ಲಕ್ಷಾಂತರ ಜನರು ಶ್ರವಣ ಬೆಳಗೋಳದತ್ತ ಹೆಜ್ಜೆ ಹಾಕಲಿದ್ದಾರೆ.. ಆದರೆ ರಾಜ್ಯ ಸರಕಾರ ದೇಶದ ಧಾರ್ಮಿಕ ಸಾಂಸ್ಕøತಿಕ ಶ್ರೀಮಂತಿಕೆಯ ಸಂಕೇತವಾದ ಉತ್ಸವವನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ಧೋರಣೆ ತಳೆದಿರುವುದರಿಂದ ಯುದ್ದ ಕಾಲೇ ಶಸ್ತ್ರಾಭ್ಯಾಸ ಎನ್ನುವ ಸ್ಥಿತಿಗೆ ತಲುಪಿದೆ.!!!

2006ರಲ್ಲಿ ನಡೆದಿದ್ದ ಮಹಾಮಸ್ತಾಕಾಭಿಷೇಕದ ವೇಳೆ ಲೋಕೋಪಯೋಗಿ ಇಲಾಖೆಯಿಂದಲೇ ಸಾಮಗ್ರಿ ಖರೀದಿಸಿ 4 ಕೋಟಿ ರೂ. ವೆಚ್ಚದಲ್ಲಿ ವಿಂದ್ಯಗಿರಿಯ
ಅಟ್ಟಣಿಗೆ ನಿರ್ಮಿಸಲಾಗಿತ್ತು. ಇಂದಿಗೂ ಸುಮಾರು 1.50 ಕೋಟ ರೂ ಮೌಲ್ಯದ ಅಟ್ಟಣಿಗೆ ನಿರ್ಮಾಣ ಸಾಮಗ್ರಿ ಜೈನ ಮಠದ ಸಮೀಪದ ಗೋಡಾನ್‍ನಲ್ಲಿದೆ.
ಆದರೂ ಈ ವರ್ಷ 12 ಕೋಟಿ ರೂ.ಗಳಷ್ಟು ದೊಡ್ಡ ಮೊತ್ತವನ್ನು ಅಟ್ಟಣಿಗೆ ನಿರ್ವಣಕ್ಕೆ ವ್ಯಯಿಸಲಾಗುತ್ತದೆ. ಜರ್ಮನ್ ಮೂಲದ ಲೇಹರ್ ಸಂಸ್ಥೆಗೆ ಅಟ್ಟಣಿಗೆ ಗುತ್ತಿಗೆ ನೀಡಲಾಗಿದ್ದು ಮಹೋತ್ಸವದ ನಂತರ ಇಂಟರ್‍ಲಾಕ್ ಸಿಸ್ಟಂ ಬಳಸಿ ನಿರ್ಮಿಸುವ ಅಟ್ಟಣಿಗೆಯ ಎಲ್ಲಾ ಸಾಮಗ್ರಿಗಳನ್ನು ಅದೇ ಸಂಸ್ಥೆ ವಾಪಸ್ ತೆಗೆದುಕೊಂಡು ಹೋಗಲಿದೆ!!.. ಹಿಂದಿನ ಬಾರಿ 4ಕೋಟಿ ರೂ ಗಳಷ್ಟು ಕಡಿಮೆ ವೆಚ್ಚದಲ್ಲಿ ಮುಕ್ತಾಯವಾಗಿದ್ದ ಕಾಮಗಾರಿಗೆ ಈ ವರ್ಷ ಕೇವಲ ಬಾಡಿಗೆಯಾಗಿ 12 ಕೋಟಿರೂ ವೆಚ್ಚ ಮಾಡುತ್ತಿರುವುದು ಸಾರ್ವಜನಿಕ ಹಣದ ಅಪವ್ಯಯ ಎನ್ನುವುದು ಕೇಳಿ ಬರುತ್ತಿದೆ.

ಸಿಎಮ್ ಮುತುವರ್ಜಿ ವಹಿಸಿ ಘೋಷಿಸಿದ 25 ಕೋಟಿ ರೂ ವೆಚ್ಚದ ಪ್ರಾಕೃತ ವಿವಿ ಕಟ್ಟಡ 20 ಕೋಟಿ ರೂ ವೆಚ್ಚದ ಅಂತರಾಷ್ಟ್ರೀಯ ಗುಣಮಟ್ಟದ ಅಥಿತಿ ಗೃಹ 15 ಕೋಟಿ ರೂ ವೆಚ್ಚದಲ್ಲಿ ವಿವಿಯಪಿ ಅತಿಥಿ ಗೃಹಗಳ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗಳು ಆರಂಭವಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಏಪ್ರಿಲ್ 24 ರಂದು ಶ್ರವಣಬೆಳಗೊಳಕ್ಕೆ ಭೇಟಿ ನೀಡಿ ಎಲ್ಲ ಕಾಮಗಾರಿಗಳಿಗೂ ಶಂಕು ಸ್ಥಾಪನೆ ನೆರವೇರಿಸಿ ಹೋಗಿದ್ದರು. ಇನ್ನೇನು ಸಮಾರೋಪಾದಿಯಲ್ಲಿ ಕೆಲಸಗಳು ಆರಂಭವಾಗಲಿವೆ ಎಂಬ ಆಶಾಭಾವನೆಯಲ್ಲಿದ್ದ ಜೈನ ಮಠದ ಸಮಿತಿ ಹಾಗೂ ಭಕ್ತರು ಇದೀಗ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಈ ಅವ್ಯವಸ್ಥೆಗಳಿಂದ ಎಲ್ಲರೂ ರೋಸಿ ಹೋಗಿದ್ದರೂ ಸರಕಾರದ ವಿರುದ್ಧ ಬಹಿರಂಗವಾಗಿ ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ.

ಶ್ರವಣ ಬೆಳಗೊಳದೊಳಗೆ ಪ್ರವೇಶಿಸಿಸುವವರಿಗೆ ಇನ್ನೂ ಮಹಾ ಹಬ್ಬದ ಯಾವುದೇ ಕುರುಹೂ ಕಾಣಸಿಗುವುದಿಲ್ಲ. ನಾಲ್ಕಾರು ಕಾರ್ಮಿಕರಿಂದ ನಡೆಯುತ್ತರುವ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿ ಕಲಾಣಿ ಸ್ವಚ್ಛತೆಯಂತಹ ಕೆಲಸಗಳಷ್ಟೇ ಗೋಚರಿಸುತ್ತಿದೆ.!!! ಉಳಿದ ಕೆಲಸಗಳಿಗೆ ಇನ್ನೂ ಚಾಲನೆ ನೀಡಿಲ್ಲ!!!.

ರಾಕ್ಯ ಸರಕಾರ ಬಜೆಟ್‍ನಲ್ಲೇ ಮಹಾಮಜ್ಜನಕ್ಕಾಗಿ 175 ಕೋಟಿ ರೂ ಅನುದಾನ ಘೋಷಿಸಿತ್ತು. ಏಪ್ರಿಲ್‍ನಲ್ಲಿಯೇ ಕಾಮಗಾರಿಗಳ ಪಟ್ಟಿ, ಅಂದಾಜು ವೆಚ್ಚದ ಪಟ್ಟಿ
ಅಂದಾಜು ವೆಚ್ಚದ ಪಟ್ಟಿ ಸಿದ್ಧಗೊಂಡರೂ ಅತಿಥಿ ಗೃಹ ನಿರ್ಮಾಣದಂತಹ ಶಾಶ್ವತ ಕಟ್ಟಡಗಳ ಕಾಮಗಾರಿಗಳೇ ಆರಂಭವಾಗಿಲ್ಲ. ಇನ್ನು ರಸ್ತೆ ಉಪನಗರಗಳ
ನಿರ್ಮಾಣದಂತಹ ವ್ಯವಸ್ಥೆ ಬಗ್ಗೆ ಕೇಳುವುದೇ ಬೇಡ ಎಂಬಂತಾಗಿದೆ. ಸಿದ್ದರಾಮಯ್ಯ ಸರಕಾರ ನಿಗದಿ ಪಡಿಸಿರುವ 175 ಕೋಟಿ ರೂ.ಗಳಲ್ಲಿ 12 ತಾತ್ಕಾಲಿಕ ನಗರಗಳ ನಿರ್ಮಾಣಕ್ಕೆ 75 ಕೋಟಿ ರೂ. ರಸ್ತೆ ಅಭಿವೃದ್ಧಿ ಮತ್ಯು ಉನ್ನತೀಕರಣಕ್ಕೆ 25 ಕೋಟಿ ರೂ ವೆಚ್ಚವಾಗಲಿದ್ದು ಈ ಮೂರು ಕೆಲಸಗಳಿಗೆ ಅನುದಾನದ ಸಿಂಹಪಾಲು ಬಳಕೆಯಾಗಲಿದೆ. ಕೆಲವು ದಿನಗಳ ಹಿಂದಷ್ಟೆ ಅಟ್ಟಣಿಗೆ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಕೆಲವು ದಿನಗಳ ಹಿಂದೆಯಷ್ಟೇ ಅಟ್ಟಣಿಗೆ ನಿರ್ಮಾಣ ಕಾರ್ಯ ಆರಂಭವಾಗಿದ್ದು ಉಳಿದ ಯಾವ ಕೆಲಸಗಳಿಗೂ ಚಾಲನೆ ಸಿಕ್ಕಿಲ್ಲ. ರಾಜ್ಯಸರಕಾರದಿಂದ ಎರಡು ಹಂತಗಳಲ್ಲಿ ಈವರೆಗೆ 90 ಕೋಟಿ ರೂ. ಮಂಜೂರು ಮಾಡಿದ್ದರೂ ಡಿಸಿ ಖಾತೆಯಿಂದ ಹಣ ಬಿಡುಗಡೆ ಮಾಡಿಲ್ಲ ಎಂಬುವುದೇ ವಿಷಾದನೀಯ!!.

ನಿಗದಿಯಂತೆ 2018ರ ಜನವರಿ 7ರಮದು ಮಹಾಮಸ್ತಕಾಭಿಷೇಕ ಮಹೋತ್ಸವ ಉದ್ಘಾಟನೆಯಾಗಲಿದ್ದು ಅಂದಿನಿಂದಲೇ ವಿವಿಧ ಬಾರ್ಮಿಕ ಕಾರ್ಯಕ್ರಮಗಳು
ಚಾಲನೆ ಪಡೆಯಲಿವೆ. ಹೀಗಿದ್ದರೂ ಬರುವ ಭಕ್ತರು ಪ್ರವಾಸಿಗರಿಗೆ ತಂಗಲು ಬೇಕಾದ ತಾತ್ಕಾಲಿಕ ವಸತಿ ಲಕ್ಷಾಂತರ ಜನರ ಬಳಕೆಗೆ ಬೇಕಾದ ನೀರಿನ ಪೂರೈಕೆ
ವಿದ್ಯುತ್ ಸರಬರಾಜಿಗೆ ಅಗತ್ಯವಾದ ಟ್ರಾನ್ಸ್ ಫಾರ್ಮ್‍ಗಳು ಕಂಬ, ತಂತಿ ಅಳವಡಿಕೆ, ಚರಂಡಿ ಶೌಚ ಹಾಗೂ ಸ್ಥಾನ ಗೃಹಗಳ ನಿರ್ಮಾಣ, ಬಸದಿಗಳ
ಜೀರ್ಣೋದ್ಧಾರದಂತಹ ಅನುಮೋದನೆ ದೊರೆತ ಕೆಲಸಗಳೇ ಆರಂಭವಾಗಿಲ್ಲ!!..

ಸಿದ್ದರಾಮಯ್ಯ ಸರಕಾರಕ್ಕೆ ಇನ್ನು ಯಾವಾಗ ಬುದ್ಧಿ ಬರುವುದೊ ನಮಗೆ ಅರ್ಥವಾಗುತ್ತಿಲ್ಲ…ನೀವು ಒಬ್ಬ ಹಿಂದುವಾಗಿ ಹಿಂದೂ, ಜೈನ, ಬುದ್ಧರಿಗೆ ಯಾಕೆ ನೀವು
ಪ್ರಾಶತ್ತ್ಯ ಕೊಡುತ್ತಿಲ್ಲ ಎಂದು ನಮಗೆ ತಿಳಿಯುತ್ತಿಲ್ಲ!!….ಅದೇ ಮುಸ್ಲಿಮರಿಗೆ ಮಾತ್ರ ಅವರ ಬೇಡಿಕೆ ಮುಂದಿಟ್ಟ ತಕ್ಷಣ ಬೇಡಿಕೆಯನ್ನು ಈಡೇರಿಸಲು
ರೆಡಿಯಾಗಿರುತ್ತೀರ…ಅದೇ ನಾವೆಲ್ಲ ನಿಮಗೆ ಏನು ಮಾಡಿದ್ದೇವೆ!!!… ಇದೇ ರೀತಿ ಜನರಿಗೆ ಮೋಸ ಮಾಡುತ್ತಾ ಬಂದರೆ ಮುಂದೆ ಅದೇ ಜನರು ನಿಮಗೆ ಪಾಠ
ಕಲಿಸಲು ತಯಾರಿರುತ್ತಾರೆ..!!! ನಂತರ ನಿಮಗೆ ಮುಸ್ಲಿಮ್ ಬಲ ಎಷ್ಟು ಸಿಗುತ್ತದೆ ಎಂದು ನೋಡಿಯೇ ಬಿಡೋಣ!!. ಅಟ್ಟಕ್ಕೇರಿಸಿದ ಮುಸ್ಲಮ್ ಕ್ರೈಸ್ತರೇ ನಿಮ್ಮನ್ನು ಕೆಳಗಿಳಿಸುತ್ತಾರೆ..!!

-ಶೃಜನ್ಯಾ

Tags

Related Articles

Close